ಮೇ 27ಕ್ಕೆ ಅಮೆಜಾನ್‌ ಪ್ರೈಮ್‌ನಲ್ಲಿ ಕೆಜಿಎಫ್‌ 2

By Kannadaprabha News  |  First Published Apr 23, 2022, 8:20 AM IST
  • ಮೇ 27ಕ್ಕೆ ಅಮೆಜಾನ್‌ ಪ್ರೈಮ್‌ನಲ್ಲಿ ಕೆಜಿಎಫ್‌ 2
  • ಒಂದೇ ವಾರದಲ್ಲಿ ವಿಶ್ವಾದ್ಯಂತ 800 ಕೋಟಿ ರು. ಸಂಗ್ರಹ

ಯಶ್‌ ನಟನೆ, ಪ್ರಶಾಂತ್‌ ನೀಲ್‌ ನಿರ್ದೇಶನ, ವಿಜಯ್‌ ಕಿರಗಂದೂರು ನಿರ್ಮಾಣದ ಬ್ಲಾಕ್‌ ಬಸ್ಟರ್‌ ಚಿತ್ರ ‘ಕೆಜಿಎಫ್‌ 2’ ಮೇ 27ಕ್ಕೆ ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರ ಆಗಲಿದೆ. ಒಂದೇ ವಾರದಲ್ಲಿ ವಿಶ್ವಮಟ್ಟದಲ್ಲಿ 800 ಕೋಟಿಗೂ ಅಧಿಕ ಗಳಿಕೆ ಮಾಡಿದ್ದು ‘ಕೆಜಿಎಫ್‌ 2’ ಚಿತ್ರದ ಹೆಗ್ಗಳಿಕೆ.

ಕಳೆದ ಒಂದು ವಾರದಲ್ಲಿ ದಕ್ಷಿಣ ಭಾರತದಲ್ಲಿ 1.5 ಕೋಟಿಗೂ ಅಧಿಕ ಜನ ಈ ಚಿತ್ರ ವೀಕ್ಷಿಸಿದ್ದಾರೆ. ಸುಮಾರು 40 ಲಕ್ಷಕ್ಕೂ ಅಧಿಕ ಜನ ಕರ್ನಾಟಕದಲ್ಲಿ, 30 ಲಕ್ಷ ಜನ ತಮಿಳ್ನಾಡು, 50 ಲಕ್ಷಕ್ಕೂ ಅಧಿಕ ಜನ ಆಂಧ್ರ, ತೆಲಂಗಾಣದಲ್ಲಿ ವೀಕ್ಷಿಸಿದ್ದಾರೆ. 25 ಲಕ್ಷದಷ್ಟುಕೇರಳದ ಮಂದಿ ವೀಕ್ಷಿಸಿದ್ದಾರೆ. ಉತ್ತರ ಭಾರತದಲ್ಲಿ 1.7 ಕೋಟಿ ಜನ ‘ಕೆಜಿಎಫ್‌ 2’ ವೀಕ್ಷಿಸಿದ್ದಾರೆ. ಒಂದು ವಾರದಲ್ಲಿ ಹಿಂದಿ ವರ್ಶನ್‌ನಲ್ಲಿ ಅತ್ಯಧಿಕ 270 ಕೋಟಿ ಗಳಿಕೆಯಾಗಿದೆ. ಈ ನಡುವೆ ತಮಿಳ್ನಾಡಿನಲ್ಲಿ ‘ಕೆಜಿಎಫ್‌ 2’ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಈ ವಾರ 150 ಥಿಯೇಟರ್‌ಗಳು ಹೆಚ್ಚುವರಿಯಾಗಿ ಸೇರಿಕೊಂಡಿವೆ.

Tap to resize

Latest Videos

ಕೆಜಿಎಫ್ ಬಗ್ಗೆ ಅಲ್ಲು ಮಾತು

'ಕೆಜಿಎಫ್-2 ಸಿನಿಮಾಗೆ ದೊಡ್ಡ ಅಭಿನಂದನೆ. ಅದ್ಭುತ ಪರ್ಫಾಮೆನ್ಸ್ ನೀಡಿದ ಯಶ್, ಸಂಜಯ್ ದತ್ ಅವರು ಮತ್ತು ರವೀನಾ ಟಂಡನ್ ಹಾಗೂ ಶ್ರೀನಿಧಿ ಶೆಟ್ಟಿ ಎಲ್ಲಾ ಕಲಾವಿದರು ಅಧ್ಬುತ. ರವಿ ಬಸ್ರೂರ್ ಬಿಜಿಎಮ್, ಭುವನ್ ಗೌಡ ಸೇರಿದಂತೆ ಎಲ್ಲಾ ತಂತ್ರಜ್ಞರಿಗೆ ನನ್ನ ಅಭಿನಂದನೆಗಳು' ಎಂದಿದ್ದಾರೆ.

'ಪ್ರಶಾಂತ್ ನೀಲ್ ಅವರಿಂದ ಅದ್ಭುತ ಪ್ರದರ್ಶನ. ಅವರ ದೃಷ್ಟಿ ಮತ್ತು ನಂಬಿಕೆಗೆ ಹ್ಯಾಟ್ಸಾಪ್. ಭಾರತೀಯ ಸಿನಿಮಾರಂಗದ ಬಾವುಟವನ್ನು ಅತೀ ಎತ್ತರಕ್ಕೆ ಹಾರಿಸಿದ ಇಡಿ ಕೆಜಿಎಫ್-2 ತಂಡಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ. ಅಲ್ಲು ಅರ್ಜುನ್ ಟ್ವೀಟ್ ಗೆ ನಟಿ ಶ್ರೀನಿಧಿ ಶೆಟ್ಟಿ ಪ್ರತಿಕ್ರಿಯೆ ನೀಡಿ ಧನ್ಯವಾದ ತಿಳಿಸಿದ್ದಾರೆ. ಈ ಮೊದಲು ಅಲ್ಲು ಅರ್ಜುನ್ ಆರ್ ಆರ್ ಆರ್ ಸಿನಿಮಾವನ್ನು ಕೊಂಡಾಡಿದ್ದರು. ಸಿನಿಮಾ ಬಗ್ಗೆ ವಿಮರ್ಶೆ ಮಾಡಿದ್ದರು. ಇದೀಗ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿರುವ ಕನ್ನಡ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ.

KGF Chapter 2: ಕನ್ನಡ ಸಿನಿಮಾ ಹಾಲಿವುಡ್‌ಗೂ ಸೆಡ್ಡು ಹೊಡೆದದ್ಹೇಗೆ?

ಅಮುಲ್‌ ಜಾಹೀರಾತಿನಲ್ಲಿ ರಾಕಿಭಾಯ್‌

ಹಾಲು, ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಅಮುಲ್‌ ಸಂಸ್ಥೆ ತನ್ನ ಜಾಹೀರಾತಿನಲ್ಲಿ ಯಶ್‌ ನಟನೆಯ ‘ಕೆಜಿಎಫ್‌ 2’ ಚಿತ್ರದ ರಾಕಿಭಾಯ್‌ ಪಾತ್ರವನ್ನು ಕ್ರಿಯೇಟಿವ್‌ ಆಗಿ ಬಳಸಿಕೊಂಡಿದೆ. ರಾಕಿಭಾಯ್‌ ತನ್ನ ಬೈಕ್‌ಗೆ ಒರಗಿ ನಿಂತು ಅಮುಲ್‌ ಬೆಣ್ಣೆ ಹಚ್ಚಿರುವ ಬ್ರೆಡ್‌ ಹಿಡಿದುಕೊಂಡಿರುವ ಪೋಸ್ಟರಿನಲ್ಲಿ, ‘ಕೂಲರ್‌ನಲ್ಲಿ ಗೋಲ್ಡ್‌ ಇಡಿ, ಆಮೇಲೆ ಯಶ್‌ಗೆ ಹೇಳಿ’ ಅಂತ ಡೈಲಾಗ್‌ ಬಳಸಲಾಗಿದೆ. ಈ ಮೂಲಕ ಅಮುಲ್‌ ‘ಕೆಜಿಎಫ್‌ 2’ ಚಿತ್ರದ ಯಶಸ್ಸಿಗೆ ಅಭಿನಂದನೆ ತಿಳಿಸಿದೆ.

ಜಗತ್ತಿನ ಟಾಪ್‌ ಫುಟ್‌ಬಾಲ್‌ ಕ್ಲಬ್‌ ಎಂದೇ ಹೆಸರಾಗಿರುವ ಮ್ಯಾಂಚೆಸ್ಟರ್‌ ಸಿಟಿ ಫುಟ್‌ಬಾಲ್‌ ಕ್ಲಬ್‌ ಅರ್ಥಾತ್‌ ಮ್ಯಾನ್‌ಸಿಟಿ ಎಫ್‌ಸಿ, ತನ್ನ ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಕೆಜಿಎಫ್‌ ಹೆಸರು ಬಳಸಿದೆ. ತನ್ನ ಕ್ಲಬ್‌ನ ಫುಟ್‌ಬಾಲ್‌ ಆಟಗಾರರಾದ ಕೆವಿನ್‌, ಗುಂಡೊಕನ್‌, ಫೆäಡೆನ್‌ ಎಂಬ ಹೆಸರಿನ ಮೊದಲಕ್ಷರವನ್ನು ಕೆಜಿಎಫ್‌ ಎಂಬ ಬೋಲ್ಡ್‌ ಅಕ್ಷರದಲ್ಲಿ ಪ್ರಕಟಿಸಿದೆ. ಜೊತೆಗೆ ‘ಮ್ಯಾನ್‌ಸಿಟಿಯಲ್ಲಿ ನಮ್ಮದೇ ಕೆಜಿಎಫ್‌’ ಅನ್ನುವ ಸ್ಟೇಟ್‌ಮೆಂಟ್‌ ನೀಡಿದೆ. ಇದು ವಿಶ್ವಾದ್ಯಂತ ಇರುವ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದೆ. ಇದನ್ನು ಹೊಂಬಾಳೆ ಫಿಲಂಸ್‌ ರೀಟ್ವೀಟ್‌ ಮಾಡಿದ್ದು, ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಶೇರ್‌ ಮಾಡಿದೆ.

click me!