ಮಗಳ ಜೊತೆ ಫೋಟೋ ಹಂಚಿ ಕೊಂಡ ರಾಧಿಕಾಗೆ ಯಶ್ ಮುಂದಿನ ಚಿತ್ರ ಯಾವುದೆಂದ್ ಕೇಳಿದ ಫ್ಯಾನ್ಸ್!

Published : Aug 03, 2023, 12:22 PM IST
ಮಗಳ ಜೊತೆ ಫೋಟೋ ಹಂಚಿ ಕೊಂಡ ರಾಧಿಕಾಗೆ ಯಶ್ ಮುಂದಿನ ಚಿತ್ರ ಯಾವುದೆಂದ್ ಕೇಳಿದ ಫ್ಯಾನ್ಸ್!

ಸಾರಾಂಶ

ಮಗಳು ಐರಾ  ಜೊತೆ ನಟಿ ರಾಧಿಕಾ ಪಂಡಿತ್ ಫೋಟೋ ಶೇರ್​ ಮಾಡಿಕೊಂಡಿದ್ದು, ರಾಕಿಂಗ್​ ಸ್ಟಾರ್​ ಯಶ್ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್​ ಪ್ರಶ್ನೆ ಕೇಳ್ತಿದ್ದಾರೆ.   

ಸ್ಯಾಂಡಲ್​ವುಡ್​ ಸಿಂಡ್ರೆಲ್ಲಾ ಎಂದೇ ಖ್ಯಾತಿ ಪಡೆದಿರುವ ನಟಿ ರಾಧಿಕಾ ಪಂಡಿತ್​. ಸದ್ಯ ಮಗಳು, ಕುಟುಂಬ ಎಂದು ಬಿಜಿಯಾಗಿರುವ ನಟಿ ಕಾಣಸಿಗ್ತಿರೋದು ಸೋಷಿಯಲ್​ ಮೀಡಿಯಾದಲ್ಲಿ ಮಾತ್ರ. ರಾಕಿಂಗ್ ಸ್ಟಾರ್ ಯಶ್​ (Yash) ಜೊತೆ 2016ರಲ್ಲಿ ಮದುವೆಯಾದ ರಾಧಿಕಾ ಸದ್ಯ ಐರಾ ಹಾಗೂ ಯಥರ್ವ್ ಎಂಬ ಮಕ್ಕಳ ಲಾಲನೆಯಲ್ಲಿ ಬಿಜಿಯಾಗಿದ್ದಾರೆ. ಕಳೆದ ಜೂನ್​ 18ರಂದು ಚಿತ್ರರಂಗಕ್ಕೆ ಕಾಲಿಟ್ಟು 10 ವರ್ಷಾಚರಣೆ ಮಾಡಿಕೊಂಡಿರೋ ನಟಿ ಆದಿ ಲಕ್ಷ್ಮಿ ಪುರಾಣ ಚಿತ್ರದ ಬಳಿಕ ಬೆಳ್ಳಿ ತೆರೆಯಿಂದ ಮರೆಯಾಗಿ, ಮತ್ತೆ ಬೆಳ್ಳಿತೆರೆಗೆ ಕಮ್ ಬ್ಯಾಕ್ ಮಾಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕುಟುಂಬದ ಫೋಟೋ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಹೆಚ್ಚಾಗಿ ಅವರು  ಮಕ್ಕಳ ಜೊತೆಗಿನ ಫೋಟೋಗಳು  ಹಂಚಿಕೊಳ್ಳುತ್ತಾರೆ. ಪತಿ ಯಶ್​ ಮತ್ತು ಮಕ್ಕಳ ಜೊತೆ  ಆಗಾಗ್ಗೆ ಟೂರ್​ಗೆ ಹೋಗುತ್ತಾ ಅದರ ಫೋಟೋಗಳನ್ನೂ ಶೇರ್​ ಮಾಡಿಕೊಳ್ಳುತ್ತಾರೆ. ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 30 ಲಕ್ಷಕ್ಕೂ ಅಧಿಕ ಮಂದಿ ಅವರನ್ನು ಹಿಂಬಾಲಿಸುತ್ತಿದ್ದಾರೆ.  

ಇದೀಗ ನಟಿ, ಮಗಳು ಐರಾ (Aira) ಜೊತೆ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಹೆಲ್ಲೋ ಎಲ್ಲರಿಗೂ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಇದಕ್ಕೆ ಸಕತ್​ ಲೈಕ್ಸ್​, ಕಮೆಂಟ್ಸ್​ಗಳ ಸುರಿಮಳೆಯಾಗುತ್ತಿದೆ. ಇನ್​ಸ್ಟಾಗ್ರಾಮ್​ ಮತ್ತು ಫೇಸ್​ಬುಕ್​ ಹಾರ್ಟ್​ ಇಮೋಜಿಗಳಿಂದ ತುಂಬಿದೆ. ಹಲವರು ಅಮ್ಮ-ಮಗಳ ಜೋಡಿ ಸೂಪರ್​ ಆಗಿದೆ ಎಂದರೆ, ಇನ್ನು ಹಲವು ಫ್ಯಾನ್ಸ್​ ಯಶ್​ ಅವರ ಮುಂದಿನ ಚಿತ್ರದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ತಮಿಳಿನ ಯುವ ಡೈರೆಕ್ಟರ್ ರಾಕಿ ಭಾಯ್‌ಗಾಗಿ ಕಥೆ ಬರೆಯುತ್ತಿದ್ದಾರೆ ಎನ್ನುವ ಸುದ್ದಿ ಸದ್ಯ ಹಾಟ್​ ಟಾಪಿಕ್​ ಆಗಿದೆ.  ಆದರೆ ಯಾರು ಆ ನಿರ್ದೇಶಕ ಹಾಗೂ ಯಾವ ಸಿನಿಮಾ ಅನ್ನುವ  ಪ್ರಶ್ನೆ ಕೂಡ ಅಭಿಮಾನಿಗಳನ್ನು ಕಾಡುತ್ತಿದ್ದು, ಈ ಬಗ್ಗೆ ರಾಧಿಕಾ ಅವರಲ್ಲಿ ಕೇಳಬಯಸುತ್ತಿದ್ದಾರೆ. ತಮಿಳು ನಟ ಇಳಯದಳಪತಿ ವಿಜಯ್ ಅಭಿನಯದ ಲಿಯೋ ಚಿತ್ರದ ನಿರ್ದೇಶಕರಾಗಿರುವ ಲೋಕೇಶ್ ಕನಕರಾಜ್‌ ಈ ಚಿತ್ರ ಕಥೆ ಯಶ್​ ಅವರಿಗಾಗಿಯೇ ಬರೆಯುತ್ತಿದ್ದಾರೆ ಎನ್ನುವ ಸುದ್ದಿಯಾಗಿದೆ.  ಲಿಯೋ ಸಿನಿಮಾದ ಬಳಿಕ  ಯಶ್ ಅಭಿನಯದ ಸಿನಿಮಾವನ್ನೂ  ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಾರೆ ಎನ್ನಲಾಗ್ತಿದೆ. ಆದ್ದರಿಂದ ಈ ಬಗ್ಗೆ ಫ್ಯಾನ್ಸ್​ ನಿರೀಕ್ಷೆ ಹೆಚ್ಚಾಗಿದೆ. 

ಮುಳುಗುವ ಸೂರ್ಯನೆದುರು ನಿಂತು ಜೀವನದ ಪಾಠ ಹೇಳಿದ ನಟಿ ರಾಧಿಕಾ ಪಂಡಿತ್​

ಅಂದಹಾಗೆ ಯಶ್​ ಮತ್ತು ರಾಧಿಕಾ ಅವರ ಲವ್​ ಸ್ಟೋರಿಯೂ ಇಂಟರೆಸ್ಟಿಂಗ್​ ಆಗಿದೆ.   ಯಶ್​ ಮತ್ತು ರಾಧಿಕಾ ಪಂಡಿತ್​ (Radhika Pandit)  2012 ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್  ನಿರ್ದೇಶನ  ಡ್ರಾಮಾ ಚಿತ್ರದಲ್ಲಿ  ಒಟ್ಟಿಗೇ ನಟಿಸಿದ್ದರು. ಬಳಿಕ ಬಂದ ಮಿಸ್ಟರ್ ಅ೦ಡ್ ಮಿಸ್ಸಸ್ ರಾಮಾಚಾರಿ ಸಿನಿಮಾದಲ್ಲಿಯೂ ಒಟ್ಟಾಗಿ ನಟಿಸಿದ್ದರು. ಬಳಿಕ ಸೆಟ್​ನಲ್ಲಿಯೇ ಲವ್​ ಆಗಿದೆ. 2016 ಡಿಸೆಂಬರ್‌  9ರಂದು ಗೋವಾದಲ್ಲಿ ಮದುವೆಯಾದ ಈ ಜೋಡಿ ಈಗ ಇಬ್ಬರು ಮುದ್ದಾದ ಮಕ್ಕಳ ಪಾಲಕರು.  ಐರಾ ಹಾಗೂ ಯಥರ್ವ್ ಎಂಬ ಮಕ್ಕಳ ಲಾಲನೆಯಲ್ಲಿ ರಾಧಿಕಾ ಬಿಜಿಯಾಗಿದ್ದಾರೆ. 

ಆಗಾಗ್ಗೆ ರಾಧಿಕಾ ಅವರು ತಮ್ಮ ಅಪ್ಪ-ಅಮ್ಮನ ಫೋಟೋ ಕೂಡ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ.  ಇನ್ನು ರಾಧಿಕಾ ಮನೆಯ ಕಾರ್ಯಕ್ರಮಗಳಲ್ಲಿ ಅವರ ತಂದೆ-ತಾಯಿ ಇದ್ದೇ ಇರುತ್ತಾರೆ. ರಾಧಿಕಾ ಅವರು ಮಗಳಿಗೆ ಜನ್ಮ ನೀಡಿದ ಒಂದು ವರ್ಷದೊಳಗಡೆ ಮತ್ತೊಮ್ಮೆ ಗರ್ಭಿಣಿಯಾಗಿದ್ದರು. ಇಬ್ಬರು ಮಕ್ಕಳನ್ನು ಹೇಗೆ ನೋಡಿಕೊಳ್ತಾರಾ ಎಂದು ಪ್ರಶ್ನೆ ಮಾಡಿದಾಗ ರಾಧಿಕಾ ಅವರು ತಂದೆ-ತಾಯಿ ಬೆಂಬಲ ಎಂದು ಹೇಳಿದ್ದರು. ಈಗ ರಾಧಿಕಾ ಅವರನ್ನು  ಮತ್ತೆ ಬೆಳ್ಳಿ ಪರದೆಯ ಮೇಲೆ ನೋಡಲು ಫ್ಯಾನ್ಸ್​ (Fans) ಕಾತರರಾಗಿದ್ದಾರೆ. ಇದೇ ವೇಳೆ, ರಾಧಿಕಾ ಪಂಡಿತ್ ಮತ್ತೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.

ಮಗಳಿಗೆ ಚಂದ ಮಾಮನ ತೋರಿಸ್ತಿರೋ ಪ್ರಿಯಾಂಕಾ- ಸೋ ಕ್ಯೂಟ್​ ಎಂದ ಫ್ಯಾನ್ಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ