ದಿನಾ ನಡೆದು ಕೆಲಸಕ್ಕೆ ಬರ್ತಿದ್ದ ಸಿಬ್ಬಂದಿಗೆ ಕಾರ್ ಕೊಡಿಸಿದ ಟೀಚರ್ಸ್

By Suvarna NewsFirst Published Sep 11, 2021, 5:52 PM IST
Highlights
  • ಪ್ರತಿದಿನ ನಡೆದುಕೊಂಡು ಶಾಲೆಗೆ ಬರುತ್ತಿದ್ದ ಸಿಬ್ಬಂದಿ
  • ಒಟ್ಟದ ಶಿಕ್ಷಕರು ಕೊಟ್ರು ಬಿಗ್‌ ಸರ್ಪೈಸ್
  • ಟೀಚರ್ಸ್ ಕೊಟ್ಟ ಸರ್ಪೈಸ್‌ ನೋಡಿ ಭಾವುಕನಾದ ಸ್ಟಾಫ್

ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲ, ವಸ್ತುಗಳಿಂದ ಪ್ರೀತಿಯನ್ನು ಅಳೆಯಲಾಗುವುದಿಲ್ಲ ಎಂಬುದೆಲ್ಲ ಸರಿ. ಆದರೆ ಯಾವುದೇ ಸಂಬಂಧದಲ್ಲಿ ಯಾವುದಾದರೂ ಚಿಕ್ಕ ಪುಟ್ಟ ಉಡುಗೊರೆ, ಜೊತೆಗೊಂದು ಪ್ರಯಾಣ ಇವೆಲ್ಲವೂ ಹೆಚ್ಚು ಸಂತೋಷವನ್ನು ಕೊಡುವ ವಿಚಾರ. ಸರ್ಪೈಸ್ ಆಗಿ ಎಷ್ಟೇ ಚಿಕ್ಕ ಉಡುಗೊರೆ ಕೊಟ್ಟರೂ ಅದರ ಜೊತೆಗೆ ತಲುಪುವ ಪ್ರೀತಿ ದೊಡ್ಡದಿರುತ್ತದೆ. ಇಂಥದ್ದೇ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ.

ಹೃದಯಸ್ಪರ್ಶಿ ವಿಡಿಯೋದಲ್ಲಿ ಅಮೆರಿಕದ ಶಾಲೆಯ ಶಿಕ್ಷಕರು ಸಂಸ್ಥೆಯ ಉಸ್ತುವಾರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈಗ, ಆ ವ್ಯಕ್ತಿಯಿಂದ ಬಂದ ಪ್ರತಿಕ್ರಿಯೆಯ ವಿಡಿಯೋ ವೈರಲ್ ಆಗುತ್ತಿದೆ. ಕ್ರಿಸ್ ಜಾಕ್ಸನ್, ಜಾರ್ಜಿಯಾದ ಹೆನ್ರಿ ಕೌಂಟಿಯಲ್ಲಿರುವ ಯೂನಿಟಿ ಗ್ರೋವ್ ಎಲಿಮೆಂಟರಿ ಶಾಲೆಯ ಉಸ್ತುವಾರಿ. ಆತನ ಸಹೋದ್ಯೋಗಿಗಳು ಅವನಿಗೆ ಕಾರನ್ನು ತಂದುಕೊಟ್ಟಾಗ ಆತನಿಗೆ ಅದನ್ನು ನಂಬಲು ಸಾಧ್ಯವಾಗಿಲ್ಲ.

ಮುಖ ಸಿಂಡರಿಸಿ ಗಿಫ್ಟ್ ಎಸೆದ ವಧು..! ವಿಡಿಯೋ ವೈರಲ್

ಶಿಕ್ಷಕರಿಗೆ ಆತ ಆರ್ಥಿಕವಾಗಿ ಕಷ್ಟಪಡುತ್ತಿದ್ದಾನೆ. ಪ್ರತಿದಿನ ಕೆಲಸಕ್ಕೆ ನಡೆದುಕೊಂಡು ಬರುತ್ತಾನೆ ಎಂಬುದು ಗೊತ್ತಿತ್ತು. ಅವರು ಅವನಿಗೆ ಸಹಾಯ ಮಾಡುವ ಪ್ಲಾನ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯನ್ನು ಕಾರಿನ ಬಳಿ ತಂದು ಅದರ ಕೀಗಳನ್ನು ನೀಡಿದಾಗ ಆತನ ಪ್ರತಿಕ್ರಿಯೆಯನ್ನು ತೋರಿಸುತ್ತದೆ.

ನಾನು ಈ ರೀತಿಯ ಕನಸು ಕಾಣುತ್ತಿರಲಿಲ್ಲ ಎಂದು ಜಾಕ್ಸನ್ ಹೇಳುವುದನ್ನು ಕೇಳಬಹುದು. ನನಗೆ ಖುಷಿಯಾಗುತ್ತಿದೆ ಎಂದು ಶಿಕ್ಷಕರಿಗೆ ಆತ ಪದೇ ಪದೇ ಧನ್ಯವಾದ ಹೇಳುವುದನ್ನೂ ಕಾಣಬಹುದು.

ಮಗಳಿಗೆ ಅಪ್ಪನ ಭರ್ಜರಿ ಉಡುಗೊರೆ: 1,000 ಕೆಜಿ ಮೀನು, 10 ಕುರಿ, 250 ಕೆಜಿ ಸಿಹಿ!

ಫೇಸ್ಬುಕ್ ಪೋಸ್ಟ್ನಲ್ಲಿ, ಶಾಲೆಯು ಶಿಕ್ಷಕರು ಹಣವನ್ನು ಸಂಗ್ರಹಿಸಲು ನೆರವು ಕೇಳಿದ್ದರು. ಅವನು ಮುಖದಲ್ಲಿ ನಗುವಿಲ್ಲದೆ ಬಂದ ದಿನವೇ ಇಲ್ಲ. ಇಲ್ಲಿನ ಮಕ್ಕಳು ಆತನನ್ನು ಆರಾಧಿಸುತ್ತಾರೆ. ಅವರು ಕ್ರಿಸ್ ಅವರನ್ನು ಪ್ರೀತಿಸುತ್ತಾರೆ. ಅವನು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾನೆ ಎಂದು ಶಿಕ್ಷಕರು ತಿಳಿಸಿದ್ದಾರೆ. ಈ ಅದ್ಭುತವಾದ ಗಿಫ್ಟಿಂಗ್ ಮೊಮೆಂಟ್ ನೆಟ್ಟಿಗರ ಮನಸು ಗೆದ್ದಿದೆ.

Restoring my faith in humanity. God is so good https://t.co/JdcOG0t25Z

— Mickey Guyton (@MickeyGuyton)
click me!