James 2022: ಕರ್ನಾಟಕ ಸಂಘ ಕತಾರ್ ವತಿಯಿಂದ 'ಜೇಮ್ಸ್' ಚಿತ್ರದ ವಿಶೇಷ ಪ್ರದರ್ಶನ

Suvarna News   | Asianet News
Published : Mar 20, 2022, 03:29 PM IST
James 2022: ಕರ್ನಾಟಕ ಸಂಘ ಕತಾರ್ ವತಿಯಿಂದ 'ಜೇಮ್ಸ್' ಚಿತ್ರದ ವಿಶೇಷ ಪ್ರದರ್ಶನ

ಸಾರಾಂಶ

ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ 'ಜೇಮ್ಸ್' ವಿಶೇಷ ಪ್ರದರ್ಶನವನ್ನು ಕರ್ನಾಟಕ ಸಂಘ ಕತಾರ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಉಡುಪಿ (ಮಾ.20): ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಕೊನೆಯ ಸಿನಿಮಾ 'ಜೇಮ್ಸ್' (James) ವಿಶೇಷ ಪ್ರದರ್ಶನವನ್ನು ಕರ್ನಾಟಕ ಸಂಘ ಕತಾರ್ (Qatar) ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ಏಷಿಯನ್ ಟೌನ್ ಸಿನಿಮಾ 4ನೇ ಚಿತ್ರಮಂದಿರದಲ್ಲಿ ಈ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಕರ್ನಾಟಕ ಸಂಘ ಕತಾರ್ 2019 ನವೆಂಬರ್ ತಿಂಗಳಿನಲ್ಲಿ ಆಯೋಜಿಸಿದ್ದ 'ಕರ್ನಾಟಕ ರಾಜ್ಯೋತ್ಸವ' ಕಾರ್ಯಕ್ರಮಕ್ಕೆ  ಪುನೀತ್ ರಾಜ್‌ಕುಮಾರ್ ದಂಪತಿಗಳು ಆಗಮಿಸಿ ಜನಸಮೂಹವನ್ನು ಖುಷಿಪಡಿಸಿದ್ದರು. ಮಾತ್ರವಲ್ಲ ಅಂದು ನಡೆದ ಕನ್ನಡ ಕಾರ್ಯಕ್ರಮಗಳಿಗೆ ಹೊಸ ಮೆರುಗು ನೀಡಿದರು. 

ಇದು ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಅಧಿಕೃತ ವಿದೇಶಿ ಭೇಟಿಯಾಗಿತ್ತು ಎನ್ನುವುದು ನಂತರದ ಕಾಲ ನಿರ್ಧರಿಸಿತು. ಕತಾರಿನಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ನೆಚ್ಚಿನ ನಟ, ಯುವರತ್ನ, ಕರ್ನಾಟಕ ರತ್ನರನ್ನು ಗೌರವಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದು 'ಜೇಮ್ಸ್' ಚಲನಚಿತ್ರವನ್ನು ವೀಕ್ಷಿಸಿ ಪ್ರಶಂಸೆ, ಗೌರವಗಳನ್ನು ವ್ಯಕ್ತಪಡಿಸಿದರು. 'ಜೇಮ್ಸ್' ಚಿತ್ರವು ಎಲ್ಲೆಡೆ ತೆರೆಕಂಡಂತೆ, ಕತಾರಿನಲ್ಲಿ 17ನೇ ತಾರೀಖು, ಅಂದರೆ ಶ್ರೀ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ತೆರೆಕಂಡಿತ್ತು. ಮೊದಲನೇ ದಿನ ಬಂದು ವೀಕ್ಷಿಸಿದವರಲ್ಲಿ ಕೆಲವರು ಮರುದಿನವೂ ಬಂದು ತಮ್ಮ ಅಭಿಮಾನವನ್ನು ಮೆರೆದರು.

Ballari: ಅಪ್ಪು ಮೇಲಿನ ಅಭಿಮಾನ: ಊರಿನ ಜನರಿಗಾಗಿ ಒಂದು ಶೋ ಬುಕ್ ಮಾಡಿದ ಫ್ಯಾನ್ಸ್‌..!

ಚಲನಚಿತ್ರ ಪ್ರದರ್ಶನದ ಮೊದಲು ಸಂಚಾಲಕರು ಹಾಗು ಭಾರತೀಯ ಸಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ  ಸುಬ್ರಮಣ್ಯ ಹೆಬ್ಬಾಗಿಲು ಅವರು ನೆರೆದ ಕನ್ನಡಾಭಿಮಾನಿಗಳನ್ನುದೇಶಿಸಿ ಮಾತನಾಡುತ್ತಾ ತಮ್ಮ ಆತ್ಮೀಯ ಸ್ನೇಹಿತರು ಆಗಿದ್ದ  ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಗೌರವ ವ್ಯಕ್ತಪಡಿಸಿದರು. ನಂತರ ಐ.ಸಿ.ಬಿ.ಎಫ್ (ಭಾರತೀಯ ಸಮುದಾಯ ಹಿತೈಷಿ ವೇದಿಕೆ) ನ ಮಾಜಿ ಉಪಾಧ್ಯಕ್ಷರಾದ  ಮಹೇಶ್ ಗೌಡರು ಮತ್ತು ಕರ್ನಾಟಕ ಸಂಘದ ಪ್ರಸ್ತುತ ಮಹಿಳಾ ಕಾರ್ಯದರ್ಶಿ ಸುಶೀಲಾ ಸುನೀಲ್ ಅವರು ಪುನೀತ್ ರಾಜ್‌ಕುಮಾರ್ ಅವರ ಗುಣಗಾನ ಮಾಡಿದರು.



ಅಪ್ಪು ಅಭಿನಯದ ಹೈವೋಲ್ಟೇಜ್ 'ಜೇಮ್ಸ್' ಸಿನಿಮಾ ಅಮೆರಿಕಾದಲ್ಲಿ ರಿಲೀಸ್ ಆಗಿ ಜಬರ್ದಸ್ತ್ ಪ್ರದರ್ಶವನ್ನು ಕಾಣುತ್ತಿದೆ. ಚಿಕಾಗೋ ನಗರ ಸೇರಿದಂತೆ ಅಮೆರಿಕಾದ ಹಲವು ರಾಜ್ಯ ಹಾಗು ನಗರಗಳಲ್ಲಿ ಅಪ್ಪು ಹಬ್ಬವನ್ನು ಆಚರಿಸಿದ್ದಾರೆ. ಅಮೆರಿಕಾದಲ್ಲಿ (America) 'ಜೇಮ್ಸ್‌' ಚಿತ್ರಕ್ಕೆ ಭಾರೀ ಬೇಡಿಕೆ ಇದ್ದಿದ್ದರಿಂದ 35 ರಾಜ್ಯಗಳಲ್ಲಿ 150ಕ್ಕೂ ಹೆಚ್ಚಿನ ಪ್ರದರ್ಶನವನ್ನು ಕಂಡಿದೆ. ಸ್ಯಾಂಡಲ್‌ವುಡ್ ಗೆಳೆಯರ ಬಳಗ ಡಿಸ್ಟ್ರಿಬ್ಯೂಷನ್ ಹಕ್ಕು ಪಡೆದಿದ್ದ 'ಜೇಮ್ಸ್' ಸಿನಿಮಾಗೆ ಚಿಕಾಗೋದಲ್ಲಿ ಅತ್ಯತ್ತಮ ಪ್ರತ್ರಿಕ್ರಿಯೆಯನ್ನು ಪಡೆದುಕೊಂಡಿದೆ. 'ಜೇಮ್ಸ್' ಸಿನಿಮಾ ರಿಲೀಸ್ ಹಾಗೂ ಅಪ್ಪು ಹುಟ್ಟುಹಬ್ಬವನ್ನು ಅಲ್ಲಿನ ಕನ್ನಡಿಗರು, ಭಾರತೀಯರು ನಿಜವಾದ ಹಬ್ಬದಂತೆ ಆಚರಿಸಿದ್ದಾರೆ. 

Puneeth Rajkumar: ಸಿಲಿಕಾನ್ ಸಿಟಿ ತುಂಬೆಲ್ಲಾ ಪವರ್ ಸ್ಟಾರ್ ಅಪ್ಪು ಹವಾ!

ಇನ್ನು'ಜೇಮ್ಸ್' ಚಿತ್ರದ ಕುರಿತು ಚಂದನವನ ಅಂಗಳದಿಂದ ಮತ್ತೊಂದು ಭರ್ಜರಿ ಸುದ್ದಿ ಹರಿದಾಡುತ್ತಿದೆ. ಕನ್ನಡದಲ್ಲೇ ಅತೀ ಹೆಚ್ಚು ಮೊತ್ತಕ್ಕೆ 'ಜೇಮ್ಸ್' ಚಿತ್ರದ ಟಿವಿ ರೈಟ್ಸ್ ಸೇಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಈಗಾಗಲೇ ಥಿಯೇಟರ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ 'ಜೇಮ್ಸ್' ಚಿತ್ರದ ಟಿವಿ ರೈಟ್ಸ್ ಎಲ್ಲ ಭಾಷೆಗೂ ಸೇರಿ ಅಂದಾಜು 80 ಕೋಟಿಗೆ ಸೇಲ್ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕನ್ನಡದಲ್ಲೇ ಸುವರ್ಣ ವಾಹಿನಿಯು 13.80 ಕೋಟಿಗೆ ಪ್ರಸಾರದ ಹಕ್ಕನ್ನು ಪಡೆದಿದೆಯಂತೆ. ಸೋನಿ ಡಿಜಿಟಲ್ 40 ಕೋಟಿ ಕೊಟ್ಟು ಪ್ರಸಾರದ ಹಕ್ಕನ್ನು ಪಡೆದಿದೆ ಎನ್ನಲಾಗುತ್ತಿದೆ. ಒಟಿಟಿಯಲ್ಲಿ 7.30 ಕೋಟಿಗೆ ಮಾರಾಟವಾಗಿದೆ, ಇದು 'ಜೇಮ್ಸ್' ಕನ್ನಡ ಅವತರಣಿಕೆಗೆ ಮಾತ್ರ ಸಿಕ್ಕ ಮೊತ್ತ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನೀನೇ ನನ್ನ ಚಾಟ್‌ಜಿಪಿಟಿ, ಬಾಡಿಗಾರ್ಡ್:‌ Rocking Star Yash ಬಗ್ಗೆ ಹೀಗಂದಿದ್ದೇಕೆ ರಾಧಿಕಾ?
ಇದು ಟಾಕ್ಸಿಕ್‌ ಅಲ್ಲ, ಸ್ವೀಟ್‌ ಸುದ್ದಿ.. ಯಶ್‌ಗಾಗಿ ರಾಧಿಕಾ ಪಂಡಿತ್‌ ಬರೆದ ಮನಮೋಹಕ ಸಂದೇಶ ವೈರಲ್!