Latest Videos

ಶಾದಿ ಡಾಟ್‌ ಕಾಮ್‌ನಲ್ಲಿ ಹುಡುಗೀರು ಹೆಚ್ಚು ಸರ್ಚ್ ಮಾಡ್ತಿರೋದು ಇಂಥಾ ಹುಡುಗರನ್ನಂತೆ !

By Suvarna NewsFirst Published Jul 6, 2022, 10:28 AM IST
Highlights

ಮೀನಿನ ಹೆಜ್ಜೆನಾದ್ರೂ ತಿಳ್ಕೊಳ್‌ಬೋದು ಹೆಣ್ಮಕ್ಕಳ (Girls) ಮನಸ್ಸು ಅರ್ಥ ಮಾಡಿಕೊಳ್ಳೋಕೆ ಆಗಲ್ಲ ಅಂತಾರೆ. ಯಾಕಂದ್ರೆ ಅವರ ಇಷ್ಟಕಷ್ಟಗಳು ಆಗಿಂದಾಗೆ ಬದಲಾಗುತ್ತಲೇ ಇರುತ್ತವೆ. ಹಿಂದೆಲ್ಲಾ ಡಾಕ್ಟರ್‌, ಇಂಜಿನಿಯರ್ಸ್‌ಗಳನ್ನು ಮದ್ವೆಯಾಗಲು ಮುಗಿಬೀಳುತ್ತಿದ್ದ ಹುಡುಗೀರು ಈಗ ಕೇವಲ ಮ್ಯಾಟ್ರಿಮೋನಿ (Matrimony)ಯಲ್ಲಿ ಇಂಥಾ ಹುಡುಗರಿಗಾಗಿ ಮಾತ್ರ ಸರ್ಚ್ ಮಾಡ್ತಾರಂತೆ.

ಮದುವೆ (Marriage) ಅಂದ್ರೆ ಗಂಡು-ಹೆಣ್ಣಿನ ನಡುವಿನ ಸುಂದರವಾದ ಬಾಂಧವ್ಯ. ಹೀಗಾಗಿ ಸೂಕ್ತ ಸಂಗಾತಿಯನ್ನು ಪಡೆಯಬೇಕೆಂಬುದು ಎಲ್ಲರ ಆಸೆಯಾಗಿರುತ್ತೆ. ಹಿಂದೆಲ್ಲಾ ಗುರು-ಹಿರಿಯರು ನೋಡಿ ಮದುವೆ ಮಾಡಿ ಬಿಡುತ್ತಿದ್ದರು. ಸುಂದರವಾದ, ದುಶ್ಚಟಗಳಿಂದ, ಅನುರೂಪ ವಧು-ವರ (Bride-Groom)ರನ್ನು ಹುಡುಕಲಾಗ್ತಿತ್ತು. ಆದ್ರೆ ಈಗ ಕಾಲ ಬದಲಾಗಿದೆ. ಲವ್ ಮ್ಯಾರೇಜ್‌ ಟ್ರೆಂಡ್ ಹೆಚ್ಚುತ್ತಿದೆ. ಹೀಗಿದ್ದೂ ಇಂಥಾ ಮದುವೆಯ ರೀತಿಯನ್ನು ಇಷ್ಟಪಡದವರು ಆರೇಂಜ್ಡ್ ಮ್ಯಾರೇಜ್ (Arrange marriage) ಮಾಡಿಕೊಳ್ಳುತ್ತಾರೆ. ಈ ರೀತಿ ಮದುವೆಯಾಗುವವರು ಮ್ಯಾಟ್ರಿಮೋನಿ ಸೈಟ್‌ (Matrimony Site)ನಲ್ಲಿ ತಮ್ಮ ಪ್ರೊಫೈಲ್ ಅಪ್‌ಡೇಟ್ ಮಾಡಿ ಸೂಕ್ತ ಸಂಗಾತಿಯನ್ನು ಹುಡುಕಿಕೊಳ್ಳಬಹುದಾಗಿದೆ. 

ಐಎಎಸ್‌ ಅಥವಾ ಐಪಿಎಸ್‌ ಹುಡುಗರನ್ನು ಹುಡುಕ್ತಿಲ್ಲ !
ಹಿಂದೆಲ್ಲಾ ಹೆಚ್ಚಾಗಿ ಮದುವೆಯಾಗುವ ಹುಡುಗಿಯರು, ಮಾತ್ರವಲ್ಲ ಪೋಷಕರು ತಮ್ಮ ಮಕ್ಕಳಿಗೆ ಡಾಕ್ಟರ್‌, ಇಂಜಿನಿಯರ್, ಡಾಕ್ಟರ್‌ ಮೊದಲಾದ ಉದ್ಯೋಗವಿರುವ ಹುಡುಗರನ್ನು ಹುಡುಕುತ್ತಿದ್ದಾರೆ. ಆದ್ರೆ ಈಗ ಟ್ರೆಂಡ್ ಬದಲಾಗಿದೆ. ಕೈ, ಕಾಲಿಗೊಬ್ಬರು ಇಂಥಾ ಉದ್ಯೋಗದಲ್ಲಿರುವ ಕಾರಣ ಇಂಜಿನಿಯರ್, ಡಾಕ್ಟರ್‌ಗಳಿಗೆ ಅತಿ ಹೆಚ್ಚು ಬೇಡಿಕೆಯೇನೂ ಇಲ್ಲ. ಹೀಗಾಗಿ ಮ್ಯಾಟ್ರಿಮೋನಿಯಲ್ಲಿ ವಧುವಿನ ಕಡೆಯವರು ಸರ್ಚ್ ಮಾಡೋ ರೀತಿನೂ ಬದಲಾಗಿದೆ. ಶ್ರೀಮಂತರು ಶಾದಿ ಡಾಟ್‌ ಕಾಮ್‌ನಲ್ಲಿ ಐಎಎಸ್‌ ಅಥವಾ ಐಪಿಎಸ್‌ ಹುಡುಗರನ್ನು ಹುಡುಕುತ್ತಿರುತ್ತಾರೆ. ಆದ್ರೆ ಸದ್ಯ ಜನರು ಹೆಚ್ಚಾಗಿ ಹುಡುಕುತ್ತಿರುವ ಕೀವರ್ಡ್ ಐಎಎಸ್ ಅಲ್ಲ, ಐಪಿಎಸ್ ಸಹ ಅಲ್ವಂತೆ. ಮತ್ತೇನು ?

ಕೋಲ್ಕತ್ತಾದಲ್ಲಿ ಸಲಿಂಗಿ ಜೋಡಿಯ ಅದ್ಧೂರಿ ವಿವಾಹ

ವೈವಾಹಿಕ ಮಾರುಕಟ್ಟೆಯಲ್ಲಿ, ನಾಗರಿಕ ಸೇವಕ ಅಥವಾ ಉನ್ನತ ಸಂಸ್ಥೆಯಿಂದ ಪದವೀಧರರಾಗಿರುವವರಿಗೆ ಹೆಚ್ಚಿನ ಮಾನ್ಯತೆಯಿರುತ್ತದೆ. ಆದರೆ ಅದು ಇನ್ನು ಮುಂದೆ ಹಾಗಲ್ಲ. ಶಾದಿ ಡಾಟ್ ಕಾಮ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕೀವರ್ಡ್ ಎಲ್ಲರೂ ನಿರೀಕ್ಷಿಸಿದಂತೆ ಐಎಎಸ್ ಅಥವಾ ಐಪಿಎಸ್ ಅಧಿಕಾರಿ ಅಲ್ಲ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಬದಲಿಗೆ, ಸ್ಟಾರ್ಟ್ಅಪ್ ಸಂಸ್ಥಾಪಕ ಎಂಬ ಪದವನ್ನು ಮ್ಯಾಟ್ರಿಮೋನಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಜನಪ್ರಿಯ ಕೀವರ್ಡ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

😁😁😂 https://t.co/9vaSwjU7Yy

— Rajeev Chandrasekhar 🇮🇳 (@Rajeev_GoI)

ಸ್ಟಾರ್ಟ್‌ಅಪ್ ಉದ್ಯೋಗಿಗೆ ಹೆಚ್ಚು ಡಿಮ್ಯಾಂಡ್‌
ಡಿಜಿಟಲ್ ಇಂಡಿಯಾ ಸಪ್ತಾಹದಲ್ಲಿ ಮಾತನಾಡಿದ ಸಚಿವರು ಈ ವಿಷಯ ತಿಳಿಸಿದರು. ಶಾದಿ ಡಾಟ್ ಕಾಮ್‌ನಲ್ಲಿ ಹೆಚ್ಚು ಹುಡುಕಲಾದ ಕೀವರ್ಡ್‌ಗಳ ಪಟ್ಟಿಯಲ್ಲಿ ಸ್ಟಾರ್ಟ್‌ಅಪ್ ಉದ್ಯೋಗಿ, ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕರು ಪದಗಳು ಹೆಚ್ಚು ಅಗ್ರಸ್ಥಾನದಲ್ಲಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿಸಲಾಗಿದೆ ಎಂದು ರಾಜೀವ್ ಚಂದ್ರಶೇಖರ್ ಬಹಿರಂಗಪಡಿಸಿದ್ದಾರೆ . ಮ್ಯಾಟ್ರಿಮೋನಿಯಲ್ಲಿ ಅತಿ ಹೆಚ್ಚಾಗಿ ಹುಡುಕಿರುವುದು ಐಎಎಸ್ ಅಲ್ಲ, ಐಪಿಎಸ್ ಅಲ್ಲ, ಟಾಟಾ ಕಂಪನಿ ಅಥವಾ ಬಿರ್ಲಾ ಕಂಪನಿ ಸಹ ಅಲ್ಲ, ಇದು ಸ್ಟಾರ್ಟಪ್ ಉದ್ಯೋಗಿ ಅಥವಾ ಸ್ಟಾರ್ಟಪ್ ಸಂಸ್ಥಾಪಕ ಎಂಬ ಪದವಾಗಿದೆ.

ಮದುವೆಯಾಗಿ ಮೋಸ ಮಾಡೋದ್ರಲ್ಲಿ ಮಹಿಳೆಯರದ್ದೇ ಎತ್ತಿದ ಕೈ !

ಸಚಿವರು ತಮಾಷೆಗಾಗಿ ಈ ಟ್ವೀಟ್ ಮಾಡಿದ್ದಾರೋ ಗಂಭೀರವಾಗಿ ಹೇಳಿದ್ದಾರೋ ಸ್ಪಷ್ಟವಾಗಿಲ್ಲ. ಟ್ವಿಟರ್‌ನಲ್ಲಿನ ಪೋಸ್ಟ್‌ಗೆ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಗುಜರಾತ್‌ನ ಗಾಂಧಿನಗರದಲ್ಲಿ ಡಿಜಿಟಲ್ ಇಂಡಿಯಾ ವೀಕ್ 2022 ಅನ್ನು ಉದ್ಘಾಟಿಸಿದರು. ಕೇಂದ್ರ ಸರ್ಕಾರದ ಪ್ರಮುಖ ಕಾರ್ಯಕ್ರಮ ಡಿಜಿಟಲ್ ಇಂಡಿಯಾ ಬಡವರಿಗೆ ಭ್ರಷ್ಟಾಚಾರದಿಂದ ಮುಕ್ತಿ ನೀಡಿದೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಮಧ್ಯವರ್ತಿಗಳ ನಿರ್ಮೂಲನೆಗೆ ಶ್ರಮಿಸುತ್ತಿದೆ ಎಂದು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಹೇಳಿದರು.

click me!