ಅನಂತ್ ನಾಗ್‌ಗೆ 75, ಸಿನಿ ಪಯಣಕ್ಕೆ 50 ವರ್ಷ: ವಿಶೇಷ ವಿಡಿಯೋ ಮೂಲಕ ರಿಷಬ್​ ಶೆಟ್ಟಿ ವಿಷ್​

Published : Aug 03, 2023, 10:02 AM ISTUpdated : Aug 04, 2023, 10:42 AM IST
ಅನಂತ್ ನಾಗ್‌ಗೆ 75, ಸಿನಿ ಪಯಣಕ್ಕೆ  50 ವರ್ಷ: ವಿಶೇಷ ವಿಡಿಯೋ ಮೂಲಕ ರಿಷಬ್​ ಶೆಟ್ಟಿ ವಿಷ್​

ಸಾರಾಂಶ

ಹಿರಿಯ ನಟ, ರಾಜಕಾರಣಿ ಅನಂತ್​ ನಾಗ್​ ಅವರು ಚಿತ್ರರಂಗಕ್ಕೆ ಬಂದು ಇಂದಿಗೆ 50 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ನಟ, ನಿರ್ದೇಶಕ ರಿಷಬ್​ ಶೆಟ್ಟಿ ವಿಶೇಷ ರೂಪದಲ್ಲಿ ವಿಷ್​ ಮಾಡಿದ್ದಾರೆ.   

ಕನ್ನಡ ಚಿತ್ರರಂಗ ಕಂಡ ಅಪರೂಪದ ತಾರೆಯರಲ್ಲಿ ಒಬ್ಬರು ಅನಂತ್​ ನಾಗ್​ (Anant Nag) . 1948ರಲ್ಲಿ ಜನಿಸಿರೋ ಅನಂತ್​ ಕುಮಾರ್​ ಅವರು, ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 50 ವರ್ಷ ಪೂರೈಸಿದೆ. ಈ ಸಿನಿ ಪಯಣದಲ್ಲಿ ಅವರು ನಟಿಸದ ಪಾತ್ರಗಳೇ ಇಲ್ಲವೇನೋ ಎನ್ನಬಹುದು. ತಮ್ಮ ಸ್ಫುರದ್ರೂಪದಿಂದ ಎಂಥವರನ್ನೂ ಸೆಳೆಯುತ್ತಿದ್ದ ನಟ ಇವರು. ಕಣ್ಣುಗಳ ಮೂಲಕವೇ ಅಭಿನಯಿಸುತ್ತಾರೆ ಎನ್ನುವ ಖ್ಯಾತಿ ಕೂಡ ಇವರಿಗಿದೆ. ಕನ್ನಡ ಮಾತ್ರವಲ್ಲದೇ  ತೆಲುಗು, ತಮಿಳು, ಹಿಂದಿ, ಮಲಯಾಳಂ ಚಿತ್ರಗಳಲ್ಲಿಯೂ ಇವರು ನಟಿಸಿದ್ದಾರೆ. ಇವರ ಜೊತೆ ನಟಿಸಲು 70-80ರ ದಶಕದಲ್ಲಿಯೇ ನಟಿಯರು ಉತ್ಸುಕರಾಗಿರುತ್ತಿದ್ದರಂತೆ. ಇವರು ಹಾಸ್ಯದ ಪಾತ್ರಗಳಲ್ಲಂತೂ ಎತ್ತಿದ ಕೈ. ನಾಯಕ, ಖಳನಾಯಕ, ಹಾಸ್ಯನಟ, ರಸಿಕ ನಟ... ಹೀಗೆ ಎಲ್ಲಾ ರೋಲ್​ಗಳಿದಂದಲೂ ಗಮನ ಸೆಳೆದಿರುವ ಅನಂತ್​ನಾಗ್​ ತಮ್ಮ ಐದು ದಶಕಗಳ ಸಿನಿ ಪಯಣದಲ್ಲಿ  300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ 50ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದಾರೆ. 

ಕನ್ನಡದ ಬಹುತೇಕ ಹಿರಿಯ ನಟರಂತೆಯೇ ಅನಂತ್​ನಾಗ್​ ಅವರೂ ರಂಗಭೂಮಿಯ ಹಿನ್ನೆಲೆಯಿಂದ ಬಂದವರು.  ಅಲ್ಲಿ ಕನ್ನಡ, ಕೊಂಕಣಿ, ಹಿಂದಿ ನಾಟಕಗಳಲ್ಲಿ ನಟಿಸಿದ್ದಾರೆ.  ಐದು ವರ್ಷ ರಂಗಭೂಮಿಯಲ್ಲಿ ಕೆಲಸ ಮಾಡಿರುವ ಇವರು, ಅಮೋಲ್‌ ಪಾಲೇಕರ್‌, ಗಿರೀಶ್‌ ಕಾರ್ನಾಡ್‌, ಸತ್ಯದೇವ್‌ ದುಬೇ ಮುಂತಾದ ಹಲವು ನಿರ್ದೇಶಕರ ನಾಟಕಗಳಲ್ಲಿ ನಟಿಸಿದ್ದಾರೆ.  ನಾನು ತುಂಬಾ ನಾಚಿಕೆ ಸ್ವಭಾವದ ಹುಡುಗನಾಗಿದ್ದೆ. ಮುಂಬಯಿ ನೋಡಿ ನಾನು ಬೆರಗಾಗಿದ್ದೆ. ಅಲ್ಲಿಯೇ ಇದ್ದು, ನಾಟಕದಲ್ಲಿ ನಟಿಸಿ ನಂತರ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಅನಂತ್​ ಕುಮಾರ್​ ಹೇಳಿಕೊಂಡಿದ್ದರು. 

Leader Ramaiah: ತೆರೆ ಮೇಲೆ ಬರಲಿದೆ ಸಿದ್ದರಾಮಯ್ಯ ಬಯೋಪಿಕ್: ಸಿಎಂ ಪಾತ್ರಕ್ಕೆ ನಟನಾರು?

ಹೀಗೆ ಬಹುಭಾಷಾ ನಟನಾಗಿರುವ  ಅನಂತ್​ ನಾಗ್​ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಕೂಡ ಅಪಾರವಾದದ್ದು. ಇವರು ಈಗ ಹಿರಿಯ ನಟ ಎನಿಸಿಕೊಂಡಿದ್ದು, ಇಂದಿನ ತಲೆಮಾರಿನವರಿಗೆ  ಈ ಲೆಜೆಂಡರಿ ನಟನ ಬಗ್ಗೆ ಹೆಚ್ಚು ತಿಳಿದಿಲ್ಲದೇ ಇರಬಹುದು. ಹಾಗಾಗಿ ಮತ್ತೊಮ್ಮೆ ಅನಂತ್​ ನಾಗ್​ ಅವರ ಜೀವನ ಮತ್ತು ಸಾಧನೆಯನ್ನು ಚುಟುಕಾಗಿ ನೆನಪಿಸಿ ಅನಂತ್​ ನಾಗ್​ ಅವರಿಗೆ ವಿಶೇಷವಾಗಿ ವಿಷ್​ ಮಾಡಿದ್ದಾರೆ ನಿರ್ದೇಶಕ, ನಟ ರಿಷಬ್​ ಶೆಟ್ಟಿ (Rishab Shetty). ಕನ್ನಡ ಚಿತ್ರರಂಗದ ಮೇರು ನಟ, ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಸರ್ ಚಿತ್ರರಂಗದಲ್ಲಿ 50 ವಸಂತಗಳನ್ನು ಪೂರೈಸಿದ್ದಾರೆ. ನಮ್ಮ ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ ಅನಂತಪದ್ಮನಾಭರಿಗೆ ಅನಂತ ಶುಭಾಶಯಗಳು. ನಿಮ್ಮ ಪಯಣ ಸ್ಫೂರ್ತಿದಾಯಕ ಎಂದು ಅವರು ಬರೆದಿದ್ದಾರೆ. ಇದರಲ್ಲಿ ಅನಂತ್​ ನಾಗ್​ ಅವರ ಬ್ಲ್ಯಾಕ್​ ಆ್ಯಂಡ್​ ವೈಟ್​ ಚಿತ್ರದಿಂದ ಹಿಡಿದು ಹಲವು ಹಿಟ್​ ಚಿತ್ರಗಳ ದೃಶ್ಯಗಳನ್ನು ಸೇರಿಸಲಾಗಿದೆ. ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್ ಮಾಡುತ್ತಿದ್ದು, ಹಿರಿಯ ನಟನಿಗೆ ವಿಷ್​ ಮಾಡುತ್ತಿದ್ದಾರೆ. 

ಅನಂತ್​ ನಾಗ್​ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂದು ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ (social Media) ಕಳೆದ ವರ್ಷ ದೊಡ್ಡ ಅಭಿಯಾನ ಶುರುವಾಗಿತ್ತು. ಅದರಲ್ಲಿ ರಿಷಬ್​ ಶೆಟ್ಟಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.  ಈಗ ರಾಜಕೀಯದಲ್ಲಿ ಅನಂತ್​ನಾಗ್​ ಗುರುತಿಸಿಕೊಂಡಿದ್ದಾರೆ. ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದ ನಟ, ನಾನು ರಾಜಕೀಯಕ್ಕೆ ಬಂದದ್ದು ಆಕಸ್ಮಿಕವಾಗಿ. ಸಿನಿಮಾದಲ್ಲೂ ನಟನಾಗಬೇಕು ಎಂಬ ಉದ್ದೇಶ ಇರಲಿಲ್ಲ. ನಟ ಹಾಗೂ ರಾಜಕೀಯ ಎರಡರ ಪ್ರವೇಶವೂ ಆಕಸ್ಮಿಕವಷ್ಟೇ ಎಂದಿದ್ದಾರೆ. ಜಯಪ್ರಕಾಶ್​ ಅವರ ಹೋರಾಟದಲ್ಲಿ ನಾವು ಧುಮುಕಿದ್ದೆವು.  ಸಮಯ ನನ್ನನ್ನು ರಾಜಕೀಯಕ್ಕೆ ಎಳೆದು ತಂದಿದೆ ಎಂದಿದ್ದಾರೆ.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep