ನಟಿ ಮಾಲಾಶ್ರೀಗೆ Puneeth Rajkumar ಧೈರ್ಯ ಹೇಳಿ, ಆಡಿದ ಕಡೇ ಮಾತುಗಳಿವು!

Suvarna News   | Asianet News
Published : Dec 31, 2021, 05:15 PM IST
ನಟಿ ಮಾಲಾಶ್ರೀಗೆ  Puneeth Rajkumar ಧೈರ್ಯ ಹೇಳಿ, ಆಡಿದ ಕಡೇ ಮಾತುಗಳಿವು!

ಸಾರಾಂಶ

ತಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ಇಬ್ಬರು ಮುಖ್ಯವಾದ ವ್ಯಕ್ತಿಗಳನ್ನು ಕಳೆದುಕೊಂಡರು ಮಾಲಾಶ್ರೀ. ಒಂದು ಪತಿ ಕೋಟಿ ರಾಮ್. ಮತ್ತೊಂದು ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಈ ಡಬ್ಬಲ್ ಶಾಕ್‌ನಿಂದ ಹೇಗೆ ಹೊರ ಬಂದರು ರಾಮಾಚಾರಿ ನಟಿ?

ಕನ್ನಡ ಚಿತ್ರರಂಗದ (Sandalwood) ರಾಣಿ ಮಾಲಾಶ್ರೀ (Malashree) ಮತ್ತು ಪತಿ ಕೋಟಿ ರಾಮು (Koti rAMU) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಕನ್ನಡ ಚಿತ್ರರಂಗದಲ್ಲಿ ಕೋಟಿ ಬಂಡವಾಳ ಹಾಕಿ ಸಿನಿಮಾ ಮಾಡಬಹುದು ಎಂದು ತೋರಿಸಿಕೊಟ್ಟವರುರಾಮು. ಯಾವುದೇ ಸಿನಿಮಾ ಆದರೂ ಅದನ್ನು ಹಿಟ್ ಮಾಡೇ ಮಾಡ್ತೀನಿ ಅನ್ನೋ ಛಲ ಮಾಲಾಶ್ರೀ ಅವರದ್ದು. ಈ ಕನಸಿನ ರಾಣಿ ಇಂಡಸ್ಟ್ರಿ ರೂಲ್‌ ಮಾಡಿ, ಚಾಮುಂಡಿ, ದುರ್ಗಿ ಅವತಾರದಲ್ಲಿ ಅಭಿಮಾನಿಗಳನ್ನು ಮನೋರಂಜಿಸುತ್ತಿದ್ದರು. ಸಣ್ಣ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿ (Family) ಜೊತೆ ಸಮಯ ಕಳೆಯುತ್ತಿದ್ದರು.

ನಿರ್ಮಾಪಕ (Producer) ಕೋಟಿ ರಾಮು ಅವರು ಏಪ್ರಿಲ್ 26ರಂದು ಕೊರೋನಾದಿಂದ ಕೊನೆ ಉಸಿರೆಳೆದರು. ಕನ್ನಡ ಚಿತ್ರರಂಗಕ್ಕೆ ಹಿಟ್ ಸಿನಿಮಾಗಳನ್ನು ಕೊಟ್ಟ ರಾಮು ಅವರ ಅಂತಿಮ ದರ್ಶನ ಪಡೆಯಲು ಆಗಲಿಲ್ಲ ಎಂದು ಅದೆಷ್ಟೋ ಮಂದಿ ಬೇಸರ ಮಾಡಿಕೊಂಡಿದ್ದರು. ಅವರ ಕನಸಿನ ಸಿನಿಮಾ ಅರ್ಜುನ್ ಗೌಡ (Arjun Gowda) ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ.ಮೊದಲ ದಿನವೇ ಚಿತ್ರ ಮಂದಿರ ಹೌಸ್‌ಫುಲ್ ಆಗಿದ್ದು ,ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಅಗಲಿದ ಪತಿಯ ಕೊನೆಯ ಸಿನಿಮಾ ಹಿಟ್ ಆಗಬೇಕು. ಅವರಿಗೆ ಇದು ಅರ್ಪಣೆ ಎಂದು ಖುದ್ದು ಮಾಲಾಶ್ರೀಯೇ ಸಿನಿ ಪ್ರೇಮಿಗಳು  ಮುಂದೆ ಬಂದು ಸಿನಿಮಾ ಪ್ರಚಾರದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ವೇಳೆ ಖಾಸಗಿ ಸಂದರ್ಶನದಲ್ಲಿ ಮಾತನಾಡಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಎಲ್ಲಾ ಕಡೆಯೂ ಅಗಲಿತ ಪತಿಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ.

ರಾಮು ಅಗಲಿಕೆ ನೋವಿನಲ್ಲಿದ್ದ ಮಾಲಾಶ್ರೀ ಅವರಿಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಸಾವು ಮತ್ತೊಂದು ಶಾಕ್ ತಂದುಕೊಟ್ಟಿತ್ತು. ಅಯ್ಯೋ ಏನು ಮಾತನಾಡುವುದು ಎಂದು ತಿಳಿಯದೆ ಮೌನಿಯಾಗಿದ್ದೆ, ಎಂದ ಮಾಲಾಶ್ರೀ ಅಪ್ಪು ಆಡಿರುವ ಕೊನೆಯ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. 

Interview With Malashree: ಪತಿಯ ಚಿತ್ರ ನಿರ್ಮಾಣ ಉತ್ಸಾಹವನ್ನು ನೆನಪಿಸಿಕೊಂಡ ಕನಸಿನ ರಾಣಿ

'ಅಪ್ಪು ಅವರ ವಿಚಾರ ನನಗೆ ದೊಡ್ಡ ದೊಡ್ಡ ಅತಿ ದೊಡ್ಡ ಶಾಕ್ ಕೊಟ್ಟಿದೆ. ಒಂದು ಸೆಕೆಂಡ್ ಇದನ್ನು ನಂಬೋದೇ ಕಷ್ಟ ಆಯ್ತು. ಏಕೆಂದರೆ ಎಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು. ತುಂಬಾನೇ ಲವ್ಲಿ ಆಗಿರುತ್ತಿದ್ದರು. ಯಾವಾಗಲೂ ನಗುತ್ತಿದ್ದರು. ಆ ಘಟನೆ ನಡೆಯುವುದಕ್ಕೂ ಮೂರು ದಿನ ಮುಂಚೆ ನಾವು ಒಂದು ಮದುವೆಯಲ್ಲಿ ಭೇಟಿ ಆದೆವು. ರಾಮು ಅವರು ಅಗಲಿದ ಮೇಲೆ ನಾನು ಹೋಗಿದ್ದ ಮೊದಲ ಮದುವೆ ಅದು. ಆಗ ಅವರು ನನ್ನನ್ನು ನೋಡಿ ತಬ್ಬಿಕೊಂಡ ರೀತಿಯನ್ನು ಮರೆಯುವುದಕ್ಕೆ ಅಗೋಲ್ಲ,' ಎಂದು ಮಾಲಾಶ್ರೀ ಮಾತನಾಡಿದ್ದಾರೆ. 

'ಅಪ್ಪು ನನ್ನನ್ನು ತಬ್ಬಿಕೊಂಡು ಹೇಳಿದ್ರು, ಹೊರಗೆ ಬರಬೇಕು ನೀವು. ನಿಮ್ಮನ್ನು ನೋಡಿ ನನಗೆ ಸಂತೋಷ ಆಗುತ್ತಿದೆ. ಮದುವೆಗೆ ಬಂದಿದ್ದೀರಿ. ನಾನು ಮತ್ತೆ ನಿಮ್ಮನ್ನು ದುರ್ಗಿ ತರ ನೋಡಬೇಕು, ಚಾಮುಂಡಿ ತರ ನೋಡಬೇಕು. ಇಲ್ಲ ಮಾಲಾಶ್ರೀ ಹೀಗೆ ಇರಬೇಡಿ, ನೀವು ಹೊರ ಬನ್ನಿ. ಎಷ್ಟು ದಿನ ಅಂತ ಮನೆಯಲ್ಲಿ ಕುತ್ಕೊಂಡಿರ್ತೀರಾ? ರಾಮು ಅವರು ಇದ್ದಾರೆ ನಮ್ಮ ಜೊತೆ. ಇಲ್ಲೇ ನಮ್ಮ ಜೊತೆ ಓಡಾಡಿಕೊಂಡು ಇದ್ದಾರೆ. ನೀವು ಮನೆಯಲ್ಲಿ ಕೂತ್ಕೊಂಡು ಇರಬಾರದು. ಬನ್ನಿ ಆಚೆ,' ಅಂತ ಹೇಳಿ ನನ್ನ ಜೊತೆ ಎಷ್ಟು ಚೆನ್ನಾಗಿ ಮಾತನಾಡಿದ್ದರು. ಆ ವ್ಯಕ್ತಿ ಮೂರನೇ ದಿನವೇ ಇಲ್ಲವೆನ್ನುವ ವಿಚಾರ ಕೇಳಿ ಶಾಕ್ ಆಯ್ತು. ಸಂಜೆವರೆಗೂ ನಾನು ಬ್ಲಾಂಕ್ ಆಗಿದ್ದೆ. ವಾಹಿನಿ ಅವರು ಕರೆ ಮಾಡುತ್ತಿದ್ದಾರೆ, ನನಗೆ ಏನು ಹೇಳಬೇಕು ಗೊತ್ತಾಗಿಲ್ಲ,' ಎಂದು ಮಾಲಾಶ್ರೀ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?