ಕೊನೆವರೆಗೂ ಅಪ್ಪಾಜಿ ಅವ್ರ ಸೊಂಟದ ಅಳತೆ 32 ಇತ್ತು, ಅವರ ಫಿಟ್ನೆಸ್‌ಗೆ ನಾನು ಫ್ಯಾನ್ಸ್: ಪುನೀತ್ ಹಳೆ ವಿಡಿಯೋ ವೈರಲ್

Published : Mar 18, 2025, 10:24 AM ISTUpdated : Mar 18, 2025, 10:25 AM IST
ಕೊನೆವರೆಗೂ ಅಪ್ಪಾಜಿ ಅವ್ರ ಸೊಂಟದ ಅಳತೆ 32 ಇತ್ತು, ಅವರ ಫಿಟ್ನೆಸ್‌ಗೆ ನಾನು ಫ್ಯಾನ್ಸ್: ಪುನೀತ್ ಹಳೆ ವಿಡಿಯೋ ವೈರಲ್

ಸಾರಾಂಶ

ಡಾ. ರಾಜ್‌ಕುಮಾರ್ ಅವರ ಜನಪ್ರಿಯತೆ ಅಪಾರವಾಗಿತ್ತು. ಅವರ ಶೈಲಿ, ಮಾತು, ಫಿಟ್‌ನೆಸ್‌ನ್ನು ಅಭಿಮಾನಿಗಳು ಅನುಸರಿಸುತ್ತಿದ್ದರು. ಪುನೀತ್, ತಂದೆಯೊಂದಿಗೆ ಹೆಚ್ಚು ಸಮಯ ಕಳೆದರು. ರಮೇಶ್ ಕಾರ್ಯಕ್ರಮದಲ್ಲಿ, ಪುನೀತ್, ತಂದೆಯೊಂದಿಗೆ ಹೋಟೆಲ್‌ಗಳಿಗೆ ಹೋಗುತ್ತಿದ್ದ ನೆನಪುಗಳನ್ನು ಹಂಚಿಕೊಂಡರು. ಅಪ್ಪಾಜಿ ಸರಳ ಉಡುಗೆ ತೊಡುತ್ತಿದ್ದರು. ಅಮೆರಿಕ ಪ್ರವಾಸದಲ್ಲಿ ಅವರೊಟ್ಟಿಗೆ ಕಳೆದ ಸಮಯವನ್ನು ಪುನೀತ್ ಸ್ಮರಿಸಿದರು. ರಾಜ್‌ಕುಮಾರ್ ಅವರ ವ್ಯಕ್ತಿತ್ವ, ಶೈಲಿ ಮತ್ತು ಸಾಮರ್ಥ್ಯ ಅದ್ಭುತವಾಗಿತ್ತು ಎಂದು ಪುನೀತ್ ಹೇಳಿದರು.

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಕ್ರೇಜ್‌ ಎಷ್ಟಿದೆ ಎಂದು ನೀವೆಲ್ಲಾ ಈಗ ಕಣ್ಣಾರೆ ನೋಡುತ್ತಿದ್ದೀರಿ.ಆದರೆ ಅವರ ತಂದೆ ಡಾ.ರಾಜ್‌ಕುಮಾರ್‌ಗೆ ಎಷ್ಟರ ಮಟ್ಟಕ್ಕೆ ಕ್ರೇಜಿ ಇತ್ತು ಗೊತ್ತಾ? ಅಣ್ಣಾವ್ರ ಇಂಚು ಇಂಚು ಸ್ಟೈಲ್ ಕಾಪಿ ಮಾಡುವವರು ಇದ್ದರು. ಮಾತನಾಡುವ ಶೈಲಿ, ಯೋಗ ಮಾಡುವ ಶೈಲಿ, ಫಿಟ್ನೆಸ್, ನಡೆ ...ಪ್ರತಿಯೊಂದನ್ನು ಅಭಿಮಾನಿಗಳು ಆರಾಧಿಸುತ್ತಿದ್ದರು. 5 ಜನ ಮಕ್ಕಳಲ್ಲಿ ಅಣ್ಣಾವ್ರ ಜೊತೆ ಹೆಚ್ಚಿಗೆ ಸಮಯ ಕಳೆದಿದ್ದು ಅವರ ಕಿರಿಯ ಪುತ್ರ ಪುನೀತ್ ಎನ್ನಬಹುದು. ಹೀಗಾಗಿ ಪುತೀನ್‌ ತಂದೆ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ.  

ಹೋಟೆಲ್‌ಗಳು:

'ನಾನು ಹೋಗುತ್ತಿದ್ದ ಹೋಟೆಲ್‌ಗಳಿಗೆ ಅಪ್ಪಾಜಿ ಅವರನ್ನು ಕರೆದುಕೊಂಡು ಹೋಗುತ್ತಿದ್ದೆ. ಆ ಜಾಗಗಳನ್ನು ಹೇಳಿದರೆ ಅಲ್ಲಿನ ಅಭಿಮಾನಿಗಳು ಅಂದುಕೊಳ್ಳಬಹುದು ಯಾವಾಗಯ್ಯ ಬಂದಿದ್ರು ಅಂತ. ಅಪ್ಪಾಜಿ ಅವರನ್ನು ವಿವಿ ಪುರಂ ಫುಡ್‌ ಸ್ಟ್ರೀಟ್‌ಗೆ ಕರ್ಕೊಂಡು ಹೋಗಿದ್ದೀನಿ. ಒಮ್ಮೆ ಅಪ್ಪಾಜಿ ಅವರನ್ನು 5 ಸ್ಟಾರ್ ಹೋಟೆಲ್‌ಗೆ ಕರ್ಕೊಂಡು ಹೋಗಿ ಬಿಲ್‌ ಜಾಸ್ತಿ ಬಂದು ಬಿಟ್ಟಿತ್ತು. ಅಪ್ಪಾಜಿಗೆ ನಾವು ಬಿಲ್‌ ಎಷ್ಟು ಬಂತು ಅಂತ ಸರಿಯಾಗಿ ಹೇಳಲು ಆಗುತ್ತಿರಲಿಲ್ಲ ಏನೇ ಹೇಳಿದ್ರೂ 70% ಕಡಿಮೆ ಹೇಳಬೇಕಿತ್ತು. ಏನಾದ್ರೂ ಎಷ್ಟು ಆಯ್ತು ಅಂತ ಗೊತ್ತಾಗಿಬಿಟ್ಟರೆ ಇಡೀ ಹಳಿ ತಿನ್ನಬಹುದಿತ್ತು ಅವರು ತಿನ್ಬೋದಿತ್ತು ಇವರು ತಿನ್ನಬೋದಿತ್ತು ಅಂತ ಕಥೆ ಶುರು ಮಾಡುತ್ತಾರೆ.  ಎಲ್ಲಾ ಕಡೆ ಅಪ್ಪಾಜಿನ ಕರ್ಕೊಂಡು ಹೋಗುತ್ತಿದ್ದ ಬಿಡುತ್ತಿರಲಿಲ್ಲ' ಎಂದು ಪುನೀತ್ ರಾಜ್‌ಕುಮಾರ್ ಮಾತನಾಡಿದ್ದಾರೆ. 

ಪುನೀತ್‌ ರಾಜ್‌ಕುಮಾರ್ ಚಿಕ್ಕ ಗಿಫ್ಟ್‌ ಇಷ್ಟ ಪಡ್ತಾ ಇರ್ಲಿಲ್ಲ ಎಲ್ಲಾ ದೊಡ್ಡದಾಗಿ ಕೊಡಬೇಕು: ಸಹೋದರಿ ಲಕ್ಷ್ಮಿ

ಅಣ್ಣಾವ್ರ ಸ್ಟೈಲ್:

'ಸದಾ ವೈಟ್ ಆಂಡ್ ವೈಟ್ ಅಥವಾ ಸಿಂಪಲ್‌ ಲುಕ್‌ನಲ್ಲಿ ಅಪ್ಪಾಜಿ ಕಾಣಿಸಿಕೊಳ್ಳುವುದು ಆದರೆ ಒಮ್ಮೆ ಮನೆಯಲ್ಲಿ ಫೋಟೋಶೂಟ್ ಮಾಡುವಾಗ ಅಪ್ಪಾಜಿ ಬಂದ್ರು ಅಂತ ಅವರಿಗೆ ನಾನು ಟೀ-ಶರ್ಟ್ ಹಾಕಿಸಿ ಫೋಟೋ ತೆಗೆಸಿದ್ದು. ವಿಗ್‌ ಇಲ್ಲದೆ ನಮ್ಮ ತಂದೆ ಅವರನ್ನು ಫಾರ್ಮಲ್ಸ್ ಅಥವಾ ಟೀ-ಶರ್ಟ್‌ನಲ್ಲಿ ನೋಡಲು ತುಂಬಾನೇ ಇಷ್ಟ. ತಂದೆ ಅವರ ಜೊತೆ ಸುಮಾರು 30 ದಿನಗಳ ಕಾಲ ಅಮೆರಿಕಾಗೆ ಹೋಗಿದ್ವಿ ತುಂಬಾ ಚೆನ್ನಾಗಿ ಸಮಯ ಕಳೆದೆವು. ವಾಟರ್‌ ಫಾಲ್ಸ್‌ ಬಳಿ ಎಲ್ಲಾದರೂ ಹೋದಾಗ ಪ್ಯಾಂಟ್ ಮತ್ತು ಸ್ವೆಟರ್ ಹಾಕಿಕೊಳ್ಳುವವರು ಅವರನ್ನು ನೋಡಲು ನನಗೆ ಖುಷಿಯಾಗುತ್ತಿತ್ತು ಅಷ್ಟು ಹ್ಯಾಂಡ್ಸಮ್‌ ಆಗಿ ಕಾಣಿಸುತ್ತಿದ್ದರು. ಯಾಕೆ ರಾಜ್‌ಕುಮಾರ್ ಅವರ ಫ್ಯಾನ್ ಆಗಬೇಕು ಅಂದ್ರೆ ಅವರ ಪರ್ಸನಾಲಿಟಿಯಿಂದ, ಅವರ ಸ್ಟೈಲ್‌ನಿಂದ, ಅವರ ವೇಟ್‌ನಿಂದ. ತೀರಿಕೊಂಡ ಕೊನೆಯ ದಿನದವರೆಗೂ ಕೂಡ ಅವರ ಸೊಂಟದ ಅಳತೆ 32. ನಾವು ವೇಟ್ಸ್‌ ಮಾಡುವಾಗ 20 ಮಾಡಿದರೆ ಅವರು ಅವಾಗಲೇ ಬಂದು 120 ಮಾಡುತ್ತಿದ್ದರು ಅಷ್ಟರ ಮಟ್ಟಕ್ಕೆ ಶಕ್ತಿ ಇರುತ್ತಿತ್ತು. ಅವರು ಅಷ್ಟು ಸ್ಟ್ರಾಂಗ್ ಆಗಿರುತ್ತಿದ್ದರು. ತಂದೆಯಾಗಿ ಅವರ ಅಭಿಮಾನಿಯಾಗಿ ಡಾ. ರಾಜ್‌ಕುಮಾರ್ ನಿಜಕ್ಕೂ ಗ್ರೇಟ್' ಎಂದು ಪುನೀತ್ ಹೇಳಿದ್ದಾರೆ. 

ಮುಖಕ್ಕೆ ಹೊಡೀತೀನಿ ಇದು ನಾನು ಕೊಡ್ತಿರೋ ವಾರ್ನಿಂಗ್; ಶಿಶಿರ್‌-ಐಶ್ವರ್ಯಗೆ ವಾರ್ನಿಂಗ್ ಕೊಟ್ಟ ಒಳ್ಳೆ ಹುಡುಗ ಪ್ರಥಮ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ