ಭಾರತದ ಕೆಲವು ಭಾಗಗಳಲ್ಲಿ, ಕುಟುಂಬದ ಎಲ್ಲಾ ಸೋದರರು ಒಂದೇ ಮಹಿಳೆಯನ್ನು ಮದುವೆಯಾಗುವ ಪದ್ಧತಿ ಇನ್ನೂ ಜೀವಂತವಾಗಿದೆ. ಈ ಬಹುಪತಿ ಪದ್ಧತಿಯಲ್ಲಿ, ಏಕಾಂತತೆಯನ್ನು ಕಾಪಾಡಲು ವಿಶೇಷ ನಿಯಮಗಳನ್ನು ಅನುಸರಿಸಲಾಗುತ್ತದೆ.
ನವದೆಹಲಿ: ಭಾರತ ತನ್ನ ವಿವಿಧ ಮತ್ತು ಸಮೃದ್ಧವಾದ ಸಂಸ್ಕೃತಿಯಿಂದಾಗಿ ಪ್ರಪಂಚದಲ್ಲಿ ಗುರುತಿಸಿಕೊಳ್ಳುತ್ತದೆ. ಭಾರತದಲ್ಲಿ ಹುಟ್ಟುವ ಮಗುನಿಂದ ಹಿಡಿದು ಅಂತ್ಯಸಂಸ್ಕಾರಕ್ಕೆ ಆಚರಣೆಗಳಿವೆ. ಈ ಕಾರ್ಯಕ್ರಮವನ್ನು ಹೀಗೆಯೇ ಮಾಡಬೇಕೆಂದು ನಮ್ಮ ಪೂರ್ವಜರು ಹೇಳಿಕೊಂಡಿದ್ದು, ಜನರು ಇಂದಿಗೂ ಈ ಶಾಸ್ತ್ರಗಳನ್ನು ಫಾಲೋ ಮಾಡ್ತಾರೆ. ಕಾಲ ಬದಲಾದಂತೆ ಕೆಲವೊಂದು ಶಾಸ್ತ್ರಗಳಲ್ಲಿ ಸಣ್ಣ ಸಣ್ಣ ಬದಲಾವಣೆಗಳು ಆಗುತ್ತಿವೆ. ಆದರೆ ಭಾರತದ ಈ ರಾಜ್ಯದಲ್ಲಿ ಇನ್ನು ಹಳೆಯ ಪದ್ಧತಿ ಚಾಲ್ತಿಯಲ್ಲಿದೆ. ಈ ವಿಷಯ ಕೇಳಿದರೆ ನೀವೂ ಖಂಡಿತ ಆಶ್ಚರ್ಯಚಕಿತರಾಗುತ್ತೀರಿ. ಈ ಗ್ರಾಮದಲ್ಲಿ ಕುಟುಂಬದ ಎಲ್ಲಾ ಸೋದರರು ಒಂದೇ ಹುಡುಗಿಯನ್ನು ಮದುವೆಯಾಗುತ್ತಾರೆ.
ಮಹಾಭಾರತದ ಪಂಚ ಪಾಂಡವರನ್ನು ದ್ರೌಪದಿ ಮದುವೆಯಾಗಿರುತ್ತಾರೆ. ಈ ಗ್ರಾಮದಲ್ಲಿ ಒಡಹುಟ್ಟಿದ ಎಲ್ಲಾ ಸೋದರರನ್ನು ಒಬ್ಬಳೇ ಯುವತಿ ಮದುವೆಯಾಗುತ್ತಾಳೆ. ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶದ ಕೆಲ ಭಾಗಗಳಲ್ಲಿ ಈ ಪದ್ಧತಿ ಇನ್ನೂ ಜೀವಂತವಾಗಿದೆ. ಇದನ್ನು ಬಹುಪತಿ ಪದ್ಧತಿ ಎಂದೂ ಕರೆಯಲಾಗುತ್ತದೆ. ಇಲ್ಲಿ ಓರ್ವ ಮಹಿಳೆಗೆ ಒಂದಕ್ಕಿಂತೆ ಹೆಚ್ಚು ಸೋದರರನ್ನು ಮದುವೆಯಾಗುತ್ತಾಳೆ. ಕೆಲ ವರದಿಗಳ ಪ್ರಕಾರ, ಈ ಬಹುಪತಿ ಪದ್ಧತಿ ಕೊನೆಯಾಗಿದೆ. ಆದ್ರೆ ಕೆಲ ಗ್ರಾಮದಲ್ಲಿ ಕದ್ದುಮುಚ್ಚಿಯೂ ಓರ್ವ ಮಹಿಳೆ ಏಕಕಾಲದಲ್ಲಿಯೇ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಸೋದರರನನ್ನು ಮದುವೆಯಾಗುತ್ತಾಳೆ ಎಂದು ಹೇಳಲಾಗುತ್ತದೆ.
undefined
ಮದುವೆಗೂ ಮುನ್ನ ಯುವಕರು ನೋಡಬೇಕಾದ ನಾಲ್ಕು ಪ್ರಮುಖ ಸಿನಿಮಾಗಳು!
ಏಕಾಂತದ ಸಮಯ
ಹೀಗೆ ಮದುವೆಯಾದ ನಂತರ ಪತ್ನಿ ಜೊತೆಗೆ ಏಕಾಂತವಾಗಿ ಸಮಯ ಕಳೆಯಲು ನಿರ್ಧರಿಸಲು ವಿಶೇಷ ಮಾನದಂಡ ಬಳಕೆ ಮಾಡಲಾಗುತ್ತದೆ. ಪತ್ನಿ ಜೊತೆ ಓರ್ವ ಏಕಾಂತವಾಗಿ ಸಮಯ ಕಳೆಯುತ್ತಿದ್ದರೆ ಕೋಣೆಯ ಹೊರಗೆ ಆತನ ಟೋಪಿ ಹಾಕಲಾಗಿರುತ್ತದೆ. ಈ ಸಮಯದಲ್ಲಿ ಮತ್ತೋರ್ವ ಸೋದರ ಕೋಣೆಯೊಳಗೆ ಪ್ರವೇಶಿಸುವಂತಿಲ್ಲ ಎಂಬ ನಿಯಮವಿದೆ ಎಂದು ವರದಿಯಾಗಿದೆ. ಸೋದರರು ಸಹ ಯಾರು ಯಾವ ಸಮಯದಲ್ಲಿ ಸಮಯ ಕಳೆಯಬೇಕು ಎಂಬುದರ ಬಗ್ಗೆ ಮೊದಲೇ ನಿರ್ಧರಿಸಿಕೊಂಡಿರುತ್ತಾರೆ. ಆದರೆ ಈ ಬಹುಪತಿ ಪದ್ಧತಿ ಹಂತ ಹಂತವಾಗಿ ಕಡಿಮೆಯಾಗುತ್ತಿದೆ. ಇಂದೂ ಸಹ ಈ ರೀತಿಯ ಕುಟುಂಬಗಳು ಕಾಣ ಸಿಗುತ್ತವೆ.
ಈ ಭಾಗದಲ್ಲಿ ಬಹುಪತಿ ಪದ್ಧತಿ ಜಾರಿಗೆ ಬರಲು ಕಾರಣ ಆಸ್ತಿ ಹಂಚಿಕೆ. ತಮ್ಮ ಕೃಷಿ ಭೂಮಿ ಹಂಚಿಕೆಯಾಗಬಾರದು ಎಂಬ ಕಾರಣಕ್ಕೆ ಈ ಪದ್ಧತಿ ಜಾರಿಗೆ ಬಂತು ಎಂದು ಇಲ್ಲಿಯ ಹಿರಿಯರು ಹೇಳುತ್ತಾರೆ. 1950ರವರೆಗೆ ಟಿಬೇಟ್‌ನಲ್ಲಿ ಬೌದ್ಧ ಭಿಕ್ಷುಗಳ ಸಂಖ್ಯೆ ಅಧಿಕವಾಗಿತ್ತು. ಪ್ರತಿ ಕುಟುಂಬದ ಕೊನೆಯ ಮಗನನ್ನು ಭಿಕ್ಷು ಮಾಡಲಾಗುತ್ತಿತ್ತು. ಹೀಗಾಗಿ ಜಮೀನು ಹಂಚಿಕೆಯಾಗೋದನ್ನು ತಡೆಯಲು ಬಹುಪತಿ ಜಾರಿಗೆ ಬಂದಿದೆ ಎನ್ನಲಾಗುತ್ತಿದೆ.
"ಜೀವನದಲ್ಲಿ ಎಲ್ಲವನ್ನೂ ಮಾಡಿ, ಮದುವೆ ಮಾತ್ರ ಅಗಬೇಡಿ...", ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ