ಯಶ್ ಉತ್ತರಕ್ಕೆ ಶಾಕ್ ಆದ ನಿರೂಪಕ. ಎಲ್ಲೇ ಹೋದರ ನಮ್ಮ ಕರ್ನಾಟಕವನ್ನು ಬಿಟ್ಟು ಕೊಡದೆ ರಾಖಿ..............
ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್, ಪ್ಯಾನ್ ಇಂಡಿಯಾ ಕೆಜಿಎಫ್ ಚಿತ್ರದ ಕಿಂಗ್ ಹಾಗೂ ಈಗ ಟಾಕ್ಸಿಕ್ ಅಂಗಳಕ್ಕೆ ಕಾಲಿಡುವ ಯಶ್ ಹಿಂದೆ ನೀಡಿದ ಸಂದರ್ಶನವೊಂದ ಸಖತ್ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಯಶ್ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ, ಆದರೆ ನೀಡಿದ ಅಷ್ಟೂ ಸಂದರ್ಶನಗಳು ಎವರ್‌ಗ್ರೀನ್ ರೀತಿಯಲ್ಲಿ ವೈರಲ್ ಆಗುತ್ತದೆ. ಹಾಗೆಯೇ ಯಶ್‌ಗೆ ಪ್ರಶ್ನೆ ಕೇಳಿದ ನಾರ್ಥ್ ಇಂಡಿಯಾ ನಿರೂಪಕನೇ ಶಾಕ್ ಆಗುವಂತ ಉತ್ತರ ಕೊಟ್ಟಿದ್ದಾರೆ.
ಹೌದು! ಈ ಹಿಂದೆ ಯಶ್ ಕೆಜಿಎಫ್ 2 ಸಮಯದಲ್ಲಿ ಬಾಲಿವುಡ್ ಕಡೆ ಮುಖ ಮಾಡಿದ್ದರು. ಸಿನಿಮಾ ಪ್ರಚಾರದ ವೇಳೆ ಸಾಕಷ್ಟು ಸಂದರ್ಶನಗನ್ನು ನೀಡಿದ್ದಾರೆ. ಆಗಲೂ ತಮ್ಮ ಕನ್ನಡ ಭಾಷೆ, ಕರ್ನಾಟಕದ ಆಹಾರ ಮತ್ತು ಕನ್ನಡಿಗರ ಪ್ರೀತಿಯನ್ನು ಎತ್ತಿಡಿದಿದ್ದಾರೆ. ರಾಪಿಡ್ ಫಯರ್ ರೌಂಡ್‌ನಲ್ಲಿ ನಿಮಗೆ ದೋಸೆ ಇಷ್ಟನಾ ಅಥವಾ ಇಡ್ಲಿ ಇಷ್ಟನಾ ಎಂದು ನಿರೂಪಕ ಪ್ರಶ್ನೆ ಮಾಡುತ್ತಾರೆ. ಆಗ ಯಶ್ 'ನನಗೆ ರಾಗಿ ಮುದ್ದೆ ಅಂದ್ರೆ ತುಂಬಾ ಇಷ್ಟ. ಅದು ನಮ್ಮ ಕರ್ನಾಟಕದ ಆಹಾರ' ಎಂದು ಉತ್ತರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ.
ಕೊನೆವರೆಗೂ ಅಪ್ಪಾಜಿ ಅವ್ರ ಸೊಂಟದ ಅಳತೆ 32 ಇತ್ತು, ಅವರ ಫಿಟ್ನೆಸ್‌ಗೆ ನಾನು ಫ್ಯಾನ್ಸ್: ಪುನೀತ್ ಹಳೆ ವಿಡಿಯೋ ವೈರಲ್
ಎಷ್ಟೇ ಎತ್ತರಕ್ಕೆ ಬೆಳೆದರೂ ಕರ್ನಾಟಕವನ್ನು ಬಿಟ್ಟು ಕೊಡದ ಕಾರಣವೇ ನಿಮ್ಮನ್ನು ಇಷ್ಟು ದೊಡ್ಡಮಟ್ಟಕ್ಕೆ ದೇವರು ಬೆಳೆಸಿರುವುದು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಯಶ್‌ಗೆ ಅಮ್ಮ ಮಾಡುವ ಅಡುಗೆ ಅಂದ್ರೆ ಸಿಕ್ಕಾಪಟ್ಟೆ ಇಷ್ಟಂತೆ. ರಾಧಿಕಾ ಪಂಡಿತ್ ತಾಯಿ ಮನೆ ಕಡೆ ಮಾಡುವ ಅಡುಗೆ ಶೈಲಿ ಬೇರೆ ಆದರೂ ಯಶ್‌ಗೋಸ್ಕರ ರಾಗಿ ಮುದ್ದು ಮಾಡುವುದನ್ನು ಕಲಿತಿದ್ದಾರೆ ಎಂದು ಯಶ್ ತಾಯಿ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದರು. ರಾಧಿಕಾ ಪಂಡಿತ್‌ಗೆ ಬೇಕಿಂಗ್ ಮಾಡುವುದು ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಯಶ್ ಹುಟ್ಟುಹಬ್ಬ, ಮಕ್ಕಳ ಹುಟ್ಟುಹಬ್ಬ ಏನೇ ಇರಲಿ ಕೈಯಾರೆ ಕೇಕ್ ರೆಡಿ ಮಾಡುತ್ತಾರೆ. ಮಕ್ಕಳಿಗೆ ಸಣ್ಣ ಪುಟ್ಟ ಹೇಳಿಕೊಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ.
ಮುಖಕ್ಕೆ ಹೊಡೀತೀನಿ ಇದು ನಾನು ಕೊಡ್ತಿರೋ ವಾರ್ನಿಂಗ್; ಶಿಶಿರ್-ಐಶ್ವರ್ಯಗೆ ವಾರ್ನಿಂಗ್ ಕೊಟ್ಟ ಒಳ್ಳೆ ಹುಡುಗ ಪ್ರಥಮ್