KGF 2 ತೂಫಾನ್‌ ಹಾಡು ರಿಲೀಸ್, ಹೇಗಿದೆ ರಾಖಿ ಲುಕ್?

By Suvarna News  |  First Published Mar 21, 2022, 11:29 AM IST

ಕೆಜಿಎಫ್‌ 2 ಚಿತ್ರದ ಹೊಸ ಹಾಡು ರಿಲೀಸ್. ರವಿ ಬಸ್ರೂರ್‌ ನೀವು ಸೂಪರ್ ಎಂದ ಅಭಿಮಾನಿಗಳು..


ಸ್ಯಾಂಡಲ್‌ವುಡ್‌ ಗತ್ತು ಗಮ್ಮತ್ತು ಏನೆಂದು ಇಡೀ ವಿಶ್ವಕ್ಕೆ ತೋರಿಸಿಕೊಟ್ಟ ಕೆಜಿಎಫ್ ಅಡ್ಡದಿಂದ ಅಭಿಮಾನಿಗಳಿಗೆ ಸಹಿ ಸುದ್ದಿ ಹೊರ ಬಂದಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ತೂಫಾನ್ ಹಾಡು ಇಂದು ಟಿ-ಸೀರಿಸ್‌ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಪಕ್ಕಾ ಮಾಸ್‌ ಆಗಿರುವ ಲಿರಿಕಲ್ ಹಾಡು ಇದಾಗಿದ್ದು ರಾಖಿ ಭಾಯ್‌ನ ಡಿಫರೆಂಟ್‌ ಶೇಡ್‌ಗಳನ್ನು ನೀವು ನೋಡಬಹುದು. ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿರುವ ಈ ಹಾಡಿಗೆ 6 ಗಾಯಕರು ಧ್ವನಿಯಾಗಿರುವುದು ಮತ್ತೊಂದು ವಿಶೇಷ. ಎರಡನೇ ಭಾಗ ಹೇಗಿರಲಿದೆ ಎಂದು ಪದೇ ಪದೇ ಪ್ರಶ್ನೆ ಮಾಡುತ್ತಿದ್ದ ಅಭಿಮಾನಿಗಳಿಗೆ ಈ ವಿಡಿಯೋ ಸಣ್ಣದಾಗೊಂದು clue ಕೊಟ್ಟಿದೆ. ಏಪ್ರಿಲ್ 14ರಂದು ಸಿನಿಮಾ ಬಿಡುಗಡೆಯಾಗಲಿದೆ. 

ಜರಡಿ ಹಿಡಿದೆ ಒಬ್ರು ನಿಲ್ಲೋಲ್ಲ ಇಂತ ಧೈರ್ಯ ಇಲ್ಲದೆ ಇರೋ ಜನ ಇಟ್ಕೊಂಡು ಇವ್ನೇನು ಮಾಡ್ತಾನೆ ಎನ್ನುವ ಡೈಲಾಗ್‌ ಮೊದಲು ಕೇಳಿ ಬರುತ್ತದೆ.  ಮತ್ತೊಂದು ಧ್ವನಿಯಲ್ಲಿ 'ಹೌದು ಸರ್ ನಮಗೆ ಧೈರ್ಯ ಇರ್ಲಿಲ್ಲ ಶಕ್ತಿ ಇರ್ಲಿಲ್ಲ ನಂಬಿಕೆ ಇರ್ಲಿಲ್ಲ. ಸಾವು ನನ್ನು ತುಲಿದು ಹಾಕ್ತಿತ್ತು ಅಲ್ಲೊಬ್ಬ ಅಡ್ಡ ಇದ್ದ ಅಂತ ಮಾರಿ ಮುಂದೆ ಕತ್ತಿ ಬೀಸಿದ್ನಲ್ಲಾ ಅವತ್ತು ತುಂಬಾ ವರ್ಷ ಆದ್ಮೇಲೆ ಸಾವಿಗೆ ನಾವು ಕುಣಿದಾಡಿದ್ವಿ. ಅವತ್ತು ಕತ್ತಿ ಬೀಸಿದ ರಭಸಕ್ಕೆ ಒಂದು ಗಾಳಿ ಹುಟ್ಕೊಳ್ತು ಸರ್ ಆ ಗಾಳಿ ನರ ಇಲ್ದೆಇರೋ ಪ್ರತಿಯೊಬ್ಬರಿಗೂ ಉಸಿರು ಕಟ್ಬಿಡ್ತು. ನಿಮಗೆ ಒಂದು ಸಲಹೆ ಕೊಡ್ತೀನಿ ನೀವು ಮಾತ್ರ ಅವನಿಗೆ ಅಡ್ಡ ನಿಲ್ಲೋಕೆ ಹೋಗ್ಬೇಡಿ ಸರ್' ಎಂಬ ದೊಡ್ಡ ಡೈಲಾಗ್ ಬಂದ ನಂತರ ತೂಫಾನ್ ಹಾಡು ಶುರುವಾಗುತ್ತದೆ.

Tap to resize

Latest Videos

Thu kya Mein kya hath ja ತೂಫಾನ್ ಎಂದು ಹಾಡು ಶುರುವಾಗುತ್ತದೆ. ಕೈಯಲ್ಲಿ ದೊಡ್ಡ ಸುತ್ತಿಗೆ ಹಿಡಿದುಕೊಂಡು ಯಶ್ ಕಾಣಿಸಿಕೊಂಡಿದ್ದಾರೆ. ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೇ ತೂಫಾನ್ ಮುನ್ನುಗುವ ಸಿಡಿ ಕಿಡಿ ಕಿಚ್ಚಿವನೇ ತೂಫಾನ್ ತೂಫಾನ್ ಎಂಬ ಹಾಡು ಕೇಳಬಹುದು. ಯಾವ ಹಾಲಿವುಡ್ ಸಿನಿಮಾಗೂ ಕಡಿಮೆ ಇಲ್ಲ ನಮ್ಮ ಯಶ್ ಮತ್ತು ಪ್ರಶಾಂತ್ ನೀಲಿ ಕೆಜಿಎಫ್ ಚಾಪ್ಟರ್ 2 ಎಂದು ಹೇಳಬಹುದು. ಲಿರಿಕಲ್ ಹಾಡೇ ಇಷ್ಟೊಂದು ಸೂಪರ್ ಆಗಿದೆ ಅಂದ್ಮೇಲೆ ಸಿನಿಮಾ ಡಬಲ್ ಹಿಟ್ ಎನ್ನಲಾಗಿದೆ. ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರ್, ರವಿ ಬಸ್ರೂರ್, ಪುನೀತ್ ರುದ್ರನಾಗ್, ವರ್ಷಾ ಆಚಾರ್ಯ ಈ ಹಾಡು ಹಾಡಿದ್ದಾರೆ. ಮಕ್ಕಳ ಧ್ವನಿಯನ್ನು ಗಿರಿಧರ್ ಕಾಮತ್, ರಕ್ಷಾ ಕಾಮತ್, ಸಿಂಚನಾ ಕಾಮತ್, ನಿಶಾಂತ್ ಕಿಣಿ, ಭರತ್ ಭಟ್, ಅನಘಾ ನಾಯಕ್, ಅವನಿ ಭಟ್, ಸ್ವಾತಿ ಕಾಮತ್, ಶಿವಾನಂದ್ ನಾಯಕ್, ಕೀರ್ತನಾ ಬಸ್ರೂರು ನೀಡಿದ್ದಾರೆ.

KGF Chapter 2 ಟ್ರೇಲರ್ ನೋಡಿ ಸೆನ್ಸಾರ್ ಬೋರ್ಡ್ ಹೇಳಿದ್ದೇನು ಗೊತ್ತಾ?

ಏಪ್ರಿಲ್ 14ರಂದು ಸಿನಿಮಾ ಬಿಡುಗಡೆಯಾಗಲಿದು ಏಪ್ರಿಲ್ 13ರಂದು ಪ್ರೀಮಿಯರ್ ಶೋ ನಡೆಯಲಿದೆ. ಚಿತ್ರದಲ್ಲಿ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ, ವಿಲನ್ ಅಧೀರ ಪಾತ್ರದಲ್ಲಿ ಸಂಜಯ್ ದತ್, ರಾಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್, ಈಶ್ವರಿ ರಾವ್, ಅರ್ಚನಾ ಜೋಯಿಸ್, ರಾವ್ ರಮೇಶ್, ಅಚ್ಯುತ್ ಕುಮಾರ್, ಅಶೋಕ್ ಶರ್ಮಾ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.  ಪ್ರಶಾಂತ್ ನೀಲ್‌ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮಂನ ವಿಜಯ್ ಕಿರಗಂದೂರು ಬಂಡವಾಳ ಹಾಕಿದ್ದಾರೆ.

click me!