'ಅಡಲ್ಟ್ ಮೂವಿ'ನಲ್ಲಿ ನಟಿಸ್ತೀರಾ ಅಂತ ಕೇಳಿದ್ದ ಅವ್ನು; ಹಿಗ್ಗಾಮುಗ್ಗಾ ಬೆಂಡೆತ್ತಿದ್ರು ಬೆಂಕಿ ತನಿಷಾ!

By Shriram Bhat  |  First Published May 31, 2024, 11:09 AM IST

ನನ್ನ ಪಾಲಿಗೆ ಬೋಲ್ಡ್ ಹಣೆಪಟ್ಟಿಯ ಪಾತ್ರಗಳು ಬಂದಾಗ ನಾನು ಅದನ್ನು ನಿರ್ವಹಿಸಿದ್ದೇನೆ. ಏಕೆಂದರೆ, ಬಂದ ಅವಕಾಶಗಳನ್ನೇ ಬಳಸಿಕೊಂಡು ಯಾವುದೇ ಕಲಾವಿದ ಬೆಳೆಯಬೇಕಾಗುತ್ತದೆ. ನನಗೆ ಬಣ್ಣದ ಬದುಕಿನಲ್ಲಿ ಯಾರೂ ಗಾಡ್ ಫಾದರ್ ಆಗಲೀ, ಉದ್ಯಮದ ಹಿನ್ನೆಲೆಯಾಗಲೀ ಇಲ್ಲ.


ಅದೇನು ದುರ್ದೈವವೋ ಎಂಬಂತೆ ನಟಿ ತನಿಷಾ ಕುಪ್ಪಂಡ (Tanisha Kuppanda) ಅವರನ್ನು ಇಂಟರ್‌ವ್ಯೂ ಮಾಡಲಿಕ್ಕೆ ಹಲವು ಸಮಯದ ಹಿಂದೆ ಒಬ್ಬ ಯೂಟ್ಯೂಬರ್ ಬಂದಿದ್ದ. ನಟಿನಟರು ಎಂದಮೇಲೆ ಸಂದರ್ಶನಗಳನ್ನು ಮಾಡುವುದು, ಫೋಟೋ, ವೀಡಿಯೋ ತೆಗೆದುಕೊಳ್ಳುವುದು ಸಹಜ ತಾನೆ? ಅದರಂತೆ ನಟಿ ತನಿಷಾ ಸಂದರ್ಶನಲ್ಲಿ ಭಾಗವಹಿಸಿದ್ದಾರೆ. ಅತ್ಯಂತ ಸಹಜವಾಗಿದ್ದ ತನಿಷಾ ಕೇಳಿದ ಪ್ರಶ್ನೆಗಳಿಗೆ ಎಂದಿನಂತೆ ನೇರ ಉತ್ತರ ನೀಡುತ್ತಿದ್ದಾರೆ. ಸಿನಿಮಾಗಳಲ್ಲಿ ಬೋಲ್ಡ್ ಪಾತ್ರಗಳನ್ನು ಮಾಡಿ ಮೆಚ್ಚುಗೆ ಗಳಿಸಿದ್ದ ತನಿಷಾಗೆ ಸಹಜವಾಗಿಯೇ  ಬಗ್ಗೆ ಪ್ರಶ್ನೆಗಳು ಎದುರಾಗುತ್ತಲೇ ಇತ್ತು. 

ಯೂಟ್ಯೂಬರ್ ಕೇಳಿದ ಪ್ರಶ್ನೆಗೆ 'ಹೌದು, ಪಾತ್ರಕ್ಕೆ ಅಗತ್ಯವಿದ್ದಾಗ ನಾನು ಬೋಲ್ಡ್ ಪಾತ್ರಗಳಲ್ಲಿ, ಅರೆಬರೆ ಬಟ್ಟೆಗಳಲ್ಲಿ ಕಾಣಿಸಿಕೊಂಡಿದ್ದೇನೆ. ಕಾರಣ, ಅದು ನಿರ್ದೇಶಕರು ಸೃಷ್ಟಿಸಿರುವ ಕಾಲ್ಪನಿಕ ಅಥವಾ ನೈಜ ಪಾತ್ರವಾಗಿರುತ್ತದೆ. ನಾನೊಬ್ಬಳು ನಟಿಯಾಗಿ ನಿರ್ದೇಶಕರು ಹೇಳಿದಂತೆ ಆ ಪಾತ್ರಕ್ಕೆ ತಕ್ಕಂತೆ ಬಟ್ಟೆ, ಹಾವ-ಭಾವ ಎಲ್ಲವನ್ನೂ ಮಾಡಿಕೊಳ್ಳುವುದು ನನ್ನ ಕರ್ತವ್ಯ. ಎಲ್ಲರೂ ಎಲ್ಲರೀತಿಯ ಪಾತ್ರಗಳನ್ನು ಮಾಡಲಿಕ್ಕಾಗುವುದಿಲ್ಲ. ಕೆಲವರಿಗೆ ಕೊಲವೊಂದು ಪಾತ್ರ ಸ್ಯೂಟ್ ಆಗುವುದಿಲ್ಲ ಎನ್ನುತ್ತಾರೆ, ಅದೆಲ್ಲಾ ಆಯ್ಕೆ ನಿರ್ದೇಶಕರಿಗೆ ಬಿಟ್ಟಿದ್ದು ಬಿಡಿ. 

Tap to resize

Latest Videos

ನೈಟ್ ಮೆಸೇಜ್ ಮಾಡಿ ಅಂದಿದ್ರಿ ನಂಬರ್ ಕೊಟ್ಟು; ಅನುಶ್ರೀಗೆ ತಗ್ಲಾಕೊಂಡ್ರಾ ಅಚ್ಯುತ್?

ಆದರೆ ನನ್ನ ಪಾಲಿಗೆ ಬೋಲ್ಡ್ ಹಣೆಪಟ್ಟಿಯ ಪಾತ್ರಗಳು ಬಂದಾಗ ನಾನು ಅದನ್ನು ನಿರ್ವಹಿಸಿದ್ದೇನೆ. ಏಕೆಂದರೆ, ಬಂದ ಅವಕಾಶಗಳನ್ನೇ ಬಳಸಿಕೊಂಡು ಯಾವುದೇ ಕಲಾವಿದ ಬೆಳೆಯಬೇಕಾಗುತ್ತದೆ. ನನಗೆ ಬಣ್ಣದ ಬದುಕಿನಲ್ಲಿ ಯಾರೂ ಗಾಡ್ ಫಾದರ್ ಆಗಲೀ, ಉದ್ಯಮದ ಹಿನ್ನೆಲೆಯಾಗಲೀ ಇಲ್ಲ. ಬಂದ ಅವಕಾಶಗಳನ್ನು ಸಮರ್ಥವಾಗಿ ಬಳಿಸಿಕೊಂಡು ನಾನೊಬ್ಬಳು ಸಮರ್ಥ ನಟಿ ಎಂಬುದನ್ನು ನಿರೂಪಿಸಬೇಕಾಗುತ್ತದೆ. ಅದನ್ನೇ ಮಾಡಿದ್ದೇನೆ.' ಎಂದಿದ್ದಾರೆ ನಟಿ ತನಿಷಾ. 

ರವಿಚಂದ್ರನ್ ತಬ್ಬಿಕೊಂಡ ಅನುಶ್ರೀ, ಹುಟ್ಟುಹಬ್ಬದಂದು ಮಗಳಾಗಿಬಿಟ್ರಾ ಅಂತಿದಾರಲ್ಲ!

ಅಷ್ಟಕ್ಕೇ ಸಂದರ್ಶಕ ಯೂ ಟ್ಯೂಬರ್ ನಿಲ್ಲಿಸಿದ್ದರೆ ಏನೂ ತೊಂದರೆ ಇರಲಿಲ್ಲ. ಆದರೆ, ಅದೇನಿತ್ತೋ ಆತನ ಉದ್ದೇಶ ಎಂಬಂತೆ 'ಹಾಗಿದ್ದರೆ ನೀವು ಬ್ಲೂ ಫಿಲಂ'ಗಳಲ್ಲೂ ನಟಿಸ್ತೀರಾ? ಎಂದು ಕೇಳಿಬಿಟ್ಟಿದ್ದಾನೆ. ಅನಿರೀಕ್ಷಿತ ಹಾಗೂ ಅಸಂಬದ್ಧ ಪ್ರಶ್ನೆಗೆ ತಕ್ಷಣ ಕೆರಳಿದ ನಟಿ ತನಿಷಾ 'ನೀವು ಯಾಕೆ ಇಂಥ ಪ್ರಶ್ನೆ ಕೇಳ್ತೀರಾ? ನಾನ್ಯಾಕೆ ಬ್ಲೂ ಫಿಲಂಗಳಲ್ಲಿ ನಟಿಸ್ಬೇಕು? ನಮ್ಮಲ್ಲಿ ಅದಕ್ಕೆಲ್ಲಾ ಮಾನ್ಯತೆ ಇದೆಯಾ? 

ಮಸಿ ಬಳಿದುಬಿಟ್ರಾ 'ದಿಯಾ' ನಟಿ ಖುಷಿ, ಸ್ಯಾಂಡಲ್‌ವುಡ್‌ಗೆ ಯಾಕೆ ಹೀಗಂತ ಹೇಳಿದ್ದು?

ಕೆಲವು ವಿದೇಶಗಳಲ್ಲಿ ಅಂತಹ ಅಡಲ್ಟ್ ಸಿನಿಮಾಗಳನ್ನು ಮಾಡುವ ಹಾಗೂ ನೋಡುವ ಜನರಿದ್ದಾರೆ. ಅಲ್ಲಿ ಅದಕ್ಕೆ ಕಾನೂನು ಮಾನ್ಯತೆಯೂ ಇದೆಯಂತೆ. ಆದರೆ, ನಮ್ಮಲ್ಲಿ ಅಂತಹ ಸಿನಿಮಾಗಳನ್ನು ಯಾರೂ ಮಾಡುವುದಿಲ್ಲ, ನೋಡುವುದಿಲ್ಲ. ಅದೂ ಕೂಡ ಗೊತ್ತಿಲ್ಲದೇ ನೀವು ನನಗೆ ಹೀಗೇ ಪ್ರಶ್ನೆ ಯಾಕೆ ಕೇಳಿದ್ಯಾಕೆ ಎಂದು ಕೆರಳಿ ಕೆಂಡವಾಗಿ, ನಾನು ಇದರಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ ಹೊರಗೆ ನಡೆದಿದ್ದಾರೆ. ಅಲ್ಲಿದ್ದ ಕೆಲವರು ಏನಾಯ್ತು ಎಂದು ವಿಚಾರಿಸಿದಾಗ ಅಲ್ಲಿ ನಡೆದ ಘಟನೆಯನ್ನು ಅವರಿಗೆಲ್ಲ ವಿವರಿಸಿದ್ದಾರೆ. ಅವರೆಲ್ಲರೂ ಆತನನ್ನು ಸರಿಯಾಗಿ ಬೆಂಡೆತ್ತಿ ಕಳಿಸಿದ್ದಾರೆ. 

ದೇವಸ್ಥಾನದ ಪ್ರಸಾದಕ್ಕಾಗಿ ಕಾಯುತ್ತಿದ್ದ ರವಿ ಬಸ್ರೂರ್ ಲೈಫ್ ಟರ್ನಿಂಗ್ ಪಾಯಿಂಟ್ ಏನು?

ನಟಿ ತನಿಷಾ ಹೇಳಿದಂತೆ, ನಮ್ಮಲ್ಲಿ ಯಾರೂ ಅಂತಹ ಸಿನಿಮಾಗಳನ್ನು ಅಧಿಕೃತವಾಗಿ ಮಾಡುವುದಿಲ್ಲ ಹಾಗೂ ನೋಡುವುದಿಲ್ಲ. ಮನೆಮಂದಿಯೆಲ್ಲ ಕುಳಿತು ಅಂತಹ ಸಿನಿಮಾಗಳನ್ನು ಮನೆಯಲ್ಲಿ ಅಥವಾ ಯಾರಾದರೂ ಥಿಯೇಟರ್‌ನಲ್ಲೂ ಪ್ರದರ್ಶಿಸುವುದಿಲ್ಲ ಹಾಗೂ ನೋಡುವುದಿಲ್ಲ. ಎಲ್ಲೋ ಯಾರೋ ಮಾಡಿರುವ ಅಂತಹ ಇಲ್ಲೀಗಲ್ ಸಿನಿಮಾಗಳನ್ನೂ ಕೆಲವರು ನಾಲ್ಕು ಗೋಡೆಯ ಮಧ್ಯೆ ಕದ್ದು ನೋಡಬಹುದು ಅಷ್ಟೇ. ಯಾವುದೇ ಕಲಾವಿದರಿಗೆ ಆ ರೀತಿ ಪ್ರಶ್ನೆ ಕೇಳುವುದು ಅಸಮಂಜಸ ಹಾಗೂ ಅಸಂಬದ್ಧ ಎಂಬ ಅಭಿಪ್ರಾಯ ಅಂದು ತನಿಷಾ ಅಭಿಮಾನಿ ಬಳಗ ಸೇರಿದಂತೆ ಎಲ್ಲ ಕಡೆಯಿಂದಲೂ ವ್ಯಕ್ತವಾಗಿತ್ತು.

ಕರಾಳ ಸತ್ಯ ಹೇಳುತ್ತೇನೆ, ಹಲವರು ಸ್ವಇಚ್ಛೆಯಿಂದ್ಲೇ ಹಾಸಿಗೆ ಹಂಚಿಕೊಳ್ತಾರೆ; ಗಾಯತ್ರಿ ಗುಪ್ತಾ!

ಸಿನಿಮಾಗಳಲ್ಲಾಗಲೀ ಸಮಾಜದಲ್ಲಾಗಲೀ ಅತ್ತೆ ಅತ್ತೆಯಂತೆ ಸೊಸೆಯಂತೆ ಇರುತ್ತಾರೆ, ಅದನ್ನೇ ಕಲ್ಪನೆಯಲ್ಲೂ ತೋರಿಸಲಾಗುತ್ತದೆ. ಆಯಾ ಕಾಲದ ಡ್ರೆಸ್‌ಗಳು, ಸಂಪ್ರದಾಯಗಳು ಹಾಗೂ ನಡೆನುಡಿ ಆಯಾ ಕಾಲಘಟ್ಟದಲ್ಲಿ ಬಳಕೆಯಲ್ಲಿ ಇರುತ್ತವೆ. ಅದೇ ರೀತಿ ಅವರವರು ಮಾಡುವ ವೃತ್ತಿಗೆ, ಸಮಯಕ್ಕೆ ಸರಿಯಾಗಿ ಅವರ ನಡತೆ ಹಾಗೂ ಸಂಪ್ರದಾಯಗಳು ಬದಲಾಗುತ್ತವೆ. ಒಬ್ಬರು ವೇಶ್ಯೆ ಗರತಿಯಂತೆ ಇರಲು ಸಾಧ್ಯವಿಲ್ಲ. ಹಾಗಾಗಿ ಅಂಥ ಪಾತ್ರಗಳನ್ನೂ ಹಾಗೆ ತೋರಿಸಲು ಅಸಾಧ್ಯ. 

ಪುನೀತ್ ರಾಜ್‌ಕುಮಾರ್ 'ಅಣ್ಣಾವ್ರ' ಚಪ್ಪಲಿ ಇಟ್ಟಿದ್ದೆಲ್ಲಿ? ಅಮ್ಮನ ನೆನಪಿಗೆ ಅಪ್ಪು ಮಾಡಿದ್ದೆನು?

ಕಲಾವಿದರು ಯಾರೇ ಆಗಲಿ, ನಿರ್ದೇಶಕರ ಸೃಷ್ಟಿಯ ಅಂತಹ ಪಾತ್ರಗಳನ್ನು ಹಾಗೆಯೇ ಪೋಷಿಸಬೇಕಾಗುತ್ತದೆ, ಹಾಗೇ ನಟಿಸುತ್ತಾರೆ. ಆದರೆ, ಅದು ಅವರು ನಿಜ ಜೀವನವಲ್ಲ ಅಥವಾ ಅವರು ನಿಜವಾಗಿಯೂ ಹಾಗಿರುವುದಿಲ್ಲ. ಅದು ಕೇವಲ ನಟನೆಯಷ್ಟೇ. ಭಾರತದಂತಹ ದೇಶದಲ್ಲಿ ಪಾತ್ರಗಳ ಸೃಷ್ಟಿ ಹಾಗೂ ಪ್ರದರ್ಶನ ತುಂಬಾ ಮಿತಿಮೀರಿದ ನಗ್ನತೆಯನ್ನೂ ಪ್ರದರ್ಶಿಸುವುದಿಲ್ಲ. 

ಅದನ್ನು ಪದೇಪದೇ ಮುಟ್ಟಿಕೊಳ್ಳುವುದು ಸಮಸ್ಯೆಯಲ್ಲ, ಕಾರಣವಿದೆ: ನಮ್ರತಾ ಗೌಡ!

ಬ್ಲೂ ಫಿಲಂ ಭಾರತದಲ್ಲಿ ತಯಾರಾಗುವುದೇ ಇಲ್ಲ ಅಂದ ಮೇಲೆ ಅಂತಹ ಸಿನಿಮಾಗಳಲ್ಲಿ ನಟಿಸುತ್ತೀರಾ ಎಂದು ಕೇಳುವುದು ಪೆದ್ದತನ ಹಾಗೂ ಭಂಡತನ ಎನ್ನಲೇಬೇಕು' ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದ ಆ ಸಂದರ್ಶನದ ವೀಡೀಯೋ ಉಲ್ಲೇಖಿಸಿ ಸಿನಿಪ್ರಿಯರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಬಹಳಷ್ಟು ಮೆಚ್ಚುಗೆ ಸಹ ವ್ಯಕ್ತವಾಗಿದೆ. 

click me!