ಮುಗಿದ ವ್ಯಾಜ್ಯ: ಒಡ ಹುಟ್ಟಿದವರಿಗೆ 20 ಸಾವಿರ ಕೋಟಿ ನೀಡಲು ಭಾರತೀಯ ಮೂಲದ ಉದ್ಯಮಿಗೆ US ಕೋರ್ಟ್ ಆದೇಶ

By Suvarna News  |  First Published Mar 4, 2024, 4:59 PM IST

ಅಮೆರಿಕದಲ್ಲಿ ಬಹುಕೋಟಿ ಡಾಲರ್ ನ ಹಣಕಾಸು ಪ್ರಕರಣವೊಂದಕ್ಕೆ ಅಂತ್ಯ ಹಾಡಲಾಗಿದೆ. ಇದು ಭಾರತ ಮೂಲದ ಐವರು ಸಹೋದರರಿಗೆ ಸಂಬಂಧಿಸಿದ ಪ್ರಕರಣವಾಗಿದ್ದು, ವಜ್ರದ ವ್ಯಾಪಾರಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಹರೇಶ್ ಜೋಗಾನಿ ತಮ್ಮ ಸಹೋದರರಿಗೆ 20 ಸಾವಿರ ಕೋಟಿಗೂ ಅಧಿಕ ಹಣವನ್ನು ಪರಿಹಾರವಾಗಿ ನೀಡಬೇಕಾಗಿದೆ. 
 


ಬರೋಬ್ಬರಿ 21 ವರ್ಷಗಳ ಕಾನೂನು ಹೋರಾಟವೊಂದು ಅಮೆರಿಕದಲ್ಲಿ ಅಂತ್ಯಗೊಂಡಿದೆ. ಸಹೋದರರಿಗೆ 20 ಸಾವಿರ ಕೋಟಿ ರೂಪಾಯಿಗಳನ್ನು ನೀಡಬೇಕು ಎನ್ನುವ ತೀರ್ಪಿನೊಂದಿಗೆ ಪ್ರಕರಣಕ್ಕೆ ಇತಿಶ್ರೀ ಹಾಡಲಾಗಿದೆ. ಇದು, ಕಳೆದ ಹತ್ತು ವರ್ಷಗಳ ಅಮೆರಿಕದ ಕಾನೂನು ಇತಿಹಾಸದಲ್ಲಿ ಅತ್ಯಂತ ದೊಡ್ಡ ಮೊತ್ತದ ಹಣವನ್ನು ಒಳಗೊಂಡ ತೀರ್ಪಾಗಿದೆ. ಸ್ವಾರಸ್ಯವೆಂದರೆ, ಈ ಬಹುಕೋಟಿ ಡಾಲರ್ ಪ್ರಕರಣ ಭಾರತದ ಐವರು ಸಹೋದರರನ್ನು ಒಳಗೊಂಡಿರುವ ಪ್ರಕರಣವಾಗಿದೆ. ಜೋಗಾನಿ ವರ್ಸಸ್ ಜೋಗಾನಿ ಎನ್ನುವ ಪ್ರಕರಣವನ್ನು ಅಮೆರಿಕದ ನ್ಯಾಯಾಲಯ ಇತ್ಯರ್ಥಗೊಳಿಸಿದ್ದು, ಉದ್ದಿಮೆದಾರ ಹರೇಶ್ ಜೋಗಾನಿ ಅವರು ತಮ್ಮ ತಮ್ಮಂದಿರಿಗೆ 20 ಸಾವಿರ ಕೋಟಿಗೂ ಅಧಿಕ ರೂಪಾಯಿಗಳನ್ನು ನೀಡಬೇಕೆಂದು ತೀರ್ಪು ನೀಡಲಾಗಿದೆ. 

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ಆಸ್ತಿ ಸಾಮ್ರಾಜ್ಯ (Asset Empire) ಹಾಗೂ ಡೈಮಂಡ್ (Diamond) ಉದ್ಯಮದ ಕುರಿತಾದ ಪ್ರಕರಣ (Case) ಇದಾಗಿದೆ. ಹಿರಿಯ ಸಹೋದರ ಹರೇಶ್ ಜೋಗಾನಿ ಅವರು ತನ್ನ ತಮ್ಮಂದಿರಾದ ಶಶಿಕಾಂತ್, ರಾಜೇಶ್, ಚೇತನ್ ಹಾಗೂ ಶೈಲೇಶ್ ಜೋಗಾನಿ ಅವರೊಂದಿಗೆ ಮಾಡಿಕೊಂಡಿದ್ದ ದೀರ್ಘಕಾಲದ ಸಹಭಾಗಿತ್ವವನ್ನು (Partnership) ಉಲ್ಲಂಘಿಸಿದ ಪರಿಣಾಮವಾಗಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಈಗ ಪರಿಹಾರವಾಗಿ ನೀಡಬೇಕಾಗಿ ಬಂದಿದೆ.

Earning Money : ಇಂದೆಂಥ ಕೆಲಸ..! ರಾಜಕುಮಾರಿ ಡ್ರೆಸ್ ಧರಿಸಿ ಲಕ್ಷ ಗಳಿಸ್ತಾಳೆ ಈಕೆ

Tap to resize

Latest Videos

ಈ ಸಹೋದರರು ಈಗ ಬಹುಕೋಟಿ (Multi Crore) ಡಾಲರ್ ಆಸ್ತಿಯನ್ನು ಒಳಗೊಂಡಿರುವ ಸಾಮ್ರಾಜ್ಯ ಹಾಗೂ ಈ ಸಂಸ್ಥೆಗೆ ಸೇರಿರುವ 17 ಸಾವಿರ ಅಪಾರ್ಟ್ ಮೆಂಟ್ ಗಳನ್ನು ಹಂಚಿಕೆ ಮಾಡಿಕೊಳ್ಳಲಿದ್ದಾರೆ. ಇವುಗಳ ಮೌಲ್ಯ ಶತಕೋಟಿಗೂ ಮೀರುತ್ತದೆ. 2003ರಲ್ಲಿ ಜೋಗಾನಿ ಕುಟುಂಬದ ಪ್ರಕರಣ ದಾಖಲಾಗಿದ್ದು, ಕಳೆದ 5 ತಿಂಗಳಿಂದ ವಿಚಾರಣೆಯನ್ನು (Trial) ಕೈಗೆತ್ತಿಕೊಳ್ಳಲಾಗಿತ್ತು. ಇದುವರೆಗೆ ಬರೋಬ್ಬರಿ 18 ಮೇಲ್ಮನವಿಗಳು ಸಲ್ಲಿಕೆಯಾಗಿದ್ದು. ಲಾಸ್ ಏಂಜೇಲೀಸ್ ನ ಸುಪೀರಿಯರ್ ಕೋರ್ಟ್ ನ ಐವರು ನ್ಯಾಯಾಧೀಶರ ಪೀಠ ಪ್ರಕರಣವನ್ನು ವಿಚಾರಣೆ ನಡೆಸಿತ್ತು.

ಗುಜರಾತ್ ಮೂಲ
ಹರೇಶ್ ಜೋಗಾನಿ (Haresh Jogani) ಕುಟುಂಬ ಗುಜರಾತಿನ (Gujarat) ಮೂಲದ್ದಾಗಿದ್ದು, ಗುಜರಾತಿನಲ್ಲಿ ವಜ್ರದ ವ್ಯಾಪಾರವನ್ನು ಆರಂಭಿಸಿತ್ತು. ಬಳಿಕ, ಉದ್ಯಮವನ್ನು ಯುರೋಪ್, ಆಫ್ರಿಕಾ, ಮಧ್ಯ ಪ್ರಾಚ್ಯ, ಉತ್ತರ ಅಮೆರಿಕಗಳಿಗೆ ವಿಸ್ತರಿಸಲಾಗಿತ್ತು. ಆ ದಿನಗಳಲ್ಲಿ ಹರೇಶ್ ಜೋಗಾನಿ ರಿಯಲ್ ಎಸ್ಟೇಟ್ (Real Estate) ಉದ್ಯಮವನ್ನು ಆರಂಭಿಸಿದರು. ಅವರ ಸಹೋದರ ಶಶಿಕಾಂತ್ 1969ರಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಲು ಅಮೆರಿಕಕ್ಕೆ ತೆರಳಿದರು. ಹಲವು ಕಾಲ ಕಷ್ಟಗಳನ್ನು ಎದುರಿಸಿದ ಬಳಿಕ ಶಶಿಕಾಂತ್ ಅವರು ಹರೇಶ್ ಹಾಗೂ ಇತರ ಸಹೋದರರನ್ನು ಪಾಲುದಾರರನ್ನಾಗಿ ಸೇರಿಸಿಕೊಂಡರು. ಶಶಿಕಾಂತ್ ಅವರು ಲಾಸ್ ಏಂಜೇಲೀಸ್ ನಲ್ಲಿರುವ ಜೆಕೆ ಪ್ರಾಪರ್ಟೀಸ್ ಇಂಕ್ ನ ನಿರ್ದೇಶಕರಾಗಿದ್ದಾರೆ. 

Weird Jobs: ಹಿಂಗೂ ಇರುತ್ತೆ ಕೆಲಸ….ಹಣ ಕೊಟ್ಟು ಮಕ್ಕಳನ್ನು ನೋಡಿಕೊಳ್ಬೇಕು!

ವಜ್ರದ ವ್ಯಾಪಾರದಲ್ಲಿ ಲಾಭ
1990ರ ದಶಕದ ಆರಂಭದಲ್ಲಿ ಜೋಗಾನಿ ಕುಟುಂಬಕ್ಕೆ (Family) ಅದೃಷ್ಟ ಎದುರಾಯಿತು. ಜಾಗತಿಕ ವಜ್ರದ ವ್ಯಾಪಾರದಲ್ಲಿ ದಾಪುಗಾಲಿಟ್ಟಿತು. ಕ್ಯಾಲಿಫೋರ್ನಿಯಾದಲ್ಲಿ ಆಸ್ತಿ ಖರೀದಿಗೆ (Buy) ಆರಂಭಿಸಿತು. ಆದರೆ, ಅದೇ ದಶಕದಲ್ಲಿ ಉಂಟಾದ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಹಾಗೂ 1994ರಲ್ಲಿ ಸಂಭವಿಸಿದ ನಾರ್ತ್ ರಿಡ್ಜ್ ಭೂಕಂಪನದಿಂದಾಗಿ ನಷ್ಟವಾಯಿತು. ಶಶಿಕಾಂತ್ ಅವರು ಹಲವು ಆಸ್ತಿ ಖರೀದಿ ಮಾಡಿ ಎಲ್ಲವನ್ನೂ ಸಂಸ್ಥೆಯಡಿಗೆ ತಂದರು. ಎಲ್ಲರೂ ಸೇರಿ ಸುಮಾರು 17 ಸಾವಿರ ಅಪಾರ್ಟ್ ಮೆಂಟ್ ಗಳನ್ನು ಖರೀದಿಸಿ, ಶತಕೋಟಿ ಮೌಲ್ಯದ ಸಂಸ್ಥೆ ನಿರ್ಮಾಣಕ್ಕೆ ಕಾರಣರಾದರು. ಆದರೆ, ಕ್ರಮೇಣ, ಹರೇಶ್ ಜೋಗಾನಿ ಸಹೋದರರನ್ನು (Brothers) ಪಾಲುದಾರಿಕೆಯಿಂದ ಅಕ್ರಮವಾಗಿ ದೂರ ಮಾಡಿದರು. ಅಷ್ಟೇ ಅಲ್ಲ, ಹಣ (Money) ನೀಡಲು ನಿರಾಕರಿಸಿದರು. ಹೀಗಾಗಿ, ಶಶಿಕಾಂತ್ ಪ್ರಕರಣವನ್ನು ದಾಖಲಿಸಿದ್ದರು. ಇದೀಗ, ಪ್ರಕರಣ ಅಂತ್ಯಗೊಂಡಿದ್ದು, ಹರೇಶ್ ಜೋಗಾನಿ ಅವರಿಗೆ ಬಹುಕಾಲದ ಹಿಂದೆ ತಾವು ಮಾಡಿದ್ದ ಅನ್ಯಾಯವನ್ನು ಸರಿಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. 

click me!