ಉಸಿರಲ್ಲಿ ಉಸಿರಾಗಿದ್ದವರಿಗೆ ಅವಕಾಶವೇ ಸಿಗ್ಲಿಲ್ಲ... ಅವಕಾಶವಿದ್ರೂ ಒಟ್ಟಿಗೇ ಬಾಳಲ್ಲ .. ಏನಿದು ವಿಚಿತ್ರ ದೇವ್ರೇ?

By Suchethana D  |  First Published Jun 10, 2024, 3:25 PM IST

ನಿವೇದಿತಾ ಗೌಡ - ಚಂದನ್​ ಶೆಟ್ಟಿ ಹಾಗೂ ಯುವರಾಜ್ ಕುಮಾರ್- ಶ್ರೀದೇವಿ ದಂಪತಿಯ ನಡುವೆ ಡಿವೋರ್ಸ್​ ಸುದ್ದಿ ಬಹಳ ಸದ್ದು ಮಾಡುತ್ತಿರುವ ಬೆನ್ನಲ್ಲೇ ವಿಧಿ ಬರಹದ ಕುರಿತು ಚರ್ಚೆ ಶುರುವಾಗಿದೆ. ಏನದು?
 


 ವಿಧಿ ಬರಹ, ದೈವ ಲೀಲೆ, ದೇವರ ಆಟ... ಇವೆಲ್ಲವನ್ನೂ ಸಾಮಾನ್ಯವಾಗಿ ಪ್ರತಿನಿತ್ಯವೂ ಜನರು ಹೇಳುತ್ತಲೇ ಇರುತ್ತಾರೆ. ವಿಧಿಯಾಟದ ಮುಂದೆ ಯಾವುದೂ ನಡೆಯುವುದಿಲ್ಲ. ನಾವೊಂದು ಬಗೆದರೆ ದೈವವೇ ಒಂದು ಬಗೆಯುತ್ತದೆ ಎನ್ನುವೆಲ್ಲಾ ಮಾತುಗಳಿವೆ. ಇದು ಎಷ್ಟು ನಿಜ ಕೂಡ ಅಲ್ವಾ? ನಿವೇದಿತಾ ಮತ್ತು ಚಂದನ್​ ಶೆಟ್ಟಿ ದಂಪತಿ ಹಾಗೂ  ಯುವರಾಜ್ ಕುಮಾರ್- ಶ್ರೀದೇವಿ ದಂಪತಿಯ ವಿಚ್ಛೇದನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸೋಷಿಯಲ್​  ಮೀಡಿಯಾದಲ್ಲಿ ಹಣೆಬರಹ, ವಿಧಿ ಲಿಖಿತ ಇವುಗಳ ಚರ್ಚೆ ಜೋರಾಗಿ ನಡೆದಿದೆ. ಅಷ್ಟಕ್ಕೂ ಇಂದು ಡಿವೋರ್ಸ್​ ಏನೂ ದೊಡ್ಡ ವಿಷಯವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ದಂಪತಿ ನಡುವೆ ಬಿರುಕು ಉಂಟಾಗುತ್ತಿದೆ. ಚಿಕ್ಕ-ಪುಟ್ಟ ವಿಷಯಗಳಿಗೂ ಕೋರ್ಟ್​ ಬಾಗಿಲಿಗೆ ಹೋಗುವ ಘಟನೆಗಳೇ ಹೆಚ್ಚಾಗಿವೆ. ಅದೇ ಇನ್ನೊಂದೆಡೆ ಜೀವಕ್ಕೆ ಜೀವವಾಗಿರೋ ಪತಿ ಅಥವಾ ಪತ್ನಿ ಸಾಯುವ ಘಟನೆಗಳು ದಿನನಿತ್ಯವೂ ನಡೆಯುತ್ತಲೇ ಇರುತ್ತವೆ. ಆದರೆ ಸೆಲೆಬ್ರಿಟಿಗಳ ಬಾಳಲ್ಲಿ ಈ ರೀತಿ ಘಟನೆ ಸಂಭವಿಸಿದಾಗ ಸಹಜವಾಗಿ ಅದು ಮುನ್ನೆಲೆಗೆ ಬರುವುದು ಇದೆ. 

ಒಟ್ಟಾಗಿ ಬಾಳಿ ಬದುಕಬೇಕಾದ ಮತ್ತು ಚಂದನ್​ ಶೆಟ್ಟಿ ದಂಪತಿ ಹಾಗೂ  ಯುವರಾಜ್ ಕುಮಾರ್- ಶ್ರೀದೇವಿ ದಂಪತಿಯ ಡಿವೋರ್ಸ್​ ಪ್ರಕರಣ ಸೋಷಿಯಲ್​ ಮೀಡಿಯಾಗಳ್ಲಿ ಸಕತ್​ ಸದ್ದುಮಾಡುತ್ತಿದೆ. ಇದರ ನಡುವೆಯೇ ಆದರ್ಶ ದಂಪತಿ ಎನಿಸಿಕೊಂಡಿದ್ದ ಸೆಲೆಬ್ರಿಟಿ ಜೋಡಿಗಳಾದ ಮೇಘನಾ ರಾಜ್​- ಚಿರಂಜೀವಿ, ವಿಜಯ್​ ರಾಘವೇಂದ್ರ- ಸ್ಪಂದನಾ ಹಾಗೂ ಪುನೀತ್​ ರಾಜ್​ಕುಮಾರ್​- ಅಶ್ವಿನಿ ಜೋಡಿಯ ಅಗಲಿಕೆಯ ಕುರಿತು ಚರ್ಚೆಯಾಗುತ್ತಿದೆ. 

Tap to resize

Latest Videos

ನೇರಪ್ರಸಾರದಲ್ಲಿ ನಟಿ ತಾರಾ ಮಾತು: ನಿವೇದಿತಾ-ಚಂದನ್​ ಡಿವೋರ್ಸ್​ ವಿಷಯ ಪ್ರಸ್ತಾಪ?

namma.hubballi.memes ಶೇರ್​ ಮಾಡಿಕೊಂಡಿರುವ ಚಿತ್ರಪಟವೊಂದನ್ನು ನೋಡಿ ಹಲವರು ಇದಕ್ಕೆ ಕಮೆಂಟ್​ ಮಾಡುವ ಮೂಲಕ ಶೋಕ ವ್ಯಕ್ತಪಡಿಸುತ್ತಿದ್ದಾರೆ. ಜೀವಕ್ಕೆ ಜೀವವಾಗಿದ್ದ ಈ ದಂಪತಿಯ ಖುಷಿಯನ್ನು ನೋಡಲಾಗದ ದೇವರು ಒಬ್ಬರನ್ನು ಬೇಗನೇ ಕರೆಸಿಕೊಂಡು ಬಿಟ್ಟ. ಕಾಲವಲ್ಲದ ಕಾಲದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ದಂಪತಿಯನ್ನು ದೂರ ಮಾಡಿಬಿಟ್ಟ. ಆದರೆ ಒಟ್ಟಾಗಿ ಬಾಳಿ ಬದುಕಬೇಕಾದ ಮತ್ತು ಚಂದನ್​ ಶೆಟ್ಟಿ ದಂಪತಿ ಹಾಗೂ  ಯುವರಾಜ್ ಕುಮಾರ್- ಶ್ರೀದೇವಿ ದಂಪತಿ ಒಟ್ಟಾಗಿ ಇರುವುದನ್ನು ಬಿಟ್ಟು, ಯಾವುದೋ ಕ್ಷುಲ್ಲಕ ಕಾರಣಕ್ಕೆ ಸ್ವ ಇಚ್ಛೆಯಿಂದ ಡಿವೋರ್ಸ್​  ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ತಾವೇ ಒಬ್ಬರನ್ನೊಬ್ಬರು ಅಗಲುತ್ತಿದ್ದಾರೆ. ಇದೆಂಥ ವಿಪರ್ಯಾಸ ಅಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ ಕಮೆಂಟಿಗರು. 

ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬಂದಿವೆ.  ವರ್ಷ ಸಂಸಾರ ಮಾಡಿ ಡೈವರ್ಸ್ ತಗೋಳೋವುಕ್ಕೆ ದೇವ್ರು ಆಯಸ್ಸು ಕೊಡ್ತಾನೆ... ಇಷ್ಟ ಪಟ್ಟು ಮದ್ವೆ ಆಗಿ ಜೀವನ ಪೂರ್ತಿ ಜೊತೆ ಇರ್ಬೇಕು ಅನ್ನೋ ಜೀವಗಳಿಗೆ ದೇವ್ರು ಆಯಸ್ಸನ್ನೇ ಕೊಡಲ್ಲ ಎಂದು ಒಬ್ಬರು ಬರೆದಿದ್ದರೆ, ದೇವ್ರೆ ಹಂಗೂ ಯಾರನ್ನಾದರೂ ನಿನ್ ಹತ್ರ ಕರ್ಕೋಬೇಕು ಅನಿಸಿದ್ರೆ ಜೀವನ ಪೂರ್ತಿ ಜೋತೆಗಿರ್ತೀನಿ ಅಂತ ಹೇಳಿ ಅರ್ಧ ದಾರಿ ಕೈಬಿಟ್ಟು ನಂಬಿಸಿ ಮೋಸ ಮಾಡಿ ಹೋಗ್ತಾರಲ್ಲ ಅಂಥವರನ್ನ ಕರ್ಕೊಂಡು ಬಿಡು ದೇವ್ರೆ... ಅಪ್ಪು ಸಾರ್... ಚಿರಂಜೀವಿ ಸರ್ಜಾ... ಸ್ಪಂದನ ಮೇಡಂ ಅಂತ ಒಳ್ಳೆಯವರಿಗೆ ಆಯಸ್ಸು ಕೊಡು ಇನ್ನೊಬ್ಬರು ಹೇಳಿದ್ದಾರೆ. ಮದುವೆನೇ ಆಗಬಾರದು ಈ ಕಾಲದಲ್ಲಿ, ನಿಜವಾದ ಪ್ರೀತಿಗೆ ಬೇಲೇನೇ ಇಲ್ಲ ಎಂದು ಮತ್ತೊಬ್ಬರು ನೋವು ತೋಡಿಕೊಂಡಿದ್ದಾರೆ. 

ಒಳ್ಳೇ ಕಾಲ ಬಂದೈತೆ ಕಣ್ಲಾ! ಎನ್ನುತ್ತಲೇ ಕಾರಣ ಕೊಟ್ಟ 'ಪುಟ್ಟಗೌರಿ'.. ವೆರಿ ಟ್ರೂ ಎಂದ ಅಮೃತಧಾರೆ ಮಹಿಮಾ!

click me!