
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂದ್ರೆನೇ ಒಂದು ರೀತಿ ಸೆಲೆಬ್ರೇಷನ್. ಮಾರ್ಚ್ 17ರಂದು ಅಪ್ಪು ಜನ್ಮ ದಿನವನ್ನು ಕರ್ನಾಟಕ ಮಾತ್ರವಲ್ಲದೆ ವಿದೇಶದ ಮೂಲೆ ಮೂಲೆಯಲ್ಲೂ ಆಚರಣೆ ಮಾಡಿದ್ದಾರೆ. ಅದೇ ದಿನ ಬಿಡುಗಡೆಯಾದ ಜೇಮ್ಸ್ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸುತ್ತಿದೆ. ಯಾವ ರಸ್ತೆ ಯಾವ ಅಂಗಡಿ ಯಾವ ಪಬ್ ಎದುರು ಯಾವ ಮಾಲ್ ಯಾವ ಕಾರ್ಯಕ್ರಮ ನೋಡಿದರೂ ಅಲ್ಲಿ ಪುನೀತ್ ರಾಜ್‌ಕುಮಾರ್ ಫೋಟೋ ಇದ್ದೇ ಇರುತ್ತದೆ. ಬರೀ ಫೋಟೋ ಅಂದುಕೊಳ್ಳಬೇಡಿ ಹಬ್ಬದ ರೀತಿ ಆಚರಣೆ ಮಾಡಿ ಅಕ್ಕಪಕ್ಕದಲ್ಲಿರುವ ಜನರಿಗೆ ಅನ್ನದಾನ ಮಾಡುತ್ತಿದ್ದಾರೆ. ಅಪ್ಪು ನಮ್ಮನೆ ಹುಡುಗ, ನಮ್ಮ ಮಗನ ಹುಟ್ಟುಹಬ್ಬ ಎನ್ನುತ್ತಿದ್ದಾರೆ ಕನ್ನಡಿಗರು.
ಮಾರ್ಚ್ 19ರಂದು ನಾರ್ಥ್ ಬ್ರನ್ಸ್ವಿಕ್ ಉದ್ಯಾನವನದಲ್ಲಿ ಕನ್ನಡಿಗರು ಅಪ್ಪು ಹುಟ್ಟುಹಬ್ಬ ಮತ್ತು ಜೇಮ್ಸ್ ಜಾತೆ ಕಾರ್ಯಕ್ರಮ ಮಾಡಿದ್ದಾರೆ. ಅಮೆರಿಕಾದಲ್ಲಿರುವ ಪ್ರತಿಯೊಬ್ಬ ಕನ್ನಡಿಗನೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಪ್ಪುನ ಆಚರಿಸಿದ್ದಾರೆ. ಜ್ಯೋತಿ ನಂಜುಂಡಯ್ಯ ಅವರು ಸುಶ್ರಾವ್ಯ ಗಣೇಶ ಸ್ತುತಿಯಿಂದ ಕಾರ್ಯಕ್ರಮವನ್ನು ಆರಂಭಿಸಿದ್ದರು. ಈ ಕಾರ್ಯಕ್ರಮಕ್ಕೆ ಅಪ್ಪು ಹಿರಿಮಗಳು ದೃತಿ ಮುಖ್ಯ ಅತಿಥಿಯಾಗಿ ಆಗಮಿಸಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮಕ್ಕಳಿಂದ ನೃತ್ಯ ಮತ್ತು ಅಪ್ಪು ಬಗ್ಗೆ ಪ್ರತಿಯೊಬ್ಬರು ಮಾತನಾಡಿದ್ದಾರೆ. ಮಧು ರಂಗಯ್ಯ ಮಾರ್ಗದರ್ಶನದಲ್ಲಿ ರೂಪಾ ಭಟ್ ಇಡೀ ಕಾರ್ಯಕ್ರಮನ್ನು ರೂಪಿಸಿದ್ದಾರೆ.
ಅಪ್ಪು ಪ್ರತಿ ಸಲ ಮೊರ್ಗನ್ವಿಲ್ಲೆಗೆ ಭೇಟಿ ಕೊಟ್ಟಾದ ತಪ್ಪದೆ ಕೃಷ್ಣ ದೇವಸ್ಥಾನಕ್ಕೆ ಹೋಗುತ್ತಾರೆ. ದೇವಸ್ಥಾನದ ರಂಗಾ ಭಟ್ಟರು ತಯಾರಿಸುವ ಬಾದುಷಾ ಅಂದ್ರೆ ಪುನೀತ್‌ಗೆ ತುಂಬಾನೇ ಇಷ್ಟ ಹೀಗಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ರಂಗಾ ಭಟ್ಟರು ಸಹಿ ಕಳುಹಿಸಿಕೊಟ್ಟಿದ್ದಾರೆ ಅದನ್ನು ರಘು ಗುಂಡಾಚಾರ್ ಹಂಚಿದರು. ಕಾರ್ಯಕ್ರಮ ನಡೆದ ನಂತರ ಪ್ರತಿಯೊಬ್ಬರು ತಮ್ಮ ಕಾರು ಮೇಲೆ ಅಪ್ಪು ಫೋಟೋ ಅಂಟಿಸಿಕೊಂಡು ಮೆರವಣಿಗೆ ಮಾಡಿದ್ದಾರೆ. ನಾಗೇಶ್ ಕೆಂಪಯ್ಯನವರ ನೇತೃತ್ವದಲ್ಲಿ ಡೊಳ್ಳು ವಾದ್ಯ, ಮಜಲು ಕುಣಿತ ಮಾಡಿದ್ದಾರೆ. ಅಪ್ಪುಗೆ ಅರ್ಪಿಸಿರುವ ಕಾರ್ಯಕ್ರಮವನ್ನು ಅಮೆರಿಕನ್ನರು ನೋಡಿ ಚಪ್ಪಾಳೆ ತಟ್ಟಿದ್ದಾರೆ.
ತಂದೆ ಕಾರ್ಯಕ್ರಮದಲ್ಲಿ ಮಗಳು ಭಾಗಿಯಾಗಿರುವುದನ್ನು ಕಂಡು ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ಮನೆಯ ಹಿರಿಮಗಳು ತಂದೆಯ ರೂಪ ಎಂದು ಹೇಳುತ್ತಾರೆ ಹೀಗಾಗಿ ತಂದೆ ರೀತಿ ನೀನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಮಗಳೆ ಕನ್ನಡಿಗರು ನಿನಗಾಗಿ ಕಾಯುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
1999ರಲ್ಲಿ ಅಶ್ವಿನಿ ರೇವಂತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಪ್ಪು. ಹಿರಿಯ ಮಗಳು ದೃತಿ, ಕಿರಿಯ ಮಗಳು ವಂದಿತಾ ಇಬ್ಬರನ್ನೂ ಅಪ್ಪು ಪ್ರೀತಿಯಿಂದ tuttu ಮತ್ತು nikku ಎಂದು ಕರೆಯುತ್ತಾರೆ.ದೃತಿ ಚಿಕ್ಕ ವಯಸ್ಸಿನಿಂದಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಈ ಹಿಂದೆ ಕಣ್ಣಿನ ಸಮಸ್ಯೆ ಎದುರಿಸುವ ವಯಸ್ಕರಿಗೆ ಹಣ ಸಂಗ್ರಹಿಸುವ ಮೂಲಕ ನೆರವಾಗಿದ್ದರು.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನಲ್ಲಿರುವ ಕೋಟೆನಾಡಿನ ಪ್ರಸಿದ್ದ ಪುಣ್ಯಕ್ಷೇತ್ರ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸನ್ನಿಧಿಯಲ್ಲಿ ನಡೆದ, ತಿಪ್ಪಜ್ಜನ ಬೃಹತ್ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ತೇರು ಎಳೆಯುವ ವೇಳೆಯಲ್ಲಿ, ಪವರ್ ಸ್ಟಾರ್ ಪೋಟೋ ಕೈಯಲ್ಲಿ ಹಿಡಿದು ಅಪ್ಪು, ಅಪ್ಪು ಎಂದು ಘೋಷ ವಾಕ್ಯ ಕೂಗುವ ಮೂಲಕ ಅಭಿಮಾನಿಗಳ ದೇವರಾದ ಕರುನಾಡ ರತ್ನನನ್ನು ಮನದಲ್ಲಿ ನೆನೆದರು. ಅನೇಕ ಕಡೆಗಳಲ್ಲಿ ಅನ್ನ ಸಂತರ್ಪಣೆ ಮಾಡಲಾಗಿದೆ. ಆದ್ರೆ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶಿವೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿದೆ. 2.25 ಕ್ವಿಂಟಾಲ್ ರೈಸ್ ತಯಾರಿಸಿ ಅಂದಾಜು 4 ಸಾವಿರ ಜನರಿಗೆ ಊಟ ಬಡಿಸಲಾಗಿದೆ. ಚಿಕನ್ ಊಟ ಸವಿದ ಅಭಿಮಾನಿಗಳು ‘ಜೇಮ್ಸ್’ ಸಿನಿಮಾ ನೋಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.