
ಅತ್ತಿಗೆ ಜೊತೆ ಸಂಬಂಧ ಬೆಳೆಸಿ ಸಿಕ್ಕಿ ಬಿದ್ದ ಮೈದುನನೊಬ್ಬ ಗೋಳೋ ಅಂತ ಅತ್ತಿದ್ದಾನೆ. ಅತ್ತಿಗೆ ಜೊತೆ ರೂಮಿನಲ್ಲಿರುವಾಗ ಅಣ್ಣನ ಕಣ್ಣಿಗೆ ಬಿದ್ದಿದ್ದಾನೆ. ಇಬ್ಬರ ಚೆಲ್ಲಾಟ ನೋಡಿಯೂ ಅಣ್ಣ ಸುಮ್ಮನಿರ್ತಾನಾ? ನನ್ಗೆ ಈ ಹೆಂಡ್ತಿ ಬೇಡ, ನನ್ನ ತಮ್ಮ ಮದುವೆ ಆಗ್ಲಿ ಅಂದಿದ್ದಾನೆ. ಅತ್ತಿಗೆ ಕೂಡ, ಮೈದುನನಿಗೆ ಫುಲ್ ವೋಟ್ ನೀಡಿದ್ದಾಳೆ. ಆದ್ರೆ ಮೈದುನ ಮಾತ್ರ ಅಡಗತ್ತರಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆ ಕಡೆ ಮದುವೆ ಬೇಡ ಅನ್ನೋಕೂ ಆಗಲ್ಲ, ಈ ಕಡೆ ಮದುವೆ ಮಾಡ್ಕೊಳ್ಳೋಕು ಆಗಲ್ಲ. ಮದುವೆ ಬೇಡ, ಪ್ರೀತಿ ಬೇಕು ಎನ್ನುವ ಸ್ಥಿತಿ ಅವನದ್ದು. ಕೊನೆಯಲ್ಲಿ ಏನಾಯ್ತು ಗೊತ್ತಾ?
ಘಟನೆ ಬಿಹಾರದ ಕೋಯಲ್ ಗ್ರಾಮದಲ್ಲಿ ಘಟನೆ ನಡೆದಿದೆ. 24 ವರ್ಷದ ದಿಲೀಪ್ 22 ವರ್ಷದ ರಾಣಿಯನ್ನು ಪ್ರೀತಿ ಮಾಡ್ತಿದ್ದ. ಎರಡುವರೆ ವರ್ಷದಿಂದ ಇಬ್ಬರ ಮಧ್ಯೆ ಪ್ರೀತಿ ಸಂಬಂಧವಿತ್ತು. ಆದ್ರೆ 2022ರಲ್ಲಿ ದಿಲೀಪ್ ಮಲ ಸೋದರ ಸೋನು ಜೊತೆ ನಡೆದಿತ್ತು. ಸೋನು ಹಾಗೂ ರಾಣಿ ಮದುವೆಯಲ್ಲಿ ದಿಲೀಪ್ ಕೂಡ ಪಾಲ್ಗೊಂಡಿದ್ದ. ಮದುವೆಯಲ್ಲಿ ಡಾನ್ಸ್ ಕೂಡ ಮಾಡಿದ್ದ. ಆರು ತಿಂಗಳು ಎಲ್ಲ ಚೆನ್ನಾಗಿತ್ತು. ದಿಲೀಪ್ ಹಾಗೂ ಸೋನು ಬಾಲ್ಯದಿಂದಲೂ ಆಪ್ತರಾಗಿದ್ದ ಕಾರಣ ಸೋನು ಮನೆಗೆ ದಿಲೀಪ್ ಆಗಾಗ ಬರ್ತಿದ್ದ. ಮತ್ತೆ ದಿಲೀಪ್ ಹಾಗೂ ರಾಣಿ ಸಂಬಂಧ ಶುರುವಾಗಿತ್ತು. ಸೋನು ಮನೆಯಲ್ಲಿಲ್ಲ ಎಂದಾಗೆಲ್ಲ ದಿಲೀಪ್ಗೆ ಆಹ್ವಾನ ಹೋಗ್ತಿತ್ತು. ನಾಲ್ಕು ತಿಂಗಳ ಹಿಂದೆ ಪತ್ನಿ ರಾಣಿ ಮೇಲೆ ಸೋನುಗೆ ಅನುಮಾನ ಬಂದಿತ್ತು. ನಾಲ್ಕು ತಿಂಗಳ ಹಿಂದೆ ದಿಲೀಪ್ ಹಾಗೂ ರಾಣಿ ರೂಮಿನಲ್ಲಿದ್ದಾಗ ಸೋನು ಕಣ್ಣಿಗೆ ಬಿದ್ದಿದ್ದಾರೆ. ಇದಕ್ಕೆ ಸೋನು ವಿರೋಧ ವ್ಯಕ್ತಪಡಿಸಿದ್ದಾನೆ. ಇಬ್ಬರ ಮಧ್ಯೆ ಗಲಾಟೆ ಜೋರಾಗ್ತಿದ್ದಂತೆ ರಾಣಿ ತವರು ಸೇರಿದ್ದಾಳೆ. ತವರಿನಲ್ಲೂ ರಾಣಿ ಹಾಗೂ ದಿಲೀಪ್ ಒಂದಾಗಲು ಶುರು ಮಾಡಿದ್ದಾರೆ. ಇಬ್ಬರೂ ಕದ್ದು ಮುಚ್ಚಿ ಭೇಟಿಯಾಗಿದ್ದಾರೆ. ಮೂರು ದಿನದ ಹಿಂದೆ ರಾಣಿ ಮನೆಗೆ ದಿಲೀಪ್ ಬಂದ ವಿಷ್ಯ ಸೋನು ಕುಟುಂಬಕ್ಕೆ ಗೊತ್ತಾಗಿದೆ. ಊರಿನವರೆಲ್ಲ ಕೋಲು ಹಿಡಿದು ರಾಣಿ ಮನೆಗೆ ಬಂದಿದ್ದಾರೆ. ಮನೆಯಲ್ಲಿ ದೊಡ್ಡ ಗಲಾಟೆ ನಡೆದಿದೆ.
ಪಂಚಾಯತಿ ತೀರ್ಮಾನ ಏನು? : ರಾಣಿ ಹಾಗೂ ದಿಲೀಪ್ ಪ್ರೀತಿ ವಿಷ್ಯ ಗೊತ್ತಾಗ್ತಿದ್ದಂತೆ ಊರಿನ ಮುಖ್ಯರು ಪಂಚಾಯತಿ ಕರೆದಿದ್ದಾರೆ. ಅಲ್ಲಿ, ರಾಣಿಯನ್ನು ದಿಲೀಪ್ ಮದುವೆ ಆಗ್ಬೇಕು ಎನ್ನುವ ತೀರ್ಪು ಬಂದಿದೆ. ರಾಣಿ ನನ್ನ ಜೊತೆ ಇರೋದು ಬೇಡ, ಅವಳು ದಿಲೀಪ್ ಜೊತೆಗಿದ್ರೆ ನನಗೆ ಬೇಸರ ಇಲ್ಲ ಅಂತ ಸೋನು ತನ್ನ ಅಭಿಪ್ರಾಯ ಹೇಳಿದ್ದ. ರಾಣಿ ಕೂಡ ದಿಲೀಪ್ ಮದುವೆ ಆಗಲು ಒಪ್ಪಿದ್ದಳು. ಆದ್ರೆ ದಿಲೀಪ್ ಗೆ ಮಾತ್ರ ಮದುವೆ ಆಗೋಕೆ ಮನಸ್ಸಿರಲಿಲ್ಲ. ರಾಣಿಗೆ ಡಿವೋರ್ಸ್ ಸಿಕ್ಕಿಲ್ಲ, ನಾನು ಮದುವೆ ಆಗಲ್ಲ ಅಂತಾನೇ ಇದ್ದ. ಆದ್ರೆ ಊರಿನವರು ಬಿಡಲಿಲ್ಲ. ಸೋನು ಒಪ್ಪಿಗೆ ಪತ್ರ ಪಡೆದ ಊರಿನವರು, ದಿಲೀಪ್ ಜೊತೆ ರಾಣಿ ಮದುವೆ ಮಾಡಿಸಿದ್ದಾರೆ. ಅಲ್ಲಿನ ಶಿವ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಮದುವೆ ನಡೆದಿದೆ. ಆದ್ರೆ ಮದುವೆ ವೇಳೆ ನನಗೆ ಅತ್ತಿಗೆ ಜೊತೆ ಮದುವೆ ಬೇಡ ಅಂತ ದಿಲೀಪ್ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಏನೇ ಮಾಡಿದ್ರೂ ದಿಲೀಪ್ ಮದುವೆ ನಿಲ್ಲಲಿಲ್ಲ. ರಾಣಿ ಈಗ ದಿಲೀಪ್ ಮನೆ ಸೇರಿದ್ದಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.