ನಮಸ್ತೆ ಅಪ್ಪ ನಮಸ್ತೆ ಅಪ್ಪ ಎಂದು ಚಿರು ಸಮಾಧಿ ಮುಂದೆ ಕಣ್ಣೀರಿಟ್ಟ ರಾಯನ್!

Published : Jun 07, 2023, 04:47 PM IST
ನಮಸ್ತೆ ಅಪ್ಪ ನಮಸ್ತೆ ಅಪ್ಪ ಎಂದು ಚಿರು ಸಮಾಧಿ ಮುಂದೆ ಕಣ್ಣೀರಿಟ್ಟ ರಾಯನ್!

ಸಾರಾಂಶ

ಚಿರು ಅಗಲಿ 3 ವರ್ಷ. ಸಮಾಧಿ ಪೂಜೆ ಸಲ್ಲಿಸಿದ ಕುಟುಂಬಸ್ಥರು. ಸೋಷಿಯಲ್ ಮೀಡಿಯಾದಲ್ಲಿ ರಾಯನ್ ವಿಡಿಯೋ ವೈರಲ್..... 

ಸ್ಯಾಂಡಲ್‌ವುಡ್ ಯುವ ನಟ ಚಿರಂಜೀವಿ ಸರ್ಜಾ ಜುನ್‌ 7, 2020ರಲ್ಲಿ ಅಗಲಿದರು. ಪರ್ಫೆಕ್ಟ್‌, ಫಿಟ್ ಆಂಡ್ ಫೈನ್ ಆಗಿದ್ದ ನಟ ಇದ್ದಕ್ಕಿದ್ದಂತೆ ಇನ್ನಿಲ್ಲ ಅನ್ನೋ ವಿಚಾರ ಕೇಳಿ ಇಡೀ ಚಿತ್ರರಂಗವೇ ಶಾಕ್ ಆಗಿಬಿಟ್ಟಿತ್ತು. ಎಲ್ಲಿ ನೋಡಿದರೂ ಚಿರು ಫೋಟೋ, ವಿಡಿಯೋ ಹಾಗೂ ಬ್ಯಾನರ್‌ಗಳು ಅಷ್ಟೇ ಅಲ್ಲ... ಸೋಷಿಯಲ್ ಮೀಡಿಯಾದಲ್ಲಿ #ಚಿರಂಜೀವಿಸರ್ಜಾ ಟ್ರೆಂಡಿಂಗ್‌ನಲ್ಲಿ ಇತ್ತು. ಅಷ್ಟರ ಮಟ್ಟಕ್ಕೆ ಪ್ರೀತಿ ಮತ್ತು ಗೌರವ ಪಡೆದ ವ್ಯಕ್ತಿ. ಇಂದು ಚಿರು ಅಗಲಿ 3 ವರ್ಷ ಕಳೆದಿದೆ. ಈ ದಿನ ಸಮಾಧಿ ಬಳಿ ವಿಷೇಶ ಪೂಜೆ ಸಲ್ಲಿಸಲಾಗಿದೆ. 

 ಧ್ರುವ ಸರ್ಜಾ ಹೊಂದಿರುವ ತೋಟದ ಮನೆಯಲ್ಲಿ ಚಿರು ಸಮಾಧಿ ಮಾಡಲಾಗಿತ್ತು. ಕುಟುಂಬಸ್ಥರು ಹಾಗೂ ಸ್ನೇಹಿತರು ವರ್ಷದ ಪೂಜೆಯಲ್ಲಿ ಭಾಗಿಯಾಗಿದ್ದು. ನಟ ದುನಿಯಾ ವಿಜಯ್ ಹಾಗೂ ಹಾಸ್ಯನಟ ಶಿವರಾಜ್‌ ಕೆಆರ್‌ ಪೇಟೆ ಕೂಡ ಭಾಗಿಯಾಗಿದ್ದರು. ಬಾಡೂಟ ವ್ಯವಸ್ಥೆ ಕೂಡ ತೋಟದ ಮನೆ ಬಳಿ ವ್ಯವಸ್ಥೆ ಮಾಡಲಾಗಿತ್ತು. ಮೇಘನಾ ರಾಜ್‌, ಪ್ರೇಮಿಳಾ ಜೋಶಾಯಿ ಮತ್ತು ಸುಂದರ್ ರಾಜ್ ಒಟ್ಟಿಗೆ ರಾಯನ್ ರಾಜ್‌ನ ಕರೆದುಕೊಂಡು ಬಂದರು. ಧ್ರುವ ಸರ್ಜಾ ಮತ್ತು ತಾಯಿ ಅಮ್ಮಾಜಿ ಜೊತೆ ಆಗಮಿಸಿದರು. ಚಿರು ಫೂಟೋಗೆ ಹೂ ಹಾಕಿದ ನಂತರ ಸಮಾಧಿ ಪೂಜೆ ಮಾಡಿದರು. 

ಈ ವೇಳೆ ತಂದೆ ಫೋಟೋ ಹೂ ಹಾಕಿದ ರಾಯನ್ ನಮಸ್ತೆ ಅಪ್ಪ ನಮಸ್ತೆ ಅಪ್ಪ ಎಂದು ಪದೇ ಪದೇ ಹೇಳುತ್ತಿದ್ದರು. ಈ ಕ್ಷಣವನ್ನು ಮಾಧ್ಯಮದವರು ಸೆರೆ ಹಿಡಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ರಾಯನ್ ಮುಗ್ಧ ಮನಸ್ಸು ಹಾಗೂ ತುಂಟಾಟ ನೆಟ್ಟಿಗರ ಗಮನ ಸೆಳೆದಿದೆ. ಈಗಷ್ಟೇ ಮಾತನಾಡಲು ಶುರು ಮಾಡಿರುವ ರಾಯನ್ ಮುದ್ದು ಮುದ್ದಾಗಿ ಮಾತನಾಡುತ್ತಿರುವುದನ್ನು ನೋಡಿ ಖುಷಿ ಪಟ್ಟಿದ್ದಾರೆ ಅದೇ ಸಮಯಕ್ಕೆ ತಂದೆ ಇಲ್ಲದೆ ಬೆಳೆಯುತ್ತಿದ್ದಾನೆ ಅನ್ನೋ ಸಂಕಟವಿದೆ. ತಂದೆ ಹಾಗೂ ತಾಯಿ ಡಬಲ್ ರೂಪ್ ಪ್ಲೇ ಮಾಡುತ್ತಿದ್ದಾರೆ ಮೇಘನಾ ರಾಜ್. 

ಶಾಲೆಗೆ ಕಾಲಿಟ್ಟ ರಾಯನ್ ಸರ್ಜಾ; ಭಾವುಕರಾದ ಮೇಘನಾ ರಾಜ್!

ಸಮಾಧಿ ಪೂಜೆ ಪುಟ್ಟ ನಾಯಿ ಮರಿ ಬಂದಿತ್ತು. ಪ್ರಾಣಿಗಳು ಅಂದ್ರೆ ರಾಯನ್‌ಗೆ ತುಂಬಾನೇ ಇಷ್ಟ ನಾಯಿಯನ್ನು ನೋಡಿ ಖುಷಿಯಾಗಿದ್ದಾನೆ. ಅದನ್ನು ಮುಟ್ಟಿ ಮುದ್ದಾಡಿ ಬಾಲ ಎಳೆದು ಖುಷಿ ಪಟ್ಟಿದ್ದಾರೆ. ಯಾರೇ ಬಂದು ಮಾತನಾಡಿದ್ದರೂ ಖುಷಿಯಿಂದ ಮಾತನಾಡಿಸಿ ಹೈ ಫೈ ಕೊಟ್ಟ ರಾಯನ್ ದಿನ ಎಂಜಾಯ್ ಮಾಡಿದ್ದಾರೆ. 

ಮೇಘನಾ ರಾಜ್ ವರ್ಕೌಟ್; ಜಿಮ್‌ನಲ್ಲಿ ರಾಯನ್ ತುಂಟಾಟ ನೋಡಿ...

ಈ ವರ್ಷ ರಾಯನ್ ರಾಜ್ ಸರ್ಜಾ ಸ್ಕೂಲ್‌ಗೆ ಕಾಲಿಟ್ಟಿದ್ದಾನೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ ಮೇಘನಾ 'ನಾವು ಪೋಷಕರಾದ ಮೇಲೆ ಮಕ್ಕಳು ಮಾತ್ರವಲ್ಲ ನಾವು ಕೂಡ ಜೀವನ ಪ್ರತಿಯೊಂದು ಮೈಲಿಗಲ್ಲು ದಾಟುತ್ತೀವಿ.ಇಂದು ನಮ್ಮ ಜೀವನದ ತುಂಬಾ ಸ್ಪೆಷಲ್ ದಿನವಾಗಿದೆ. ರಾಯನ್ ರಾಜ್ ಸರ್ಜಾ ಸ್ಕೂಲ್‌ನ ಮೊದಲ ದಿನ ಇಂದು. ನನ್ನ ಭಾವನೆಗಳನ್ನು ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ.ವಿದ್ಯಾಭ್ಯಾಸ, ಜ್ಞಾನ ಹಾಗೂ ಜೀವನ ಅತಿ ಅಮೂಲ್ಯವಾದ ಪಾಠಗಳನ್ನು ಕಲಿಯುವುದಕ್ಕೆ ರಾಯನ್ ಮೊದಲ ಹೆಜ್ಜೆ ಇಡುತ್ತಿದ್ದಾನೆ. ನಿಮ್ಮ ಆಶಿರ್ವಾದ ಮತ್ತು ಪ್ರೀತಿ ಅವನ ಮೇಲಿರಲ್ಲಿ ಎಂದು ಮೇಘನಾ ಬರೆದುಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಗಿಲ್ಲಿ-ರಕ್ಷಿತಾ ಗೆಲ್ಲೋದಕ್ಕೆ ಅಶ್ವಿನಿ ಗೌಡ ಕಾರಣ.. ಹಬ್ಬಿರುವ ಈ ಸುದ್ದಿಗೆ 'ಸಾಕ್ಷಿ' ಹೀಗಿದೆ ನೋಡಿ!
Salman Khan Sikandar: ಕೇಳಿದ್ದ ಕಥೆಯೇ ಬೇರೆ, ತೆರೆಯ ಮೇಲೆ ಬಂದಿದ್ದೇ ಬೇರೆ.. ರಶ್ಮಿಕಾ ಈ ಹೇಳಿಕೆ ವಿವಾದ ಆಗುತ್ತಾ?