ಪುಟ್ಟ ಕಂದನ ಹೆಗಲ ಮೇಲೆ ಬದುಕಿನ ಭಾರ: ಮನಕಲುಕುವ ವಿಡಿಯೋ ವೈರಲ್

Published : May 21, 2025, 09:58 AM ISTUpdated : May 21, 2025, 10:08 AM IST
ಪುಟ್ಟ ಕಂದನ ಹೆಗಲ ಮೇಲೆ ಬದುಕಿನ ಭಾರ: ಮನಕಲುಕುವ ವಿಡಿಯೋ ವೈರಲ್

ಸಾರಾಂಶ

ನವಜಾತ ಶಿಶುವಿನೊಂದಿಗೆ ರಾಪಿಡೋ ಹತ್ತಿದ ಪುಟ್ಟ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವ ತಾಯಿಯನ್ನು ನೋಡಲು ತಂದೆ ರಾಪಿಡೋ ಬುಕ್ ಮಾಡಿದ್ದರು ಎಂದು ಬಾಲಕ ತಿಳಿಸಿದ್ದಾನೆ.

ಜೀವನ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ, ಕೆಲವರು ಹುಟ್ಟುತ್ತಲೇ ಚಿನ್ನದ ಚಮಚದಲ್ಲಿ ತಿನ್ನುವಂತಹ ಯೋಗದೊಂದಿಗೆ ಹುಟ್ಟಿದ್ದರೆ ಮತ್ತೆ ಕೆಲವರಿಗೆ ತುತ್ತು ಅನ್ನಕ್ಕೂ ಕಷ್ಟವಿರುತ್ತದೆ. ಹೀಗಾಗಿ ಕೆಲವು ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಜೀವನದ ಬಂಡಿಯನ್ನು ಎಳೆಯುವ ಜವಾಬ್ದಾರಿ ಹೆಗಲ ಮೇಲೆ ಬಿದ್ದಿರುತ್ತದೆ. ಬಾಲ್ಯ ಏನೋ ಎಂದು ಅರಿವಾಗುವುದಕ್ಕೆ ಮೊದಲೇ ಬದುಕಿನ ಜವಾಬ್ದಾರಿಯ ಭಾರ ಹೆಗಲ ಮೇಲಿರುತ್ತದೆ. ಅದೇ 
ರೀತಿ ಇಲ್ಲೊಂದು ಕಡೆ ವೈರಲ್ ಆದ ವೀಡಿಯೋವೊಂದು ಎಳೆ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿಗ ಸಿಲುಕಿದ ಪುಟ್ಟ ಬಾಲಕನನ್ನು ತೋರಿಸುತ್ತಿದ್ದು, ಮನಕಲುಕುವಂತಿದೆ. 

ಅಂದೇ ಹಾಗೆ ಈ ವೀಡಿಯೋವನ್ನು ನಗರ ಪ್ರದೇಶದಲ್ಲಿ ಸಾರಿಗೆ ಸೇವೆ ನೀಡುವ ರಾಪಿಡೋ ಚಾಲಕರೋಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನಗರ ಪ್ರದೇಶಗಳಲ್ಲಿ ಜನ ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಈ ರಾಪಿಡೋ ಮೂಲಕ ಸಾಗುತ್ತಾರೆ.  ಹೀಗೆ ರಾಪಿಡೋ ಮೂಲಕ ಸಾರಿಗೆ ಸೇವೆ ನೀಡುತ್ತಿದ್ದ ವ್ಲಾಗರ್ ಒಬ್ಬರು ಮನಕಲುಕುವ ಘಟನೆಯೊಂದನ್ನು ಹಂಚಿಕೊಂಡಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಬುಕ್ಕಿಂಗ್ ಆದ ಹಿನ್ನೆಲೆಯಲ್ಲಿ ಕಸ್ಟಮರ್ ಅನ್ನು ಕರೆದುಕೊಂಡು ಬಂದು ಅವರು ಹೋಗಬೇಕಾದ ಸ್ಥಳಕ್ಕೆ ತಲುಪಿಸಲು ಲೋಕೇಷನ್‌ಗೆ ಹೋದ ರಾಪಿಡೋ ಚಾಲಕನಿಗೆ ಅಲ್ಲಿ ಶಾಕ್ ಕಾದಿತ್ತು. ಏಕೆಂದರೆ ಅಲ್ಲಿದ್ದಿದ್ದು, ಒಂದು ನವಜಾತ ಶಿಶು ಹಾಗೂ ಇನ್ನೊಂದು ಆ ಶಿಶುವಿಗಿಂತ ಹೆಚ್ಚೆಂದರೆ 4 ವರ್ಷ ದೊಡ್ಡ ಇರಬಹುದಾದ ಮತ್ತೊಂದು ಮಗು. ಅಂದಾಜು 4ರಿಂದ 5 ವರ್ಷ ಪ್ರಾಯದ ಮಗು ತನ್ನ ಕೈನಲ್ಲಿ ಪುಟ್ಟ ಕಂದನನ್ನು  ಎತ್ತಿಕೊಂಡು ಭಯ್ಯಾ ರಾಪಿಡೋ ನಾ ಎಂದು ಕೇಳುತ್ತಾನೆ. ಹೌದು ರಾಪಿಡೋ ನೇ ನೀವೆ ನಾ ರಾಪಿಡೋ ಬುಕ್ ಮಾಡಿದ್ದು ಎಂದು ರಾಪಿಡೋ ಚಾಲಕ ಕೇಳುತ್ತಾನೆ. ಹೌದು ಅಪ್ಪ ಬುಕ್ ಮಾಡಿದ್ದು, ಎಂದು ಮಗು ಆ ವೇಳೆ ಹೇಳುತ್ತದೆ. ಆ ಪುಟ್ಟ ಬಾಲಕನ ಕೈನಲ್ಲಿದ್ದ ಮಗುವನ್ನು ನೋಡಿ ರಾಪಿಡೋ ಚಾಲಕ ಮಗುವನ್ನು ಎತ್ತಿಕೊಂಡು ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಬಾಲಕನನ್ನು ಕೇಳುತ್ತಾನೆ. ಆಗ ಬಾಲಕ ಆಸ್ಪತ್ರೆಗೆ ಎಂದು ಹೇಳುತ್ತಾನೆ.

ಈ ವೇಳೆ ಬಾಲಕ ಅಮ್ಮ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾಳೆ ಅಪ್ಪ ಅಲ್ಲಿಗೆ ಹೋಗಿದ್ದಾರೆ. ರಾಪಿಡೋವನ್ನು ಅಪ್ಪ ಅಲ್ಲಿಂದ ಬುಕ್ ಮಾಡಿದರು ಎಂದು ಬಾಲಕ ಹೇಳುತ್ತಾನೆ. ಹಾಗಿದ್ರೆ ಮನೆಯಲ್ಲಿ ಬೇರೆ ಯಾರೂ ದೊಡ್ಡವರು ಇಲ್ವಾ? ರಾಪಿಡೋ ನಿಮಗಾಗಿ ಬುಕ್ ಮಾಡಿದ್ದ ಎಂದು ಚಾಲಕ ಕೇಳಿದ್ದಾರೆ. ಅದಕ್ಕೆ ಬಾಲಕ ಹೌದು ಎಂದು ಹೇಳುತ್ತಾನೆ. ಇದನ್ನು ಕೇಳಿ ರಾಪಿಡೋ ಚಾಲಕನಿಗೂ ಶಾಕ್ ಆಗಿದೆ. ಅರೇ ಭಾಯಿ ಎಂದು ಹೇಳಿ ಆತ ಪುಟ್ಟ ಮಗುವನ್ನು ಎತ್ತಿಕೊಂಡು ಬೈಕ್‌ನ ಮೇಲೆ ಕೂರಿಸಿಕೊಂಡಿದ್ದು, ಬಳಿಕ ಆಸ್ಪತ್ರೆಯ ಸಮೀಪ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಬೈಕ್‌ನಿಂದ ಇಳಿದ ಪುಟ್ಟ ಬಾಲಕ  ಬಳಿಕ ಈ ಪುಟ್ಟ ಮಗುವನ್ನು ಎತ್ತಿಕೊಂಡು ಆಸ್ಪತ್ರೆಯತ್ತ ನಡೆದು ಹೋಗಿದ್ದಾನೆ.

ಸಣ್ಣ ಮಗು ದೊಡ್ಡ ಹೀರೋ ಎಂದು ಬರೆದು ವ್ಲಾಗರ್ ಈ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ಬಹಳ ಭಾವುಕರಾಗಿದ್ದಾರೆ. ಅನೇಕರು ಈ ವೀಡಿಯೋ ನೋಡಿ ನಗು ಅಳು ಬೇಸರ ಸಿಟ್ಟು ಎಲ್ಲವೂ ಒಟ್ಟಿಗೆ ಬರುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನೀವು ಅವರನ್ನು ಆಸ್ಪತ್ರೆಯೊಳಗೆ ಬಿಟ್ಟು ಬರಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವ್ಲಾಗರ್ ತಾನು ಅವರನ್ನು ಆಸ್ಪತ್ರೆಯ ಒಳಗೆ ಬಿಟ್ಟು ಬಂದಿದ್ದೇನೆ ಅಲ್ಲಿ ಕ್ಯಾಮರಾ ಸಾಗಿಸಲು ಅನುಮಿ ಇರಲಿಲ್ಲ ಹೀಗಾಗಿ ರೆಕಾರ್ಡ್ ಮಾಡಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. 

ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ವಿಭಕ್ತ ಕುಟುಂಬಗಳಿರುತ್ತವೆ. ಅಪ್ಪ ಅಮ್ಮ ಮಗ ಅಥವಾ ಮಗಳು ಈ ಕುಟುಂಬದಲ್ಲಿರುತ್ತವೆ. ಎರಡು ಮಕ್ಕಳಿದ್ದರೆ ಅದೇ ಹೆಚ್ಚು ಇಂತಹ ಸ್ಥಿತಿಯಲ್ಲಿ ಕೆಲವು ಕಡೆ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಯಾರು ಕೂಡ ಇರುವುದಿಲ್ಲ. ಅಪ್ಪ ಅಮ್ಮ ಇಬ್ಬರಲ್ಲಿ ಯಾರಾದರು ಒಬ್ಬರು ಅನಾರೋಗ್ಯಕ್ಕೊಳಗಾದರೂ ಇದೇ ದುಸ್ಥಿತಿ ನಿರ್ಮಾಣವಾಗುತ್ತದೆ. ಅಂತಹದ್ದೇ ಸ್ಥಿತಿ ಇಲ್ಲಿ ನಿರ್ಮಾಣವಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!