
ಮನೆ ಮಾಡಬೇಕು ಎನ್ನೋದು ನಟ ಚಿರಂಜೀವಿ ಸರ್ಜಾ ಕನಸಾಗಿತ್ತು. ಈ ಕನಸನ್ನು ಕಳೆದ ವರ್ಷ ಅವರ ಪತ್ನಿ, ನಟಿ ಮೇಘನಾ ರಾಜ್ ಪೂರೈಸಿದ್ದಾರೆ. ಆದರೆ ಅವರ ಸಂಪೂರ್ಣ ಮನೆ ಹೇಗಿದೆ ಎನ್ನುವ ಚಿತ್ರಣ ಇನ್ನೂ ಎಲ್ಲರಿಗೂ ಸಿಕ್ಕಿಲ್ಲ. ಇತ್ತೀಚೆಗೆ ಮೇಘನಾ ಅವರು ತಂದೆ ಸುಂದರ್ ರಾಜ್ ಅವರ ಜನ್ಮದಿನದ ಆಚರಣೆಯ ವಿಡಿಯೋ ಹಂಚಿಕೊಂಡಿದ್ದರು. ಆಗಲೇ ಅವರ ಅಡುಗೆ ಮನೆ ಹೇಗಿದೆ ಎನ್ನುವ ಝಲಕ್ ಸಿಕ್ಕಿದೆ.
ಹೋಮ್ ಟೂರ್ ಮಾಡಿಲ್ಲ!
ಮೇಘನಾ ರಾಜ್ ಅವರದ್ದೇ ಆದ ಯುಟ್ಯೂಬ್ ಚಾನೆಲ್ ಇದೆ. ಅಲ್ಲಿ ಅವರು ಆಗಾಗ ಅನೇಕ ವಿಷಯಗಳ ಬಗ್ಗೆ ವಿಡಿಯೋ ಮಾಡಿ ಶೇರ್ ಮಾಡಿಕೊಳ್ಳುತ್ತಲಿರುತ್ತಾರೆ. ಇದುವರೆಗೂ ಅವರು ಮನೆಯ ವಿಡಿಯೋ ಶೇರ್ ಮಾಡಿಲ್ಲ. ಆದರೆ ರೂಮ್ ಟೂರ್ ಮಾಡಿದ್ದರು. ಮುಂದಿನ ದಿನಗಳಲ್ಲಿ ಇವರು ಹೋಮ್ ಟೂರ್ ಮಾಡಬಹುದೋ ಏನೋ!
ʼಡಾಲಿ ಧನಂಜಯ ಅಂದ್ರೆ ನಂಗಿಷ್ಟʼ- ಅಮೃತಾ ಅಯ್ಯಂಗಾರ್ ಹಳೇ ವಿಡಿಯೋ ವೈರಲ್; ಸತ್ಯಾಸತ್ಯತೆ ಬೇರೆಯೇ ಇದೆ!
ಭವ್ಯವಾದ ಬಂಗಲೆ!
ಮೇಘನಾ ಅವರ ಅಡುಗೆ ಮನೆ ತುಂಬ ದೊಡ್ಡದಾಗಿದ್ದು, ಭವ್ಯವಾಗಿದೆ. ಬಿಳಿ ಬಣ್ಣದ ಥೀಮ್‌ನಲ್ಲಿ ಇದನ್ನು ರೆಡಿ ಮಾಡಲಾಗಿದೆ. ಇನ್ನು ಡೈನಿಂಗ್ ಹಾಲ್ ಕೂಡ ತುಂಬ ವಿಶಾಲವಾಗಿದೆ. ಅಷ್ಟೇ ಅಲ್ಲದೆ ದೊಡ್ಡ ಬಾಲ್ಕನಿ ಕೂಡ ಇದೆ. ಲಿವಿಂಗ್ ಏರಿಯಾ ಕೂಡ ತುಂಬ ವಿಶಾಲವಾಗಿದೆ. ಕಳೆದ ನವೆಂಬರ್‌ನಲ್ಲಿ ಈ ಮನೆಯ ಗೃಹ ಪ್ರವೇಶ ಆಗಿತ್ತು. ಮನೆಗೆ ಮೇಘನಾ ರಾಜ್ ಸರ್ಜಾ, ರಾಯನ್ ರಾಜ್ ಸರ್ಜಾ ಎಂದು ಹೆಸರು ಇಡಲಾಗಿದೆ. ಮುಂದಿನ ದಿನಗಳಲ್ಲಿ ಇವರು ಮನೆಯ ಟೂರ್ ಮಾಡಬಹುದು.
'ಚೋಟುದ್ದ ಇದ್ಯಾ? ಎಷ್ಟೋ ಮಾತಾಡ್ತ್ಯಾ?'; ಕಿಶನ್ ಮುಂದೆ ಅವಾಜ್ ಹಾಕಿದ ನಟಿ ರಮ್ಯಾ!
ಮೇಘನಾ ರಾಜ್ ಅಡುಗೆ!
ಅಂದಹಾಗೆ ಸುಂದರ್ ರಾಜ್ ಅವರ ಜನ್ಮದಿಕ್ಕೆ ಮೇಘನಾ ರಾಜ್ ಅವರು ಕೇಕ್ ಮಾಡಿದ್ದಾರೆ, ಬೆಂಡೆಕಾಯಿ ಪಲ್ಯ, ಪೊಂಗಲ್ ಕೂಡ ಮಾಡಿದ್ದಾರೆ. ಇದಕ್ಕೆ ಪ್ರಮೀಳಾ ಜೋಶಾಯ್ ಅವರು ಸಹಕಾರ ನೀಡಿದ್ದಾರೆ. ಈ ಅಡುಗೆಗಳನ್ನು ತಿಂದು ಸುಂದರ್ ರಾಜ್ ಅವರು “ಸಖತ್ ಆಗಿದೆ, ತಾಯಿಗಿಂತಲೂ ಕೂಡ ಚೆನ್ನಾಗಿ ಆಗಿದೆ” ಎಂದು ಹೇಳಿದ್ದಾರೆ. ಇನ್ನು ಮೇಘನಾ ಅವರ ಈ ವಿಡಿಯೋ ಮಧ್ಯೆ ರಾಯನ್ ರಾಜ್ ಸರ್ಜಾ ಅವರ ತರಲೆ ಕೂಡ ನೋಡಬಹುದು. ಮೇಘನಾ ಅವರು ಮಾತನಾಡುವಾಗ ರಾಯನ್ ತುಂಟ ತುಂಟ ಮಾತುಗಳನ್ನು ಆಡುತ್ತಾರೆ. ಇದನ್ನು ನೋಡಿದವರಿಗೆ ನಗು ಬರೋದಂತೂ ಪಕ್ಕಾ.
ನಟನೆ ಜೊತೆಗೆ ಮೇಘನಾ ಅವರು ಸೋಶಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಆಗಿದ್ದಾರೆ. ಇನ್ನು ಮಗ ರಾಯನ್ ರಾಜ್ ಸರ್ಜಾ ಅವರ ಆರೈಕೆ ಮಾಡುವ ಜವಾಬ್ದಾರಿ ಕೂಡ ಇದೆ. ಒಟ್ಟಿನಲ್ಲಿ ಮೇಘನಾ ಫುಲ್ ಆಕ್ಟಿವ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.