
ಸ್ಯಾಂಡಲ್ ವುಡ್ ನಟ, ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ನಿಧನಹೊಂದಿ ಎರಡು ವರ್ಷಗಳಾಗಿದೆ. ಜೂನ್ 7, 2020 ಚಿರು ಹಠಾತ್ ನಿಧನ ಅಭಿಮಾನಿಗಳಿಗೆ, ಕುಟುಂಬಕ್ಕೆ ಇಡೀ ಚಿತ್ರರಂಗಕ್ಕೆ ಭರಸಿಡಿಲು ಬಡಿದಂತೆ ಆಗಿತ್ತು. ಹೃದಯಘಾತದಿಂದ ಚಿರಂಜೀವಿ ಸರ್ಜಾ ಜೀವಬಿಟ್ಟಿದ್ದರು. ಮದುವೆಯಾಗಿ ವರ್ಷದೊಳಗೆ ಪತಿಯನ್ನು ಕಳೆದುಕೊಂಡ ಮೇಘನಾ ರಾಜ್ ಅದೇ ನೋವಿನಲ್ಲೇ ಜೀವನ ಸಾಗಿಸುತ್ತಿದ್ದಾರೆ. ಚಿರು ಇಲ್ಲ ಎನ್ನುವ ಸತ್ಯವನ್ನು ಇನ್ನೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಘನಾ ಸದ್ಯ ಮುದ್ದಾದ ಮಗನ ಜೊತೆ ಜೀವನ ನಡೆಸುತ್ತಿದ್ದಾರೆ.
ಇಂದು (ಜೂನ್ 7) ಚುರಂಜೀವಿ ಸರ್ಜಾ ಅವರ 3ನೇ ಪುಣ್ಯತಿಥಿ. ಚಿರಂಜೀವಿ ನಿಧನಹೊಂದಿ ಮೂರು ವರ್ಷಗಳು ಕಳೆದಿದೆ. ಆದರೆ ಆ ನೋವು ಇನ್ನೂ ಎಂದಿಗೂ ವಾಸಿಯಾಗುವಂತದ್ದು ಅಲ್ಲ. ಚಿರು ನೆನಪಲ್ಲೇ ಜೇವನ ನಡೆಸುತ್ತಿದ್ದಾರೆ ಮೇಘನಾ. ಇಂದು ಪುಣ್ಯತಿಥಿಯ ದಿನ ಮೇಘನಾ ಪತಿಯ ಜೊತೆಗಿನ ಸುಂದರ ಫೋಟೋ ಶೇರ್ ಮಾಡಿ ಪತಿಯ ಬಗ್ಗೆ ಭಾವುಕ ಸಾಲು ಬರೆದಿದ್ದಾರೆ.
ಪತಿ ಚಿರಂಜೀವಿ ಸರ್ಜಾ ಅವರನ್ನು ಹಿಂದೆಯಿಂದ ತಬ್ಬಿಕೊಂಡು ನಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. 'ನನ್ನ ಪಾಲಿನ ನಿನ್ನೆ, ಇಂದು ಮತ್ತು ಭವಿಷ್ಯವೂ ನೀನೇ' ಎಂದು ಬರೆದಿದ್ದಾರೆ. ಮೇಘನಾ ಪೋಸ್ಟ್‌ಗೆ ಅಭಿಮಾನಿಗಳು ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಶಾಲೆಗೆ ಕಾಲಿಟ್ಟ ರಾಯನ್ ಸರ್ಜಾ; ಭಾವುಕರಾದ ಮೇಘನಾ ರಾಜ್!
ಚಿರಂಜೀವಿ ನಿಧನಹೊಂದಿದಾದ ಮೇಘನಾ ಮೇಘನಾ ಗರ್ಭಿಣಿ. ಪತಿಯನ್ನು ಕಳೆದುಕೊಂಡು ಕೆಲವೇ ತಿಂಗಳಿಗೆ ಗಂಡುಮಗುವಿಗೆ ಜನ್ಮ ನೀಡಿದರು. ದುಃಖದಲ್ಲಿದ್ದ ಮೇಘನಾ ಬದುಕಿಗೆ ಮಗ ಸಂತೋಷವನ್ನು ಹೊತ್ತು ತಂದಿದ್ದಾನೆ. ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ್ದಾರೆ. ಈಗಾಗಲೇ ಮಗನಿಗೂ 3 ವರ್ಷ ತುಂಬಿದ್ದು ಶಾಲಿಗೆ ಹೋಗುತ್ತಿದ್ದಾನೆ. ಇತ್ತೀಚಿಗಷ್ಟೆ ಮೇಘನಾ ಮಗನ ಶಾಲೆಯ ಎಂಟ್ರಿ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದರು. ಮೇಘನಾ ಸದಾ ಪುತ್ರನ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ರಾಯನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ತಾಯಿಯಂತೆ ಮಗ ಕೂಡ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದಾನೆ.
ಮೇಘನಾ ರಾಜ್ ಕೈಯಲ್ಲಿ ಬಾಟಲಿಗಳು ಪೀಸ್ ಪೀಸ್, ಪಾತ್ರೆಗಳು ಪುಡಿಪುಡಿ: ಆಗಿದ್ದೇನು?
ಮೇಘನಾ ಸದ್ಯ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಹೊಸ ಸಿನಿಮಾ ಮುಗಿಸಿದ್ದಾರೆ. ಚಿತ್ರಕ್ಕೆ ತತ್ಸಮ ತದ್ಭವ ಎಂದು ಟೈಟಲ್ ಇಡಲಾಗಿದ್ದು ಪೋಸ್ಟರ್‌ಗಳು ಗಮನ ಸೆಳೆಯುತ್ತಿವೆ. ಸದ್ಯದಲ್ಲೇ ಮೇಘನಾ ತೆರೆಮೇಲೆ ಬರಲಿದ್ದಾರೆ. ಮೇಘನಾ ಅವರನ್ನು ಮತ್ತೆ ತೆಮೇಲೆ ನೋಡಿ ಅಭಿಮಾನಿಗಳು ಸಂತಸ ಪಡಲಿದ್ದಾರೆ. ಮತ್ತಷ್ಟು ಸಿನಿಮಾಗಳನ್ನು ಮಾಡಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.