ಅವರೆಲ್ಲರ ನಗುವನ್ನು ಕೇಳಿದ ನಟ ಅಚ್ಯುತ್ ಅವರು ಅದೇನಂದುಕೊಂಡರೋ ಏನೋ, ಹಲೋ, ನಿಮ್ಮ ವೈಸ್ ಗೊತ್ತಾಗುತ್ತಿಲ್ಲ, ನೀವು ಯಾವ್ ಚಾನೆಲ್‌ನವರು ಎಂದು ಮುಗ್ಧರಂತೆ ಕೇಳುತ್ತಾರೆ. ಅಚ್ಯುತ್ ಮಾತನ್ನು ಕೇಳಿ ಅಲ್ಲಿದ್ದ ಎಲ್ಲರೂ...
ಸ್ಯಾಂಡಲ್‌ವುಡ್ 'ದೂದ್ ಪೇಡಾ' ಖ್ಯಾತಿಯ ನಟ ದಿಗಂತ್ (Diganth) ಅವರು ಹಿರಿಯ ನಟ ಅಚ್ಯುತ್ ಕುಮಾರ್ (Achyuth Kumar) ಅವರಿಗೆ ಕಾಲ್ ಮಾಡಿ 'ಅಚ್ಯುತ್ ಅಣ್ಣಾ..' ಎನ್ನುತ್ತಾರೆ. ಆ ಕಡೆಯಿಂದ ಅಚ್ಯುತ್ ಕುಮಾರ್ ಅವರು 'ದಿಗಂತ್ ಅವ್ರೇ, ಹೇಳಿ, ಹೇಗಿದೀರಾ..?' ಎನ್ನುತ್ತಾರೆ. ಅದಕ್ಕೆ ದಿಗಂತ್ 'ಚೆನ್ನಾಗಿದೀನಿ, ತಾವು ಹೇಗಿದೀರಾ? ' ಎಂದು ಕೇಳಿ, ಬಳಿಕ 'ಇಲ್ಲಿ ಯಾರೋ ನಿಮಗೆ ಹಾಯ್ ಹೇಳ್ಬೇಕಂತೆ ನೋಡಿ.. ಎಂದು ನಟಿ-ನಿರೂಪಕಿ ಅನುಶ್ರೀ ಅವರಿಗೆ ತಮ್ಮ ಮೊಬೈಲ್ ಕೊಡುತ್ತಾರೆ.
ದಿಗಂತ್ ಮೊಮೈಲ್ ತೆಗೆದುಕೊಂಡ ಆ್ಯಂಕರ್ ಅನುಶ್ರೀ, ಹಾಯ್.., ನಾನು ಬ್ಯಾಂಕಾಕ್‌ನಲ್ಲಿ ನಿಮಗೆ ಸಿಕ್ಕಿದ್ದೆ.. ನಾನು ಬೆಂಗಳೂರಿನ ಹುಡುಗಿ ಅಂತ ಪರಿಚಯ ಮಾಡ್ಕೊಂಡಿದ್ದೆ.. ನೀವು ನನ್ನ ಮಾತಾಡ್ಸಿ, ನಿಮ್ಮ ನಂಬರ್ ಎಲ್ಲಾ ಕೊಟ್ಟು ನೈಟ್ ಮೆಸೇಜ್ ಮಾಡಿ ಅಂತ ಹೇಳಿದ್ರಿ.. ಎಂದು ಹೇಳುತ್ತಾರೆ. ಅತ್ತ ಕಡೆಯಿಂದ ಶಾಕ್ ಆದವರಂತೆ ನಟ ಅಚ್ಯುತ್ ಅವರು 'ನೈಟಾ..?' ಎನ್ನಲು ಅಲ್ಲಿ (Anchor Anushree) ಅನುಶ್ರೀ ಪಕ್ಕದಲ್ಲಿರುವ ನಟ ದಗಿಂತ್, ಲೂಸ್ ಮಾದ ಖ್ಯಾತಿಯ ಯೋಗೇಶ್ ಹಾಗೂ ಇತರರು ಬಿದ್ದು ಬಿದ್ದೂ ನಗುತ್ತಾರೆ.
ರವಿಚಂದ್ರನ್ ತಬ್ಬಿಕೊಂಡ ಅನುಶ್ರೀ, ಹುಟ್ಟುಹಬ್ಬದಂದು ಮಗಳಾಗಿಬಿಟ್ರಾ ಅಂತಿದಾರಲ್ಲ!
ಅವರೆಲ್ಲರ ನಗುವನ್ನು ಕೇಳಿದ ನಟ ಅಚ್ಯುತ್ ಅವರು ಅದೇನಂದುಕೊಂಡರೋ ಏನೋ, ಹಲೋ, ನಿಮ್ಮ ವೈಸ್ ಗೊತ್ತಾಗುತ್ತಿಲ್ಲ, ನೀವು ಯಾವ್ ಚಾನೆಲ್‌ನವರು ಎಂದು ಮುಗ್ಧರಂತೆ ಕೇಳುತ್ತಾರೆ. ಅಚ್ಯುತ್ ಮಾತನ್ನು ಕೇಳಿ ಅಲ್ಲಿದ್ದ ಎಲ್ಲರೂ ನಕ್ಕಿದ್ದೇ ನಕ್ಕಿದ್ದು! ದಿಗಂತ್ ಮೊಬೈಲ್‌ನಿಂದ ಆ್ಯಂಕರ್ ಅನುಶ್ರೀ ಮಾಡಿದ್ದ ಫ್ರಾಂಕ್ ಕಾಲ್‌ಗೆ ನಟ ಅಚ್ಯುತ್ ಅವರು ಬೇಸ್ತು ಬಿದ್ದಿದ್ದಾರೆ. ಅವರ ಫಜೀತಿ ನೋಡಿ ದಿಗಂತ್, ಅನುಶ್ರೀ, ಲೂಸ್ ಮಾದ ಯೋಗಿ ಹಾಗೂ ಎಲ್ಲರೂ ತಮಾಷೆಗಾಗಿ ಎಂಜಾಯ್ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ಬಗ್ಗೆ ಹೀಗೆ ಹೇಳ್ಬಿಟ್ರಾ 'ದಿಯಾ' ನಟಿ ಖುಷಿ; ಅದರಲ್ಲೇನು ತಪ್ಪು ಅಂತೀರಾ?
ಈ ಫ್ರಾಂಕ್ ಕಾಲ್ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅದನ್ನು ನೋಡಿ ಎಲ್ಲರೂ ಬಿದ್ದು ಬಿದ್ದಸು ನಗುತ್ತಿದ್ದಾರೆ, ಆ್ಯಂಕರ್ ಅನುಶ್ರೀ ಅವರ ಸಮಯಪ್ರಜ್ಞೆ, ಧ್ವನಿ ಬದಲಾಯಿಸಿ ಮಾತನಾಡುವ ಪ್ರತಿಭೆ ಹಾಗೂ ತಮಾಷೆ ಮಾಡಿ, ಕಾಲೆಳೆದು ಎಲ್ಲರನ್ನೂ ನಗಿಸಿ ತಾವೂ ನಕ್ಕು ಎಂಜಾಯ್ ಮಾಡುವ ರೀತಿಗೆ ಎಲ್ಲರೂ ಫಿದಾ ಆಗಿದ್ದಾರೆ. ಹಾಗೇ, ಅನುಶ್ರೀಯವರ ಫನ್ ಮೆಚ್ಚಿ ಹಲವರು ಕಾಮೆಂಟ್ ಮಾಡಿದ್ದಾರೆ. ದಿಗಂತ್, ಲೂಸ್ ಮಾದ ಎಲ್ಲರೂ ಮಾತನಾಡಿರುವ ರೀತಿ ಸಖತ್ ಪನ್ನಿಯಾಗಿದೆ!
ಸೀತಾ ಟಾರ್ಚರ್: ರಾಮ್, ನಿಂಗಿದು ಬೇಕಿತ್ತಾ ಮಗನೇ..ವಾಪಸ್ ಹೊಂಟೋಗು ಶಿವನೇ..!