ಶಾಲೆಯಿಂದ ಬಂದ ಅಣ್ಣನ ತಬ್ಬಿಕೊಂಡು ಮುದ್ದಾಡೋ ತಮ್ಮ ವಿಡಿಯೋ ವೈರಲ್

Published : Jul 06, 2022, 02:50 PM IST
ಶಾಲೆಯಿಂದ ಬಂದ ಅಣ್ಣನ ತಬ್ಬಿಕೊಂಡು ಮುದ್ದಾಡೋ ತಮ್ಮ ವಿಡಿಯೋ ವೈರಲ್

ಸಾರಾಂಶ

ಅಣ್ಣ ತಮ್ಮ ಇಬ್ಬರ ಬಾಂಧವ್ಯವನ್ನು ಸಾರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಬಾಲ್ಯ ಎಂಬುದು ಜೀವನದ ಅತೀ ಮಧುರ ಕ್ಷಣ. ಅದೂ ನೀವು ಕೂಡು ಕುಟುಂಬದಲ್ಲಿ ಬೆಳೆದವರಾಗಿದ್ದರೆ ಅದರ ಅನುಭವ ಇನ್ನಷ್ಟು ಚೆನ್ನಾಗಿರುವುದು. ಆದರೆ ಈಗ ಕಾಲ ಬದಲಾಗಿದೆ. ಒಂದೊಂದು ಮನೆಯಲ್ಲಿ ಕೇವಲ ಒಂದು ಅಥವಾ ಎರಡು ಮಕ್ಕಳಿದ್ದರೆ ಅದೇ ಹೆಚ್ಚು. ಹೀಗಾಗಿ ಮಕ್ಕಳು ಆಟಕ್ಕಾಗಿ ಇಲೆಕ್ಟ್ರಾನಿಕ್ ವಸ್ತುಗಳ ಮೊರೆ ಹೋಗಿದ್ದಾರೆ. ಇಂದಿನ ಪೋಷಕರೂ ಕೂಡ ಫುಲ್‌ ಬ್ಯುಸಿಯಾಗಿದ್ದು, ಮಕ್ಕಳ ನೂರೊಂದು ಪ್ರಶ್ನೆಗಳಿಗೆ ಉತ್ತರಿಸುತ್ತಾ ಅವರೊಂದಿಗೆ ಕಾಲ ಕಳೆಯಲು ಸಮಯವಿಲ್ಲ. ಹೀಗಾಗಿ ಪೋಷಕರು ಕೂಡ ಮಕ್ಕಳ ಕೈಗೆ ಸ್ಮಾರ್ಟ್ ಫೋನ್ ಕೊಟ್ಟು ಕೂರಿಸುತ್ತಾರೆ. ಅದಾಗ್ಯೂ ಅಣ್ಣ ತಮ್ಮ ಇಬ್ಬರ ಬಾಂಧವ್ಯವನ್ನು ಸಾರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ನೀವು ಇದನ್ನು ಗಮನಿಸಿರಬಹುದು. ಅಣ್ಣ ಶಾಲೆಗೆ ಹೋಗುವ ಸಮಯದಲ್ಲಿ ಆತನ ಒಡಹುಟ್ಟಿದ ಸಹೋದರಿ ಅಥವಾ ಸಹೋದರ ಅಳಲು ಶುರು ಮಾಡುವ ದೃಶ್ಯವನ್ನು ನಿಮ್ಮ ಮನೆಗಳಲ್ಲೆ ನೋಡಿರಬಹುದು. ಇದು ಅದೇ ರೀತಿ ಅಣ್ಣ ಅಥವಾ ಶಾಲೆಯಿಂದ ಬಂದ ಕೂಡಲೇ ಪುಟ್ಟ ತಮ್ಮ ಅಥವಾ ತಂಗಿ ಅವರನ್ನು ತಬ್ಬಿಕೊಂಡು ಖುಷಿಯಾಗವುದನ್ನು ನೋಡಿರಬಹುದು. ಅದೇ ರೀತಿಯ ವಿಡಿಯೋ ಇದು. ಪುಟ್ಟ ಮಗುವೊಂದು ತನ್ನ ಸಹೋದರ ಶಾಲೆಯಿಂದ ಬರುವುದನ್ನೇ ಕಾಯುತ್ತಿದ್ದಾನೆ. ಮನೆಯ ಗೇಟ್ ಮುಂದೆ ಪುಟ್ಟ ಸಹೋದರ ಕಾಯುತ್ತಿದ್ದು ಶಾಲಾ ವಾಹನ ಬರುವುದನ್ನು ನೋಡಿದ ಮಗು ಕುಣಿದು ಕುಪ್ಪಳಿಸುತ್ತದೆ. 

ನಂತರ ಶಾಲಾ ವಾಹನದಿಂದ ಇಳಿದ ಸಹೋದರ ತನ್ನ ಪುಟ್ಟ ತಮ್ಮನನ್ನು ತಬ್ಬಿಕೊಂಡು ಮುದ್ದಾಡುತ್ತಾನೆ. ಯಾರಾದರೂ ನೆಂಟರು ಬಂಧುಗಳು ಮನೆಗೆ ಬರುತ್ತಾರೆ ಎಂದು ಗೊತ್ತಾಗುತ್ತಿದ್ದಂತೆ ನಾವು ಈಗ ಬರುತ್ತಾರೆ ಮತ್ತೆ ಬರುತ್ತಾರೆ ಅಂತ ಕಾಯುತ್ತಾ ಕೂರುವುದು. ವಾಹನಗಳ ಸದ್ದಾಗುತ್ತಿದ್ದಂತೆ ಬಾಗಿಲು ಗೇಟ್‌ ಬಳಿ ಹೋಗಿ ನೋಡುವುದನ್ನು ಮಾಡುವ ಬಾಲ್ಯದ ಕಾಲವೊಂದಿತ್ತು. ಆದರೆ ಈಗ ಎಲ್ಲವೂ ಸ್ಮಾರ್ಟ್‌ಫೋನ್‌ಗಳ ಕೈಗೆ ಸಿಲುಕಿ ಆ ಕಾಯುವ ಖುಷಿ ಕಳೆದು ಹೋಗಿದೆ. ಈಗ ಮನೆಗೆ ಬರುವ ಬಂಧುಗಳು ಹೇಳಿಯೇ ಬರುತ್ತಾರೆ. ಹೀಗಾಗಿ ಈ ಕಾಯುವ ಖುಷಿ ಮೊದಲಿನಂತಿಲ್ಲಾ. 

ಇದನ್ನು ಓದಿ: ಬಾಲ್ಯದ ಸಿಹಿ ದಿನಗಳ ನೆನಪಿಸಿದ ಹಳ್ಳಿಯ ಮಕ್ಕಳ ವಿಡಿಯೋ

ಇನ್ನು ಈ ಪುಟ್ಟ ಸಹೋದರರ ಅನುಬಂಧದ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಐಎಎಸ್‌ ಅಧಿಕಾರಿ ಸುಮಿತಾ ಮಿಶ್ರಾ ಪೋಸ್ಟ್‌ ಮಾಡಿದ್ದರು. ಸಹೋದರರ ಪ್ರೇಮದ ಎಂತಹ ಮಧುರವಾದ ಅಭಿವ್ಯಕ್ತತೆ ಇದು ಎಂದು ಅವರು ವಿಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ಬಾಲಿವುಡ್‌ ನಟ ಧರ್ಮೆಂದ್ರ ಡಿಯೋಲ್ ಕೂಡ ಈ ವಿಡಿಯೋವನ್ನು ರಿಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇದನ್ನು ಓದಿ: ಅಣ್ಣ-ತಮ್ಮ ಇಬ್ಬರೂ ಆತ್ಮಹತ್ಯೆಗೆ ಶರಣು: ಸಾವಲ್ಲೂ ಒಂದಾದ ಸಹೋದರರು

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
Chanakya Niti: ಇಂಥಾ ಮಹಿಳೆಯರ ಕೈ ಹಿಡಿದ್ರೆ ಜೀವನ ಪರ್ಯಂತ ಅಳೋದು ಗ್ಯಾರಂಟಿ: ಮದುವೆ ಬಗ್ಗೆ ಪುರುಷರಿಗೆ ಕಿವಿಮಾತು