
ಐರಾ ಫಿಲಮ್ಸ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ಶುರು ಮಾಡಿರುವ ಈ ಹೊಸ ಕಚೇರಿಯಿಂದ ಮುಂದೆ ಸಿನಿಮಾ ಕೂಡ ನಿರ್ಮಾಣ ಆಗಲಿವೆ ಎಂಬುದನ್ನು ಹೇಳಿಕೊಳ್ಳುವುದಕ್ಕೆ ರಿಶಿಕಾ ಶರ್ಮಾ ಮತ್ತವರ ತಂಡ ಮಾಧ್ಯಮಗಳ ಮುಂದೆ ಬಂತು. ಹೊಸ ಕಚೇರಿಯ ಉದ್ಘಾಟನೆ ಸಂಭ್ರಮದಲ್ಲಿ ತಮ್ಮ ಮುಂದಿನ ಕನಸುಗಳನ್ನು ರಿಶಿಕಾ ಹೇಳಿಕೊಂಡರು. ಇವರ ಈ ಸಾಹಸಕ್ಕೆ ನಟ ನಿಹಾಲ್ ಸಾಥ್ ನೀಡಿದ್ದಾರೆ.
ಬುದ್ಧಿವಂತ ವಸಿಷ್ಠ ಸಿಂಹ ಗೆಲ್ಲಬೇಕು: ಕಿಚ್ಚ ಸುದೀಪ್
ಒಂದು ವರ್ಷಗಳ ಕಾಲ ವಿತರಣೆ, ನಿರ್ಮಾಣ ಹಾಗೂ ಪ್ರದರ್ಶನದ ಕುರಿತಂತೆ ಸಂಶೋಧನೆ ನಡೆಸಿದ ನಂತರ ಈ ಹೊಸ ಸಂಸ್ಥೆಯನ್ನು ಆರಂಭಿಸಿದ್ದಾರಂತೆ. ಚಿತ್ರರಂಗಕ್ಕೆ ಇಂಥದ್ದೊಂದು ಸಂಸ್ಥೆ ಅಗತ್ಯವಿದೆ ಎಂಬುದು ರಿಶಿಕಾ ಅವರ ಮಾತು. ಪ್ರತಿಭೆ ಇರುವವರನ್ನು ಗುರುತಿಸಿ ಅವರನ್ನು ಬಳಸಿಕೊಳ್ಳುವುದು, ಕನ್ನಡ ಸೇರಿದಂತೆ ಇತರೆ ಭಾಷೆ ಚಿತ್ರಗಳ ಬಿಡುಗಡೆ ಜವಬ್ದಾರಿ, ಸಿನಿಮಾ ಮಾರ್ಕೆಟಿಂಗ್ ಹಾಗೂ ವಿತರಣೆ ಕೂಡ ಮಾಡುವುದಕ್ಕೆ ಐರಾ ಫಿಲಮ್ಸ್ ಮುಂದಾಗಲಿದೆಯಂತೆ.
ಕನ್ನಡ ಮೇಷ್ಟ್ರು ಕೈ ಹಿಡಿದ ದರ್ಶನ್!
ಈಗಾಗಲೇ 25 ಬರಹಗಾರರು ಈ ಸಂಸ್ಥೆಯಲ್ಲಿದ್ದು, ಇದರಲ್ಲಿ 10 ಮಂದಿ ಮಹಿಳೆಯರು ಇದ್ದಾರಂತೆ. ಅಲ್ಲದೆ ಸಂಸ್ಥೆಯು ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಸೇರಿದಂತೆ 140 ಟಾಕೀಸ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕತೆ, ಚಿತ್ರಕತೆ ಹಾಗೂ ನಿರ್ಮಾಣದ ಉಸ್ತುವಾರಿಯನ್ನು ರಿಶಿಕಾ ಶರ್ಮಾ ವಹಿಸಿಕೊಂಡರೆ, ನಿಹಾಲ್ ವಿತರಣೆ, ಆನ್‌ಲೈನ್ ಪ್ರಮೋಷನ್ ಕೆಲಸವನ್ನು ಮಾಡಲಿದ್ದಾರಂತೆ. ಸದ್ಯಕ್ಕೆ ಎರಡು ಚಿತ್ರಗಳು, ಒಂದು ಧಾರಾವಾಹಿ ಹಾಗೂ ವೆಬ್ ಸರಣಿ ನಿರ್ಮಾಣಕ್ಕೆ ಈ ತಂಡ ತಯಾರಿ ಮಾಡಿಕೊಂಡಿದೆ. ಮಾಜಿ ಸಚಿವ ಸಂತೋಷ್ ಲಾಡ್ ಐರಾ ಫಿಲಮ್ಸ್ ಕಚೇರಿಯನ್ನು ಉದ್ಘಾಟಿಸಿ, ಶುಭ ಕೋರಿದರು. ‘ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭೆಗಳು, ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡಲಿಚ್ಛಿಸುವವರು ನಮ್ಮ ಸಂಸ್ಥೆಯನ್ನು ಸಂಪರ್ಕಿಸಬಹುದು’ ಎಂಬುದು ರಿಶಿಕಾ ಶರ್ಮಾ ಅವರ ಮಾತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.