ವಯಸ್ಸಿನ ಪ್ರಕಾರ ತಿಂಗಳಿಗೆ ಎಷ್ಟು ಬಾರಿ ಲೈಂಗಿಕ ಸಂಪರ್ಕ ಹೊಂದಬೇಕು? ಸಮೀಕ್ಷೆಯಲ್ಲಿ ಶಾಕಿಂಗ್ ಮಾಹಿತಿ

By Mahmad Rafik  |  First Published Sep 6, 2024, 10:33 PM IST

ಲೈಂಗಿಕ ಜೀವನದ ಕುರಿತಾದ ಸಂಶೋಧನಾ ವರದಿಯೊಂದು ಹೊರ ಬಂದಿದೆ. ಈ ವರದಿಯಲ್ಲಿ ಯಾವ ಪೀಳಿಗೆಯ ಜನರು ತಿಂಗಳಿಗೆ ಎಷ್ಟು ಬಾರಿ ದೈಹಿಕ ಸಂಪರ್ಕ ಬೆಳೆಸುತ್ತಾರೆ ಎಂಬ ಅಂಶ ತಿಳಿದು ಬಂದಿದೆ.


Relationship: ಶಾರೀರಕ ಸಂಬಂಧ ಕುರಿತ ವಿಷಯಗಳನ್ನು ಒಂದು ರೀತಿ ಸಂಕೋಚ ಹಾಗೂ ಅನುಮಾನದಿಂದಲೇ ನೋಡಲಾಗುತ್ತದೆ. ಈ ಕುರಿತು ಗೊಂದಲಗಳಿದ್ದರೂ ಮುಕ್ತವಾಗಿ ಮಾತನಾಡಲು ಇಂದಿಗೂ ಜನರು ಹಿಂದೇಟು ಹಾಕುತ್ತಾರೆ. ಸ್ವತಃ ತಮ್ಮ ಸಂಗಾತಿ ಜೊತೆಯಲ್ಲಿಯೂ ಚರ್ಚಿಸಲು ಸಂಕೋಚಪಡ್ತಾರೆ. ಸೆಕ್ಸ್ ಜೀವನದ ಸಂಬಂಧ ಇಂಡಿಯಾನಾ ಯುನಿವರ್ಸಿಟಿಯ ಕೆನ್ಸ್ ಸಂಸ್ಥೆಯ ಸಂಶೋಧನಾ ವರದಿ ಬಹಿರಂಗಗೊಂಡಿದೆ. ಈ ವರದಿಯಲ್ಲಿ ಬೇರೆ ಬೇರೆ ವಯಸ್ಸಿನ ಜನರು ತಿಂಗಳಿಗೆ ಎಷ್ಟು ಬಾರಿ ದೈಹಿಕ ಸಂಪರ್ಕ ಬೆಳೆಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ. ಇದರ ಜೊತೆ ವರದಿಯಲ್ಲಿ ಹಲವು ಅಚ್ಚರಿಯ ವಿಷಯಗಳ ಬಗ್ಗೆ ತಿಳಿಸಲಾಗಿದೆ. ಜನರೇಷನ್ Z ನ ಲೈಂಗಿಕ ಜೀವನವು ಹಿಂದಿನ ತಲೆಮಾರುಗಳಿಗಿಂತ ಕಡಿಮೆ ಸಕ್ರಿಯವಾಗಿದೆ ಎಂದು ಹೇಳಿದೆ. 

ಈ ವರದಿಗೆ "ದಿ ಟೆಸ್ಟ್ ಆಫ್ ಡೇಟಿಂಗ್: ಹೌ ಜೆನ್ Z ಇಸ್ ರೀಡಿಫೈನಿಂಗ್ ಸೆಕ್ಸಾಸುಲಿಟಿ ಎಂಡ್ ರಿಲೇಶನ್‌ಶಿಪ್" ಎಂದು ಶೀರ್ಷಿಕೆ ನೀಡಲಾಗಿದೆ. ಈ ವರದಿಯನ್ನು ಫೀಲ್ಡ್ (Feeld) ಹೆಸರಿನ ಆಪ್ ಮೂಲಕ 3,310ಕ್ಕೂ ಅಧಿಕ ಜನರಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ಸಮೀಕ್ಷೆಯಲ್ಲಿ 18ರಿಂದ 75 ವರ್ಷದ ಜನರು ಭಾಗಿಯಾಗಿದ್ದರು. ಈ ಸಮೀಕ್ಷೆಯಲ್ಲಿ ಒಟ್ಟು 71 ದೇಶದ ಜನರು ಸೇರಿದ್ದರು. ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಜನರಿಗೆ ಸೆಕ್ಸ್ ಲೈಫ್ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. 

Latest Videos

undefined

ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ Z ಜನರೇಷನ್ ಜನರು, ಹಿಂದಿನ ತಿಂಗಳು ತಾವು ಕೇವಲ ಮೂರು ಬಾರಿ ಸೆಕ್ಸ್ ಮಾಡಿದ್ದೇವೆ ಎಂದಿದ್ದಾರೆ. ಮಿಲೆಮಿಯೆಲ್ಸ್ (Millennials) ಮತ್ತು ಜನರೇಷನ್ ಎಕ್ಸ್ (X) ಜನರು  ತಿಂಗಳಲ್ಲಿ ಹೆಚ್ಚು ಬಾರಿ ಸೆಕ್ಸ್ ಮಾಡಿದ್ದಾರೆ. ಈ ಎರಡೂ ಪೀಳಿಗೆಯವರು ಒಂದು ತಿಂಗಳಲ್ಲಿ ಐದು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಬೂಮರ್ಸ್ (Boomers) ಪೀಳಿಗೆಯೂ ತಿಂಗಳಲ್ಲಿ ಮೂರು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ.  Z ಜನರೇಷನ್ ಮತ್ತು ಬೂಮರ್ಸ್ ಪೀಳಿಗೆಯ ಸೆಕ್ಸ್ ಚಟುವಟಿಕೆ ಇದೆ ಎಂದು ತಿಳಿದು ಬಂದಿದೆ. 

Z ಜನರೇಷನ್ ಕಡಿಮೆ ಶಾರೀರಕ ಸಂಬಂಧದ ಹಿಂದಿನ ಕಾರಣ ಏನು?
ಸಂಶೋಧನಾ ವರದಿಯಲ್ಲಿ Z ಜನರೇಷನ್ ಕಡಿಮೆ ಶಾರೀರಕ ಸಂಬಂಧದ ಹಿಂದಿನ ಕಾರಣ ಏನು ಎಂಬುದರ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಈ ಸಮೀಕ್ಷೆಯ ಪ್ರಕಾರ, ದೈಹಿಕ ಸಂಬಂಧ ಬೆಳೆಸಲು ಈ ಪೀಳಿಗೆಯ ಜನರ ಬಳಿ ಸಮಯವಿಲ್ಲ. ಹಾಗೆ ಈ ಪೀಳಿಗೆಯವರು ತಮ್ಮ ವೃತ್ತಿ ಜೀವನಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ ಮತ್ತು ಇತರೆ ಚಟುವಟಿಕೆಗಳಲ್ಲಿಯೂ ಇವರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಝಡ್ ಮತ್ತು ಬೂಮರ್ಸ್ ಇಬ್ಬರು ಸೆಕ್ಸಯುಲ್ ಫ್ರಿಕ್ವೆನ್ಸಿಯನ್ನು ಎದುರಿಸುತ್ತಾರೆ. ಯುವಕರು ಮತ್ತು ಮಧ್ಯ ವಯಸ್ಕರು ಸಹ ಹೆಚ್ಚು ಲೈಂಗಿಕಾಸಾಕ್ತಿಯನ್ನು ಹೊಂದಿರಲ್ಲ ಎಂಬುವುದು ಇದೇ ವರದಿಯಲ್ಲಿ ಬಹಿರಂಗಗೊಂಡಿದೆ. ಮತ್ತೊಂದು ಅಚ್ಚರಿಯ ವಿಷಯವೆಂದ್ರೆ ಝಡ್ ಜನರೇಷನ್ ಜನರೇಷನ್ ಅರ್ಧಕ್ಕಿಂತ ಹೆಚ್ಚು ಜನರು ಇನ್ನೂ ಸಿಂಗಲ್ ಆಗಿದ್ದಾರೆ. ಜನರೇಷನ್ ಎಕ್ಸ್ ಮತ್ತು ಮಿಲೆನಿಯಲ್ಸ್‌ನಲ್ಲಿ ಶೇ.20ರಷ್ಟು ಜನರು ಮಾತ್ರ ಸಿಂಗಲ್ ಆಗಿದ್ದಾರೆ. 

ರಾತ್ರಿ ಮಲಗುವ ಮುನ್ನ ಎರಡು ಆಹಾರದ ಸಂಯೋಜನೆ ತಿಂದ್ರೆ ಪುರುಷರ ಆರೋಗ್ಯದಲ್ಲಾಗುತ್ತೆ ಚಮತ್ಕಾರ!

ಝಡ್ ಜನರೇಷನ್ ಸೆಕ್ಸ್ ವಿಷಯದಲ್ಲಿ ಕಡಿಮೆ ಸಕ್ರಿಯರಾಗಿದ್ದರೂ, ಬೆಡ್‌ರೂಮ್‌ನಲ್ಲಿ ಹೆಚ್ಚು ಅಡ್ವೆಂಚರ್‌ಗಳಾಗಿದ್ದಾರೆ. ಈ ಸಮೀಕ್ಷೆಯಲ್ಲಿ ಭಾಗಿಯಾದ ಬಳಿಕ ಝಡ್ ಜನರೇಷನ್‌ನ ಶೇ.55ರಷ್ಟು ಮಂದಿಗೆ ಹೊಸ ಕಿಕ್ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಮಿಲೆನಿಯಲ್ಸ್‌ ಶೇ.49, ಜನರೇಷನ್ ಎಕ್ಸ್ ಶೇ.39 ಮತ್ತು ಬೂಮರ್ಸ್ ನ ಶೇ.33ರಷ್ಟು ಜನರು ಲೈಂಗಿಕ ಜೀವನದಲ್ಲಿ ಕಿಕ್ ಸಿಕ್ಕಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅಧ್ಯಯನ ವರದಿಯ ಪ್ರಕಾರ, ಲೈಂಗಿಕ ಸಂಬಂಧ ಬೆಳೆಸುವ ಸಾಮಾರ್ಥ್ಯ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವರು ವಾರಕ್ಕೊಮ್ಮೆ ಬಯಸಿದ್ರೆ, ಬೇರೆಯವರ ಆಸಕ್ತಿ ಬೇರೆಯಾಗಿರಬಹುದು. ಹಾಗಾಗಿ ನಿರ್ಧಿಷ್ಟ ಸಂಖ್ಯೆ ಬಗ್ಗೆ ಹೇಳಲು ಆಗಲ್ಲ ಎಂಬುವುದು ವರದಿ ಹೇಳಿದೆ. ಆದರೆ ಶಾರೀರಿಕ ಸಂಬಂಧ ಬೆಳೆಸಿದಾಗ ಇಬ್ಬರಿಗೂ ಸಂತೃಪ್ತಿ ಸಿಗೋದು ಮುಖ್ಯ ಎಂಬ ಅಂಶವನ್ನು ಸಹ ಉಲ್ಲೇಖಿಸಿದೆ.

ಈ ನಾಲ್ಕು ಜೀವಸತ್ವಗಳು ಪುರುಷರ ವೀರ್ಯವನ್ನು ಹೆಚ್ಚಿಸುವ ಮಷೀನ್‌ಗಳು

click me!