
ಈಗಿನ ದಿನಗಳಲ್ಲಿ ಲಿವ್ ಇನ್ ರಿಲೇಶನ್ಶಿಪ್ ಸಾಮಾನ್ಯ ಎನ್ನುವಂತಾಗಿದೆ. ಮದುವೆ ನಿಶ್ಚಯವಾದ್ಮೇಲೆ ಲಿವ್ ಇನ್ ನಲ್ಲಿ ಸ್ವಲ್ಪ ದಿನವಿದ್ದು, ಸಂಗಾತಿಯನ್ನು ಅರ್ಥ ಮಾಡಿಕೊಂಡು ನಂತ್ರ ವಿವಾಹ ಮಾಡಿಕೊಳ್ಳುವ ಜೋಡಿಯ ಸಂಖ್ಯೆ ಹೆಚ್ಚುತ್ತಿದೆ. ಜನರು ಬೇರೆ ಬೇರೆ ಉದ್ದೇಶಕ್ಕೆ ಲಿವ್ ಇನ್ ನಲ್ಲಿ ಇರ್ತಾರೆ. ಕೇವಲ ಪ್ರೀತಿ ಮಾಡಿದ ಜೋಡಿ ಮಾತ್ರ ಲಿವ್ ಇನ್ ನಲ್ಲಿ ಇರಬೇಕೆಂದೇನಿಲ್ಲ. ಹಣದ ಸಮಸ್ಯೆಯುಳ್ಳ ಇಬ್ಬರು ಸ್ನೇಹಿತರು ಲಿವ್ ಇನ್ ನಲ್ಲಿರುವ ನಿರ್ಧಾರಕ್ಕೆ ಬರಬಹುದು. ಇದ್ರಿಂದ ಆರ್ಥಿಕ ಹೊಣೆ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡ್ತಿರುವ ಕೆಲವರು ಈ ತೀರ್ಮಾನಕ್ಕೆ ಬರೋದಿದೆ. ಜೊತೆಗಿದ್ದವರ ಮಧ್ಯೆ ಪ್ರೀತಿ ಚಿಗುರೋದಿದೆ. ಇನ್ನು ಕೆಲವರು ಗಲಾಟೆ ಮಾಡಿಕೊಂಡು ಬೇರೆಯಾಗ್ತಾರೆ. ವಾಸಕ್ಕಿಂತ ಮೊದಲೇ ಅಥವಾ ವಾಸವಾದ್ಮೇಲೆ ಒಂದು ರೂಲ್ಸ್ ಮಾಡಿಕೊಳ್ಳದೆ ಅವರು ಜೀವನ ನಡೆಸೋದ್ರಿಂದ ಈ ಎಲ್ಲ ಸಮಸ್ಯೆಯಾಗುತ್ತದೆ. ಕೊನೆಯಲ್ಲಿ, ನಂಬಿ ಮೋಸ ಹೋದೆ ಎಂಬ ಮಾತುಗಳು ಕೇಳಿ ಬರುತ್ತವೆ. ಲಿವ್ ಇನ್ ನಲ್ಲಿ ನೀವು ಇರಲು ನಿರ್ಧಾರ ಮಾಡಿದ್ದಲ್ಲಿ ಅಥವಾ ಈಗಾಗಲೇ ಲಿವ್ ಇನ್ ನಲ್ಲಿದ್ದರೆ ಕೆಲವೊಂದು ನಿಯಮಗಳನ್ನು ತಪ್ಪದೆ ಪಾಲನೆ ಮಾಡಿ.
ಕೆಲಸ (Work) ವನ್ನು ಹಂಚಿಕೊಳ್ಳಿ : ಒಂದೇ ಮನೆಯಲ್ಲಿರುವ ನೀವಿಬ್ಬರು ಕೆಲಸವನ್ನು ಹಂಚಿಕೊಳ್ಳೋದು ಮುಖ್ಯವಾಗುತ್ತದೆ. ನೀವಿಬ್ಬರು ಏನನ್ನು ನಿರೀಕ್ಷೆ ಮಾಡ್ತೀರಿ ಎಂಬುದನ್ನು ಮೊದಲು ತಿಳಿದುಕೊಳ್ಳಿ. ನಂತ್ರ ಒಂದು ಕೆಲಸದ ನಿಯಮಗಳನ್ನು ಹಾಕಿಕೊಂಡು ಅದನ್ನು ಪಾಲಿಸಿ. ಆಗ ಇಬ್ಬರಿಗೂ ಹೊರೆಯಾಗೋದಿಲ್ಲ. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡೋದಿಲ್ಲ.
PERSONALITY TIPS: ಸ್ಟ್ರಾಂಗ್ ಲೇಡೀಸ್ ಇಂತಹ ವಿಚಾರಗಳಿಗೆ ಎಂದಿಗೂ ರಾಜಿ ಮಾಡ್ಕೊಳೋದಿಲ್ಲ
ಹಣಕಾಸು (Finance) : ಲಿವ್-ಇನ್ (Live-in) ಸಂಬಂಧವನ್ನು ಪ್ರಾರಂಭಿಸುವಾಗ ಹಣಕಾಸಿನ ಬಗ್ಗೆಯೂ ನೀವು ಚರ್ಚೆ ನಡೆಸಬೇಕು. ಒಬ್ಬ ಸಂಗಾತಿ ತಲೆ ಮೇಲೆ ಸಾಲದ ಹೊರೆ ಇದ್ದರೆ ಅದನ್ನು ಹೇಗೆ ಹಂಚಿಕೊಳ್ಳುತ್ತೀರಿ, ಮನೆ ಖರ್ಚನ್ನು ಯಾರು ನೋಡಿಕೊಳ್ಳುತ್ತೀರಿ ಎಂಬುದನ್ನೆಲ್ಲ ಮಾತುಕತೆ ಮೂಲಕ ಸ್ಪಷ್ಟಪಡಿಸಿಕೊಳ್ಳಬೇಕು. ತಿಂಗಳ ಖರ್ಚನ್ನು ನೀವು ವಿಭಜನೆ ಮಾಡಿಕೊಳ್ತಿದ್ದರೆ ಅದಕ್ಕೆ ಸರಿಯಾದ ಲೆಕ್ಕ ಇಡಬೇಕು. ಹೇಗೆ ಉಳಿತಾಯ ಮಾಡ್ಬೇಕು, ಎಲ್ಲಿ ಉಳಿತಾಯ ಮಾಡ್ಬೇಕು, ಯಾರ ಹೆಸರಿನಲ್ಲಿ ಎಂಬುದನ್ನೆಲ್ಲ ನೀವು ಕುಳಿತು ಮಾತನಾಡಿ ನಿರ್ಧಾರಕ್ಕೆ ಬರಬೇಕು. ಕೊನೆಯಲ್ಲಿ ಕೈ ಖಾಲಿಯಾಗಿ ಪರದಾಡುವ ಬದಲು, ಇಬ್ಬರ ಆರ್ಥಿಕ ಸ್ಥಿತಿಯೂ ಸರಿಯಾಗಿರುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.
ಗಡಿ ರೇಖೆ ದಾಟಬೇಡಿ : ಸಂಗಾತಿ ಜೊತೆ ವಾಸಿಸುವುದು ಅದ್ಭುತ ಅನುಭವ ನೀಡುತ್ತದೆ. ನೀವು ಭಿನ್ನಾಭಿಪ್ರಾಯಗಳನ್ನು ನಿಭಾಯಿಸಲು ನಿಯಮಗಳನ್ನು ರೂಪಿಸುವಾಗ ಪರಸ್ಪರರ ಅಗತ್ಯತೆಗಳು ಮತ್ತು ವೈಯಕ್ತಿಕ ಸ್ಥಳವನ್ನು ಗೌರವಿಸಬೇಕು. ಮುಕ್ತ ಸಂವಹನ ಎಂದರೆ ಇದೇ. ಆಗ ಇಬ್ಬರೂ ತಮ್ಮ ಜೀವನದಲ್ಲಿ ತೃಪ್ತಿ ಹೊಂದಲು ಸಾಧ್ಯವಾಗುತ್ತದೆ. ನೀವು ನಿಮ್ಮ ನಿರೀಕ್ಷೆ ಹಾಗೂ ಆಸೆಗಳನ್ನು ಬಹಿರಂಗವಾಗಿ ಹೇಳಿದಾಗ ನಿಮ್ಮ ಸಂಗಾತಿಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಇಬ್ಬರ ಮಧ್ಯೆ ತಿಳುವಳಿಕೆ ಹೆಚ್ಚಾಗುತ್ತದೆ. ಗೌರವ ಹೆಚ್ಚುತ್ತದೆ.
I Love You ಅಂತ ಹೇಳಿದ್ರೆ ಮಾತ್ರ ಪ್ರೀತಿನಾ? ಇವರ ಕಥೆ ಕೇಳಿ
ಕನಸನ್ನು ಬಿಟ್ಟುಕೊಡ್ಬೇಡಿ : ನಿಮ್ಮ ಸಂಗಾತಿಯೊಂದಿಗೆ ಲೈವ್-ಇನ್ ಸಂಬಂಧದಲ್ಲಿದ್ದೀರಿ ಎಂದಾದ್ರೆ ಹೆಚ್ಚು ಗುಣಮಟ್ಟದ ಸಮಯವನ್ನು ನೀವು ಸಂಗಾತಿ ಜೊತೆ ಕಳೆಯುತ್ತೀರಿ. ಉಪಹಾರ, ತಡರಾತ್ರಿಯ ಡೇಟಿಂಗ್ ಬಿಡುವಿಲ್ಲದ ವೇಳಾಪಟ್ಟಿಯಿಂದ ನಿಮ್ಮ ವೈಯಕ್ತಿಕ ಕನಸು ಮರೆತು ಹೋಗ್ಬಹುದು. ಆದ್ರೆ ನಿಮ್ಮ ದಾರಿಯಿಂದ ನೀವು ಹಿಂದೆ ಸರಿಯಬಾರದು. ಸಂಗಾತಿ ಜೊತೆ ಸೇರಿ ನೀವು ನಿಮ್ಮ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಿ. ಅವರ ಜೊತೆ ಈ ಬಗ್ಗೆ ಚರ್ಚಿಸಿ. ಲಿವ್ ಇನ್ ಒಂದು ರೀತಿಯಲ್ಲಿ ಮದುವೆ ನಂತ್ರದ ಜೀವನದಂತೆ ಇರುತ್ತದೆ. ಅನೇಕ ದೇಶಗಳು ಇದನ್ನು ಮದುವೆ ಎಂದೇ ಪರಿಗಣಿಸಿವೆ. ಗರ್ಭಧಾರಣೆ, ಮಕ್ಕಳ ಜವಾಬ್ದಾರಿ, ಮಕ್ಕಳ ದತ್ತು ಸೇರಿದಂತೆ ಅನೇಕ ವಿಷ್ಯಗಳ ಬಗ್ಗೆ ಸರ್ಕಾರ ಕಾನೂನು ಮಾಡಿದ್ದು ಅದನ್ನು ನೀವು ತಿಳಿದು ಪಾಲಿಸಬೇಕಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.