ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣದ ಫೋಟೋಗಳು ಇಲ್ಲಿವೆ!
ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರು ಇತ್ತೀಚೆಗೆ ಮಗನ ನಾಮಕರಣ ಶಾಸ್ತ್ರ ಮಾಡಿದರು. ಅಂಬಿ ಮಗನಿಗೆ ‘ರಾಣಾ ಅಭಿಷೇಕ್ ಅಮರ್’ ಎಂದು ಹೆಸರು ಇಡಲಾಗಿದೆ. ಈಗ ಅವಿವಾ ಅವರು ಸೋಶಿಯಲ್ ಮೀಡಿಯಾದಲ್ಲಿ ಮಗನ ನಾಮಕರಣ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಂಬಿ ಮೊಮ್ಮಗನ ನಾಮಕರಣ!
ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ ಅವರು ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಅವಿವಾ ಅವರು ರೇಷ್ಮೆ ಸೀರೆ ಉಟ್ಟು, ಬಹಳ ಸರಳವಾಗಿ, ಸುಂದರವಾಗಿ ಕಂಡಿದ್ದಾರೆ. ಇನ್ನು ಅಭಿಷೇಕ್ ಕೂಡ ರೇಷ್ಮೆ ಪಂಚೆ, ಶರ್ಟ್ ಧರಿಸಿದ್ದರು, ಸುಮಲತಾ ಅವರು ಮೊಮ್ಮಗನ ನಾಮಕರಣ ಎಂದು ಸುಂದರವಾಗಿ ರೆಡಿಯಾಗಿದ್ದರು.
ಸ್ಟಾರ್ ಸಿನಿಮಾಗಳಿಗೆ ನಿರ್ಮಾಪಕರೇ ಇಲ್ಲ: ಇವೆಲ್ಲಾ ಸರಿ ಹೋಗುವುದು ಯಾವಾಗ?
ಕಿಚ್ಚ ಸುದೀಪ್ ವಿಶೇಷ ಗಿಫ್ಟ್!
ಬೆಂಗಳೂರಿನ ಪ್ರತಿಷ್ಠಿತ ಜೆ ಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‌ನಲ್ಲಿ ಈ ಶುಭ ಕಾರ್ಯ ನಡೆದಿದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು, ಅಂಬಿ ಕುಟುಂಬದ ಆಪ್ತರು ಭಾಗವಹಿಸಿದ್ದರು. ನಟ ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿ ಈ ಕಾರ್ಯಕ್ರಮಕ್ಕೆ ಆಗಮಿಸಿ, ಪುಟಾಣಿ ಕಂದನಿಗೆ ಶುಭ ಹಾರೈಸಿದ್ದಾರೆ. ಖಾಸಗಿಯಾಗಿ ಈ ಕಾರ್ಯಕ್ರಮ ನಡೆದಿತ್ತು, ಅಂದಹಾಗೆ ಕಿಚ್ಚ ಸುದೀಪ್ ಅವರು ಅಂಬಿ ಮೊಮ್ಮಗನಿಗೆ ಗೊಂಬೆಗಳೇ ತುಂಬಿರುವ ಸುಂದರವಾದ ಗಿಫ್ಟ್ ಹ್ಯಾಂಪರ್ ನೀಡಿದ್ದರು.
ಅಭಿಷೇಕ್ ಅಂಬರೀಶ್ ಹೊಸ ಸಿನಿಮಾ ಯಾವುದು ಗೊತ್ತಾ ? ಜಾನ್ವಿ ಕಪೂರ್ ಕನ್ನಡಕ್ಕೆ ಬರ್ತಾರಾ ?
ಅಂಬಿ ಮೊಮ್ಮಗನ ಹೆಸರಿನ ಅರ್ಥ ಏನು?
ಅಭಿಷೇಕ್ ಅವರು ಮಗನಿಗೆ ಏನು ಹೆಸರು ಇಡಬಹುದು ಅಂತ ಅನೇಕರು ಕುತೂಹಲದಿಂದ ಕಾದಿದ್ದರು. ‘ರಾಣಾ ಅಮರ್ ಅಂಬರೀಶ್’ ಎಂದು ಹೆಸರು ಇಡಲಾಗಿದೆ. ಪರ್ಷಿಯನ್ ಶಬ್ದದಲ್ಲಿ ರಾಣಾ ಎಂದರೆ ಕಾಂತಿಯುತ, ಹೊಳೆಯುವ ಎಂದರ್ಥ. ಅಂಬರೀಶ್ ಅವರ ಮೊದಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರ್‌ನಾಥ್ ಎಂದು. ಹೀಗಾಗಿ ಅಮರ್ ಹೆಸರನ್ನು ಕೂಡ ಅಲ್ಲಿ ಸೇರಿಸಲಾಗಿದೆ. ಒಟ್ಟಾರೆಯಾಗಿ ‘ರಾಣಾ ಅಮರ್ ಅಂಬರೀಶ್’ ಎಂದು ಹೆಸರಿಡಲಾಗಿದೆ.
ಯಶ್, ದರ್ಶನ್ ಗೈರು!
ಸುಮಲತಾ ಅವರಿಗೆ ‘ಮದರ್ ಇಂಡಿಯಾ’ ಎಂದು ಕರೆದು, ಅವರ ಮನೆಯ ಎಲ್ಲ ಕಾರ್ಯಕ್ರಮಗಳಲ್ಲೂ ಹಾಜರಿ ಹಾಕುತ್ತಿದ್ದ ದರ್ಶನ್, ಯಶ್ ಅವರು ಈ ನಾಮಕರಣಕ್ಕೆ ಆಗಮಿಸಿರಲಿಲ್ಲ. ದರ್ಶನ್ ಅವರು ‘ದಿ ಡೆವಿಲ್’ ಸಿನಿಮಾ ಶೂಟಿಂಗ್ ಕಡೆ ಮುಖ ಮಾಡಿದ್ದರೆ, ಯಶ್ ಕೂಡ ‘ಟಾಕ್ಸಿಕ್’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದರು ಎನ್ನಲಾಗಿದೆ. ಇನ್ನು ಯಶ್ ಪತ್ನಿ ರಾಧಿಕಾ ಪಂಡಿತ್ ಆಗಲೀ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಆಗಲೀ ಈ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ.
ಮದರ್ ಇಂಡಿಯಾಗೆ ಗೇಟ್‌ಪಾಸ್ ನೀಡಿದ ಕೊಲೆ ಆರೋಪಿ ದರ್ಶನ್, ಸುಮಲತಾ ಪೋಸ್ಟ್ ಹಿಂದಿನ ರಹಸ್ಯವೇನು?
ದರ್ಶನ್ ಇನ್‌ಸ್ಟಾಗ್ರಾಮ್ ಕಥೆ ಏನು?
ಇತ್ತೀಚೆಗಷ್ಟೇ ನಟ ದರ್ಶನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ, ಪುತ್ರ ನಿವೀಶ್ ಅವರನ್ನೂ ಕೂಡ ಅನ್‌ಫಾಲೋ ಮಾಡಿದ್ದರು. ಸುಮಲತಾ ಕುಟುಂಬದ ಮೇಲೆ ಮುನಿಸಿಕೊಂಡು ದರ್ಶನ್ ಈ ರೀತಿ ಮಾಡಿದರಾ ಎನ್ನುವ ಪ್ರಶ್ನೆ ಎದ್ದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸುಮಲತಾ, “ನನ್ನನ್ನು ಸೇರಿ ಮಗ ವಿನೀಶ್ ಅವರನ್ನು ಕೂಡ ದರ್ಶನ್ ಅವರು ಅನ್‌ಫಾಲೋ ಮಾಡಿದ್ದಾರೆ. ಇದು ದರ್ಶನ್ ಅವರ ವೈಯಕ್ತಿಕ ವಿಷಯ. ಬೇರೆ ಏನೂ ಗಾಸಿಪ್ ಹಬ್ಬಿಸಬೇಡಿ. ನಾನು ಹಾಕುವ ಸ್ಟೇಟಸ್‌ಗಳಿಗೂ, ದರ್ಶನ್‌ಗೂ ಸಂಬಂಧ ಕಲ್ಪಿಸಬೇಡಿ” ಎಂದು ಹೇಳಿದ್ದರು.