
ಕೊರೋನಾ ಲಾಕ್‌ಡೌನ್ (Covid19), ಕರ್ಫ್ಯೂ, ಸಿನಿಮಾ ಕೆಲಸಗಳಿಲ್ಲ ಎಂದು ಟೆನ್ಶನ್‌ನಲ್ಲಿದ್ದ ಮಂದಿಯನ್ನು ಹ್ಯಾಪಿ ಮೂಡ್‌ಗೆ ಪುಶ್ ಮಾಡಿದ್ದು ಸಿನಿ ರಂಗದಲ್ಲಿ ನಡೆದ ಅದ್ಧೂರಿ ಮದುವೆಗಳು (Marriage). ಇಲ್ಲಿದೆ ಓದಿ ಯಾರೆಲ್ಲಾ ಈ ಮದುವೆ ಆಗಿದ್ದಾರೆ ಎಂದು....
ಚಂದನ್ ಮತ್ತು ಕವಿತಾ ಗೌಡ (Kavitha Gowda and Chandan)
'ಲಕ್ಷ್ಮಿ ಬಾರಮ್ಮ' (Lakshmi Baramma) ಧಾರಾವಾಹಿ ಮೂಲಕ ಇಬ್ಬರು ಜೋಡಿಯಾಗಿ ಮೊದಲು ನಟಿಸಿದ್ದರು. ಸ್ನೇಹಿತರಾಗಿದ್ದ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಮೇ 14ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೋನಾ ಲಾಕ್‌ಡೌನ್ ಇದ್ದ ಕಾರಣ ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಇಬ್ಬರು ಮಾಸ್ಕ್ ಧರಿಸಿ ತಾಳಿ ಕಟ್ಟುವ ಮೂಲಕ ಜನರಲ್ಲಿ ಮಾಸ್ಕ್ ಮಹತ್ವ ಸಾರಿದ್ದರು.
ಕಾವ್ಯ ಗೌಡ ಮತ್ತು ಸೋಮಶೇಖರ್ (Kavya Gowda and Somshekar)
ಡಿಸೆಂಬರ್ 2ರಂದು ಅದ್ಧೂರಿಯಾಗಿ ಉದ್ಯಮಿ ಸೋಮಶೇಖರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ನಟಿ ಕಾವ್ಯಾ. ರಾಧಾ ರಮಣ (Radha Ramana) ಧಾರಾವಾಹಿ ನಂತರ ಲೈಮ್‌ಲೈಟ್‌ನಿಂದ ದೂರ ಉಳಿದ ಕಾವ್ಯಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪರ್ಸನಲ್ ಲೈಫ್ ಬಗ್ಗೆ ನೆಟ್ಟಿಗರಿಗೆ ಅಪ್ಡೇಟ್ ಮಾಡುತ್ತಿದ್ದಾರೆ.
ಆಶಿತಾ ಚಂದ್ರಪ್ಪ ಮತ್ತು ರೋಹನ್ ರಾಘವೇಂದ್ರ (Ashita Chandrappa and Rohan)
ಏಪ್ರಿಲ್ 1ರಂದು ಕಿರುತೆರೆ ನಟಿ ಆಶಿತಾ ಚಂದ್ರಪ್ಪ ಮತ್ತು ರೋಹನ್ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೊರೋನಾ ಇದ್ದ ಕಾರಣ ತುಂಬಾ ಕಡಿಮೆ ಜನರು ಮದುವೆಯಲ್ಲಿ ಭಾಗಿಯಾಗಿದ್ದರು. ಮದುವೆ ಸಮಯದಲ್ಲಿ ಆಶಿತಾಗೆ ಕೋವಿಡ್19 (High fever) ಇತ್ತು ಚೇತರಿಸಿಕೊಂಡು ಮದುವೆಯಲ್ಲಿ ಭಾಗಿಯಾಗಿದ್ದರು.
ಪ್ರಿಯಾಂಕಾ ಚಿಂಚೋಳಿ ಮತ್ತು ರಾಕೇಶ್ (Priyanka Chincholi and Rakesh)
ಡಿಸೆಂಬರ್ 10ರಂದು ಪ್ರಿಯಾಂಕಾ ಮತ್ತು ರಾಕೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಮದುವೆ ಆದ ಈ ಜೋಡಿ ಆಗಸ್ಟ್ 11ರಂದು ರಿಜಿಸ್ಟರ್ ಮದುವೆ (Register Marriage) ಆಗಿದ್ದರು.
ದೀಪಕ್ ಮಹಾದೇವ್ ಮತ್ತು ಚಂದನಾ (Deepak Mahadev and Chandana Mahalingaiah)
ದೀಪಕ್ ಮತ್ತು ಚಂದನಾ ಇಬ್ಬರೂ ಕನ್ನಡ ಕಿರುತೆರೆ ಕಲಾವಿದರು. ಡಿಸೆಂಬರ್ 5ರಂದು ಬೆಂಗಳೂರಿನ (Bengaluru) ರೆಸಾರ್ಟ್‌ನಲ್ಲಿ ಮದುವೆ ಆಗಿದ್ದಾರೆ. ಇಬ್ಬರು ಸ್ನೇಹಿತರಾಗಿದ್ದು, ಹಲವು ವರ್ಷಗಳ ಕಾಲ ಪ್ರೀತಿಸಿ ಪೋಷಕರಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ.
ಆಶಿಕಾ ಪಡುಕೋಣೆ ಮತ್ತು ಚೇತನ್ ಶೆಟ್ಟಿ (Ashika Padukone and Chetan Shetty)
ಉದ್ಯಮಿ ಚೇತನ್ ಶೆಟ್ಟಿ ಮತ್ತು ಆಶಿಕಾ ಪಡುಕೋಣೆ ಅಕ್ಟೋಬರ್ 18ರಂದು ವೈವಹಿಕ ಜೀವನಕ್ಕೆ ಕಾಲಿಟ್ಟರು. ಉಡುಪಿಯಲ್ಲಿ (Udupi) ಮದುವೆಯಾದ ಈ ಜೋಡಿ, ರೆಟ್ರೋ ಸ್ಟೈಲ್‌ನಲ್ಲಿ ಪ್ರೀ- ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ.
ವಿಹಾರಿಕಾ ಮತ್ತು ಕಿರಣ್ (Viharika Pooja and Kiran Bagade)
ನನ್ನರಸಿ ರಾಧೆ (Nan arasiradhe) ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ವಿಹಾರಿಕಾ ಡಿಸೆಂಬರ್ 6ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡೇಟಿಂಗ್ ಆಪ್ (Dating App) ಮೂಲಕ ಇಬ್ಬರು ಪರಿಚಯ ಆಗಿದ್ದು ಸ್ನೇಹಿತರಾಗಿ ಪ್ರೀತಿಸಲು ಅರಂಭಿಸಿದ್ದಾರೆ. ಇವರ ಲವ್ ಮತ್ತು ಮದುವೆ ವಿಚಾರ ದೊಡ್ಡ ಸರ್ಪ್ರೈಟ್ ಆಗಿದ್ದ ಕಾರಣ ನೆಟ್ಟಿಗರು ಶಾಕ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.