ಬಾಯ್‌ಫ್ರೆಂಡ್ ಜೊತೆ ಓಡಿ ಹೋಗ್ತಿದ್ದ ಯುವತಿ; ರೈಲಿನೊಳಗೆ ಹೋಗುವಾಗ ಹುಡುಗಿಗೆ ನೆನಾಪದ ಅಪ್ಪ!

By Mahmad Rafik  |  First Published Sep 7, 2024, 3:45 PM IST

ಪ್ರೀತಿಸಿದ ಹುಡುಗನ ಜೊತೆ ಓಡಿ ಹೋಗುವಾಗ ಯುವತಿಗೆ ಆ ಕ್ಷಣದಲ್ಲಿ ತಂದೆಯ ನೆನಪು ಆಗುತ್ತದೆ. ಆ ಸಮಯದಲ್ಲಿ ಯುವತಿ ತೆಗೆದುಕೊಂಡ ನಿರ್ಧಾರ ಏನು?


ಪ್ರೀತಿ ಮಾಡೋದು, ಜೊತೆಯಾಗಿ ಜೀವನ ನಡೆಸೋದು ತಪ್ಪಲ್ಲ. ಪ್ರೀತಿಗೆ ವಿರೋಧ ವ್ಯಕ್ತವಾಗುತ್ತಲೇ ಕೆಲ ಜೋಡಿಗಳು ಕುಟುಂಬಸ್ಥರನ್ನು ತೊರೆದು ಓಡಿ ಹೋಗಿ ಬದುಕು ಕಟ್ಟಿಕೊಳ್ಳುತ್ತಾರೆ. ಆದರೆ ಇಂತಹ ಬಹುತೇಕ ಪ್ರಕರಣಗಳು ದುರಂತದಲ್ಲಿಯೇ ಅಂತ್ಯವಾಗುತ್ತವೆ. ಕೈ ಕೈ ಹಿಡಿದುಕೊಂಡು ಓಡಾಡುವಾಗಿದ್ದ ಪ್ರೀತಿ ಜೊತೆಯಾಗಿ ಜೀವನ ನಡೆಸುವಾಗ ಇರಲ್ಲ. ಆದ್ರೆ ಪ್ರೀತಿ ಯಶಸ್ಸು ಆಗಲ್ಲ ಅಂತ ನಾವು ಹೇಳಲ್ಲ. ಪ್ರೀತಿಸಿ ಮದುವೆಯಾದವರು ತಮ್ಮನ್ನು ನಿಂದಿಸಿದ ಜನರ ಎದುರೇ ಉತ್ತಮವಾಗಿ ಬದುಕು ಕಟ್ಟಿಕೊಳ್ಳುತ್ತಾರೆ. ಆರಂಭದಲ್ಲಿ ಪ್ರೀತಿಯನ್ನು ವಿರೋಧಿಸಿದ ಪೋಷಕರು ಮಕ್ಕಳ ಬದುಕನ್ನು ಕಂಡು ಮೆಚ್ಚುಗೆ ಸೂಚಿಸಿ ಹತ್ತಿರವಾಗುತ್ತಾರೆ. ಆದರೆ ಕೆಲ ಪೋಷಕರು ಮಾತ್ರ ಪ್ರೀತಿಸಿ ಮದುವೆಯಾದ ಮಕ್ಕಳನ್ನು ಮಾತ್ರ ಎಂದಿಗೂ ಒಪ್ಪಿಕೊಳ್ಳಲ್ಲ. 

ಪ್ರೀತಿಗೆ ಸಂಬಂಧಿಸಿದ ಕಥೆಗಳನ್ನಾಧರಿಸಿದ ಹಲವು ಸಿನಿಮಾಗಳು ಹೊರ ಬಂದಿವೆ. ದುರಂತದಲ್ಲಿ ಅಂತ್ಯವಾದ, ಸಂತೋಷದಲ್ಲಿ ಕೊನೆಯಾದ ಸಿನಿಮಾಗಳಿವೆ. ಆದರೆ ಇದೀಗ ಸೋಶಿಯಲ್ ಮೀಡಿಯಾ ಕಾಲ. ಯಾರ ಬಳಿಯೂ ಮೂರು ಗಂಟೆ ಕುಳಿತು ಸಿನಿಮಾ ನೋಡಲು ಸಮಯವೂ ಇಲ್ಲ. 30 ರಿಂದ 40 ಸೆಕೆಂಡ್ ರೀಲ್ಸ್‌ಗಳೇ ಟ್ರೆಂಡ್ ಆಗುತ್ತಿರುತ್ತವೆ. ಈ ನಡುವೆ ಶಾರ್ಟ್ಸ್ ಮೂವಿ ಕಾನ್ಸೆಪ್ಟ್ ಸಹ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Tap to resize

Latest Videos

undefined

ಮದುವೆಯಾದ್ರೂ ಪರವಾಗಿಲ್ಲ, ಮುದುಕನಾದ್ರೂ ಓಕೆ : ಬಾಯ್‌ಫ್ರೆಂಡ್ ಹುಡುಕಾಟದಲ್ಲಿ ಮಾದಕ ಚೆಲುವೆ!

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆಯಿಂದ ಕಮೆಂಟ್ ಮಾಡುತ್ತಿದ್ದಾರೆ.  @tourwithvikas ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ತೆಗೆದುಕೊಳ್ಳುವ ನಿರ್ಧಾರ ಎಲ್ಲ ಅಪ್ಪಂದಿರ ಹೃದಯಕ್ಕೆ ಇಷ್ಟವಾಗಿದೆ. ಅಪ್ಪ-ಮಗಳ ಬಾಂಧವ್ಯ ತುಂಬಾ ವಿಭಿನ್ನ. ಆ ಪ್ರೀತಿಯನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಪ್ರೀತಿ ಎಂದು ಪೋಷಕರನ್ನು ಬಿಟ್ಟು ಹೋಗುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ ಎಂದು ಇನ್‌ಸ್ಟಾಗ್ರಾಂ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು 40 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. 

ಏನಿದು ವೈರಲ್ ವಿಡಿಯೋ?
ಯುವಕ ಮತ್ತು ಯುವತಿ ಕೈ ಕೈ ಹಿಡಿದುಕೊಂಡು ರೈಲ್ವೆ ನಿಲ್ದಾಣದ ಮೇಲ್ಸೇತುವೆ ಮೇಲೆ ಓಡಿಕೊಂಡು ಬರುತ್ತಿರುತ್ತಾರೆ. ಮೆಟ್ಟಿಲು ಇಳಿಯುತ್ತಿರುವಾಗಲೇ ಇಬ್ಬರು ಹೋಗಬೇಕಿರುವ ರೈಲು ಪ್ಲಾಟ್‌ಫಾರಂನಲ್ಲಿ ಆಗಮಿಸುತ್ತಿರುತ್ತಾರೆ. ಹುಡುಗ ಮುಂದೆ ಹೋಗಿ ರೈಲು ಹತ್ತಿ, ಯುವತಿಗೆ ನೀನು ಒಳಗೆ ಬಾ ಎಂದು ಹೇಳುತ್ತಾನೆ. ಆದ್ರೆ ಯುವತಿ ಒಂದು ಕ್ಷಣ ತಟಸ್ದಳಾಗಿ ನಿಂತು ಬಿಡುತ್ತಾಳೆ. ಆಗ ಯುವತಿಗೆ ಬಾಲ್ಯದಲ್ಲಿ ತಂದೆ ಹೆಗಲ ಮೇಲೆ ಕುಳಿತು ಹೋಗುವ ನೆನಪು ಕಣ್ಮುಂದೆ ಬರುತ್ತದೆ. ತಾನೂ ಈ ರೀತಿ ಪ್ರೀತಿಸಿದವನಿಗಾಗಿ ಎಲ್ಲರನ್ನೂ ಬಿಟ್ಟು ಹೋಗುತ್ತಿರೋದು ತಪ್ಪು ಎಂದು ತಿಳಿದು ಕಣ್ಣೀರು ಹಾಕುತ್ತಾ ಅಲ್ಲಿಂದ ಹೋಗುತ್ತಾಳೆ. ಹುಡುಗ ಎಷ್ಟೇ ಕೂಗಿದರೂ ಹಿಂದಿರುಗಿಯೋ ನೋಡದೇ ಯುವತಿ ನಿಲ್ದಾಣದಿಂದ ಹೊರಡುತ್ತಾಳೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. 

ಒಂದೇ ಹುಡುಗಿಯನ್ನ ಮದುವೆ ಆಗ್ತಾರೆ ಕುಟುಂಬದ ಎಲ್ಲಾ ಸೋದರರು : ಹೀಗೆ ನಿರ್ಧಾರವಾಗುತ್ತೆ ಏಕಾಂತದ ಸಮಯ!

click me!