ಲೀಗಲಾಗಿ 2ನೇ ಮದುವೆ ಆಗಿದ್ದೀನಿ ಇದು ನನ್ನ ವೈಯಕ್ತಿಕ ಜೀವನ: ನೆಟ್ಟಿಗರ ವಿರುದ್ಧ ಆಶಿಶ್ ವಿದ್ಯಾರ್ಥಿ ಗರಂ

Published : Jun 07, 2023, 12:25 PM IST
ಲೀಗಲಾಗಿ 2ನೇ ಮದುವೆ ಆಗಿದ್ದೀನಿ ಇದು ನನ್ನ ವೈಯಕ್ತಿಕ ಜೀವನ: ನೆಟ್ಟಿಗರ ವಿರುದ್ಧ ಆಶಿಶ್ ವಿದ್ಯಾರ್ಥಿ ಗರಂ

ಸಾರಾಂಶ

ಒಬ್ಬರಿಗೆ ಸಂಗಾತಿ ಬೇಕೆನಿಸಿದರೆ ತಪ್ಪೇನು ಇಲ್ಲ. ಎರಡನೇ ಮದುವೆ ಬಗ್ಗೆ ಆಶಿಶ್ ವಿದ್ಯಾರ್ಥಿ ರಿಯಾಕ್ಷನ್

ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಕೆಲವು ದಿನಗಳ ಹಿಂದೆ 2ನೇ ಮದುವೆ ಮಾಡಿಕೊಂಡರು. 57 ವರ್ಷದ ನಟನಿಗೆ 22 ವರ್ಷ ಹುಡುಕಿ ಬೇಕಾ? ಮೊದಲ ಹೆಂಡತಿ ಏನು ಪಾಪ ಮಾಡಿದ್ದರು? ವಯಸ್ಸಿಗೆ ಬೆಲೆ ಬೇಡ್ವಾ, ವಯಸ್ಸಾದವರು ಮದುವೆ ಮಾಡಿಕೊಂಡರೆ ನಾವು ಏನು ಮಾಡಬೇಕು ಹಾಗೆ ಹೀಗೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಏನ್ ಏನೋ ಕಾಮೆಂಟ್‌ಗಳು ಹರಿದಾಡುತ್ತಿದೆ ಟ್ರೋಲ್ ಅಗುತ್ತಿದೆ. ಟ್ರೋಲ್‌ಗಳ ಬಗ್ಗೆ ಆಶಿಶ್ ರಿಯಾಕ್ಟ್‌ ಮಾಡಿದ್ದಾರೆ. 

'ನಾನು ಬೂದ, ಖುಸಾತ್ ಮತ್ತು ಇನ್ನೂ ಅನೇಕ ಅವಹೇಳನಕಾರಿ ಪದಗಳನ್ನು ಓದಿದೆ. ಈ ರೀತಿ ಮಾತನಾಡುತ್ತಿರುವುದು ಕಾಮೆಂಟ್ ಮಾಡುತ್ತಿರುವುದರಲ್ಲಿ ಏನು ಇಂಟ್ರೆಸ್ಟಿಂಗ್ ವಿಚಾರವಿದೆ ಅಂದ್ರೆ ವಯಸ್ಸಾದ ಮೇಲೆ ಜೀವನ ಹೀಗಿರುತ್ತದೆ ನೀವು ವಯಸ್ಸಾಗ ಮೇಲೆ ಯಾವ ರೀತಿ ನಡೆದುಕೊಳ್ಳುತ್ತೀರಾ ಎಂದು ತೋರಿಸುತ್ತದೆ. ನಮಗೆ ನಾವೇ ಹೇ ನೋಡು ನಿನಗೆ ವಯಸ್ಸಾಗಿದೆ ಈ ರೀತಿ ಮಾಡಬಾರದು ಹಾಗೆ ಮಾಡಬಾರದು ಎಂದು ಹೇಳಿಕೊಳ್ಳುತ್ತಿದ್ದೀವಿ. ಈ ಜನರ ಮಾತಿನ ಪ್ರಕಾರ ನಾವು ಖುಷಿ ಇಲ್ಲ ಬೇಸರದಲ್ಲಿ ಸಾಯಬೇಕಾ? ಒಬ್ಬರಿಗೆ ಸಂಗಾತಿ ಬೇಕು ಜೊತೆಯಲ್ಲಿ ಒಬ್ಬರಿರ ಬೇಕು ಅಂದ್ರೆ ತಪ್ಪೇನು? ಯಾಕೆ ಇರಬಾರದು?' ಎಂದು ಇಂಡಿಯಾ ಟುಡೇ ಸಂದರ್ಶನದಲ್ಲಿ ಆಶಿಶ್ ಮಾತನಾಡಿದ್ದಾರೆ.

ಆಶಿಶ್ ವಿದ್ಯಾರ್ಥಿ ಮದುವೆಯಾಗಿರುವ ರೂಪಾಲಿ ಬರುವಾ ಯಾರಿದು?

ಎರಡನೇ ಮದುವೆ ನಂತರ ಇನ್‌ಸ್ಟಾಗ್ರಾಂನಲ್ಲಿ ಆಶಿಶ್ ಕೆಲವೊಂದು ವಿಚಾರಗಳನ್ನು ತಿಳಿಸಿದರು ಕೆಲವೊಂದಕ್ಕೆ ಸ್ಪಷ್ಟನೆ ಕೊಟ್ಟಿದ್ದರೂ ಪದೇ ಪದೇ ಜನರು ಪ್ರಶ್ನೆ ಮಾಡುವುದಕ್ಕೆ ಕಾಲರಿಟಿ ಕೊಟ್ಟಿದ್ದಾರೆ. 'ಅದೆಷ್ಟೋ ವಿಚಾರಗಳಲ್ಲಿ ನಮಗೆ ನಾವೇ ಗೋಡೆ ಕಟ್ಟಿಕೊಳ್ಳುತ್ತಿದ್ದೀವಿ. ಗೆರೆ ಎಳೆದುಕೊಂಡು ಜೀವನ ನಡೆಸುತ್ತಿದ್ದೀವಿ..ನಾನು ಲೀಗಲ್ ಆಗಿ ಕೆಲಸ ಮಾಡುತ್ತಿರುವ ಸರಿಯಾದ ಸಮಯಕ್ಕೆ ಟ್ಯಾಕ್ಸ್‌ ಕಟ್ಟುವೆ ವಯಸ್ಸಾಗಿದ್ದರೂ ಶ್ರಮದಿಂದ ಕೆಲಸ ಮಾಡುತ್ತಿರುವೆ. ಒಬ್ಬ ವ್ಯಕ್ತಿ ವೈಯಕ್ತಿಕ ನಿರ್ಧಾರ ಮಾಡುತ್ತಿದ್ದಾರೆ ಜೀವನದಲ್ಲಿ ಖುಷಿಯಾಗಿರ ಬೇಕು ಸಂಸಾರ ಕಟ್ಟಬೇಕು ಎಂದು ಕುಟುಂಬಸ್ಥರ ಸಮ್ಮುಖದಲ್ಲಿ ಲೀಗಲ್ ಆಗಿ ಮದುವೆ ಮಾಡಿಕೊಳ್ಳುತ್ತಿರುವೆ. ಈ ರೀತಿ ವಿಚಾರಗಳನ್ನು ಒಬ್ಬರನ್ನೊಬ್ಬರು ಸಪೋರ್ಟ್ ಮಾಡಬೇಕು ತುಳಿಯಬಾರದು. ಜನರು ಟ್ರೋಲ್ ಮತ್ತು ಕಾಮೆಂಟ್‌ಗಳನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ನನಗೆ ಇದೊಂದು ಬಿಗ್ ಶಾಕ್ ಕೊಟ್ಟಿದೆ' ಎಂದು ಆಶಿಶ್ ಹೇಳಿದ್ದಾರೆ. 

'ನಾವೆಲ್ಲರೂ ಸಂತೋಷವಾಗಿ ಇರಲು ಬಯಸುತ್ತೇವೆ. 22 ವರ್ಷಗಳ ಹಿಂದೆ ಪಿಲೂ ಮತ್ತು ನಾನು ಭೇಟಿಯಾದೆವು ಬಳಿಕ ಮದುವೆ ಆದೆವು ಅದ್ಭುತವಾಗಿತ್ತು. ನಮಗೆ ಈಗ 22 ವರ್ಷದ ಅರ್ಥ್ ಎನ್ನುವ ಮಗನಿದ್ದಾನೆ. ಈಗ ಕೆಲಸ ಮಾಡುತ್ತಿದ್ದಾನೆ. ಆದರೆ ಕಳೆದ ಎರಡು ವರ್ಷಗಳಿಂದ ಪಿಲೂ ಮತ್ತು ನಾನು ಭವಿಷ್ಯವನ್ನು ವಿಭಿನ್ನವಾಗಿ ನೋಡಿದ ಕಾರಣ ಪರಸ್ಪರ ವಿಭಿನ್ನವಾಗಿದೆ ಎಂದು ನಾವು ಭಾವಿಸಿದೆವು. ಅದು ಸಂತೋಷವನ್ನು ಕಸಿದುಕೊಳ್ಳುತ್ತದೆ. ಸಂತೋಷ ನಮಗೆ ಬೇಕು ತಾನೆ?' ಎಂದಿದ್ದಾರೆ ಆಶಿಶ್.

ಆಶಿಶ್ ವಿದ್ಯಾರ್ಥಿ-ರೂಪಾಲಿ ಬರುವಾ ಮದುವೆ Exclusive ಫೋಟೋಸ್‌

'ನಾನು ಮತ್ತೆ ಮದುವೆಯಾಗಲು ಬಯಸಿದೆ. ಯಾಕೆಂದರೆ ನಾನು ಯಾರ ಜೊತೆಗಾದ್ರು ಪಯಣ ಮಾಡಲು ಬಯಸುತ್ತೇನೆ ಎಂದು ನನಗೆ ದೃಢವಾದ ನಂಬಿಕೆ ಇತ್ತು. ನಾನು ಆ ಸಮಯದಲ್ಲಿ 55 ವರ್ಷ ವಯಸ್ಸಿನವನಾಗಿದ್ದೆ. ಆಗ ನಾನು ಯಾರನ್ನಾದರೂ ಮದುವೆಯಾಗಲು ಬಯಸಿದೆ. ಆಗ ನಾನು ರೂಪಾಲಿ ಬರುವಾ ಅವರನ್ನು ಭೇಟಿ ಮಾಡಿದೆ. ಇಬ್ಬರೂ ಚಾಟಿಂಗ್ ಬಳಿಕ ವರ್ಷದ ಹಿಂದೆ ಭೇಟಿಯಾದೆವು. ನಾವು ಗಂಡ-ಹೆಂಡತಿಯಾಗಿ ಒಟ್ಟಿಗೆ ನಡೆಯಬಹುದೆಂದು ಅರಿತು ಕೊಂಡೆವು. ಹಾಗಾಗಿ ನಾನು ಮತ್ತು ರೂಪಾಲಿ ಮದುವೆಯಾದೆವು. ಆಕೆಗೆ 50 ವರ್ಷ. ನನ್ನ ವಯಸ್ಸು 57. ವಯಸ್ಸು ಮ್ಯಾಟರ್ ಆಗಲ್ಲ. ನಾವು ಸಂತೋಷವಾಗಿರುವುದು ಮುಖ್ಯ. ವಯಸ್ಸು ಏನೇ ಇರಲಿ, ಗೊರವದಿಂದ ಮುಂದೆ ಸಾಗೋಣ' ಎಂದು ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್