
‘ಇದು ನಮ್ಮ ಗೆಲುವುವಲ್ಲ, ಅಭಿಮಾನಿಗಳ ಯಶಸ್ಸು. ನಮ್ಮ ಮೇಲೆ ಇಷ್ಟುಪ್ರೀತಿ ತೋರಿಸಿ ಚಿತ್ರವನ್ನು ಯಶಸ್ಸು ಗೊಳಿಸಿದ್ದಾರೆ. ಇದೇ ಖುಷಿಯಲ್ಲಿ ಮತ್ತೊಂದು ಒಳ್ಳೆಯ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತೇನೆ’ ಎಂದು ಶ್ರೀಮುರಳಿ ಹೇಳಿಕೊಂಡರು. ನಿರ್ದೇಶಕ ಚೇತನ್ ಕುಮಾರ್ ಅವರು ರೋರಿಂಗ್ ಸ್ಟಾರ್ ಅಭಿಮಾನಿಗಳು ಕೊಟ್ಟಈ ಗೆಲುವಿನಿಂದ ಥ್ರಿಲ್ಲಾಗಿದ್ದರು.
‘ಚಿತ್ರದ ಹಾಡು, ದಶ್ಯಗಳ ಬಗ್ಗೆ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ಶ್ರೀಮುರಳಿ ಅವರ ವಯಸ್ಸಾದ ಪಾತ್ರಕ್ಕೆ ಎಲ್ಲರು ಬಹುಪರಾಕ್ ಹಾಕುತ್ತಿದ್ದಾರೆ. ಅದರಲ್ಲೂ ಶ್ರೀಮುರಳಿ ಅವರ ವಯಸ್ಸಾದ ರತ್ನಾಕರ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಅದೊಂದು ಸಪ್ರೈಸ್ ಆಗಿ ಎಲ್ಲರಿಗೂ ಕಂಡಿದೆ. ದೊಡ್ಡ ಮಟ್ಟದ ಯಶಸ್ಸು ಕಂಡ ಸಂಭ್ರಮ ನಮ್ಮದು’ ಎಂದರು ಚೇತನ್ ಕುಮಾರ್.
'ಭರಾಟೆ' ಅಚ್ಚರಿಗಳ ಮೂಟೆ; ಚಿತ್ರವನ್ನು ಯಾಕೆ ನೋಡಬೇಕು?
ಮೂವರು ಸೋದರರನ್ನು ಒಂದೇ ಚಿತ್ರದಲ್ಲಿ ನಟಿಸುವಂತೆ ಮಾಡಿದ ಸಿನಿಮಾ ಇದು. ಹೀಗಾಗಿ ನನ್ನ ಜೀವನದಲ್ಲಿ ಈ ಚಿತ್ರ ಮರೆಯಲಾಗದ ಕ್ಷಣ. ನಮ್ಮ ಪಾತ್ರಗಳಿಗೆ ನೋಡುಗರಿಂದ ಹಾಗೂ ಮಾಧ್ಯಮಗಳಲ್ಲಿ ಒಳ್ಳೆಯ ರೀತಿಯಲ್ಲಿ ಪ್ರಶಂಸೆಗಳು ಬರುತ್ತಿವೆ. ರವಿಶಂಕರ್, ಅಯ್ಯಪ್ಪ ಹಾಗೂ ನನ್ನ ಪಾಲಿಗೆ ಇದೊಂದು ಅಪರೂಪದ ಸಿನಿಮಾ ಎಂದಿದ್ದು ಸಾಯಿಕುಮಾರ್ ಅವರು. ‘ಸದ್ಯ 250 ಕೇಂದ್ರಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ.
ತೆರೆ ಕಂಡಿರುವ ಎಲ್ಲ ಚಿತ್ರಮಂದಿರಗಳಲ್ಲೂ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ರಾಜ್ಯದ ಕೆಲವು ಕಡೆ ಅತಿಯಾದ ಮಳೆ ಇದ್ದಾಗಲೂ ಗಳಿಕೆಗೆ ತೊಂದರೆ ಆಗಿಲ್ಲ’ ಎಂದು ನಿರ್ಮಾಪಕ ಸುಪ್ರೀತ್ ಹೇಳಿಕೊಂಡರು. ನಟಿ ತಾರಾ ಅವರಿಗೆ ಎಂದಿನಂತೆ ಇಲ್ಲೊಂದು ಪ್ರಭುದ್ಧವಾದ ಪಾತ್ರ ಸಿಕ್ಕಿರುವುದಕ್ಕೆ ಖುಷಿಗೊಂಡರು. ನಾಯಕಿ ಶ್ರೀಲೀಲಾ, ಮೋಹನ್, ಅಮಿತ್ ಅವರು ಚಿತ್ರದ ಯಶಸ್ಸಿನ ಕುರಿತು ಹೇಳಿಕೊಂಡರು. ಚಿತ್ರತಂಡದ ಮಾತುಕತೆಗೂ ಮುನ್ನವೇ ರತ್ನಾಕರ ಹಾಡಿನ ಜತೆಗೆ ಚಿತ್ರತಂಡ ಭೇಟಿ ಕೊಟ್ಟಚಿತ್ರಮಂದಿರಗಳ ದೃಶ್ಯಗಳನ್ನು ಪ್ರದರ್ಶಿಸಲಾಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.