ದುನಿಯಾ ವಿಜಯ್ 'ಭೀಮ' ಚಿತ್ರದ ಶೂಟಿಂಗು ಶುರುವಾಗಿದೆ!

Published : Apr 23, 2022, 07:56 AM ISTUpdated : Apr 23, 2022, 08:48 AM IST
ದುನಿಯಾ ವಿಜಯ್ 'ಭೀಮ' ಚಿತ್ರದ ಶೂಟಿಂಗು ಶುರುವಾಗಿದೆ!

ಸಾರಾಂಶ

ಭೀಮ ಚಿತ್ರದ ಶೂಟಿಂಗು ಶುರುವಾಗಿದೆ ಬಂಡೆ ಮಹಾಕಾಳಿಯ ಮುಂದೆ ಭೀಮನ ಜಾತ್ರೆ

ಬಂಡೆ ಮಹಾಕಾಳಿ ದೇವಸ್ಥಾನ. ಸಲಗ ಚಿತ್ರದ ಮುಹೂರ್ತ ನಡೆದದ್ದೂ ಅಲ್ಲೇ. ಭೀಮನ ಆರಂಭವೂ ಅಲ್ಲೇ ಆಗಬೇಕೆಂಬುದು ವಿಜಯ್‌ ಆಸೆ. ಅದು ಈಡೇರಿತು.

ನಿರ್ಮಾಪಕ ಜಗದೀಶ್‌ ಮತ್ತು ಕೃಷ್ಣಸಾರ್ಥಕ್‌ ನಿರ್ಮಾಣದ ಭೀಮ ಚಿತ್ರದ ನಾಯಕ ಮತ್ತು ನಿರ್ದೇಶಕ ವಿಜಯ್‌. ಅವರದೇ ತಂಡ ಕಟ್ಟಿಕೊಂಡು ಹೊರಟಿರುವ ವಿಜಯ್‌ಗೆ ಶುಭಹಾರೈಸಲು ಬಂದಿದ್ದವರು ಶ್ರೀನಗರ ಕಿಟ್ಟಿ, ಧನಂಜಯ, ಕನಕಪುರ ಶ್ರೀಕಾಂತ್‌, ಆನಂದ್‌ ಆಡಿಯೋ ಶ್ಯಾಮ್‌ ಮತ್ತಿತರರು.

Duniya Vijay: ಭೀಮನ ಎದುರು ತೊಡೆ ತಟ್ಟಲು ರೆಡಿಯಾದ ಬ್ಲ್ಯಾಕ್ ಡ್ರ್ಯಾಗನ್!

ಭೀಮ ಟೈಟಲ್ಲು ಇದ್ದದ್ದು ರಾಮು ಹತ್ತಿರ. ಜಗದೀಶ್‌ ಹೋಗಿ ಮಾಲಾಶ್ರೀಯವರನ್ನ ಕೇಳಿದರು. ಮಾಲಾಶ್ರೀ ಮರುಮಾತಾಡದೇ ಕೊಟ್ಟರು. ಅವರಿಗೆ ಥ್ಯಾಂಕ್ಸ್‌ ಹೇಳಲಾಯಿತು. ಚಿತ್ರಕತೆ ಬರೆದ ಮಾಸ್ತಿ ಆ ಸಂಭ್ರಮ ಹಂಚಿಕೊಂಡರು. ಸತ್ಯ ಕತೆಯೊಂದನ್ನು ಆಧರಿಸಿ ಸಿನಿಮಾ ಮಾಡುತ್ತಿದ್ದೇವೆ. ಇದಕ್ಕೂ ಜೈ ಭೀಮ್‌ಗೂ ಸಂಬಂಧವಿಲ್ಲ. ಇದೊಂದು ಹೋರಾಟದ ಕತೆಯೆಂದು ವಿಜಯ್‌ ಹೇಳಿ ಎಲ್ಲರಿಗೂ ಥ್ಯಾಂಕ್ಸ್‌ ಹೇಳಿದರು. ಹೊಸದಾಗಿ ತಾರಾಗಣಕ್ಕೆ ಸೇರ್ಪಡೆಯಾದವರನ್ನು ಪರಿಚಯಿಸುವಾಗ ಅತಿ ಹೆಚ್ಚಿನ ಚಪ್ಪಾಳೆ ಬಿದ್ದದ್ದು ಬ್ಲಾಕ್‌ ಡ್ರಾಗನ್‌ ಮಂಜು ಭೀಮಕಾಯಕ್ಕೆ.

ಮಿಕ್ಕಂತೆ ಜಯಮ್ಮ ಕಲ್ಯಾಣಿ ಇಲ್ಲಿ ರೌದ್ರಿ ಅಮ್ಮ. ವೃತ್ತಿಜೀವನದ ಗೆರೆ ಇಳಿಮುಖವಾದಾಗೆಲ್ಲ ತಂಬಿ ವಿಜಯ್‌ ಬಂದು ಮೇಲೆತ್ತುತ್ತಾರೆ ಅಂತ ಕಲ್ಯಾಣಿ ಕೈ ಮುಗಿದರು. ಚರಣ್‌ರಾಜ್‌ ಸಂಗೀತ ನೀಡುವ ಅವಕಾಶ ಸಿಕ್ಕಿದ್ದಕ್ಕೆ ಸಂತೋಷಪಟ್ಟರು. ಅಸಂಖ್ಯ ಅಭಿಮಾನಿಗಳು ನಿಂತು ಕುಂತು ನೆರೆದು ಕೇಕೆ ಹಾಕಿ ಪ್ರತಿ ಉತ್ತರಕ್ಕೂ ಚಪ್ಪಾಳೆಯ ಮಳೆಗೆರೆದು ಅದನ್ನು ಪತ್ರಿಕಾಗೋಷ್ಠಿಯನ್ನು ಅಭಿಮಾನದ ಗೋಷ್ಠಿಯನ್ನಾಗಿ ಮಾಡಿದರು.

ಚಿತ್ರದ ತುಂಬ ಹೊಸಬರಿದ್ದಾರೆ, ನಾಯಕಿಯ ಆಯ್ಕೆ ಆಗಿಲ್ಲ, ಶೂಟಿಂಗು ಮುಹೂರ್ತದ ದಿನವೇ ಶುರುವಾಗಿದೆ.

ನಂದಮೂರಿ ಜೊತೆ ವಿಜಯ್

 ನಂದಮೂರಿ ಬಾಲಕೃಷ್ಣ ನಟನೆಯ 107ನೇ (NBK 107) ಸಿನಿಮಾದಲ್ಲಿ ದುನಿಯಾ ವಿಜಯ್​ ಅವರು ಖಡಕ್​ ವಿಲನ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಫಸ್ಟ್​ ಲುಕ್​ ಪೋಸ್ಟರ್​ ತುಂಬ ರಗಡ್​ ಆಗಿದೆ. ಗೋಪಿಚಂದ್​ ಮಲಿನೇನಿ (Gopichand Malineni) ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ದುನಿಯ್​ ವಿಜಯ್​ ಅವರದ್ದು ಪವರ್​ಫುಲ್​ ಪಾತ್ರ ಎಂದು ಅವರು ಹೇಳಿದ್ದಾರೆ. ಗಡ್ಡ ಬಿಟ್ಟು, ಸಿಗರೇಟ್​ ಸೇದುತ್ತ, ಖಡಕ್ ಲುಕ್‌ನಲ್ಲಿ ದುನಿಯಾ ವಿಜಯ್​ ಪೋಸ್​ ನೀಡಿದ್ದು, ಮುಸಲಿ ಮಡುಗು ಪ್ರತಾಪ್ ರೆಡ್ಡಿ ಎಂಬ ಪಾತ್ರದಲ್ಲಿ ದುನಿಯಾ ವಿಜಯ್ ಅಬ್ಬರಿಸಲಿದ್ದಾರೆ. ಸದ್ಯ ಈ ಪೋಸ್ಟರ್​ ನೋಡಿದ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. 

'ಸ್ಯಾಂಡಲ್​ವುಡ್​ ಸೆನ್ಸೇಷನ್​ ದುನಿಯಾ ವಿಜಯ್ ಅವರನ್ನು ಒಂದು ಪವರ್​ಫುಲ್​ ಪಾತ್ರದಲ್ಲಿ ಪರಿಚಯಿಸುತ್ತಿದ್ದೇವೆ. ಈಗಾಗಲೇ ಹೇಳಿದಂತೆ ವಿಲನ್​ ಎಂದರೆ ಏನು ಎಂಬುದನ್ನು ಅವರು ಮರು ವ್ಯಾಖ್ಯಾನ ಮಾಡಲಿದ್ದಾರೆ' ಎಂಬ ಕ್ಯಾಪ್ಷನ್ ಬರೆದು ನಿರ್ದೇಶಕ ಗೋಪಿಚಂದ್​ ಮಲಿನೇನಿ ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ಫಸ್ಟ್‌ಲುಕ್ ಪೋಸ್ಟರನ್ನು​ ಹಂಚಿಕೊಂಡಿದ್ದು, ಮುಸಲಿ ಮಡುಗು ಪ್ರತಾಪ್​ ರೆಡ್ಡಿ ಎಂಬುದು ದುನಿಯಾ ವಿಜಯ್​ ನಿಭಾಯಿಸಲಿರುವ ಪಾತ್ರದ ಹೆಸರು ಎಂದು ಕೂಡ ನಿರ್ದೇಶಕರು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಮೊದಲು ದುನಿಯಾ ವಿಜಯ್​ ಅವರು NBK107 ಚಿತ್ರದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣದ ಸೆಟ್​ಗೆ ತೆರಳಿದ್ದ ಅವರಿಗೆ ಚಿತ್ರತಂಡದಿಂದ ಭರ್ಜರಿ ಸ್ವಾಗತ ಸಿಕ್ಕಿತ್ತು. ಆ ವಿಷಯವನ್ನು ಅವರು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದರು.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?
ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!