ನನ್ನ ಸೊಸೆ ರಾಧಿಕಾ ಯಾಕೆ ಕೆಲಸ ಮಾಡ್ಬೇಕು? ನಮ್ಗೆ ಶಕ್ತಿ ಇರೋವರೆಗೂ ನಾವೇ ಮಾಡ್ಕೋತ್ತೀವಿ: ಯಶ್ ತಾಯಿ ಹೇಳಿಕೆ

Published : Feb 22, 2025, 07:52 PM ISTUpdated : Feb 22, 2025, 07:55 PM IST
ನನ್ನ ಸೊಸೆ ರಾಧಿಕಾ ಯಾಕೆ ಕೆಲಸ ಮಾಡ್ಬೇಕು? ನಮ್ಗೆ ಶಕ್ತಿ ಇರೋವರೆಗೂ ನಾವೇ ಮಾಡ್ಕೋತ್ತೀವಿ: ಯಶ್ ತಾಯಿ ಹೇಳಿಕೆ

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ಅವರ ತಂದೆ ತಾಯಿ ಹಾಸನದ ತೋಟದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸೊಸೆ ರಾಧಿಕಾ ಕೆಲಸ ಮಾಡುವುದು ತಾಯಿಗೆ ಇಷ್ಟವಿಲ್ಲ. ರಾಧಿಕಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಕಾರಣ ಕೆಲಸ ಮಾಡಲು ಸಮಯವಿರಲಿಲ್ಲ. ಯಶ್‌ಗೆ ಇಷ್ಟವಾದ್ದನ್ನು ರಾಧಿಕಾ ಮಾಡಿಕೊಡುತ್ತಾರೆ. ಶಕ್ತಿ ಇರುವವರೆಗೂ ತಮ್ಮ ಕೆಲಸ ತಾವೇ ಮಾಡಿಕೊಳ್ಳಲು ತಾಯಿ ಪುಷ್ಪ ಬಯಸುತ್ತಾರೆ. ಬೆಂಗಳೂರಿನ ಮನೆಯಲ್ಲಿ ಕೆಲಸದವರಿದ್ದರೂ, ತಾವೇ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ.

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಮತ್ತು ತಂದೆ ಹಾಸನದಲ್ಲಿ ಇರುವ ತೋಟದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಗ ಪ್ಯಾನ್ ಇಂಡಿಯಾ ಸ್ಟಾರ್ ಆದರೂ ತೋಟದಲ್ಲಿ ಪೋಷಕರಿಬ್ಬರು ತಮ್ಮ ರಿಟೈರ್ ಸಮಯ ಕಳೆಯುತ್ತಿದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಮಕ್ಕಳನ್ನು ಭೇಟಿ ಮಾಡುತ್ತಾರೆ. ರಾಧಿಕಾ ಪಂಡಿತ್ ಮತ್ತು ಅತ್ತೆ ಪುಷ್ಪ ಸಿಕ್ಕಾಪಟ್ಟೆ ಕ್ಲೋಸ್, ಅಲ್ಲದೆ ಒಬ್ಬರನೊಬ್ಬರು ಎಂದೂ ಬಿಟ್ಟು ಕೊಡುವುದಿಲ್ಲ. ಮನೆಯಲ್ಲಿ ಯಾರು ಕೆಲಸ ಮಾಡುತ್ತಾರೆ ಎಂದು ಪ್ರಶ್ನಸಿದ್ದಾಗ ಸಿಕ್ಕ ಉತ್ತರವಿದು.

'ನಮ್ಮ ಮನೆಯಲ್ಲಿ ಯಾವ ಸೊಸೆಯಂದಿರು ಕೆಲಸ ಮಾಡುವುದು ನನಗೆ ಇಷ್ಟ ಆಗಲ್ಲ. ರಾಧಿಕಾ ಪಂಡಿತ್ ಕೆಲಸ ಮಾಡೋದು ನನಗೆ ಇಷ್ಟ ಆಗಲ್ಲ. ಸೊಸೆ ಯಾಕೆ ಕೆಲಸ ಮಾಡಬೇಕು? ನಾವೆಲ್ಲಾ ಕಷ್ಟ ಪಟ್ಟಿದ್ದೀವಿ ಆ ಕಷ್ಟ ಅವರಿಗೆ ಬೇಡ. ನನ್ನ ಮಗಳು ನಂದಿನಿಗೆ ಆದರೂ ಅಲ್ಪ ಸ್ವಲ್ಪ ಕೆಲಸ ಮಾಡುವುದಕ್ಕೆ ಬರುತ್ತೆ ಆದರೂ ಅವರು ಮಾಡಲ್ಲ. ಆದರೆ ನನ್ನ ಸೊಸೆ ರಾಧಿಕಾ ಪಾಪ ಯಾವತ್ತೂ ಕೆಲಸ ಮಾಡಿಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಯಶ್ ತಾಯಿ ಮಾತನಡಿದ್ದಾರೆ.

ಪವಿತ್ರಾ ಗೌಡ ರೆಡಿಯಾಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್!

ರಾಧಿಕಾ ಯಾವಾಗಲೂ ಶೂಟಿಂಗ್‌ನಲ್ಲಿ ಬ್ಯುಸಿ ಇರ್ತಿದ್ಲು. ಅವರಿಗೆ ಕೆಲಸ ಮಾಡುವುದಕ್ಕೆ ಟೈಮ್ ಕೂಡ ಇರುತ್ತಿರಲಿಲ್ಲ ಆದರೆ ಕೆಲಸ ಮಾಡುವುದು ಅಂದರೆ ರಾಧಿಕಾಗೆ ತುಂಬಾನೇ ಇಷ್ಟ. ಈಗಲೂ ಯಶ್‌ಗೆ ಇಷ್ಟ ಅಗುವುದನ್ನೆಲ್ಲಾ ಮಾಡಿ ಕೊಡುತ್ತಾರೆ. ಆದರೂ ನನ್ನ ಸೊಸೆ ರಾಧಿಕಾ ಪಂಡಿತ್ ತರಹ ಅಭಿನಯಿಸುವುದಕ್ಕೆ ಸಾಧ್ಯವಿಲ್ಲ. ನಮಗೆ ಶಕ್ತಿ ಇರುವವರರೆಗೂ ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು' ಎಂದು ಯಶ್ ತಾಯಿ ಪುಷ್ಪ ಹೇಳಿದ್ದಾರೆ.

ರಮ್ಯಾ ಧರಿಸಿರುವ ಕಪ್ಪು ಸೀರೆ ಬೆಲೆಗೆ 3 ತಿಂಗಳು ಬಡವರ ದಿನಸಿ ಬರ್ತಿತ್ತಂತೆ; ಫೋಟೋ ವೈರಲ್

'ಯಶ್ 10 ಸಿನಿಮಾ ಮಾಡಿದ ನಂತರವೇ ನಮ್ಮ ಬೆಂಗಳೂರಿನ ಮನೆಗೆ ಕೆಲಸದವರು ಬಂದಿದ್ಲು. ಅಲ್ಲಿಯವರೆಗೂ ನಾನೇ ಎಲ್ಲಾ ಕೆಲಸ ಮಾಡುತ್ತಿದ್ದೆ. ಯಶ್ ಮನೆಯಲ್ಲಿ ಕೆಲಸದವರು ಇದ್ದಾರೆ. ಆದರೆ ನನಗೆ ನನ್ನ ಕೆಲಸ ನಾನೇ ಮಾಡಿಕೊಳ್ಳಬಬೇಕು ಅನ್ನೋದು ಇಷ್ಟ. ಇಲ್ಲಿಯವರೆಗೂ ಕೆಲಸದವರನ್ನು ಇಟ್ಟುಕೊಳ್ಳಬೇಕು ಅಂತ ಅನಿಸಿಲ್ಲ. ಸಮಯ ಬಂದಾಗ ನೋಡೋಣ' ಎಂದಿದ್ದಾರೆ ಪುಷ್ಪ.

ಕಾಫಿ ತೋಟದಲ್ಲಿ ಕುಣಿದು ಕುಪ್ಪಳಿಸಿದ ವರ್ಷ ಕಾವೇರಿ; ಅದಿಕ್ಕೆ ರೇಟ್ ಜಾಸ್ತಿ ಆಗಿದೆ ಎಂದ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?
ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!