Cheating Wife: ಮದುವೆ ದಿನವೇ ಮೈದುನನ ಜೊತೆ ಮಲಗಿದ ಹೆಂಡತಿ ..! ಪಶ್ಚಾತ್ತಾಪವೂ ಇಲ್ಲವಂತೆ

By Suvarna News  |  First Published Apr 5, 2022, 1:23 PM IST

Love Sex & Deciet: ಸಂಬಂಧ ಗಟ್ಟಿಯಾಗ್ಬೇಕೆಂದ್ರೆ ದಂಪತಿ ಮಧ್ಯೆ ಪ್ರೀತಿ ಜೊತೆ ಪ್ರಾಮಾಣಿಕತೆ ಇರಬೇಕು. ನಾಟಕದ ಪ್ರೀತಿ ಬಹುದಿನ ನಡೆಯುವುದಿಲ್ಲ. ಕೆಲವೊಮ್ಮೆ ಹಿಂದೆ ಮಾಡಿದ ತಪ್ಪು ಮದುವೆಯಾದ್ಮೇಲೆ ಕಾಡುತ್ತದೆ. ಆದ್ರೆ ಈ ಮಹಿಳೆ ಹೇಳೋದೇ ಬೇರೆ. 
 


ಮದುವೆ (Marriage), ಮೊದಲ ರಾತ್ರಿ (Night) ಗೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ಅವರದೇ ಆದ ಆಲೋಚನೆ, ನಂಬಿಕೆಯನ್ನು ಹೊಂದಿರುತ್ತಾರೆ. ಕೆಲ ಹುಡುಗಿಯರು ಮದುವೆಗಿಂತ ಮೊದಲು ಮಾಜಿ ಅಥವಾ ಭಾವಿ ಸಂಗಾತಿ ಜೊತೆ ದೈಹಿಕ ಸಂಬಂಧ ಬೆಳೆಸಲು ಇಚ್ಛಿಸುತ್ತಾರೆ. ಅದನ್ನು ಸಮರ್ಥಿಸಿಕೊಳ್ತಾರೆ ಕೂಡ. ಆದ್ರೆ ಮತ್ತೆ ಕೆಲವರು ಪತಿಗೆ ಮಾತ್ರ ತನ್ನ ದೇಹ ಸೀಮಿತ ಎಂದುಕೊಳ್ತಾರೆ. ಮೊದಲ ರಾತ್ರಿಗೆ ವಿಶೇಷ ಮಹತ್ವ ನೀಡ್ತಾರೆ. ಭಾವಿ ಪತಿ, ಸಪ್ತಪದಿ ತುಳಿದು ಪತಿಯಾಗುವವರೆಗೂ ಆತನಿಂದ ದೂರವಿರ್ತಾರೆ. ಇದೇ ಸ್ವಭಾವದ ಮಹಿಳೆಯೊಬ್ಬಳು ಮದುವೆ ದಿನ ಏನಾಯ್ತು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾಳೆ. ಪತಿಗೆ ಮೋಸ ಮಾಡುವ ಕೆಲಸ ಮಾಡಿದ್ರೂ ಆಕೆಗೆ ಅದ್ರ ಬಗ್ಗೆ ಬೇಸರವಿಲ್ಲವಂತೆ. ತನ್ನನ್ನು ತಾನು ಎಂದೂ ಅಪರಾಧಿ ಎಂದು ಭಾವಿಸುವುದಿಲ್ಲ. ಆ ದಿನ ಸದಾ ನನಗೆ ನೆನಪಿರುತ್ತೆ ಎನ್ನುತ್ತಾಳೆ ಮಹಿಳೆ. ಆಕೆ ಮದುವೆ ದಿನ ಆಗಿದ್ದೇನು ಎಂಬುದನ್ನು ನಾವು ಹೇಳ್ತೇವೆ.

ತನ್ನ ಕೈ ಹಿಡಿಯುವ ವ್ಯಕ್ತಿ ಬಗ್ಗೆ ಕನಸು ಕಾಣ್ತಾ, ಮೊದಲ ರಾತ್ರಿಯ ಬಗ್ಗೆ ಸುಂದರ ಕಲ್ಪನೆಗಳನ್ನು ಮಾಡ್ತಾ ಖುಷಿಪಡುವ ಮಹಿಳೆಯಲ್ಲಿ ಆಕೆಯೂ ಒಬ್ಬಳು. ಮದುವೆಗಿಂತ ಮೊದಲು ಸಂಗಾತಿ ಜೊತೆ ಒಂದಾಗುವ ಹುಡುಗಿಯರ ಬಗ್ಗೆ ಆಕೆಗೆ ದ್ವೇಷವಿಲ್ಲ. ಪತಿಯಾದವನಿಗೆ ಪ್ರಾಮಾಣಿಕವಾಗಿರಬೇಕು. ತನ್ನನ್ನು ಪತಿಗೆ ಸಂಪೂರ್ಣ ಅರ್ಪಿಸಬೇಕೆಂಬ ಭಾವ ಆಕೆಯದ್ದು. ಪತಿಯೊಂದಿಗೆ ಮಾತ್ರ ಲೈಂಗಿಕವಾಗಿ ಆಕರ್ಷಿತವಾಗ್ಬೇಕೆಂದು ಕೊಂಡಿದ್ದ ಆಕೆ ಬಾಳಲ್ಲಿ ಆಗಿದ್ದೇ ಬೇರೆ.

Tap to resize

Latest Videos

ಗಂಡ ಸಿಕ್ಕಾಪಟ್ಟೆ ಜೊಲ್ಲು..! ಫ್ಲರ್ಟಿಂಗ್ ಮಾಡೋ ಅಭ್ಯಾಸ ನಿಲ್ಸೋದು ಹೇಗೆ ?

ಪತಿಯ ತಮ್ಮನ ಮೇಲೆ ಪ್ರೀತಿ : ಹುಡುಗಿ ಮನೆಯಲ್ಲಿ ಮದುವೆ ಬಗ್ಗೆ ಮಾತುಕತೆ ಶುರುವಾಗಿತ್ತಂತೆ. ತಂದೆ – ತಾಯಿ ಹುಡುಗನ ಆಯ್ಕೆ ಮಾಡಿದ್ದರಂತೆ. ಎಲ್ಲರೂ ಹುಡುಗಿ ನೋಡುವ ಶಾಸ್ತ್ರಕ್ಕೆ ಬಂದಿದ್ದರಂತೆ. ಹುಡುಗನ ಜೊತೆ ಆತನ ಚಿಕ್ಕಪ್ಪನ ಮಗ ಕೂಡ ಬಂದಿದ್ದನಂತೆ. ಹುಡುಗನಿಗಿಂತ ಹುಡುಗಿಯನ್ನು ಸೆಳೆದಿದ್ದು ಮೈದುನ. ಆಕೆ ಪತಿ ಹೇಗಿರಬೇಕೆಂದುಕೊಂಡಿದ್ದಳೋ ಆತ ಕೂಡ ಹಾಗೆ ಇದ್ದನಂತೆ. ಸುಂದರ ಮುಖ, ಕಟ್ಟುಮಸ್ತಾದ ದೇಹ, ಮೃದು ಮಾತು ಆಕೆಯನ್ನು ಆಕರ್ಷಿಸಿತ್ತು. ಭಾವಿ ಪತಿ ರೋಮ್ಯಾನ್ಸ್ ನಲ್ಲಿ ಹಿಂದಿದ್ದ ಎಂಬುದೂ ಆಕೆಯ ಗಮನ ಬೇರೆಳೆ ಸೆಳೆಯಲು ಒಂದು ಕಾರಣವಾಗಿತ್ತು.

Relationship Problems : ಶಂಕ್ರಣ್ಣ–ಮೇಘನಾ ನೀವಾಗ್ಬಾರದೆಂದ್ರೆ ಇದನ್ನೋದಿ

ತಂದೆ – ತಾಯಿಗೆ ಗೊತ್ತಿತ್ತು ವಿಷ್ಯ : ಹುಡುಗನಿಗಿಂತ ಹುಡುಗನ ಸಹೋದರ ನನಗೆ ಇಷ್ಟವಾಗಿದ್ದಾನೆ ಎಂದು ಹುಡುಗಿ ಅನೇಕ ಬಾರಿ ಪಾಲಕರ ಮುಂದೆ ಹೇಳಿದ್ದಳಂತೆ. ಆದ್ರೆ ಹುಡುಗಿ ಬಾಯಿ ಮುಚ್ಚಿಸಿದ್ದರಂತೆ ಪಾಲಕರು. ಭಾವಿ ಪತಿಗೆ ಈ ಸಂಗತಿ ಹೇಳ್ತೇನೆಂದು ಎಷ್ಟು ಹೇಳಿದ್ರೂ ಪಾಲಕರು ತಡೆದಿದ್ದರಂತೆ. ಮೈದುನನ ವಯಸ್ಸು 2 ವರ್ಷ ಚಿಕ್ಕದಾಗಿರುವುದೂ ಇದಕ್ಕೊಂದು ಕಾರಣ ಎನ್ನುತ್ತಾಳೆ ಆಕೆ. 

ಕದ್ದು ಮುಚ್ಚಿ ನೋಟ : ಮದುವೆ ತಯಾರಿ ಒಂದ್ಕಡೆ ಜೋರಾಗಿ ನಡೆದಿತ್ತು. ಪತಿ ಮನೆಯವರು ಆಗಾಗ ಬಂದು ಹೋಗ್ತಿದ್ದರು. ಅವ್ರ ಜೊತೆ ಬರ್ತಿದ್ದ ಮೈದುನ ಕದ್ದು ಮುಚ್ಚಿ ನೋಡ್ತಿದ್ದ. ಆತನ ನೋಟವೇ ಹೇಳ್ತಿತ್ತು ಆತನ ಪ್ರೀತಿಯನ್ನು ಎನ್ನುತ್ತಾಳೆ ಹುಡುಗಿ.

ಮದುವೆ ದಿನ ಆಗಿದ್ದೇನು ? : ಎಲ್ಲದರ ಮಧ್ಯೆ ಮದುವೆ ದಿನ ಬಂದೇ ಹೋಯ್ತು. ಮದುವೆಗೆ ಸಿದ್ಧವಾಗಿ ಕುಳಿತಿದ್ದವಳ ಮನಸ್ಸಿನಲ್ಲಿ ಪತಿ ಇರಲಿಲ್ಲ. ಮೈದುನನ್ನು ಬಯಸಿದ್ದಾಕೆ  ಕೋಣೆಯಲ್ಲಿ ಏಕಾಂಗಿಯಾಗಿ ಕುಳಿತಿದ್ದಳಂತೆ. ಆಗ ಬಂದವನು ಮೈದುನ. ಮದುವೆ ಹೆಣ್ಣನ್ನು ಕಣ್ಣು ಮಿಟುಕಿಸದೆ ನೋಡ್ತಿದ್ದ ಮೈದುನನ ಕಣ್ಣೋಟಕ್ಕೆ ಆಕೆ ಮತ್ತಷ್ಟು ಸೋತಿದ್ದಳಂತೆ. ಮೇಕಪ್ ಮರೆತ ಹುಡುಗಿ ಮೈದುನನ ಜೊತೆ ಸಂಬಂಧ ಬೆಳೆಸಿದ್ದಳು. 

ನೋ ಗಿಲ್ಟಿ : ಈ ಬಗ್ಗೆ ಮಾತನಾಡುವ ಮಹಿಳೆ, ನನಗೆ ಈ ಬಗ್ಗೆ ಗಿಲ್ಟಿಯಿಲ್ಲ. ನಾವಿಬ್ಬರೂ ಈ ವಿಷ್ಯವನ್ನು ಯಾರಿಗೂ ಹೇಳುವುದಿಲ್ಲ. ಮದುವೆ ನಂತ್ರ ಪತಿಗೆ ಮಾತ್ರ ನಾನು ಸೀಮಿತ. ಆದ್ರೆ ಆ ದಿನವನ್ನು ಮರೆಯಲು ಸಾಧ್ಯವಿಲ್ಲ. ಅದ್ರ ನೆನಪು ನನಗೆ ಸದಾ ಇರುತ್ತದೆ. ಪತಿಗೆ ಮೋಸ ಮಾಡಿ, ಮೈದುನನ ಜೊತೆ ಸಂಬಂಧ ಬೆಳೆಸಿರುವ ಪಶ್ಚಾತ್ತಾಪ ನನಗಿಲ್ಲ ಎನ್ನುತ್ತಾಳೆ ಆಕೆ.
 

click me!