ಮುತ್ತಿನ ಮತ್ತು, ಗಮ್ಮತ್ತೇ ಬೇರೆ ಬಿಡಿ. ಪ್ರೀತಿಯನ್ನು ವಿನಿಮಯ ಮಾಡಿಕೊಳ್ಳೋಕೆ ಪರಸ್ಪರ ಚುಂಬಿಸಿಕೊಳ್ಳುತ್ತಾರೆ. ಆದ್ರೆ ಇಲ್ಲೊಂದೆಡೆ ತಮ್ಮ ಕಿಸ್ ಮೂಲಕವೇ ಗಿನ್ನಿಸ್ ದಾಖಲೆ ಬರೆದಿದೆ. ಅರೆ. ಮುತ್ತಿಗೂ ದಾಖಲೆಗೂ ಏನ್ ಸಂಬಂಧನಪ್ಪಾ ಅಂತೀರಾ ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.
ಮುತ್ತಿನ ಮತ್ತು, ಗಮ್ಮತ್ತೇ ಬೇರೆ. ಪ್ರೀತಿಸುವವರು ತಮ್ಮ ಪ್ರೀತಿ ವ್ಯಕ್ತಪಡಿಸಲು ಪರಸ್ಪರ ಚುಂಬಿಸಿಕೊಳ್ಳುತ್ತಾರೆ. ಕಿಸ್, ರೋಮ್ಯಾಂಟಿಕ್ ಆಗಿರುವುದರ ಒಂದು ವಿಧವೂ ಹೌದು ನಿನ್ನೆ ಹೇಗೋ ಪ್ರೇಮಿಗಳ ದಿನ. ಎಲ್ಲೆಡೆ ಮುತ್ತಿನ ಸುರಿಮಳೆಯೇ ಆಗಿರುತ್ತದೆ. ಆದ್ರೆ ಮನಸ್ಸಿಗೆ ಖುಷಿ ನೀಡುವ ಮುತ್ತಿನಿಂದಾಲೂ ದಾಖಲೆಯಾಗಿದೆ ಅಂದ್ರೆ ನಂಬ್ತೀರಾ ? ನಂಬೋಕೆ ಸ್ಪಲ್ಪ ಕಷ್ಟ ಅನಿಸಿದರೂ ಇದು ನಿಜ. ದಕ್ಷಿಣ ಆಫ್ರಿಕಾದ ಬೆತ್ ನೀಲ್ ಮತ್ತು ಕೆನಡಾದ ಮೈಲ್ಸ್ ಕ್ಲೌಟಿಯರ್ ಅವರು ನಾಲ್ಕು ನಿಮಿಷ ಮತ್ತು ಆರು ಸೆಕೆಂಡುಗಳ ಕಾಲ ಚುಂಬಿಸಿ ನೀರಿನೊಳಗಿನ ಸುದೀರ್ಘ ಚುಂಬನಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು.
ಪ್ರೇಮಿಗಳ ದಿನದಂದೇ ಜೋಡಿಯ ಗಿನ್ನೆಸ್ ವಿಶ್ವ ದಾಖಲೆ
ಫೆಬ್ರವರಿ 14, ಪ್ರೇಮಿಗಳ ದಿನ (Valentines day). ನಿನ್ನೆ ಅದೆಷ್ಟೋ ಮಂದಿ ತಮ್ಮ ಸಂಗಾತಿಗಳ (Partner) ಜೊತೆ ಖುಷಿಯಿಂದ ವಾಲೆಂಟೈನ್ಸ್ ಡೇಯನ್ನು ಆಚರಿಸಿದ್ದಾರೆ. ಕೇಕ್ ಮಾಡಿ, ಗಿಫ್ಟ್‌ಗಳನ್ನು ನೀಡಿ, ಡೇಟ್‌ಗೆ ಹೋಗಿ ಸಂಗಾತಿಯ ಜೊತೆ ಖುಷಿಯಿಂದ ಸಮಯ ಕಳೆದಿದ್ದಾರೆ. ಹೀಗಿರುವಾಗ ಇಲ್ಲೊಂದೆಡೆ ಪ್ರೇಮಿಗಳ ದಿನದಂದು ಗಿನ್ನೆಸ್ ವಿಶ್ವ ದಾಖಲೆ (Guinness World Record) ನಿರ್ಮಿಸಲು ದಂಪತಿಗಳು ನೀರಿನ ಅಡಿಯಲ್ಲಿ 4 ನಿಮಿಷ 6 ಸೆಕೆಂಡುಗಳ ಕಾಲ ಚುಂಬಿಸಿದ್ದಾರೆ (Kiss). ನಂಬೋಕೆ ಕಷ್ಟವೆನಿಸಿದರೂ ಇದು ನಿಜ.
Transgender Marriage: ಕೇರಳದಲ್ಲಿ ಪ್ರೇಮಿಗಳ ದಿನದಂದೇ ತೃತೀಯ ಲಿಂಗಿ ಜೋಡಿಯ ಮದುವೆ
ಪ್ರೇಮಿಗಳ ದಿನವನ್ನು ಎಲ್ಲಾ ಜೋಡಿಯು (Couple) ಖುಷಿಯಿಂದ ಕಳೆಯಲು ಇಷ್ಟಪಡುತ್ತಾರೆ. ಹೀಗಿರುವಾಗ ದಕ್ಷಿಣ ಆಫ್ರಿಕಾದ ಜೋಡಿ ನೀರೊಳಗಿನ ಸುದೀರ್ಘ ಚುಂಬನದ ವಿಶ್ವ ದಾಖಲೆಯನ್ನು ಸ್ಥಾಪಿಸುವ ಮೂಲಕ ಅಸಾಮಾನ್ಯವಾಗಿ ಪ್ರೇಮಿಗಳ ದಿನವನ್ನು ಆಚರಿಸಿದರು. ದಕ್ಷಿಣ ಆಫ್ರಿಕಾದ ಬೆತ್ ನೀಲ್ ಮತ್ತು ಕೆನಡಾದ ಮೈಲ್ಸ್ ಕ್ಲೌಟಿಯರ್ ಅವರು ನಾಲ್ಕು ನಿಮಿಷ ಮತ್ತು ಆರು ಸೆಕೆಂಡುಗಳ ಕಾಲ ಚುಂಬಿಸಿ ನೀರಿನೊಳಗಿನ ಸುದೀರ್ಘ ಚುಂಬನಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು.
ಅತಿ ಉದ್ದವಾದ ನೀರೊಳಗಿನ ಕಿಸ್
ಫ್ರೀಡೈವರ್ಸ್ ಬೆತ್ ಮತ್ತು ಮೈಲ್ಸ್ ಮೂರು ವರ್ಷಗಳ ಹಿಂದೆ ಈ ಪ್ಲಾನ್ ಮಾಡಿದ್ದರು.ನಂತರ ಈ ದಾಖಲೆಯನ್ನು ಸಾಧಿಸಲು ಕಠಿಣ ಅಭ್ಯಾಸ ಮಾಡಿದರು ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಹೇಳಿದೆ. ಇವರಿಬ್ಬರ ಮೇಕ್-ಔಟ್ ಸೆಷನ್ 3 ನಿಮಿಷ 24 ಸೆಕೆಂಡುಗಳ ಹಿಂದಿನ ದಾಖಲೆಯನ್ನು ಮುರಿದಿದೆ. ಇದನ್ನು 13 ವರ್ಷಗಳ ಹಿಂದೆ ಇಟಲಿಯಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಟಿವಿ ಶೋ ಲೋ ಶೋ ಡೀ ರೆಕಾರ್ಡ್‌ನಲ್ಲಿ ರಚಿಸಲಾಗಿತ್ತು.
Valentines Day: ಟ್ವಿಟರ್‌ನಲ್ಲಿ ಹುಟ್ಟಿಕೊಂಡ ಪತ್ರಕರ್ತೆಯ ಪ್ರೇಮಕಥೆ ವೈರಲ್
ಈ ರೆಕಾರ್ಡ್ ಮಾಡಿರೋದು ಶ್ಲಾಘನೀಯ ಎಂದಿದ್ದಾರೆ. ಇನ್ನು ಕೆಲವರು ಇದು ತುಂಬಾ ಆರೋಗ್ಯಕರವಾಗಿದೆ (Healthy) ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ಇದು ತುಂಬಾ ಕಷ್ಟದ ಕೆಲಸ. ಹೇಗೆ ಸಾಧ್ಯವಾಯಿತು' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದೇನೆ ಇರ್ಲಿ, ನೀರೊಳಗೆ ಸೆಕೆಂಡುಗಳ ಕಾಲ ಇರುವುದೇ ಕಷ್ಟವಾಗಿರುವಾಗ, ಈ ಜೋಡಿ ನೀರೊಳಗೂ ಸುದೀರ್ಘ ಕಿಸ್ ಮಾಡಿರುವುದು ಅಚ್ಚರಿ ಮೂಡಿಸುತ್ತದೆ.ಈ ಜೋಡಿಯ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗ್ತಿರೋದಂತೂ ನಿಜ.
Relationship Tips: ಹುಡುಗಿ ಸದ್ದಿಲ್ಲದೆ ಕೈ ಕೊಟ್ ಬಿಟ್ಳಾ? ಕಾರಣ ಏನಿರ್ಬೋದು?