Advocate Cyril Prasad on Yuva Rajkumar Sridevi Byrappa divorce ದೊಡ್ಮನೆ ಕುಟುಂಬದ ಕುಡಿ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ನಡುವಿನ ಕಲಹ ಬೀದಿರಂಪವಾಗಿದೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲಿಯೇ ಇಬ್ಬರ ನಡುವೆ ಆರೋಪ ಪ್ರತ್ಯಾರೋಪಗಳು ಆರಂಭವಾಗಿದೆ. ಈ ನಡುವೆ ಯುವ ರಾಜ್‌ಕುಮಾರ್ ಪರ ವಕೀಲ ಸಿರಿಲ್ ಪ್ರಸಾದ್ ವಿವಾದದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರು (ಜೂ.10): ವರನಟ ಡಾಕ್ಟರ್ ರಾಜ್‌ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಅವರ 2ನೇ ಮಗ ಯುವ ರಾಜ್‌ಕುಮಾರ್ (Yuva Rajkumar) ಹಾಗೂ ಶ್ರೀದೇವಿ ಭೈರಪ್ಪ (Sridevi Byrappa) ಅವರ ನಡುವಿನ ವಿವಾಹ ಈಗ ವಿಚ್ಛೇದನದ (divorce) ಹಂತ ತಲುಪಿದೆ. ಜೂನ್ 6 ರಂದು ಇಬ್ಬರೂ ವಿವಾಹ ವಿಚ್ಚೇದನ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿಯನ್ನು ಸಲ್ಲಿಕೆ ಮಾಡಿರುವ ಯುವ ರಾಜ್‌ಕುಮಾರ್, ಶ್ರೀದೇವಿ ಭೈರಪ್ಪ ತಮಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇನ್ನೊಂದೆಡೆ ಶ್ರೀದೇವಿ ಭೈರಪ್ಪ ಕೂಡ ಯುವ ರಾಜ್‌ಕುಮಾರ್ ಅವರಿಗೆ ಸಿನಿಮಾ ಹೀರೋಯಿನ್ ಜೊತೆ ಅಕ್ರಮ ಸಂಬಂಧವಿದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಈ ವಿಚಾರವಾಗಿ ಯುವ ರಾಜ್‌ಕುಮಾರ್ ಪರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿರುವ ವಕೀಲ ಸಿರಿಲ್ ಪ್ರಸಾದ್ (Advocate Cyril Prasad) ಮಾತನಾಡಿದ್ದು, ಶ್ರೀದೇವಿ ಭೈರಪ್ಪ ಅವರ ವಿರುದ್ಧ ಹಣಕಾಸು ಅಕ್ರಮ, ಅನೈತಿಕ ಸಂಬಂಧದ ಆರೋಪ ಹೊರಿಸಿದ್ದಾರೆ.
'ಮಾನಸಿಕ ಹಾಗೂ ದೈಹಿಕ ಹಲ್ಲೆಯ ಮೇಲೆ ವಿಚ್ಛೇದನ ಅರ್ಜಿ ಹಾಕಲಾಗಿದೆ. ಆಕೆ ಬೇರೆ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಾರೆ. ಮೊದಲು ಈ ಬಗ್ಗೆ ಲೀಗಲ್ ನೋಟಿಸ್ ನೀಡಲಾಗಿತ್ತು. ಇಬ್ಬರ ನಡುವೆ ವೈಯಸ್ಸಿನ ಅಂತರವೂ ಇದೆ. ಬೇರೆ ಉದ್ಯಮದಲ್ಲಿ ಹೂಡಿಕೆ ಮಾಡುವಂತೆ ಒತ್ತಾಯ ಮಾಡಲಾಗಿತ್ತು. ಐಎಎಸ್ ಮಾಡುವ ಪ್ರಯತ್ನ ಮಾಡಿದ್ರು, ಒಂದೆರಡು ದಿನ ಮಾತ್ರ ಕ್ಲಾಸ್‌ಗೆ ಹೋದ ಹಾಗೆ ಮಾಡಿದ್ದರು. ಆ ನಂತರ ಗುರು (ಯುವರಾಜ್) ಜೊತೆ ಜಗಳ ಆರಂಭ ಮಾಡಿದ್ದರು. ರಾತ್ರಿ ವೇಳೆ ಬಾಯ್‌ಫ್ರೆಂಡ್ ಮನೆಗೆ ಹೋಗುತ್ತಿದ್ದ ಆಕೆ, ಬೆಳಗ್ಗೆ ಅಳುತ್ತಾ ಮನೆಗೆ ಬರುತ್ತಿದ್ದರು. ಮದುವೆಗೂ ಮುನ್ನ ಆಕೆಗೆ ಬೇರೆ ಸಂಬಂಧವಿತ್ತು. ಈ ಕುರಿತಂತೆ ಆಕೆಗೆ ಲೀಗಲ್ ನೋಟಿಸ್ ನೀಡಲಾಗಿತ್ತು. ಇದಕ್ಕೆ ಅವರು ಉತ್ತರ ನೀಡಿಲ್ಲ. ಸಿನಿಮಾದಲ್ಲಿದ್ದ ಫೋಟೋ ತೆಗೆದು ಯುವರಾಜ್ ಮೇಲೆ ಆಕೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ..' ಎಂದು ವಕೀಲರು ದೂರಿದ್ದಾರೆ.
'ರಾಜ್‌ಕುಮಾರ್ ಅಕಾಡೆಮಿಯಲ್ಲಿ ಇವರು ಪಾಲುದಾರರಾಗಿದ್ದರು. ಅಕಾಡೆಮಿ ಸೇರಿದ 3 ಕೋಟಿ ಹಣ ಅವರ ಖಾತೆಗೆ ಹೋಗಿದೆ. ಕುಟುಂಬದ ಹೆಸರನ್ನು ಕೆಟ್ಟದಾಗಿ ಬಳಕೆ ಮಾಡಿಕೊಂಡಿದ್ದಾರೆ. ಅಕಾಡೆಮಿಯಿಂದ ಬಂದ ಹಣದಲ್ಲಿ ಮೈಸೂರಿನಲ್ಲಿ 20 ಸೈಟ್, ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಅನ್ನು ಖರೀದಿ ಮಾಡಿದ್ದಾರೆ. ರಾಜ್ ಕುಮಾರ್ ಅಕಾಡೆಮಿ ಬಿಟ್ಟು ಹೋಗುವಾಗ 'ನಿನ್ನ ಜೊತೆ ಜೀವಿಸುವ ಮನಸ್ಸಿಲ್ಲ..' ಅಂತ ಯುವರಾಜ್‌ಗೆ ಹೇಳಿದ್ದಾರೆ. ಇನ್ನೊಮ್ಮೆ ಅಮೆರಿಕ್ಕೆ ಬರುವಂತೆ ಯುವರಾಜ್‌ಗೆ ಕರೆದಿದ್ದರು. ಸುಮಾರು 4 ರಿಂದ 4.5 ಕೋಟಿ ಹಣ ತೆಗೆದುಕೊಂಡು ಹೋಗಿದ್ದಾರೆ. ಕುಟುಂಬದ ಆಸ್ತಿಗಳ ಅಡಇಟ್ಟು ಸಾಲ ಪಡೆಯಲಾಗಿದೆ ಆ ಮೂಲಕ ಯುವರಾಜ್, ಕುಟುಂಬಕ್ಕೆ ಅನ್ಯಾಯ ಮಾಡಲಾಗಿದೆ..' ಎಂದು ವಕೀಲರು ದೂರಿದ್ದಾರೆ.
ರಾಧಯ್ಯ ಎನ್ನುವ ವ್ಯಕ್ತಿಯ ಜೊತೆ ಆಕೆಗೆ ಅಕ್ರಮ ಸಂಬಂಧವಿದೆ. ಯುವ ಜೊತೆ ಮದುವೆಯ ನಂತರವೂ ಇದು ಮುಂದುವರಿದಿತ್ತು. ಶ್ರೀದೇವಿ ಹಾಗೂ ಯುವ ಮದುವೆಯ ಬಳಿಕ ರಾಧಯ್ಯ ಮಂಕಾಗಿದ್ದರು. ರಾಧಯ್ಯ ಅವರ ಪತ್ನಿ ಮನೆಯಿಂದ ಹೊರಹೋದ ಬಳಿಕ, ರಾಧಯ್ಯ ಹಾಗೂ ಶ್ರೀದೇವಿ ಭೇಟಿ ಮಾಡೋದು ಮಾಡುತ್ತಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ವಿಚ್ಚೇದನ ನೊಟೀಸ್ ಬಗ್ಗೆ ಶ್ರೀದೇವಿ ಬೈರಪ್ಪ ಸ್ಪಷ್ಟನೆ, ನಟ ಶಿವಣ್ಣ ಫಸ್ಟ್ ರಿಯಾಕ್ಷನ್
ಯಾವ ನಟಿಯು ಜೊತೆಯೂ ಯುವರಾಜ್‌ಗೆ ಸಂಬಂಧವಿಲ್ಲ: ಲೀಗಲ್ ನೋಟಿಸ್ ಗೆ ಉತ್ತರ ಕೊಡುವಾಗ ಯುವರಾಜ್‌ಗೆ ಸೆಕ್ಸ್‌ನಲ್ಲಿ ಸಮಸ್ಯೆ ಇದೆ ಎಂದು ಶ್ರೀದೇವಿ ಆರೋಪ ಮಾಡಿದ್ದಾರೆ. ಈಗ ಅವರು ಬೇರೆ ನಟಿಯ ಜೊತೆ ಸಂಬಂಧ ಇದೆ ಎನ್ನುತ್ತಿದ್ದಾರೆ. ಸೆಕ್ಸ್‌ನಲ್ಲಿ ಸಮಸ್ಯೆ ಇದೆ ಎಂದು ಆರೋಪ ಮಾಡಿದ ಬಳಿಕ ಅನೈತಿಕ ಸಂಬಂಧ ಅರೋಪ ಮಾಡಲು ಹೇಗೆ ಸಾಧ್ಯ? ಕುಟುಂಬ ಸರಿ ಮಾಡುವ ಪ್ರಯತ್ನ ಯುವರಾಜ್ ಮಾಡಿದ್ದರೂ ಅದರಲ್ಲಿ ಸಫಲವಾಗಲಿಲ್ಲ. ಇನ್ನು ಶ್ರೀದೇವಿ ಬಾಯ್ ಫ್ರೆಂಡ್ ರಾದಯ್ಯನಿಂದ ಮಗು ಪಡೆಯುವ ಇಚ್ಛೆ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ.
ಎಲ್ರಿಗೂ ನಾನು ಸಿಕ್ತೀನಿ ಅಂತ ಹೇಳಿ ಅಡ್ರೆಸ್ ಕೊಟ್ಟ ನಟಿ
ಯುವರಾಜ್‌ಗೆ ಯಾವುದೇ ನಟಿಯ ಜೊತೆ ಸಂಪರ್ಕವಿಲ್ಲ. ಪ್ರತಿ ಬಾರಿ ಯುವರಾಜ್‌ನನ್ನು ಬಾಯ್‌ಫ್ರೆಂಡ್ ರಾದಯ್ಯ ಜೊತೆ ಕಂಪೇರ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಸಿರಿಲ್ ಹೇಳಿದ್ದಾರೆ. ಅರ್ಜಿ ಹಾಕಿರುವ ಕಾರಣ ಮೀಡಿಯೇಷನ್ ನಡೆಯುತ್ತದೆ. ಬಳಿಕ ಕೋರ್ಟ್ ವಿಚಾರಣೆಯಾಗಿ ತೀರ್ಪು ಬರಲಿದೆ ಎಂದು ವಕೀಲರು ತಿಳಿಸಿದ್ದಾರೆ.