ಬಾಂಗ್ಲಾದೇಶದಲ್ಲಿ ಕೆಲಸ ಮುಗಿಸಿ ಭಾರತಕ್ಕೆ ಮರಳಿದ ಪತಿ ಮರಳಿ ಬಂದಿಲ್ಲ. ಫೋನ್ ಮಾಡಿದರೆ ಇಲ್ಲಿಗೆ ಬಂದು ಬಿಡು ಅನ್ನೋ ಸೂಚನೆ. ಹೀಗಾಗಿ ತನ್ನ ಒಂದು ವರ್ಷದ ಮಗುವಿನೊಂದಿಗೆ ನೇರವಾಗಿ ಭಾರತಕ್ಕೆ ಆಗಮಿಸಿದ್ದಾಳೆ. ಆದರೆ ತನ್ನ ಪತಿಯ ಮತ್ತೊಂದು ಸಂಸಾರ ನೋಡಿ ಕುಸಿದು ಬಿದ್ದಿದ್ದಾಳೆ.
ನೋಯ್ಡಾ(ಆ.22) ಗಡಿಯಾಚೆಗಿನ ಪ್ರೀತಿ ಇತ್ತೀಚೆಗೆ ಟ್ರೆಂಡಿಂಗ್, ಸೀಮಾ ಹೈದರ್, ಅಂಜು ಸೇರಿದಂತೆ ಹಲವರು ಭಾರತ , ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ ಸೇರಿದಂತೆ ಹಲವು ರಾಷ್ಟ್ರಗಳ ಗಡಿ ದಾಟಿ ಪ್ರೀತಿಸಿ ಭಾರಿ ಸುದ್ದಿಯಾಗಿದ್ದಾರೆ. ಇದೀಗ ಕೊಂಚ ಭಿನ್ನವಾಗಿರುವ ಘಟನೆ ನಡೆದಿದೆ. ಬಾಂಗ್ಲಾದೇಶದಲ್ಲಿ ಕೆಲಸ ಮಾಡುತ್ತಿದ್ದ ಭಾರತದ ನೋಯ್ಡಾ ಮೂಲದ ವ್ಯಕ್ತಿ ಬಾಂಗ್ಲಾದ ಯುವತಿಯೊಂದಿಗೆ ಪ್ರೀತಿ ಶುರುವಾಗಿದೆ. ಬಳಿಕ ಮದುವೆಯಾಗಿದ್ದಾನೆ. ತನ್ನ ಕೆಲಸ ಮುಗಿಸಿ ಭಾರತಕ್ಕೆ ಮರಳಿದ ಪತಿ ಮರಳಿ ಬಾಂಗ್ಲಾದೇಶಕ್ಕೆ ಬಂದಿಲ್ಲ. ಇತ್ತ ಹಲವು ದಿನ ಕಾದ ಪತಿ ಕೊನೆಗೆ ಘಟ್ಟಿ ನಿರ್ಧಾರ ಮಾಡಿ ಮಗುವಿನೊಂಂದಿಗೆ ಭಾರತಕ್ಕೆ ಆಗಮಿಸಿದ್ದಾಳೆ. ಪತಿಯೊಂದಿಗೆ ಭಾರತದಲ್ಲಿ ಹೊಸ ಬದುಕು ಆರಂಭಿಸಲು ಬಂದ ಪತ್ನಿಗೆ ಶಾಕ್ ಆಗಿದೆ. ಕಾರಣ ಪತಿಗೆ ಭಾರತದಲ್ಲೊಂದು ಸಂಸಾರವಿದೆ ಅನ್ನೋದು ಗೊತ್ತಾಗಿದೆ.
ನೋಯ್ಡಾದ ಸೌರಬ್ ಕಾಂತ್ ತಿವಾರಿ 2017ರಿಂದ 2021ರ ವರಗಗೆ ಬಾಂಗ್ಲಾದೇಶದಲ್ಲಿ ಕೆಲಸ ಮಾಡುತ್ತಿದ್ದ. ಸೌರಬ್ ಕಾಂತ್‌ಗೆ ಕೆಲಸದ ಜೊತೆಗೆ ಪ್ರೀತಿಯ ಶುರುವಾಗಿದೆ. ಬಾಂಗ್ಲಾದ ಸಾನ್ಯ ಅಖ್ತರ್ ಜೊತೆ ಆರಂಭಗೊಂಡ ಸ್ನೇಹ, ಬಳಿಕ ಪ್ರೀತಿಯಾಗಿ ಗಟ್ಟಿಯಾಗಿದೆ. ತಾನೊಬ್ಬ ಚಿರ ಯುವಕ ಅನ್ನೋ ರೀತಿ ಫೋಸ್ ಕೊಟ್ಟು ಸಾನ್ಯಳನ್ನು ಬುಟ್ಟಿಗೆ ಹಾಕಿಕೊಂಡ ಸೌರಬ್ ಕಾಂತ್ ತಿವಾರಿ, ಬಾಂಗ್ಲಾದಲ್ಲಿನ ಕೆಲಸ ಸ್ಮರಣೀಯವಾಗಿಸಿದ್ದ.
ಗಡಿ ದಾಟಿದ ಲವ್ ಸ್ಟೋರಿ; ಪ್ರಿಯಕರನಿಗಾಗಿ ದಕ್ಷಿಣ ಕೊರಿಯಾದಿಂದ ಭಾರತಕ್ಕೆ ಬಂದ ಗೆಳತಿ
ಮದುವೆ ಪ್ರಸ್ತಾಪ ಮುಂದಿಟ್ಟಾಗ ಸೌರಬ್ ಕಾಂತ್ ತಿವಾರಿ ಮರು ಮಾತಿಲ್ಲದೆ ಸರಿ ಎಂದು ಒಪ್ಪಿದ್ದಾನೆ. ಅತ್ತ ಸಾನ್ಯ ಅಖ್ತರ್ ಮನೆಯವರನ್ನು ಒಪ್ಪಿಸಿ, ಹಲವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದಾಳೆ. ಸೌರಬ್ ತಿವಾರಿ ನಗು ನಗುತಲೇ ಎಲ್ಲವನ್ನು ಎದುರಿಸಿ ಸರಳ ಮದವೆ ಮಾಡಿದ್ದಾನೆ. ನೋಯ್ಡಾದ ಸೌರಬ್ ಕಾಂತ್ ತಿವಾರಿ ಹೊಸ ಜೀವನ ಆರಂಭಗೊಂಡಿದೆ. ಕೆಲಸ ಬಳಿಕ ಪತ್ನಿ ಸಾನ್ಯಾ ಅಖ್ತರ್ ಜೊತೆ ಬಾಂಗ್ಲಾದೇಶದಲ್ಲಿ ಸುತ್ತಾಟ, ಸಿನಿಮಾ ಸೇರಿದಂತೆ ನವ ಜೋಡಿಗಳ ಆರಂಭಿಕ ದಿನಗಳಂತೆ ಇವರ ಬದುಕು ಸಾಗಿತ್ತು.
2022ರಲ್ಲಿ ಸೌರಬ್ ಕಾಂತ್ ತಿವಾರಿ ಮರಳಿ ಭಾರತಕ್ಕೆ ಆಗಮಿಸಿದ್ದ. ನೋಯ್ಡಾದ ತನ್ನ ಮನೆಗೆ ಬಂದ ಸೌರಬ್ ಕಾಂತ್ ತಿವಾರಿ ಬಳಿಕ ತನ್ನ ಬಾಂಗ್ಲಾದೇಶದ ಪತ್ನಿಯನ್ನು ಮರೆತೇ ಬಿಟ್ಟಿದ್ದ. ಕರೆ ಮಾಡುವುದು ನಿಲ್ಲಿಸಿದ್ದ. ಅತ್ತ ಬಾಂಗ್ಲಾದಲ್ಲಿದ್ದ ಸಾನ್ಯ ಆಖ್ತರ್ ಗಾಬರಿಗೊಂಡಿದ್ದಾಳೆ. ಕಾರಣ ಮಗು ಜನಿಸಿ, ಮಗುವಿಗೆ 1 ವರ್ಷವಾದರೂ ಪತಿಯ ಸುಳಿವಿಲ್ಲ. ಹೀಗಾಗಿ ಸೌರಬ್ ಕಾಂತ್ ತಿವಾರಿಗೆ ಕರೆ ಮಾಡಿದರೆ ಸ್ವೀಕರಿಸದೆ ಕಾರಣಗಳನ್ನು ನೀಡುತ್ತಿದ್ದ.
10 ಕರೆ ಮಾಡಿದರೆ ಒಂದು ಕರೆ ಸ್ವೀಕರಿಸುತ್ತಿದ್ದ. ಈ ವೇಳೆ ತಾನು ಬಾಂಗ್ಲಾದೇಶಕ್ಕೆ ಮರಳುವುದು ಕಷ್ಟವಾಗಿದೆ. ನೀನು ನೋಯ್ಡಾಗೆ ಬಂದರೆ ಸಾಕು. ಇಲ್ಲೇ ಜೀವನ ನಡೆಸೋಣ ಎಂದಿದ್ದಾನೆ. ಸಾನ್ಯ ಆಖ್ತರ್ ಬಳಿ ಪಾಸ್‌ಪೋರ್ಟ್ ಇರಲಿಲ್ಲ. ಹೀಗಾಗಿ ಸಾನ್ಯ ಭಾರತಕ್ಕೆ ಬರುವ ಸಾಧ್ಯತೆ ಇಲ್ಲ ಎಂದು ಸೌರಬ್ ತಿವಾರಿ ತನ್ನ ಪಾಡಿಗೆ ತಾನಿದ್ದ.
70ರ ಅಜ್ಜ ಮದುವೆಯಾಗೋದಾಗಿ ಲವ್ ಮಾಡಿ ಕೈಕೊಟ್ಟ: ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಅಜ್ಜಿ
ಆದರೆ ಇದಕ್ಕಿದ್ದಂತೆ ಸಾನ್ಯ ಅಕ್ತರ್ ತನ್ನ ಒಂದು ವರ್ಷದ ಮಗುವಿನೊಂದಿಗೆ ನೋಯ್ಡಾಗೆ ಆಗಮಿಸಿದ್ದಳು. ಸೌರಬ್ ಕಾಂತ್ ತಿವಾರಿ ಮನೆಗೆ ಬಂದ ಸಾನ್ಯಾಗೆ ಆಘಾತವಾಗಿದೆ. ಕಾರಣ ಸೌರಬ್ ಕಾಂತ್ ತಿವಾರಿಗೆ ಮದುವೆಯಾಗಿ ಮಕ್ಕಳಿದ್ದಾರೆ. ಬಾಂಗ್ಲಾದೇಶದಲ್ಲಿ ತನ್ನನ್ನು ಮದುವೆಯಾಗುವುದಕ್ಕಿಂತ ಮೊದಲೇ ಭಾರತದಲಲ್ಲಿ ಈತನಿಗೆ ಸಂಸಾರವಿತ್ತ ಅನ್ನೋ ಮಾಹಿತಿ ಬಹಿರಂಗವಾಗಿದೆ. ಇತ್ತ ಸಾನ್ಯಾಗೆ ದಿಕ್ಕೆ ತೋಚದಂತಾಗಿದೆ.
ಮಗುವನ್ನು ಎತ್ತಿಕೊಂಡು ಭಾರತಕ್ಕೆ ಆಗಮಿಸಿದರೆ ಇಲ್ಲಿ ಪತಿಯ ಮತ್ತೊಂದು ಸಂಸಾರ. ಇತ್ತ ಭಾರತದಲ್ಲೂ ಇರಲು ಸಾಧ್ಯವಾಗದೇ, ಮರಳಿ ಬಾಂಗ್ಲಾದೇಶಕ್ಕೆ ತೆರಳಲು ಸಾಧ್ಯವಾಗದೇ ತ್ರಿಶಂಕು ಪರಿಸ್ಥಿತಿ ಎದುರಿಸಿದ್ದಾಳೆ. ಇತ್ತ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಾನ್ಯ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.