Vaishnavi Gowda ನಟನೆಯ 'ಬಹುಕೃತ ವೇಷಂ' ಚಿತ್ರದ ರಿಲೀಸ್ ಡೇಟ್ ಫಿಕ್ಸ್!

Suvarna News   | Asianet News
Published : Feb 17, 2022, 06:19 PM IST
Vaishnavi Gowda ನಟನೆಯ 'ಬಹುಕೃತ ವೇಷಂ' ಚಿತ್ರದ ರಿಲೀಸ್ ಡೇಟ್ ಫಿಕ್ಸ್!

ಸಾರಾಂಶ

ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಹಲವಾರು ಚಿತ್ರಗಳು ತೆರೆಗೆ ಬರಲು ಸಜ್ಜಾಗಿದ್ದು, 'ಬಹುಕೃತ ವೇಷಂ' ಎಂಬ ವಿಭಿನ್ನ ಶೀರ್ಷಿಕೆಯ ಚಿತ್ರವು ಫೆ.18ರಂದು ರಾಜ್ಯಾದ್ಯಂತ ತೆರೆ ಮೇಲೆ ಬಿಡುಗಡೆಯಾಗಲಿದೆ.

ಸ್ಯಾಂಡಲ್‌ವುಡ್‌ನಲ್ಲಿ (Sandalwood) ಈ ವಾರ ಹಲವಾರು ಚಿತ್ರಗಳು ತೆರೆಗೆ ಬರಲು ಸಜ್ಜಾಗಿದ್ದು, 'ಬಹುಕೃತ ವೇಷಂ' (Bahukrita Vesham) ಎಂಬ ವಿಭಿನ್ನ ಶೀರ್ಷಿಕೆಯ ಚಿತ್ರವು ಫೆ.18ರಂದು ರಾಜ್ಯಾದ್ಯಂತ ತೆರೆ ಮೇಲೆ ಬಿಡುಗಡೆಯಾಗಲಿದೆ. ಈ ಹಿಂದೆ 'ಗೌಡ್ರು ಸೈಕಲ್' ಎಂಬ ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರವನ್ನು ಮಾಡಿದ್ದ ತಂಡದ ಬಹುತೇಕರು ಸೇರಿ ತಯಾರಿಸಿದ ಮತ್ತೊಂದು ಚಿತ್ರ 'ಬಹುಕೃತ ವೇಷಂ'. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಈ ಚಿತ್ರದಲ್ಲಿದ್ದು, ಬಿಗ್‌ಬಾಸ್ ಖ್ಯಾತಿಯ ವೈಷ್ಣವಿ ಗೌಡ (Vaishnavi Gowda) ಹಾಗೂ 'ಗೌಡ್ರು ಸೈಕಲ್' ನಾಯಕ ಶಶಿಕಾಂತ್ (Shashikanth) ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಕನ್ನಡದ ಮಟ್ಟಿಗೆ ಇದು ಹೊಸ ರೀತಿಯ ಸಿನಿಮಾ. ಜೀವನಕ್ಕಾಗಿ ಹತ್ತಾರು ವೇಷಗಳನ್ನು ಹಾಕುತ್ತೇವೆ. ಅಂಥ ವೇಷಗಳ ಸುತ್ತ ಇಡೀ ಕತೆ ಸಾಗುತ್ತದೆ. ಹೀಗಾಗಿ ಚಿತ್ರಕ್ಕೆ ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವ ಸಬ್‌ ಟೈಟಲ್‌ ಇಟ್ಟುಕೊಂಡಿದ್ದೇವೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ' ಎಂದು ನಿರ್ದೇಶಕ ಪ್ರಶಾಂತ್‌ ಕೆ ಯರಂಪಳ್ಳಿ (Prashantha K Yallampalli) ಹೇಳಿದರು. ಪ್ರಶಾಂತ್‌ ಕೆ ಯರಂಪಳ್ಳಿ ಅವರು ಈ ಹಿಂದೆ 'ಗೌಡ್ರು ಸೈಕಲ್' ಚಿತ್ರಕ್ಕೂ ನಿರ್ದೇಶಕರಾಗಿದ್ದರು. 'ಬಹುಕೃತ ವೇಷಂ' ಚಿತ್ರವನ್ನು ವಿದೇಶಗಳಲ್ಲೂ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಂಡಿದೆ.  ಇಡೀ ಕುಟುಂಬ ನೋಡುವಂತಹ ಈ ಚಿತ್ರವನ್ನು ರಾಜ್ಯದಲ್ಲಿ 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. 

'ಎರಡು ಕನಸು' ಕಲ್ಪನಾ ಲುಕ್ ರೀ-ಕ್ರಿಯೇಟ್ ಮಾಡಿದ ಬಿಗ್ ಬಾಸ್ ವೈಷ್ಣವಿ ಗೌಡ!

ಯುಎಸ್‌ಎ ಸೇರಿದಂತೆ ಬೇರೆ ಬೇರೆ ಕಡೆ 25 ಕಡೆ ಸಿನಿಮಾ ಪ್ರದರ್ಶನವಾಗುತ್ತಿದೆಯಂತೆ. ಒಂದು ವಿಭಿನ್ನವಾದ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವ ಸಂಭ್ರಮದಲ್ಲಿ ಚಿತ್ರದ ನಾಯಕ ಶಶಿಕಾಂತ್‌ ಇದ್ದರು. ಮನರಂಜನೆ ಜತೆಗೆ ಸಂದೇಶ ಮತ್ತು ಕುತೂಹಲ ಇರುವ ಕತೆ ಇಲ್ಲಿದೆ. ಕತೆ ಮತ್ತು ಪಾತ್ರಧಾರಿಗಳ ಸಂಯೋಜನೆ ಚಿತ್ರದ ವಿಶೇಷತೆಗಳಲ್ಲಿ ಒಂದು' ಎಂದು ಶಶಿಕಾಂತ್‌ ಹೇಳಿದರು. 'ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರ ನೋಡಿದ ಪ್ರೇಕ್ಷಕರಿಗೆ ನಿರಾಸೆ ಆಗಲ್ಲ. ಹೀಗಾಗಿ ಎಲ್ಲರು ಧೈರ್ಯವಾಗಿ ಸಿನಿಮಾ ನೋಡಬಹುದು' ಎಂದು ವೈಷ್ಣವಿ ತಿಳಿಸಿದರು. ಇತ್ತೀಚೆಗಷ್ಟೇ 'ಬಹುಕೃತ ವೇಷಂ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.



ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಾಯಕ 'ನನ್ನದು ಡಬಲ್ ಶೇಡ್ ಇರುವ ಪಾತ್ರ, ಡಿಲೇರಿಯಂ ಫೋಬಿಯಾ ಎನ್ನುವ ಕಾಯಿಲೆ ಮೇಲೆ ಮಾಡಿರುವ ಚಿತ್ರವಿದು, ನಾವು ಈ ಕಥೆ ಮಾಡಿಕೊಂಡು ನಿರ್ಮಾಪಕರ ಬಳಿ ಹೋದಾಗ ಮೊದಲು ಒಪ್ಪಲಿಲ್ಲ, ನಂತರ ನಮ್ಮ ಹಿಂದಿನ ಚಿತ್ರಕ್ಕೆ ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆಗಳನ್ನು ತಂದು ತೋರಿಸಿದಾಗ ಒಪ್ಪಿದರು. ಮಾಧ್ಯಮಗಳ ಕಾರಣದಿಂದ ದೊಡ್ಡ ಚಿತ್ರವೊಂದು ಆರಂಭವಾಯಿತು, ನಿರ್ಮಾಪಕರು ಒಂದೊಳ್ಳೇ ಸಿನಿಮಾ ಮಾಡಿಕೊಡಿ ಎಂದು ಹೇಳಿ ಎಲ್ಲಾ ಜವಾಬ್ದಾರಿ ನಮಗೇ ವಹಿಸಿದ್ದರು. ಕಥೆ ಬರೆಯುವಾಗ ಈ ಪಾತ್ರಕ್ಕೆ ವೈಷ್ಣವಿಗೌಡ ಅವರೇ ಸೂಕ್ತ ಅಂದುಕೊಂಡಿದ್ದೆವು, ಅವರ ಬಳಿ ಹೋಗಿ ಕಥೆ ಹೇಳಿದಾಗ ಅವರೂ ಸಹ ಒಪ್ಪಿದರು ಎಂದು ಶಶಿಕಾಂತ್ ಹೇಳಿದರು.

1 ಮಿಲಿಯನ್ ಫಾಲೋವರ್ಸ್ ಮುಟ್ಟಿದ ಬಿಗ್ ಬಾಸ್ ವೈಷ್ಣವಿ ಗೌಡ!

ಇದೊಂದು ಬಹುತೇಕ ಹೊಸಬರ ಟೀಮ್‌ನಲ್ಲಿ ಆಗುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ನನ್ನ ಪಾತ್ರದ ಹೆಸರು ನಕ್ಷತ್ರಾ ಅಂಥ. ಮಧ್ಯಮ ವರ್ಗದ ಒಳ್ಳೆಯ ಕುಟುಂಬದ ಹುಡುಗಿಯೊಬ್ಬಳ ಜೀವನದಲ್ಲಿ ಬರುವ ಕೆಲವು ತಿರುವುಗಳು, ಕೆಲ ಘಟನೆಗಳು ಆಕೆಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಅನ್ನೋದೆ ಸಿನಿಮಾದ ಕಥೆಯ ಒಂದು ಎಳೆ. ಇಡೀ ಸಿನಿಮಾ ಹುಡುಗಿಯೊಬ್ಬಳ ಸುತ್ತ ಟ್ರಾವೆಲ್‌ ಆಗುತ್ತದೆ. ತುಂಬ ಸ್ಟ್ರಾಂಗ್‌ ಆಗಿ, ಇಂಡಿಪೆಂಡೆಂಟ್‌ ಆಗಿ ಇರುವಂಥ ಹುಡುಗಿಯ ಕ್ಯಾರೆಕ್ಟರ್‌ ಇದರಲ್ಲಿದೆ. ಎಲ್ಲರಿಗೂ ಕನೆಕ್ಟ್ ಆಗುವ ಕ್ಯಾರೆಕ್ಟರ್‌ ನನ್ನದು. ಜೊತೆಗೆ ನನಗೆ ಒಂದು ಫೈಟ್‌ ಕೂಡ ಇದೆ ಎಂದು ವೈಷ್ಣವಿ ತಿಳಿಸಿದರು. ಹರ್ಷಕುಮಾರ್‌ ಗೌಡ ಛಾಯಾಗ್ರಹಣ, ವೈಶಾಖ್‌ ಭಾರ್ಗವ್‌ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?