ಜನರಿಗೆ ಏನೇನೋ ವಿಷ್ಯಕ್ಕೆ ಪ್ರೀತಿ ಹುಟ್ಟಿಕೊಳ್ಳುತ್ತೆ. ಕೆಲವೊಮ್ಮೆ ಇದು ನೋಡುಗರನ್ನು ಅಚ್ಚರಿಗೊಳಿಸುತ್ತೆ. ಇಲ್ಲೊಬ್ಬ ಹುಡುಗಿ ಕೂಡ ಅಣ್ಣ ಎನ್ನುತ್ತಿದ್ದ ವ್ಯಕ್ತಿಯನ್ನು ಒಂದೇ ಒಂದು ಕಾರಣಕ್ಕೆ ಪ್ರೀತಿಸಲು ಶುರು ಮಾಡಿ, ಮದುವೆ ಆಗಿದ್ದಾಳೆ.
ಪ್ರೀತಿ, ಮದುವೆಗೆ ವಯಸ್ಸಿನ ಗಡಿ ಇಲ್ಲ. ಯಾವ ವಯಸ್ಸಿನಲ್ಲಿ ಬೇಕಾದ್ರೂ ಮನುಷ್ಯ ಪ್ರೀತಿಯಲ್ಲಿ ಬೀಳ್ಬಹುದು. ಮದುವೆ ಮಾಡಿಕೊಳ್ಳಬಹುದು. ಗಂಡ – ಹೆಂಡತಿ ಮಧ್ಯೆ ವಯಸ್ಸಿನ ಅಂತರ ಎಷ್ಟಿರಬೇಕು ಎನ್ನುವುದಕ್ಕೆ ಯಾವುದೇ ನಿಯಮವಿಲ್ಲ. ತಮಗಿಂತ ಹತ್ತು, ಹದಿನೈದು ವರ್ಷ ದೊಡ್ಡವರನ್ನು ಮದುವೆ ಆಗೋದು ಮಾಮೂಲಿ. ಕೆಲವರು ತಮಗಿಂತ ಮೂವತ್ತು – ನಲವತ್ತು ವರ್ಷ ದೊಡ್ಡವರನ್ನು ಮದುವೆ ಆಗುವ ಸುದ್ದಿಗಳನ್ನು ಕೇಳಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಅತಿ ಹಿರಿಯ ವಯಸ್ಸಿನ ವ್ಯಕ್ತಿಯನ್ನು ಚಿಕ್ಕ ಯುವತಿ ಮದುವೆ ಆಗಿರುವ ಸುದ್ದಿಗಳು ವೈರಲ್ ಆಗ್ತಿರುತ್ತವೆ. ಈಗ ಮತ್ತೊಂದು ಇಂಥ ಮದುವೆ ಸುದ್ದಿಗೆ ಬಂದಿದೆ.
ಪ್ರೀತಿ (Love) ಹುಟ್ಟಿಕೊಳ್ಳಲು ದೊಡ್ಡ ಕಾರಣ ಬೇಕಾಗಿಲ್ಲ. ಅತ್ಯಂತ ಸಣ್ಣ ವಿಷ್ಯ ಕೂಡ ಇಬ್ಬರನ್ನು ಮದುವೆ (Marriage) ಹಂತಕ್ಕೆ ತಂದು ನಿಲ್ಲಿಸಬಹುದು ಎಂಬುದಕ್ಕೆ ಈ ಜೋಡಿ ಸಾಕ್ಷ್ಯ. ನಮ್ಮ ನೆರೆಯ ಪಾಕಿಸ್ತಾನದಲ್ಲಿ ಯುವತಿಯೊಬ್ಬಳು ತನಗಿಂದ ಇಪ್ಪತ್ತು ವರ್ಷ ಹಿರಿಯ ವ್ಯಕ್ತಿಯ ಕೈ ಹಿಡಿದಿದ್ದಾಳೆ. ಆಕೆ ಆತನನ್ನು ಮದುವೆಯಾಗಲು ನೀಡಿದ ಕಾರಣ ಮಾತ್ರ ವಿಚಿತ್ರವಾಗಿದೆ. ಜನರಿಗೆ ಇಂಥ ಕಾರಣಕ್ಕೂ ಪ್ರೀತಿ ಚಿಗುರುತ್ತಾ, ಮದುವೆಗೆ ಇಂಥಹದ್ದೂ ಕಾರಣವಾಗುತ್ತಾ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಈ ಕಥೆಯ ಇನ್ನೊಂದು ಟ್ವಿಸ್ಟ್ ಅಂದ್ರೆ ಯುವತಿ ಮದುವೆಯಾದ ವ್ಯಕ್ತಿ ಆಕೆಯ ಸಹೋದರ ಸಂಬಂಧಿ. ಆಕೆ ಆತನನ್ನು ಖುರಾಮ್ ಭಾಯ್ ಎಂದು ಕರೆಯುತ್ತಿದ್ದಳು.
ಪತ್ನಿಯ ದುಡಿಮೆ ಅರ್ಹತೆ ಪರಿಗಣನೆ ಬೇಡ, ಮಕ್ಕಳನ್ನು ಪೋಷಿಸುವ ಆಕೆಗೆ ಮಾಸಿಕ 36,000 ಜೀವನಾಂಶ ಕೊಡಿ: ಹೈಕೋರ್ಟ್ ಆದೇಶ
ಇಬ್ಬರ ಮಧ್ಯೆ ಪ್ರೀತಿ ಚಿಗುರಲು ಕಾರಣವಾಯ್ತು ಬರ್ಗರ್ (Burger) : ಈ ಯುವತಿ ಮನೆಗೆ ವ್ಯಕ್ತಿ ಆಗಾಗ ಬರ್ತಿದ್ದ. ಆತನನ್ನು ಈಕೆ ಅಣ್ಣ ಎಂದೇ ಕರೆಯುತ್ತಿದ್ದಳು. ಒಂದು ದಿನ, ನನ್ನನ್ನು ಅಣ್ಣ ಅಂತಾ ಕರೆಯಬೇಡ ಎಂದು ಆತ ಹೇಳಿದ್ದಾನೆ. ಯಾಕೆ ಹೀಗೆ ಕರೆಯಬಾರದು ಎನ್ನುವ ಪ್ರಶ್ನೆ ಆಕೆಗೆ ಮೂಡಿದೆ. ಇದೇ ಸಂದರ್ಭದಲ್ಲಿ, ನಿನಗೆ ಏನಾದ್ರೂ ಅವಶ್ಯಕತೆ ಇದ್ರೆ ನನಗೆ ಹೇಳು ಸಹಾಯ ಮಾಡ್ತೇನೆ, ತಂದುಕೊಡ್ತೇನೆ ಎಂದೂ ಆತ ಹೇಳಿದ್ದಾನೆ. ಅದಕ್ಕೆ ಯುವತಿ ಓಕೆ ಎಂದಿದ್ದಾಳೆ. ಒಂದು ದಿನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫೋನ್ ಮಾಡಿದ ಯುವತಿ, ಷಾವರ್ಮಾ ತರುವಂತೆ ಹೇಳಿದ್ದಾಳೆ. ಆತ ಓಕೆ ಎಂದಿದ್ದಲ್ಲದೆ ಕೆಲವೇ ಸಮಯದಲ್ಲಿ ಷಾವರ್ಮಾ ತಂದಿದ್ದಾನೆ. ಜೊತೆಗೆ ಎರಡು ಶುಂಠಿ ಬರ್ಗರ್ ತಂದಿದ್ದಾನೆ. ಇದನ್ನು ತಿಂದಿದ್ದೇ ಯುವತಿ ಆತನಿಗೆ ಬಿದ್ದಿದ್ದಾಳೆ. ಇಬ್ಬರ ಮಧ್ಯೆ ಪ್ರೀತಿಯ ಕರೆಂಟ್ ಪಾಸ್ ಆಗಿದೆ. ಇಬ್ಬರೂ ಈಗ ಮದುವೆ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ : fadi_wri8s_ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಗಾಗಿದೆ. ಈ ವಿಡಿಯೋದಲ್ಲಿ ಪತಿ – ಪತ್ನಿಯನ್ನು ನೀವು ನೋಡ್ಬಹುದು. ಈ ವಿಡಿಯೋದಲ್ಲಿ ಯುವತಿ ತನ್ನ ಪ್ರೀತಿ ವಿಷ್ಯವನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋವನ್ನು ಅನೇಕರು ವೀಕ್ಷಿಸಿದ್ದು ಐದು ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಬಂದಿದೆ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ. ಕೆಲವರು ಇವರ ಪ್ರೀತಿಯನ್ನು ಒಪ್ಪಿಕೊಂಡ್ರೆ ಮತ್ತೆ ಕೆಲವರು ಇದನ್ನು ವಿರೋಧಿಸಿದ್ದಾರೆ.
ವಿಜಯ್ ದೇವರಕೊಂಡ ಜೊತೆ ಮತ್ತೊಂದು ಸಿನಿಮಾ ಮಾಡಬೇಕಂತೆ ರಶ್ಮಿಕಾ ಮಂದಣ್ಣ!
ಅಣ್ಣ ಎನ್ನುತ್ತಲೇ ಆತನನ್ನು ಮದುವೆ ಹೇಗೆ ಆದಳು ಎಂದು ಕೆಲವರು ಕಮೆಂಟ್ ಮಾಡಿದ್ರೆ ಇನ್ನು ಕೆಲವರು ಒಂದು ಬರ್ಗರ್ ಗೆ ಪ್ರೀತಿ ಹುಟ್ಟಿಕೊಳ್ಳುತ್ತೆ ಅನ್ನೋದನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ. ಬಳಕೆದಾರರೊಬ್ಬರು ಪಾಕಿಸ್ತಾನದಲ್ಲಿ ಪ್ರೀತಿ ಇಷ್ಟೊಂದು ಅಗ್ಗವಾಗಿ ಸಿಗುತ್ತಾ ಎಂದು ಕೇಳಿದ್ದಾರೆ. ಯುವತಿ ಫುಡ್ಡಿ ಅನ್ನಿಸ್ತಾಳೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಬರ್ಗರ್ ಹಿಡಿದು ಪಾಕಿಸ್ತಾನಕ್ಕೆ ಹೋಗ್ತೇನೆ ಎಂದು ತಮಾಷೆ ಮಾಡಿದ್ದಾನೆ.