ಪಿಸಿಓಎಸ್ ಮತ್ತು ಡಯಟ್.....ತೂಕ ಇಳಿಸಿಕೊಂಡರೆ ಎಷ್ಟು ಬದಲಾವಣೆಗಳು ಆಗುತ್ತದೆ ಎಂದು ಟಿಪ್ಸ್ ಕೊಟ್ಟ ಪರಿಮಳಾ....
ಕನ್ನಡ ಚಿತ್ರರಂಗದ ಅದ್ಭುತ ನಟ ಜಗ್ಗೇಶ್ ಅವರ ಪತ್ನಿ ಪರಿಮಳಾ ಜನಪ್ರಿಯ ನ್ಯೂಟ್ರಿಷನಿಸ್ಟ್. ಮನೆಯಲ್ಲಿ ಲಭ್ಯವಿರುವ ಅಹಾರದಿಂದ ಡಯಟ್ ಎಷ್ಟು ಸುಲಭವಾಗಿ ಮಾಡಬಹುದು ಎಂದು ಹೇಳುತ್ತಾರೆ. ಅಲ್ಲದೆ ಪರಿಮಳಾ ಅವರ ಗೈಡೆನ್ಸ್ ಫಾಲೋ ಮಾಡಿದವರು ಸೂಪರ್ ಫಿಟ್ ಆಗಿದ್ದಾರೆ. ರ್ಯಾಪಿಡ್ ರಶ್ಮಿ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ PCOS ಬಗ್ಗೆ ಮಾತನಾಡಿದ್ದಾರೆ.
ಯುವತಿಯರಲ್ಲಿ ಈಗ PCOS ಹೆಚ್ಚಾಗಿದೆ. PCOS ಇದ್ದಾಗ ಹಾರ್ಮೋನ್ ಇಮ್‌ಬ್ಯಾಲೆನ್ಸ್ ಆಗುತ್ತದೆ. ಮುಖದಲ್ಲಿ ಕೂದಲು ಬೆಳೆಯುತ್ತದೆ, ಪೀರಿಯಡ್ಸ್ ಸರಿಯಾಗಿ ಆಗುವುದಿಲ್ಲ, ಪ್ರೀ ಡಯಾಬಿಟಿಕ್, ಥೈರಾಯ್ಡ್...ಒಂದರಿಂದ ಒಂದು ಬರುತ್ತದೆ. PCOS ಇರುವ ವ್ಯಕ್ತ ಸದ್ಯದ ತೂಕಕ್ಕಿಂತ 10% ತೂಕ ಕಡಿಮೆ ಮಾಡಿಕೊಂಡರೆ ಅದೆಷ್ಟೋ ಸಮಸ್ಯೆಗಳು ಸರಿಯಾಗುತ್ತದೆ. 80 ಕೆಜಿ ಇರುವ ವ್ಯಕ್ತಿ 8 ಕೆಜಿ ತೂಕ ಕಳೆದುಕೊಂಡರೂ ಅದೆಷ್ಟೂ ಕಾಯಿಲೆಗಳು ದೂರ ಆಗುತ್ತದೆ ಎಂದು ಪರಿಮಳಾ ಹೇಳಿದ್ದಾರೆ.
ಹಣಕಾಸಿನ ವಿಚಾರ ತುಂಬಾ ಕಲಿಬೇಕು, ಮದ್ವೆಯಿಂದ ಕೆಲಸಕ್ಕೆ ಬ್ರೇಕ್ ಹಾಕ್ಬಾರ್ದು: ಧನ್ಯಾ ರಾಮ್‌ಕುಮಾರ್
ದಪ್ಪ ಇದ್ರೆ ತಪ್ಪಲ್ಲ ಆದರೆ ಐಡಿಯಲ್ ವೇಟ್ ಬಂದಾಗ ಆರೋಗ್ಯವಾಗಿ ಇರುತ್ತೀರಾ. ಎನರ್ಜಿ ಜಾಸ್ತಿಯಾಗುತ್ತದೆ. ವಯಸ್ಸಾದಾಗ ನಮ್ಮನ್ನು ನಾವು ನೋಡಿಕೊಳ್ಳುವಷ್ಟು ಶಕ್ತಿ ದೇವರು ಕೊಟ್ಟರೆ ಅದೇ ಪುಣ್ಯ. PCOS ಇರುವ ವ್ಯಕ್ತಿ ಮೊದಲು ಮನಸ್ಥಿತಿ ಗಟ್ಟಿ ಮಾಡಿಕೊಳ್ಳಬೇಕು. ಡಯಟ್ ಆರಂಭ ಮಾಡುವ ಮುನ್ನ ಹೆಲ್ತ್ ಚೆಕಪ್ ಮಾಡಿಸಿಕೊಳ್ಳಬೇಕು ಏಕೆಂದರೆ ದೇಹದಲ್ಲಿ ಇರುವ ಇನ್ನಿತ್ತರ ಅಂಗಗಳಿಗೆ ಸಮಸ್ಯೆ ಆಗಬಾರದು. ನಮ್ಮ ಇಂಡಿಯನ್ ಕಿಚನ್‌ನಲ್ಲಿ ಏನೆಲ್ಲಾ ಲಭ್ಯವಿದೆ ಅದನ್ನು ಬಳಸಿಕೊಂಡು ಅಡುಗೆ ಮಾಡಿಕೊಂಡು ತಿನ್ನಬೇಕು. ವಿಟಮಿನ್ ಕಡಿಮೆ ಇದ್ದರೆ ಏನೇ ಮಾಡಿದರೂ ಸಣ್ಣಗಾಗಲು ಸಾಧ್ಯವಿಲ್ಲ. ನಿಮ್ಮ ಫೇವರೆಟ್ ಆಹಾರವನ್ನು ಡಯಟ್‌ನಲ್ಲಿ ಸೇರಿಸಿಕೊಂಡು ಡಯಟ್ ಮಾಡಬೇಕು. ಸಂಪೂರ್ಣವಾಗಿ ನಾನ್ ವೆಜ್ ಬಿಡಬೇಕು ಸಂಪೂರ್ಣವಾಗಿ ಬಿರಿಯಾನಿ ಬಿಡಬೇಕು ಎನ್ನುವುದಿಲ್ಲ. 25% ಕಾರ್ಬ್ಸ್, 25% ಪ್ರೋಟಿನ್, 45% ಹಣ್ಣುಗಳು 5% ಡೈರಿ ಪ್ರಾಡೆಕ್ಟ್‌ಗಳು ಇರಬೇಕು ಎಂದಿದ್ದಾರೆ ಪರಿಮಳಾ ಜಗ್ಗೇಶ್.
ಬೇಗ ಮದ್ವೆ ಆಗಿ ಸಿನಿಮಾ ಬಿಡ್ಬೇಕು ಅಂದುಕೊಂಡಿದ್ದೆ ಆದರೆ.....: ಆಶಿಕಾ ರಂಗನಾಥ್ ಶಾಕಿಂಗ್ ಹೇಳಿಕೆ ವೈರಲ್