#Feelfree: ಪತ್ನಿಯ ಕನ್ಯಾಪೊರೆ ಹರಿದಿರೋದು ಪತಿಗೆ ಗೊತ್ತಾಗುತ್ತಾ?

By Suvarna News  |  First Published Sep 15, 2021, 6:30 PM IST

ಮದುವೆಗೂ ಮುನ್ನ ಬಾಯ್‌ಫ್ರೆಂಡ್ ಜೊತೆಗೆ ಪಡೆದ ಸೆಕ್ಸ್‌ನ ಅನುಭವದ ವೇಳೆ ಕಳೆದುಕೊಂಡ ಕನ್ಯಾಪೊರೆಯ ಬಗ್ಗೆ ಭಾವಿ ಗಂಡನಿಗೆ ಗೊತ್ತಾದೀತಾ ಅನ್ನುವುದು ಹಲವು ಹೆಣ್ಣುಮಕ್ಕಳ ಕಳವಳ.
 


ಪ್ರಶ್ನೆ: ನಾನು ಇಪ್ಪತ್ತೈದು ವರ್ಷದ ಯುವತಿ. ನನಗೆ ಒಬ್ಬ ಬಾಯ್‌ಫ್ರೆಂಡ್ ಇದ್ದಾನೆ. ಇತ್ತೀಚೆಗೆ ನಾವಿಬ್ಬರೂ ಎರಡು ಬಾರಿ ಸಂಭೋಗ ನಡೆಸಿದ್ದೇವೆ. ಇದೇ ನನ್ನ ಮೊದಲ ಸಂಭೋಗ, ಈ ಲೈಂಗಿಕ ಕ್ರಿಯೆಯ ವೇಳೆಗೆ ನನ್ನ ಕನ್ಯಾಪೊರೆ ಹರಿದುಹೋಗಿದೆ, ಯಾಕೆಂದರೆ ಎರಡು ಬಾರಿಯೂ ರಕ್ತಸ್ರಾವ ಆಯಿತು. ಸ್ವಲ್ಪ ನೋವೂ ಆಯಿತು. ನನಗೀಗ ಸಮಸ್ಯೆ ಸೆಕ್ಸ್‌ನದಲ್ಲ. ನಾನು ಹಾಗೂ ಈ ಬಾಯ್‌ಫ್ರೆಂಡ್ ಮದುವೆಯಾಗಲು ಸಾಧ್ಯವಿಲ್ಲ. ಯಾಕೆಂದರೆ ಆತನ ಮತ್ತು ನನ್ನ ಜಾತಿ- ಅಂತಸ್ತು- ವಯಸ್ಸು ಎಲ್ಲವೂ ಬೇರೆ ಬೇರೆ. ಇತ್ತೀಚೆಗೆ ನನ್ನ ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡಿದ್ದಾರೆ. ಒಳ್ಳೆಯ ಸ್ಥಾನಮಾನ ಇರುವ ಗಂಡು ಕೂಡ ದೊರಕಿದ್ದಾನೆ. ನನ್ನ ಬಾಯ್‌ಫ್ರೆಂಡ್‌ಗೂ ನನ್ನನ್ನು ಮದುವೆಯಾಗಲೇಬೇಕು ಎಂಬ ಹಠವೇನೂ ಇಲ್ಲ. ನನ್ನ ಸಮಸ್ಯೆ ಏನೆಂದರೆ, ಭವಿಷ್ಯದಲ್ಲಿ, ನಾನು ಬೇರೊಬ್ಬರೊಡನೆ ಸೆಕ್ಸ್ ಅನುಭವ ಹೊಂದಿರುವುದು ಹಾಗೂ ಕನ್ಯಾಪೊರೆ ಹದಿದಿರುವುದು ನನ್ನ ಪತಿಗೆ ಗೊತ್ತಾಗಬಹುದಾ? ಇದರಿಂದ ಸಮಸ್ಯೆ ಆಗಬಹುದಾ? 

ಉತ್ತರ: ಗೊತ್ತಾಗುವ ಯಾವುದೇ ಸಾಧ್ಯತೆ ಇಲ್ಲ. ಒಂದು ವೇಳೆ ನಿಮ್ಮ ಹಳೆಯ ಚರಿತ್ರೆ ಗೊತ್ತಾಗುವಂತೆ ನೀವು ಅಥವಾ ನಿಮ್ಮ ಬಾಯ್‌ಫ್ರೆಂಡ್ ನಡೆದುಕೊಂಡರೆ ಮಾತ್ರ ಗೊತ್ತಾಗಬಹುದು. ನಿಮ್ಮ ಭಾವಿ ಗಂಡ ಆಧುನಿಕ ಮನಸ್ಥಿತಿಯವರಾಗಿದ್ದರೆ, ನೀವು ಮೊದಲೇ ಕನ್ಯಾಪೊರೆ ಹರಿದುಕೊಂಡಿದ್ದರೂ ಅವರಿಗೆ ಅದೇನೂ ಸಮಸ್ಯೆ ಅನಿಸಲಾರದು. ಸಾಮಾನ್ಯವಾಗಿ ಕನ್ಯಾಪೊರೆ ಸಂಭೋಗದಿಂದಲೇ ಹರಿಯಬೇಕೆಂದೇನೂ ಇಲ್ಲ. ಅದು ಕಠಿಣ ವ್ಯಾಯಾಮದ ವೇಳೆ, ಬೈಸಿಕಲ್ ಚಲಾಯಿಸುವ ಸಂದರ್ಭದಲ್ಲಿಯೂ ಹರಿದುಹೋಗಬಹುದು. ಒಂದುವೇಳೆ ಅವರು ಸಾಂಪ್ರದಾಯಿಕ ಮನಸ್ಥಿತಿಯವರಾಗಿದ್ದರೆ, ಆಗ ಕನ್ಯಾಪೊರೆಯ ಬಗ್ಗೆ ಯೋಚಿಸಬಹುದು. ಆದರೆ ಆಧುನಿಕ ಶಿಕ್ಷಣ ಪಡೆದ ಯಾರೂ ಇಂದು ಕನ್ಯಾಪೊರೆಯ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಮದುವೆಯ ಬಳಿಕ ಹೆಂಡತಿಯ ಕನ್ಯಾಪೊರೆಯ ಬಗ್ಗೆಯೇ ಯೋಚಿಸುವವನು ಒಳ್ಳೆಯ ಗಂಡನೂ ಆಗಲಾರ. ಆದರೆ ನಿಮ್ಮ ಬಗ್ಗೆಯೇ ನನಗೆ ಯೋಚನೆ. ವಿವಾಹಪೂರ್ವ ಸೆಕ್ಸ್ ಅನುಭವವನ್ನೂ ಸಂತೃಪ್ತಿಯನ್ನೂ ಒಬ್ಬ ಬಾಯ್‌ಫ್ರೆಂಡ್ ಬಳಿ ಪಡೆದು, ಬೇರೊಬ್ಬರ ಜೊತೆಗೆ ಸಂಸಾರ ನಡೆಸುವಾಗ ನಿಮಗೆ ಬಾಯ್‌ಫ್ರೆಂಡ್‌ಗೆ ಮೋಸ ಮಾಡಿದೆ ಎಂಬ ತಪ್ಪಿತಸ್ಥ ಭಾವನೆ, ಪಶ್ಚಾತ್ತಾಪಗಳು ಮೂಡಲಾರವೇ? ಆ ಸಮಸ್ಯೆಗೆ ಏನು ಪರಿಹಾರ ಹುಡುಕುತ್ತೀರಿ?

Tap to resize

Latest Videos

undefined

#Feelfree: ನನ್ನ ಸ್ತನಗಳು ಜೋತು ಬೀಳುತ್ತಿವೆ, ಇದಕ್ಕೆ ಪರಿಹಾರ ಇದೆಯಾ?

ಪ್ರಶ್ನೆ: ನಾನು ಇಪ್ಪತ್ತಮೂರು ವರ್ಷದ ಯುವತಿ. ಮುಂದಿನ ತಿಂಗಳು ಮದುವೆಯಾಗುತ್ತಿದ್ದೇನೆ. ಆರು ತಿಂಗಳ ಹಿಂದೆ ಅವರ ಪರಿಚಯವಾಯಿತು. ಮದುವೆ ಫಿಕ್ಸ್ ಆದ ಬಳಿಕ ಒಮ್ಮೆ ಅವರ ಅಪಾರ್ಟ್‌ಮೆಂಟ್‌ಗೆ ಹೋಗಿದ್ದೆ. ಬೇರೆ ಯಾರೂ ಇರಲಿಲ್ಲ. ಆಗ ಅವರು ನನ್ನನ್ನು ಸೆಕ್ಸ್‌ಗೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ನಾನು ಅದೆಲ್ಲಾ ಮದುವೆಯ ನಂತರ ಎಂದು ತಿರಸ್ಕರಿಸಿದೆ. ಆಗ ಅವರು ಒಪ್ಪಿದರು. ಅಂದಿನಿಂದ ನಂತರ ಭಾವಿ ಗಂಡ ನನ್ನ ಬಳಿ ಮಾತನಾಡುವುದು ಮೊದಲಿಗಿಂತ ಕಡಿಮೆ ಮಾಡಿದ್ದಾರೆ. ಅವರು ಈ ವಿಷಯದಲ್ಲಿ ತುಂಬಾ ಹರ್ಟ್ ಆಗಿರಬಹುದೇ? ಗಂಡಸು ಕೇಳಿದಾಗ ಅವರಿಗೆ ಸೆಕ್ಸ್ ಕೊಡದೇ ಇರುವುದರಿಂದ ಅವರಿಗೆ ಇಗೋ ತುಂಬಾ ಹರ್ಟ್ ಆಗುತ್ತದೆಯೇ? ಅದರಿಂದ ಮುಂದೆ ನನ್ನ ಸೆಕ್ಸ್ ಜೀವನದಲ್ಲಿ ಸಮಸ್ಯೆ ಉಂಟಾಗಬಹುದೇ? ನನಗೆ ಸೆಕ್ಸ್ ಬಗ್ಗೆ ಯಾವುದೇ ಕೀಳರಿಮೆ ಇಲ್ಲ.

ಮೂವತ್ತರ ನಂತರ ನಿಮ್ಮ ಸೆಕ್ಸ್ ಲೈಫ್‌ನಲ್ಲಿ ಏನೇನಾಗುತ್ತೆ? ಗೊತ್ತೇ?

ಉತ್ತರ: ನಿಮ್ಮ ನಿಲುವು ಸರಿಯಾಗಿಯೇ ಇದೆ. ವಿವಾಹಕ್ಕೆ ಮೊದಲೇ ಲೈಂಗಿಕ ಸಂಪರ್ಕ ಬೇಡ ಎಂದು ನೀವು ನಿರ್ಧರಿಸಿದ್ದರೆ, ಅದನ್ನು ಗಂಡ ಗೌರವದಿಂದ ಕಾಣಬೇಕು. ನಿಮ್ಮ ಈ ನಿರ್ಧಾರವನ್ನು ಅವರು ಗೌರವಿಸಿದ್ದಾರೆ ಅನಿಸುತ್ತದೆ. ನಿಮ್ಮನ್ನು ಅವರು ಇನ್ನಷ್ಟು ಬಲಾತ್ಕಾರಪಡಿಸದೆ ಇರುವುದನ್ನು ಗಮನಿಸಿ. ಒಂದು ವೇಳೆ ನೀವು ಸೆಕ್ಸ್‌ಗೆ ಕೂಡಲೇ ಒಪ್ಪಿಕೊಂಡಿದ್ದರೆ ಏನಾಗುತ್ತಿತ್ತು? 'ಈಕೆ ಸುಲಭದಲ್ಲಿ ಸೆಕ್ಸ್‌ಗೆ ಒಪ್ಪುತ್ತಾಳೆ' ಎಂಬ ಭಾವನೆ ಅವರಲ್ಲಿ ಮೂಡುತ್ತಿರಲಿಲ್ಲವೇ? ನಿಮ್ಮ ಭಾವಿ ಗಂಡ ಅಂಥ ಭಾವನೆ ಹೊಂದಿದವರು ಎಂದು ನಾನು ಹೇಳುವುದಿಲ್ಲ. ಆದರೆ ತುಂಬಾ ಮಂದಿ ಪುರುಷರನ್ನು ಈ ಚಿಕಿತ್ಸಾ ವಲಯದಲ್ಲಿ ನಾನು ನೋಡಿರುವುದರಿಂದ, ಪುರುಷರು ಸಾಮಾನ್ಯವಾಗಿ ಏನು ಯೋಚಿಸುತ್ತಾರೆ ಎಂಬುದನ್ನು ಊಹಿಸಬಲ್ಲೆ. ಆದ್ದರಿಂದ ನಿಮ್ಮ ನಿಲುವು ಸರಿಯಾಗಿಯೇ ಇದೆ. ಈ ಘಟನೆ ನಿಮ್ಮ ಭಾವಿ ಸೆಕ್ಸ್ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಯಾಕೆಂದರೆ ಮದುವೆಯ ಬಳಿಕ ಸೆಕ್ಸ್ ಲೈಫ್ ಅನ್ನು ಸೂಪರ್ ಆಗಿ ನಡೆಸಿಕೊಂಡು ಹೋಗುವ ರೀತಿ ನಿಮ್ಮ ಕೈಯಲ್ಲೇ ಇದೆ. ಈ ಅಸಮಾಧಾನ ಹೊರಟುಹೋಗುವ ಹಾಗೆ ನೀವು ನಡೆದುಕೊಂಡು ಅವರನ್ನು ಖುಷಿಪಡಿಸಬಹುದು. ಹಾಗೇ ನಿಮ್ಮನ್ನ ಖುಷಿಪಡಿಸುವ ಹೊಣೆಯೂ ನಿಮ್ಮ ಭಾವಿ ಗಂಡನಿಗೆ ಇದೆ ಎಂಬುದನ್ನು ಮರೆಯಬೇಡಿ.     


 

 

click me!