Sex Education: ಅನೇಕರ ದಾಂಪತ್ಯ ಮುರಿದು ಬೀಳಲು ಸೆಕ್ಸ್ ಕಾರಣವಾಗಿರುತ್ತದೆ. ಸಂಭೋಗ ಸುಖ ಸಿಗ್ತಿಲ್ಲ ಎಂಬ ಗಂಡಸರ ಮಾತನ್ನು ಮಹಿಳೆಯಾದವಳು ಗಂಭೀರವಾಗಿ ತೆಗೆದುಕೊಳ್ಬೇಕು. ಹಾಸಿಗೆಯಲ್ಲಿ ಆಕೆ ಮಾಡುವ ಕೆಲ ತಪ್ಪುಗಳೇ ಪುರುಷನ ಕಣ್ಣು ಬೇರೆಡೆ ಹೊರಳಲು ಕಾರಣವಾಗ್ಬಹುದು ನೆನಪಿರಲಿ.
ಸಂಭೋಗ (Intercourse), ದಾಂಪತ್ಯದ (Marriage) ಸಿಹಿ ಹೆಚ್ಚಿಸುವ ಒಂದು ಭಾಗ. ಒತ್ತಾಯಕ್ಕೆ ಒಂದಾಗುವುದ್ರಿಂದ ಸುಖ (Sexual Satisfaction) ಸಿಗಲಾರದು. ಇಬ್ಬರ ಮನಸ್ಸು ಇಲ್ಲಿ ಮುಖ್ಯ ಪಾತ್ರವಹಿಸುತ್ತದೆ. ದೈಹಿಕ ಕ್ರಿಯೆಯಲ್ಲೂ ಮಾನಸಿಕ ಸ್ಥಿತಿ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ. ಮಹಿಳಾ ಸಂಗಾತಿ ಹಾಸಿಗೆಯಲ್ಲಿ ಪುರುಷ ಸಂಗಾತಿ ಹೇಗಿರಬೇಕೆಂದು ಬಯಸ್ತಾಳೋ ಅದೇ ರೀತಿ ಪುರುಷ ಸಂಗಾತಿ ಕೂಡ ಅನೇಕ ಕನಸು, ಕಲ್ಪನೆಗಳನ್ನು ಹೊಂದಿರುತ್ತಾನೆ. ಸಂಭೋಗಕ್ಕೆ ಹೆಚ್ಚು ಹಾತೊರೆಯುವವರು ಪುರುಷರು ಹಾಗೆ ಅತಿ ಹೆಚ್ಚು ಸಂತೋಷ ಸಿಗುವುದು ಪುರುಷರಿಗೆ ಎಂಬ ನಂಬಿಕೆಯಿದೆ. ಇದು ಸಂಪೂರ್ಣ ಸತ್ಯವಲ್ಲ. ಮಹಿಳೆಯರನ್ನೂ ಸಂಭೋಗ ಬೆಳೆಸುವ ಬಯಕೆಯಿರುತ್ತದೆ. ಅನೇಕ ಬಾರಿ ಮಹಿಳೆಯರಿಗೆ ಲೈಂಗಿಕ ಸುಖ ಪ್ರಾಪ್ತಿಯಾಗಿರುತ್ತದೆ. ಆದ್ರೆ ಪುರುಷರಿಗೆ ಶಾರೀರಿಕ ಸಂಬಂಧ ಬೆಳೆಸಿದ ನಂತ್ರವೂ ಸಂತೋಷ, ನೆಮ್ಮದಿ ಸಿಕ್ಕಿರುವುದಿಲ್ಲ. ಸಂಬಂಧದ ನಂತ್ರ ಅವರು ಪತ್ನಿಯನ್ನು ದ್ವೇಷಿಸಬಹುದು ಅಥವಾ ಅವಳಿಂದ ದೂರವಿರಲು ಬಯಸಬಹುದು. ಇದಕ್ಕೆ ಮಹಿಳಾ ಸಂಗಾತಿ ವರ್ತನೆ ಕಾರಣ. ಸಂಭೋಗದ ವೇಳೆ ಹೇಗೆ ವರ್ತಿಸಬೇಕು ಎಂಬುದು ಮಹಿಳೆಗೆ ತಿಳಿದಿರಬೇಕು. ಆಕೆ ಮಾಡುವ ಕೆಲ ತಪ್ಪುಗಳು ಪುರುಷ ಸಂಗಾತಿ ಸುಖವನ್ನು ಹಾಳು ಮಾಡುತ್ತದೆ. ಇಂದು ಸಂಭೋಗದ ವೇಳೆ ಮಹಿಳೆಯರು ಯಾವ ತಪ್ಪು ಮಾಡ್ಬಾರದು ಎಂಬುದನ್ನು ನಾವು ಹೇಳ್ತೇವೆ.
ಮಹಿಳೆಯರು ಮಾಡ್ಬೇಡಿ ಈ ತಪ್ಪು :
ನಕಲಿ ಪರಾಕಾಷ್ಠೆ : ಅನೇಕ ಮಹಿಳೆಯರು ಪತಿಗೆ ಬೇಸರವಾಗುತ್ತೆ ಎಂಬ ಕಾರಣಕ್ಕೆ ಪರಾಕಾಷ್ಠೆ ಪ್ರಾಪ್ತಿಯಾದಂತೆ ನಾಟಕವಾಡ್ತಾರೆ. ಆದ್ರೆ ನಿಮ್ಮ ಈ ನಾಟಕವೇ ಪತಿಯ ಬೇಸರಕ್ಕೆ ಕಾರಣವಾಗುತ್ತದೆ. ಯಾವುದೇ ಕಾರಣಕ್ಕೂ ಪರಾಕಾಷ್ಠೆ ತಲುಪಿದ್ದೇವೆಂದು ಸುಳ್ಳು ಹೇಳ್ಬೇಡಿ. ನನ್ನಿಂದ ಪತ್ನಿ ಸಂತೃಪ್ತಿ ಹೊಂದಿಲ್ಲ ಎಂಬ ವಿಷ್ಯ ಪುರುಷರನ್ನು ಹರ್ಟ್ ಮಾಡುತ್ತೆ. ಹಾಗಾಗಿ ಹಾಸಿಗೆಯಲ್ಲಿ ಸಂಗಾತಿ ಜೊತೆ ಮುಕ್ತವಾಗಿ ಮಾತನಾಡಿ. ನಿಮಗೆ ಯಾವುದ್ರಿಂದ ಪರಾಕಾಷ್ಠೆ ಸಿಗುತ್ತೆ ಎಂಬುದನ್ನು ಅವರಿಗೆ ಹೇಳಿ. ಹಾಗೆ ಅವರಿಗೆ ಗೈಡ್ ಮಾಡಿ. ಈ ಮೂಲಕ ಇಬ್ಬರೂ ಸಂತೋಷ ಪಡೆಯಲು ಪ್ರಯತ್ನಿಸಿ.
ಇದನ್ನೂ ಓದಿ: BEST COLLEAGUE: ಎಲ್ಲರೂ ಬಯಸುವ ಅದ್ಭುತ ಸಹೋದ್ಯೋಗಿಯಾಗೋದು ಹೇಗೆ?
ಪ್ರತಿ ದಿನ ನೋ ನೋ : ಇಬ್ಬರ ಸಂಬಂಧ ಗಟ್ಟಿಯಾಗಲು ಸೆಕ್ಸ್ ಒಳ್ಳೆಯ ಮಾರ್ಗ. ಇಡೀ ದಿನ ದುಡಿದು ಬರುವ ಪುರುಷರಿಗೆ ಸೆಕ್ಸ್ ಒಂದು ಆಕರ್ಷಣೆ. ಅದು ಅವರ ಸುಸ್ತನ್ನು ಕಡಿಮೆ ಮಾಡಿ, ಮನಸ್ಸನ್ನು ಖುಷಿಗೊಳಿಸುತ್ತದೆ. ಮಹಿಳೆಯರು ಕೂಡ ದಿನವಿಡೀ ಕೆಲಸ ಮಾಡಿ ದಣಿದಿರುತ್ತಾರೆ. ಆದ್ರೆ ಈ ದಣಿವನ್ನು ಎಂದೂ ಹಾಸಿಗೆಯಲ್ಲಿ ತೋರಿಸಬೇಡಿ. ಉತ್ಸಾಹದಿಂದ ಹತ್ತಿರ ಬಂದ ಪತಿಗೆ ಸುಸ್ತಿನ ಕಾರಣ ಹೇಳಿ ದೂರ ತಳ್ಳುವುದು ಸರಿಯಲ್ಲ. ಪ್ರತಿ ದಿನ ಇದೇ ರಿಪಿಟ್ ಆಗ್ತಿದ್ದರೆ ಪತಿಯ ಮನಸ್ಸು ಮುರಿಯುತ್ತದೆ. ನಿಮ್ಮ ದಣಿವು ಹೋಗಲಾಡಿಸಲು ನೀವು ಬೇರೆ ಮಾರ್ಗ ಕಂಡುಕೊಳ್ಳಿ.
ಸೆಕ್ಸ್ ಬೆಡ್ ರೂಮಿಗೆ ಮಾತ್ರ ಸೀಮಿತ : ಪುರುಷರು ಸೆಕ್ಸ್ ನಲ್ಲಿ ಹೊಸ ಪ್ರಯೋಗ, ಹೊಸ ಜಾಗವನ್ನು ಬಯಸ್ತಾರೆ. ಅವಕಾಶ ಸಿಕ್ಕಾಗ ಕಿಚನ್, ಬಾತ್ ರೂಮ್ ಸೇರಿದಂತೆ ಮನೆಯ ಬೇರೆ ಸ್ಥಳಗಳಲ್ಲಿಯೂ ನೀವು ಶಾರೀರಿಕ ಸಂಬಂಧ ಬೆಳೆಸಬಹುದು. ಪತಿ ಹೇಳಿದ ನಂತ್ರವೂ ನೀವು ಹೊಸ ಜಾಗ, ಹೊಸ ಪ್ರಯೋಗಕ್ಕೆ ಮುಂದಾಗದೆ ಹೋದ್ರೆ ಅವರಲ್ಲಿ ನಿರಾಸೆ ಮೂಡುತ್ತದೆ.
ಇದನ್ನೂ ಓದಿ: ರೊಮ್ಯಾಂಟಿಕ್ ದಾಂಪತ್ಯಕ್ಕಿಲ್ಲಿವೆ Flirting tips
ಅತಿಯಾದ ಮಾತು : ಈ ಸಮಯದಲ್ಲಿ ಸೆಕ್ಸ್ ಗೆ ಸಂಬಂಧಿಸಿದ ವಿಷ್ಯವನ್ನು ಮಾತ್ರ ಮಾತನಾಡಿ. ನಿಮ್ಮ ಮಾತು ಸಂಗಾತಿಗೆ ಕಿರಿಕಿರಿ ಎನ್ನಿಸಬಾರದು. ನೀವು ಮನೆ ವಸ್ತುಗಳು ಅಥವಾ ಬೇರೆಯವರ ಸಮಸ್ಯೆಯನ್ನು ಇಲ್ಲಿ ಹೇಳುವುದು ತಪ್ಪು. ಲೈಂಗಿಕ ಪ್ರಚೋದನೆ ನೀಡುವು ಮಾತುಗಳಿಗೆ ಮಾತ್ರ ಆದ್ಯತೆ ನೀಡಿ.
ಸಂಗಾತಿ ಜೊತೆ ಸಿಂಕ್ : ಲೈಂಗಿಕ ಕ್ರಿಯೆ ವೇಳೆ ಇಬ್ಬರು ಮಹತ್ವ ಪಡೆಯುತ್ತಾರೆ. ನಿಮ್ಮಿಷ್ಟ ಹಾಗೂ ನಿಮ್ಮ ವೇಗವನ್ನು ಮಾತ್ರ ನೀವು ಗಮನಿಸಬಾರದು. ಸಂಗಾತಿಯ ಬಗ್ಗೆಯೂ ಗಮನ ನೀಡ್ಬೇಕು. ಅವರಿಗೂ ಆದ್ಯತೆ ನೀಡ್ಬೇಕು. ಇದ್ರಿಂದ ಲೈಂಗಿಕ ಜೀವನ ಆನಂದದಾಯಕವಾಗಿರುತ್ತದೆ.