ಐಷಾರಾಮಿ ಬಂಗಲೆಯಲ್ಲಿ ವಾಸ, ಬಿಎಂಡಬ್ಲ್ಯು ಕಾರಲ್ಲಿ ಓಡಾಟ.. ಎಷ್ಟು ಲಕ್ಕಿ ಈ ನಾಯಿ!

Published : Mar 05, 2024, 12:23 PM IST
ಐಷಾರಾಮಿ ಬಂಗಲೆಯಲ್ಲಿ ವಾಸ,  ಬಿಎಂಡಬ್ಲ್ಯು ಕಾರಲ್ಲಿ ಓಡಾಟ.. ಎಷ್ಟು ಲಕ್ಕಿ ಈ ನಾಯಿ!

ಸಾರಾಂಶ

ಐಷಾರಾಮಿ ಬದುಕಿಗೆ ಮನುಷ್ಯ ಹಗಲಿರುಳು ದುಡಿಯುತ್ತಾನೆ. ಎಷ್ಟೇ ಮಾಡಿದ್ರೂ ಸ್ವಂತ ಮನೆ ತೆಗೆದುಕೊಳ್ಳೋಕೆ ಸಾಧ್ಯವಾಗಲ್ಲ. ಆದ್ರೆ ಕೆಲ ಪ್ರಾಣಿಗಳು ಪ್ರಾಮಾಣಿಕ ಪ್ರೀತಿ ತೋರಿಸಿ ಬದುಕು ಬದಲಿಸಿಕೊಳ್ತಾರೆ. ಅದಕ್ಕೆ ಗುಂಥರ್ ಬೆಸ್ಟ್ ಎಗ್ಸಾಂಪಲ್.      

ಹಿಂದೆ ಮನೆಯ ಹೊರಗೆ ಇರ್ತಿದ್ದ ನಾಯಿ ಮನೆಯೊಳಗೆ ಜಾಗ ಪಡೆದು ಅನೇಕ ವರ್ಷ ಕಳೆದಿದೆ. ಜನರು ನಾಯಿಯನ್ನು ಮಕ್ಕಳಂತೆ ಸಾಕುತ್ತಾರೆ. ಅದಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯವನ್ನು ಒದಗಿಸುತ್ತಾರೆ. ಮನೆ ಮಂದಿಯಂತೆ ಎಲ್ಲ ಕಡೆ ಸುತ್ತಾಡುವ ಕೆಲ ನಾಯಿಗಳಿಗೆ ಮಲಗಲು ಬೆಡ್, ಒಳ್ಳೆ ಆಹಾರ ಹಾಗೂ ಪ್ರವಾಸದ ಸೌಲಭ್ಯ ಸಿಗುತ್ತದೆ. ಆದ್ರೆ ನಾವು ಈಗ ಹೇಳ್ತಿರುವ ನಾಯಿ ಎಲ್ಲರಿಗಿಂತ ಭಿನ್ನ. ಅದ್ರ ಐಷಾರಾಮಿ ಬದುಕು ನೋಡಿದ್ರೆ ಸಾಮಾನ್ಯ ಜನರು ಹೊಟ್ಟೆ ಉರಿದುಕೊಳ್ತಾರೆ. ಅದರ ಬಳಿ ಇರುವ ಸಂಪತ್ತಿನ ಅರ್ಧ ಭಾಗ ನಮ್ಮ ಕೈನಲ್ಲಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಎಂದುಕೊಳ್ತಾರೆ. ಎಲ್ಲದಕ್ಕೂ ಅದೃಷ್ಟ ಇರಬೇಕು ಎಂಬ ಮಾತಿಗೆ ಈ ನಾಯಿ ಸೂಕ್ತ ನಿದರ್ಶನ. ಶ್ರೀಮಂತೆಯ ಕೈನಲ್ಲಿ ಬೆಳೆದ ನಾಯಿ ಈಗ ಆ ಎಲ್ಲ ಆಸ್ತಿಯ ಮಾಲಿಕ.

ವಿಶ್ವ (World) ದ ಅತ್ಯಂತ ಶ್ರೀಮಂತ ನಾಯಿ (Dog) : ಇದನ್ನು ವಿಶ್ವದ ಅತ್ಯಂತ ಶ್ರೀಮಂತ ನಾಯಿ ಎಂದೇ ಗುರುತಿಸಲಾಗಿದೆ. ನಾಯಿಯ ಹೆಸರು ಗುಂಥರ್ VI. ಇದು ಜರ್ಮನ್ ಶೆಫರ್ಡ್ ನಾಯಿ. ಮಡೋನಾ (Madonna) ಅವರ ಹಳೆಯ ಮನೆಯಲ್ಲಿ ಗುಂಥರ್ ವಾಸವಾಗಿದೆ. ಪ್ರಸ್ತುತ 65 ಮಿಲಿಯನ್ ಪೌಂಡ್ ಮೌಲ್ಯದ ಮನೆಯಲ್ಲಿ ಗುಂಥರ್ ವಾಸಮಾಡ್ತಿದೆ.

Earning Money : ಇಂದೆಂಥ ಕೆಲಸ..! ರಾಜಕುಮಾರಿ ಡ್ರೆಸ್ ಧರಿಸಿ ಲಕ್ಷ ಗಳಿಸ್ತಾಳೆ ಈಕೆ

ಗುಂಥರ್ ಬಳಿ ಏನೆಲ್ಲ ಇದೆ ಗೊತ್ತಾ? : ಗುಂಥರ್ ಬಳಿ ಐಷಾರಾಮಿ ಬಂಗಲೆ ಇದೆ. ಸುತ್ತಾಡಲು ಕಾರಿದೆ. ವೈಯಕ್ತಿಕ ಹಡಗಿನ ಸೌಲಭ್ಯವಿದೆ. ಸ್ವಂತ ಫುಟ್ಬಾಲ್ ಕ್ಲಬ್ ಇದೆ. ಅದು ಆಗಾಗ್ಗೆ ಖಾಸಗಿ ಹಡಗುಗಳಲ್ಲಿ ಪ್ರಯಾಣಿಸುತ್ತದೆ. 

ಗುಂಥರ್ ಮೇಲ್ವಿಚಾರಕ ಯಾರು? : ಗುಂಥರ್ ಬಳಿ ಇರುವ  ಈ ಹಣದ ಮೇಲೆ ಗುಂಥರ್ ಗೆ ಹಿಡಿತವಿಲ್ಲ. ಮಧ್ಯವರ್ತಿ 66 ವರ್ಷದ ಇಟಾಲಿಯನ್ ವಾಣಿಜ್ಯೋದ್ಯಮಿ ಮೌರಿಜಿಯೊ ಮಿಯಾನ್ ನಾಯಿ ಹಾಗೂ ನಾಯಿ ಸಂಪತ್ತಿನ ಮೇಲ್ವಿಚಾರಣೆ ಮಾಡುತ್ತಾರೆ. ನಾಯಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸಿಕೊಡುವುದು ಅವರ ಜವಾಬ್ದಾರಿ.

ದುಬಾರಿ ಮನೆ, ಕೆಲಸಕ್ಕೆ ಜನ, ಐಷಾರಾಮಿ ಕಾರು ಸೇರಿದಂತೆ ಬೇಕಾದಷ್ಟು ಹಣ ಇರುವ ಗುಂಥರ್ ಬಳಿ ಇಷ್ಟೆಲ್ಲ ಎಲ್ಲಿಂದ ಬಂತು ಎಂಬ ಪ್ರಶ್ನೆ ಕಾಡೋದು ಸಹಜ. ಗುಂಥರ್ ಗೆ ಇಷ್ಟೊಂದು ಆಸ್ತಿ ಬರಲು ಕಾರಣ, ಮೂಲ ಮಾಲೀಕೆ ಜರ್ಮನಿಯ ಕಾರ್ಲೋಟಾ ಲೈಬೆನ್‌ಸ್ಟೈನ್.  277 ಮಿಲಿಯನ್ ಪೌಂಡ್ ಆಸ್ತಿ ಇದ್ರೂ ಕಾರ್ಲೋಟಾ ಲೈಬೆನ್‌ಸ್ಟೈನ್ ಒಂಟಿಯಾಗಿದ್ದರು. ಅವರಿಗೆ ಕುಟುಂಬಸ್ಥರು ಅಂತ ಯಾರೂ ಇರಲಿಲ್ಲ. ಸಾಯುವ ಮುನ್ನ ಅವರು ತಮ್ಮೆಲ್ಲ ಆಸ್ತಿಯನ್ನು ತಮ್ಮ ಸಾಕುನಾಯಿ ಹೆಸರಿಗೆ ಮಾಡಿದ್ದರು. ನಾಯಿಯ ಪಿಎಆರ್ ಒ ಲೂಸಿ ಕ್ಲಾರ್ಕ್ಸನ್ ಪ್ರಕಾರ, ಕಾರ್ಲೋಟಾ ಲೈಬೆನ್‌ಸ್ಟೈನ್ ಕೊನೆ ದಿನಗಳಲ್ಲಿ ಅವರ ಬಳಿ ಯಾರೂ ಇರಲಿಲ್ಲ. ಅವರ ಕುಟುಂಬಸ್ಥರಾಗ್ತಿ, ಆಪ್ತರಾಗಲಿ ಯಾರೂ ಇರಲಿಲ್ಲ. ಅವರ ಬಳಿ ಇದ್ದಿದ್ದು ಗುಂಥರ್ ಮಾತ್ರ. ಈ ನಾಯಿಯನ್ನು ಅವರು ತುಂಬಾ ಪ್ರೀತಿ ಮಾಡುತ್ತಿದ್ದರು. ಹಾಗಾಗಿ ಅವರು ತಮ್ಮೆಲ್ಲ ಆಸ್ತಿಯನ್ನು ಗುಂಥರ್ ಹೆಸರಿಗೆ ಮಾಡಿದ್ದರು. ನಂತ್ರ ಗುಂಥರ್ ಟ್ರಸ್ಟ್ ರಚನೆಯಾಯಿತು. ಇದರಿಂದ ಹಣವು ಗುಂಥರ್ ಬಳಿ ಉಳಿದಿದೆ ಮತ್ತು ಭವಿಷ್ಯದಲ್ಲಿ ಅದರ ಮಕ್ಕಳಿಗೆ ಹೋಗುತ್ತದೆ. ಕಾರ್ಲೋಟಾ ಲೈಬೆನ್‌ಸ್ಟೈನ್ ಬಿಟ್ಟು ಹೋದ ಹಣದಲ್ಲಿ ಮನೆ ಹಾಗೂ ಹಡಗು ಖರೀದಿ ಮಾಡಲಾಗಿದೆ. 

ಅನೇಕ ಮಕ್ಕಳ ಆಸೆ ಹೊಂದಿರೋ ಪರಿಣಿತಿ ಚೋಪ್ರಾ ಗರ್ಭಿಣಿ? ಐದು ತಿಂಗಳಿಗೇ ಕೊಟ್ರಾ ಗುಡ್​ ನ್ಯೂಸ್​?

ಗುಂಥರ್ ಶ್ರೀಮಂತ ಕುಟುಂಬದಿಂದ ಬಂದಿದೆ. ಅದರ ಆಸ್ತಿ ಯಾವುದೇ ನಿಗೂಢ ವ್ಯಕ್ತಿಗೆ ಸೇರಿಲ್ಲ. ಗುಂಥರ್ ಬಗ್ಗೆ ಇದುವರೆಗೆ ಹಲವು ಸಾಕ್ಷ್ಯಚಿತ್ರಗಳು ಬಂದಿವೆ.  ಇದರಲ್ಲಿ ನಿರ್ದೇಶಕರು ತಮ್ಮದೇ ಆದ ರೀತಿಯಲ್ಲಿ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ ಎಂದು ಪಿಆರ್ ಒ ಹೇಳಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!