Sandalwood Movies 2022: ಕನ್ನಡ ಚಿತ್ರರಂಗಕ್ಕೆ ಹೊಸ ವರ್ಷ ಶುಭ ತರಲಿ

By Kannadaprabha NewsFirst Published Jan 1, 2022, 8:01 AM IST
Highlights

ನಿರ್ಮಾಪಕರಿಗೆ ಸಿನಿಮಾ ರಿಲೀಸ್‌ ಚಿಂತೆ. ಪ್ರೇಕ್ಷಕರಿಗೆ ತಮ್ಮಿಷ್ಟದ ನಿರೀಕ್ಷೆಯ ಹೊಸ ಸಿನಿಮಾ ಯಾವಾಗ ಬಿಡುಗಡೆಯಾಗುವುದು ಎಂಬ ಕುತೂಹಲ. ಇವೆರಡರ ಜೊತೆಯಲ್ಲೇ ಹೊಸ ವರ್ಷ ಶುರುವಾಗಿದೆ. ಈ ವರ್ಷ ಸಿನಿಮಾ ಬಿಡುಗಡೆ ಮಾಡಲೇಬೇಕಾದ ಒತ್ತಡದಲ್ಲಿರುವವರಿಗೆ, ತಮ್ಮಿಷ್ಟದ ನಟನ ಸಿನಿಮಾಗಾಗಿ ಕಾತರದಿಂದ ಕಾಯುತ್ತಿರುವವರಿಗೆ ಶುಭವಾಗಲಿ ಎನ್ನುವುದೇ ಈ ಹೊತ್ತಿನ ಆಶಯ.

ನಿರ್ಮಾಪಕರಿಗೆ (Producer) ಸಿನಿಮಾ ರಿಲೀಸ್‌ ಚಿಂತೆ. ಪ್ರೇಕ್ಷಕರಿಗೆ ತಮ್ಮಿಷ್ಟದ ನಿರೀಕ್ಷೆಯ ಹೊಸ ಸಿನಿಮಾ ಯಾವಾಗ ಬಿಡುಗಡೆಯಾಗುವುದು ಎಂಬ ಕುತೂಹಲ. ಇವೆರಡರ ಜೊತೆಯಲ್ಲೇ ಹೊಸ ವರ್ಷ (New Year) ಶುರುವಾಗಿದೆ. ಈ ವರ್ಷ ಸಿನಿಮಾ ಬಿಡುಗಡೆ ಮಾಡಲೇಬೇಕಾದ ಒತ್ತಡದಲ್ಲಿರುವವರಿಗೆ, ತಮ್ಮಿಷ್ಟದ ನಟನ ಸಿನಿಮಾಗಾಗಿ ಕಾತರದಿಂದ ಕಾಯುತ್ತಿರುವವರಿಗೆ ಶುಭವಾಗಲಿ ಎನ್ನುವುದೇ ಈ ಹೊತ್ತಿನ ಆಶಯ.

ವರ್ಷಾರಂಭಕ್ಕೆ ಪರಭಾಷೆಯ ಸಿನಿಮಾಗಳು ಬಿಡುಗಡೆಯಾಗುವ ಕಾರಣಕ್ಕೆ ಕನ್ನಡದ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಒಮಿಕ್ರಾನ್‌ ಆತಂಕವೂ ಇರುವುದರಿಂದ ಸ್ವಲ್ಪ ಅನಿಶ್ಚಿತತೆ ಕಾಡುತ್ತಿದೆ. ಅದರ ಹೊರತಾಗಿಯೂ ಬಡವ ರಾಸ್ಕಲ್‌ (Badava Rascal) ಗೆಲುವಿನಿಂದ ಚಿತ್ರರಂಗ ಆಸೆಯಿಂದ 2022ನೇ ಇಸವಿಯನ್ನು ನೋಡುತ್ತಿದೆ. ಮೌನವಾಗಿ ಎಲ್ಲರೂ ಹೊಸ ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ಒಳಿತೇ ಆಗಲಿ ಎಂಬ ಸದುದ್ದೇಶದೊಂದಿಗೆ ಈ ವರ್ಷ ಚಿತ್ರಮಂದಿರಗಳಿಗೆ ಆಗಮಿಸಬಹುದಾದ ಚಿತ್ರಗಳ ಪಟ್ಟಿ ನೀಡುತ್ತಿದ್ದೇವೆ. ಈ ಪಟ್ಟಿ ಎಲ್ಲರ ಉಲ್ಲಾಸ ಹೆಚ್ಚಿಸಲಿ. ಚಿತ್ರರಂಗ ಗೆಲುವಾಗಲಿ ಹೊಸ ವರ್ಷ ಎಲ್ಲರಿಗೂ ಶುಭವನ್ನೇ ತರಲಿ.

Round Up 2021: ಸ್ಯಾಂಡಲ್‌ವುಡ್‌ನ ಉಲ್ಲಾಸ, ಉತ್ಸಾಹ, ವಿವಾದ, ವಿಷಾದ

1. ಕೆಜಿಎಫ್‌ 2 (ಯಶ್‌ ನಟನೆಯ ಸಿನಿಮಾ ಏಪ್ರಿಲ್‌ 14ರಂದು ಬಿಡುಗಡೆ ದಿನಾಂಕ ಘೋಷಿಸಿಕೊಂಡಿದೆ)
2. ವಿಕ್ರಾಂತ್‌ ರೋಣ (ಸುದೀಪ್‌)
3. ಜೇಮ್ಸ್‌, ಗಂಧದಗುಡಿ (ಪುನೀತ್‌ ರಾಜ್‌ಕುಮಾರ್‌)
4. ಬೈರಾಗಿ, ನೀ ಸಿಗೋವರೆಗೂ (ಶಿವರಾಜ್‌ ಕುಮಾರ್‌)
5. ಕಬ್ಜ (ಉಪೇಂದ್ರ)
6. ಮಾರ್ಟಿನ್‌ (ಧ್ರುವ ಸರ್ಜಾ)
7.777 ಚಾರ್ಲಿ, ಸಪ್ತಸಾಗರದಾಚೆ ಎಲ್ಲೋ (ರಕ್ಷಿತ್‌ ಶೆಟ್ಟಿ)
8. ಗಾಳಿಪಟ 2 (ಗಣೇಶ್‌)
9. ಅವತಾರ ಪುರುಷ 1 ಮತ್ತು 2, ಗುರು ಶಿಷ್ಯರು (ಶರಣ್‌)
10. ರಾಘವೇಂದ್ರ ಸ್ಟೋ​ರ್ಸ್, ತೋತಾಪುರಿ (ಜಗ್ಗೇಶ್‌)
11. ಕಾಂತಾರ (ರಿಷಬ್‌ ಶೆಟ್ಟಿ)
12. ಮಾನ್ಸೂನ್‌ ರಾಗ (ಧನಂಜಯ್‌)
13. ಪೆಟ್ರೋಮ್ಯಾಕ್ಸ್‌ (ಸತೀಶ್‌ ನೀನಾಸಂ)
14. ವೀರಂ, ಮಾಫಿಯಾ (ಪ್ರಜ್ವಲ್‌ ದೇವರಾಜ್‌)

ಕಥಾ ಪ್ರಧಾನ ಸಿನಿಮಾಗಳು: ಈ ವರ್ಷ ದೊಡ್ಡ ಸ್ಟಾರ್‌ಗಳ ಸಿನಿಮಾಗಳ ಜೊತೆಗೆಯೇ ಕಥಾ ಪ್ರಧಾನ ಸಿನಿಮಾಗಳೂ ಬರಲಿವೆ. ಶಿಶಿರ್ ರಾಜಮೋಹನ್ ನಿರ್ದೇಶನದ 'ಆಬ್ರಕಡಾಬ್ರ', ಬಿ.ಎಸ್.ಲಿಂಗದೇವರು ನಿರ್ದೇಶನದ 'ವಿರಾಗಿ' ಮುಂತಾದ ಸಿನಿಮಾಗಳನ್ನು ನೋಡಬಹುದಾಗಿದೆ.

Round Up 2021: ಒಳ್ಳೇ ಕ್ಲೈಮ್ಯಾಕ್ಸು, ಆರ್ಡಿನರಿ ಓಪನಿಂಗ್‌, ಸೂಪರ್‌ ಸೆಕೆಂಡ್‌ ಹಾಫ್‌!

ಕೋಟಿ ಕೋಟಿ ಬಜೆಟ್ಟಿನ ಸಿನಿಮಾಗಳ ಕಾಲ ಮುಗಿಯಿತು! ಹಾಗಂತ ಹಿರಿಯ ನಟರೊಬ್ಬರು ಅಭಿಪ್ರಾಯಪಟ್ಟರು. ಅದು ನಿಜವೋ ಸುಳ್ಳೋ ಅನ್ನುವುದನ್ನು ಕಾಲವೇ ಹೇಳಲಿದೆ. ಆದರೆ ಅದು ಪೂರ್ತಿ ಸುಳ್ಳಲ್ಲ ಅನ್ನುವುದಕ್ಕೆ ಸಣ್ಣ ಸೂಚನೆಯಂತೂ ಸಿಕ್ಕಿದೆ. ದೊಡ್ಡ ಬಜೆಟ್ಟಿನ ಸಿನಿಮಾಗಳು ಸೆಟ್ಟೇರುವುದು ಕಡಿಮೆಯಾಗಿದೆ. ಸಣ್ಣ ಬಜೆಟ್ಟಿನ ಸಿನಿಮಾಗಳು ಗೆದ್ದು ಬೀಗುತ್ತಿವೆ.

2021 ಕಲಿಸಿಕೊಟ್ಟ ಪಾಠಗಳಲ್ಲಿ ಇದೂ ಒಂದು. ಸ್ಮಾಲ್‌ ಈಸ್‌ ಬ್ಯೂಟಿಫುಲ್‌. ಬಜೆಟ್ಟು ಸಣ್ಣದಾದಷ್ಟೂರಿಸ್ಕ್‌ ಕಡಿಮೆ, ಲಾಭ ಜಾಸ್ತಿ. ಇಂಥ ಪಾಠಗಳನ್ನು ಚಿತ್ರರಂಗ ಕಾಲಕಾಲಕ್ಕೆ ಕಲಿಯುತ್ತಲೇ ಬಂದಿದ್ದರೂ ಅದು 2021ರ ಕೊರೋನಾ ಹಿನ್ನೆಲೆಯಲ್ಲಿ ಮತ್ತಷ್ಟುನಿಚ್ಚಳವಾಯಿತು ಎಂದೇ ಹೇಳಬೇಕು. ಅದಕ್ಕೆ ತಕ್ಕಂತೆ ಪುಕ್ಸಟ್ಟೆಲೈಫು, ರತ್ನನ್‌ ಪ್ರಪಂಚ, ಗರುಡಗಮನ ವೃಷಭವಾಹನ ಮತ್ತು ಬಡವ ರಾಸ್ಕಲ್‌- ಈ ವರುಷದಲ್ಲಿ ಪ್ರೇಕ್ಷಕ ಮೆಚ್ಚಿದ ಚಿತ್ರಗಳಾಗಿವೆ. 

click me!