ಮಾತೃಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು; ರಶ್ಮಿಕಾಗೆ ಧ್ರುವ ಸರ್ಜಾ ಟಾಂಗ್!

By Web DeskFirst Published Oct 25, 2019, 11:41 AM IST
Highlights

ನಟೋರಿಯಸ್‌ ಲುಕ್‌ನಲ್ಲಿ ರಶ್ಮಿಕಾಳಿಗೆ 'ಪೊಗರು' ತೋರಿಸುತ್ತ ತೆರೆ ಮೇಲೆ ಮಿಂಚಲು ಸಜ್ಜಾದ ಧ್ರುವ ಸರ್ಜಾ ಕೊಟ್ಟ ಟಾಂಗ್ ಡೈಲಾಗ್‌ಗೆ ಅಭಿಮಾನಿಗಳು ವಿಚಲಿತರಾಗಿದ್ದಾರೆ. ಇದು ರಿಯಲ್ ಲೈಫೋ ರೀಲ್‌ ಲೈಫೋ ಅಂತಾ ಕನ್ಫ್ಯೂಸ್ ಆಗಿದ್ದಾರೆ.

ಸ್ಯಾಂಡಲ್‌ವುಡ್ ಮಾಸ್ ಮ್ಯಾನ್ ಧ್ರುವ ಸರ್ಜಾ ವರ್ಷಗಳ ಕಾಲ 'ಪೊಗರು' ಚಿತ್ರದಲ್ಲಿ ತೊಡಗಿಸಿಕೊಂಡು ಈಗ ರಿಲೀಸ್‌ಗೆ ರೆಡಿಯಾಗಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಇಂಗ್ಲೀಷ್ ಟೀಚರ್ ಪಾತ್ರದಲ್ಲಿ ಮಿಂಚಿದ್ದಾರೆ.

ರಕ್ಷಿತ್ ಶೆಟ್ಟಿ VS ರಶ್ಮಿಕಾ ಮಂದಣ್ಣ, ಒಂದೇ ದಿನ ಧಮಾಕಾ!

'ಅಡ್ರಸ್ ತಿಳ್ಕೊಂಡು ಸರ್ವಿಸ್ ಮಾಡೋಕೆ ನಾನು ಕೊರಿಯರ್ ಹುಡುಗ ಏನೋ? ಫೈಟರ್. ಹೊಡೆದ್ರೆ ಯಾವನೂ ಅಡ್ರೆಸ್‌ ಗೂ ಸಿಗೋಲ್ಲ. ಹೋಗಿ ಅವನಿಗೆ ನನ್ನ ಅಡ್ರೆಸ್ ಹೇಳು' ಎಂದು ಸಾಲುದ್ದ ಪಂಚ್ ಡೈಲಾಗ್ ಹೇಳುತ್ತಾ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ.

ಪಟಾಕಿ ಅಂಟಿಸುತ್ತಿದ್ದ ಧ್ರುವಾಗೆ ರಶ್ಮಿಕಾ ಇಂಗ್ಲೀಷ್ ನಲ್ಲಿ ಮಾತನಾಡಿಸುತ್ತಾರೆ. ಅದಕ್ಕೆ ಧ್ರುವ 'ಇಂಗ್ಲೀಷೂ...? ಲೇ ಮಾತೃ ಭಾಷೆ.. ಮಾತೃಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು' ಎಂದು ರಶ್ಮಿಕಾಗೆ ಡೈಲಾಗ್ ಹೇಳುತ್ತಾರೆ.

ದೃವ ಸರ್ಜಾ ಹಿಂದಿದೆ ಈ ದೇವರ ಶಕ್ತಿ!

'ಪೊಗರು' ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾಳ ಭಾಷಾ ಕಾಳಜಿ ಬಗ್ಗೆ ಚರ್ಚೆ ಆಗುತ್ತಿತ್ತು. ಇದಕ್ಕೆ ನೆಟ್ಟಿಗನೊಬ್ಬ ಇದು ನಿಮ್ಮ ರಿಯಲ್ ಲೈಫ್‌ಗೂ ಅಳವಡಿಸಿಕೊಳ್ಳಿ. ಇನ್‌ಡೈರೆಕ್ಟ್‌ ಆಗಿ ಧ್ರುವ ಅಣ್ಣ ಹೇಳುತ್ತಿದ್ದಾರೆ ಅಂದಿದ್ದಕ್ಕೆ ರಶ್ಮಿಕಾ ಸ್ಟ್ರಾಂಗ್‌ ಆಗಿ ಉತ್ತರಿಸಿದ್ದಾರೆ.

 

'ಭಾಷೆ ಬಗ್ಗೆ ಜನರು ಮಾತನಾಡುತ್ತಿರುವುದಕ್ಕೆ ಚಿತ್ರದಲ್ಲಿ ಇದನ್ನು ಡೈಲಾಗ್‌ ಆಗಿ ಇಟ್ಟಿರುವುದು. ನಿಮ್ಮಂತವರು ಟ್ರೈಲರ್ ನೋಡಿ ರಶ್ಮಿಕಾಳ ಬಗ್ಗೆ ಮಾತನಾಡುತ್ತಿದ್ದೀರಾ ಅಂದ್ರೆ ನಾನು ಎದ್ದೆ ಎಂದರ್ಥ. ನಿಮ್ಮ ಸಮಯ ಕೊಟ್ಟು ನನ್ನ ಬಗ್ಗೆ ಯೋಚಿಸಿದ್ದಕ್ಕೆ ಥ್ಯಾಂಕ್ಸ್' ಎಂದು ಬರೆದುಕೊಂಡಿದ್ದಾರೆ.

 

We discussing about this dialogue right now is exactly why we kept it in the film.
Bunch of you are talking about Rashmika Mandanna (good or bad) in the trailer means I’ve won. 🤷🏻‍♀ thanks for your time and for thinking of me.♥

— Rashmika Mandanna (@iamRashmika)

click me!