ಮೂವತ್ತರ ನಂತರ ನಿಮ್ಮ ಸೆಕ್ಸ್ ಲೈಫ್‌ನಲ್ಲಿ ಏನೇನಾಗುತ್ತೆ? ಗೊತ್ತೇ?

By Suvarna News  |  First Published Sep 14, 2021, 2:34 PM IST

ಈಗಿನ ಯುವಜನತೆ ಇಪ್ಪತ್ತರ ಹರೆಯದಿಂದಲೇ ತಮ್ಮ ಸೆಕ್ಸ್ ಲೈಫ್ ಆರಂಭಿಸುತ್ತಾರೆ. ಹೀಗಾಗಿ ಮೂವತ್ತರ ಹೊತ್ತಿಗೆ ಅವರ ಸೆಕ್ಸ್ ಲೈಫ್‌ನಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸಿರುತ್ತವೆ. ಬನ್ನಿ, ಮೂವತ್ತರ ನಂತರ ಸೆಕ್ಸ್ ನಿಮ್ಮ ಬಾಡಿಗೆ ಏನು ಮಾಡುತ್ತೆ ತಿಳಿಯೋಣ.


ನೀವು ಇಪ್ಪತ್ತರ ಹರೆಯದಲ್ಲಿ ಸೆಕ್ಸ್ ಅನುಭವ ಹೊಂದಿದ್ದವರಾಗಿದ್ದರೆ, ಆ ವೇಳೆ ನೀವು ಅನುಭವಿಸುವ ತೀವ್ರ ಉದ್ರೇಕ, ಉತ್ಸಾಹ, ಸುಖಗಳು ನಿಮ್ಮ ಅರಿವಿಗೆ ಬಂದಿರುತ್ತವೆ. ವಯಸ್ಸು ಮೂವತ್ತು ಆದ ಬಳಿಕ ಈ ತೀವ್ರೋದ್ರೇಕಗಳು ಇಳಿಯುತ್ತವೆ. ವಯಸ್ಸಾದಂತೆ ಅದು ಬದಲಾಗುತ್ತಲೇ ಇರುತ್ತದೆ. ನೀವು ನಿಮ್ಮ 30ರ ಹರೆಯದಲ್ಲಿದ್ದರೆ ನಿಮ್ಮ ಲೈಂಗಿಕ ಜೀವನದಲ್ಲಿ ಆಗುವ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ.

ಪ್ರಚೋದನೆ ಕಡಿಮೆ

Latest Videos

ಸಾಮಾನ್ಯವಾಗಿ ಇಪ್ಪತ್ತರ ಹರೆಯದಲ್ಲಿ ಸೆಕ್ಸ್ ಆರಂಭಿಸಿದವರು ಪ್ರತಿದಿನ ಸಂಭೋಗ ಮಾಡುವ ಉತ್ಸಾಹ ಹಾಗೂ ಶಕ್ತಿ ಎರಡನ್ನೂ ತೋರಿಸುತ್ತಾರೆ. ಆಗ ಸಂಗಾತಿಯೂ ಹೊಸಬರಾಗಿರುವುದರಿಂದ, ಸಂಗಾತಿಯ ದೇಹವನ್ನು ಅನ್ವೇಷಿಸುವ ಉತ್ಸಾಹವೂ ಸೇರಿಕೊಂಡಿರುತ್ತದೆ. ಮದುವೆಯಾದ ಹೊಸದರಲ್ಲಿ ಕೆಲವೊಮ್ಮೆ ದಿನಕ್ಕೆ ಎರಡು ಬಾರಿ ಕೂಡ ಸಂಭೋಗಿಸಬಹುದು. ಆದರೆ ಮೂವತ್ತರ ಹರೆಯದಲ್ಲಿ ಅದು ಸಾಧ್ಯವಾಗುವುದಿಲ್ಲ. ಆಗ ಮೊದಲಿನ ದೇಹ ಕುತೂಹಲ ಉಳಿಯುವುದಿಲ್ಲ. ಅದೇ ಬೇರೆ ಸಂಗಾತಿಯ ಜೊತೆಗಾದರೆ ಆ ಕುತೂಹಲ ಉಳಿಸಿಕೊಂಡಿರಲು ಸಾಧ್ಯವಿದೆ.

#Feelfree: ಯೋನಿ ಬಿಗಿಯಾಗಿಸೋಕೂ ಇದೆ ವ್ಯಾಯಾಮ

ಒಣಗಿದ ಜನನಾಂಗ

ನೀವು ಜನನ ನಿಯಂತ್ರಣ ಮಾತ್ರೆ ಸೇವಿಸುತ್ತಿದ್ದರೆ, ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ಪ್ರಚೋದನೆಯೂ ಕಡಿಮೆಯಾಗಬಹುದು. ಜನನ ನಿಯಂತ್ರಣ ಮಾತ್ರೆಗಳು ಅಂಡೋತ್ಪತ್ತಿಯನ್ನು ತಡೆಯುವುದರಿಂದ ಟೆಸ್ಟೋಸ್ಟೆರಾನ್ ಅನ್ನು ಕಡಿಮೆ ಮಾಡುತ್ತದೆ. ಇದರಿಂದ ಜನನಾಂಗದಲ್ಲಿ ಒಣಗಿದ ಸ್ಥಿತಿ ಉಂಟಾಗುತ್ತದೆ. ಸಾಕಷ್ಟು ತೇವ ಉತ್ಪತ್ತಿಯಾಗದೆ ಸೆಕ್ಸ್ ಮಾಡಿದರೆ ನೋವು ಉಂಟಾಗಬಹುದು. ಸೆಕ್ಸ್ ಅಷ್ಟೇನೂ ಆರಾಮದಾಯಕವಾಗುವುದಿಲ್ಲ. ಹೀಗಾಗಿ ನೀವು ಉತ್ತಮ ಲೂಬ್ರಿಕಂಟ್‌ಗಳನ್ನು ಈ ಸಂದರ್ಭದಲ್ಲಿ ಬಳಸುವುದು ಉತ್ತಮ. ನಿಮ್ಮ ಈ ಸಮಸ್ಯೆಯ ಬಗ್ಗೆ ನಿಮ್ಮ ಸಂಗಾತಿಯ ಜೊತೆಗೆ ಮಾತನಾಡಬೇಕು. ಅವರ ಸಹಕಾರದಿಂದ ಉತ್ತಮ ಸೆಕ್ಸ್ ಕಾಪಾಡಿಕೊಳ್ಳಬಹುದು.

ಕಡಿಮೆ ಆವರ್ತನ

ಪ್ರತಿದಿನ ಸೆಕ್ಸ್ ಮಾಡುವ ಬಲವಾದ ಬಯಕೆಯನ್ನು ಹೊಂದಿರುವುದು ಈ ಪ್ರಾಯದಲ್ಲಿ ಅನಿವಾರ್ಯವಲ್ಲ. ಇಷ್ಟು ಹೊತ್ತಿಗೆ ಜೀವನದಲ್ಲಿ ಕಚೇರಿ ಮತ್ತಿತರ ಒತ್ತಡಗಳು ಕೂಡ ಆರಂಭವಾಗಿರುತ್ತವೆ. ಮಕ್ಕಳು, ಕುಟುಂಬ, ಕೆಲಸ ಅಥವಾ ಯಾವಾಗಲೂ ಫಿಟ್ ಆಗಿ ಕಾಣುವ ಬಯಕೆ ಇತ್ಯಾದಿಗಳು ನಿಮ್ಮ ಮನಸ್ಸು ಹಾಗೂ ದೇಹಗಳನ್ನು ಪ್ರಭಾವಿಸುತ್ತವೆ. ಕೆಲವೊಮ್ಮೆ ವಾರಕ್ಕೆರಡು ಅಥವಾ ವಾರಕ್ಕೊಂದು ಬಾರಿ ಸೆಕ್ಸ್ ಮಾಡಿದರೆ ಸಾಕು ಎನಿಸೀತು. ನಿಮ್ಮ ಸಂಗಾತಿಯೊಂದಿಗೆ ಈ ವಿಚಾರ ಚರ್ಚಿಸಿ. ಉತ್ತಮ ಸೆಕ್ಸ್ ಲೈಫಿಗಾಗಿ ಏನೇನು ಮಾಡಬಹುದು ಎಂಬುದನ್ನು ಅರಿತು ಜಾರಿಗೆ ತಂದುಕೊಳ್ಳಿ.

#Feelfree: ನನ್ನ ಗುಪ್ತಾಂಗದ ಕೂದಲು ನನಗಿಷ್ಟ, ಅವನಿಗಿಷ್ಟವಿಲ್ಲ, ಏನ್ ಮಾಡ್ಲಿ?

ಸುಲಭವಾದ ಪರಾಕಾಷ್ಠೆ

ಅನೇಕ ಮಹಿಳೆಯರು, ವಯಸ್ಸಾಗುತ್ತ ಬಂದಂತೆ, ತಮಗೆ ಏನು ಬೇಕು ಮತ್ತು ಏನು ಮಾಡಿದರೆ ತೃಪ್ತಿಯಾಗುತ್ತದೆ ಎಂಬುದನ್ನು ಪೂರ್ತಿ ಅರಿತುಕೊಳ್ಳುತ್ತಾರೆ. ಸರಿಯಾದ ಜಾಗದಲ್ಲಿ, ಸರಿಯಾದ ಹೊತ್ತಿನಲ್ಲಿ, ಏನನ್ನು ಹೇಗೆ ಮಾಡಿದರೆ ಸೆಕ್ಸ್‌ನ ಪರಾಕಾಷ್ಠೆ ಮುಟ್ಟಬಹುದು ಎಂಬುದು ಅರ್ಥವಾಗಿರುತ್ತದೆ. ದೇಹದ ಸುಖದ ಬಿಂದುಗಳು ಕೂಡ ಯಾವುದೆಂಬುದು ಗೊತ್ತಾಗಿರುತ್ತದೆ. ಆದ್ದರಿಂದ ಇದು ಪರಾಕಾಷ್ಠೆಯನ್ನು ಪಡೆಯುವುದನ್ನು ಸುಲಭಗೊಳಿಸುತ್ತದೆ. 20ರ ಹರೆಯದಲ್ಲಿ ನಾವು ಇನ್ನೂ ನಮ್ಮ ದೇಹಗಳು, ನಮ್ಮ ಇಷ್ಟಗಳನ್ನು ಕಂಡುಹಿಡಿಯುವುದರಲ್ಲಿ ಇರುತ್ತೇವಷ್ಟೇ.

ಪ್ರಾಯೋಗಿಕತೆ ಹೆಚ್ಚು 

ಹರೆಯದಲ್ಲಿ ಸಾಮಾನ್ಯವಾಗಿ ಸೆಕ್ಸ್‌ನ ಉತ್ತುಂಗ ತಲುಪುವುದೇ ಮುಖ್ಯವಾಗಿರುತ್ತದೆ. ಆದರೆ ಮೂವತ್ತರ ಹರೆಯದಲ್ಲಿ, ನಿಮ್ಮಿಬ್ಬರ ದೇಹಗಳು ನಿಮಗೆ ಹೆಚ್ಚು ಪರಿಚಯವಾಗಿರುತ್ತದೆ ಹಾಗೂ ಹೆಚ್ಚು ಆರಾಮದಾಯಕವಾಗಿ ಸೆಕ್ಸ್‌ನಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಹೆಚ್ಚಿನ ಪ್ರಯೋಗಗಳನ್ನು ಶುರು ಮಾಡುತ್ತೀರಿ.

ಹೆಚ್ಚಿನ ಸುಖಕ್ಕಾಗಿ ನಾವು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬುದನ್ನು ಕಂಡುಹಿಡಿಯಲು ಇದು ಸಹಾಯ ಮಾಡುತ್ತದೆ. ಇಬ್ಬರ ನಡುವೆ ಇರುವ ಸಂಕೋಚ ಮಾಯವಾಗಿರುತ್ತದೆ. ಸೆಕ್ಸ್ ಬಗ್ಗೆ ಹೆಚ್ಚು ಮಾತನಾಡಿಕೊಳ್ಳುತ್ತೀರಿ ಹಾಗೂ ಪೋರ್ನ್ ಅನ್ನು ಕೂಡ ಜೊತೆಯಾಗಿ ಕುಳಿತು, ನೋಡಿ, ಅದರಂತೆ ಸುಖ ಅನುಭವಿಸುವ ಉತ್ಸಾಹ ಮೂಡಬಹುದು.

click me!