ದಾಂಪತ್ಯ ಸದಾ ಹಸಿರಾಗಿರಬೇಕು. ವಯಸ್ಸಾದಂತೆ ದೇಹ ಮುಪ್ಪಾದ್ರೂ ಪ್ರೀತಿ ಹೊಳೆಯುತ್ತಿರಬೇಕು. ಹಾಗಾಗಬೇಕೆಂದ್ರೆ ನಿಮ್ಮಿಬ್ಬರ ಸಂಬಂಧ ಚೆನ್ನಾಗಿರಬೇಕು. ಆಗಾಗ ಸಂಗಾತಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು.
ಹೊಗಳಿಕೆ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ? ನಿಮ್ಮ ಕಾಲು ಚೆನ್ನಾಗಿದೆ, ನಿಮ್ಮ ಧ್ವನಿ ಚೆಂದ ಅಂದ್ರೆ ಸಾಕು ಅದೇನೋ ಖುಷಿ. ಅನೇಕ ಬಾರಿ ನಮ್ಮ ಆತ್ಮವಿಶ್ವಾಸವನ್ನು ಹೊಗಳಿಕೆ ಹೆಚ್ಚಿಸುತ್ತದೆ. ಹೊಗಳಿಕೆಯನ್ನು ನಾವು ಹಣಕ್ಕೆ ಹೋಲಿಕೆ ಮಾಡಬಹುದು. ಯಾಕೆಂದ್ರೆ ಹಣ ಪಡೆದಾಗ ನಮ್ಮ ಮೆದುಳಿನಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಹೊಗಳಿದಾಗ್ಲೂ ಬಿಡುಗಡೆಯಾಗುತ್ತದೆಯಂತೆ
ಸುತ್ತಮುತ್ತಲಿನ ಜನರು ನಮ್ಮ ಕೆಲಸ (Work) ವನ್ನು ಮೆಚ್ಚಿರುತ್ತಾರೆ. ಆದ್ರೆ ನಮ್ಮ ಜೊತೆ ನಮ್ಮ ಮನೆಯಲ್ಲಿರುವ ನಮ್ಮ ಸಂಗಾತಿಯೇ ಮೆಚ್ಚುಗೆಯ ಮಾತು (Speech)ಗಳನ್ನು ಆಡಿರೋದಿಲ್ಲ. ಅನೇಕ ಬಾರಿ ದೂರದ ವ್ಯಕ್ತಿಯ ಹೊಗಳಿಕೆಗಿಂತ ಆಪ್ತ ವ್ಯಕ್ತಿಯ ಹೊಗಳಿಕೆ ಮುಖ್ಯವಾಗುತ್ತದೆ. ದಾಂಪತ್ಯದ ಆರಂಭದಲ್ಲಿ ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸುವ ಜೋಡಿ, ದಿನ ಕಳೆದಂತೆ ಇದನ್ನು ಕಡಿಮೆ ಮಾಡ್ತಾರೆ. ಸಂಗಾತಿಗೆ ನನ್ನ ಸ್ವಭಾವ ತಿಳಿದಿದೆ ಎಂದೋ ಅಥವಾ ಅವರ ಕೆಲಸವನ್ನು ಹೊಗಳುವ ಅಗತ್ಯವಿಲ್ಲವೆಂದೋ ಅಥವಾ ಅತಿ ಸಲುಗೆಯಿಂದ್ಲೋ, ನಿರ್ಲಕ್ಷ್ಯದಿಂದ್ಲೂ ಸಂಗಾತಿಯನ್ನ ಹೊಗಳಲು ಮರೆತುಬಿಡ್ತೇವೆ. ಕೆಲವರಿಗೆ ಹೇಗೆ ಮೆಚ್ಚುಗೆ ವ್ಯಕ್ತಪಡಿಸೋದು ಅನ್ನೋದೇ ತಿಳಿದಿರೋದಿಲ್ಲ. ನಿಮ್ಮ ಸಂಬಂಧ ಎಷ್ಟೇ ಹಳೆಯದಾಗಿರಲಿ. ನೀವು ಪರಸ್ಪರ ಅರಿತಿದ್ದರೂ ಪ್ರಶಂಸೆ ಬಹಳ ಮುಖ್ಯ. ಸಂಗಾತಿಯಿಂದ ಪ್ರಶಂಸೆ ಸಿಕ್ಕಾಗ ಕೆಲಸ ಮಾಡಲು ಮತ್ತಷ್ಟು ಉತ್ಸಾಹ ಬರುತ್ತದೆ. ಸಂಗಾತಿಯನ್ನು ಹೊಗಳುವುದು ಕೂಡ ಒಂದು ರೀತಿಯಲ್ಲಿ ಕಲೆ. ನಾವಿಂದು ಸಂಗಾತಿಯನ್ನು ಹೇಗೆ ಹೊಗಳ್ಬೇಕು ಎಂಬುದನ್ನು ನಿಮಗೆ ಹೇಳ್ತೆವೆ.
ಫ್ಲರ್ಟಿಂಗ್ (Flirting ) ಕೂಡ ಮುಖ್ಯ : ಚೆನ್ನಾಗಿದೆ, ರುಚಿಯಾಗಿದೆ ಇದು ಹೊಗಳಿಕೆಯಾದ್ರೂ ಇದಕ್ಕೊಂದಿಷ್ಟು ಮಸಾಲೆ ಬೆರಸುವ ಅಗತ್ಯವಿದೆ. ನೀವು ಫ್ಲರ್ಟ್ ಮಾಡ್ತಾ ಸಂಗಾತಿಯನ್ನು ಪ್ರಶಂಸಿಸಿದ್ರೆ ಸಂಗಾತಿ ಸಂತೋಷ ಹೆಚ್ಚಾಗುತ್ತದೆ. ಸಂಗಾತಿಯ ಕೈ ಹಿಡಿದು ಅಥವಾ ಕಣ್ಣು ಮಿಟುಕಿಸಿ ಅವರನ್ನು ಹೊಗಳಬೇಕು. ಇದು ಸಂಗಾತಿ ಆತ್ಮವಿಶ್ವಾಸ (Confidence) ಹೆಚ್ಚಿಸುತ್ತದೆ. ಇದ್ರಿಂದ ನಿಮ್ಮ ಲೈಂಗಿಕ ಜೀವನ ರೋಮಾಂಚನಗೊಳ್ಳುತ್ತದೆ.
ಸಣ್ಣಪುಟ್ಟ ವಿಷ್ಯ ಗಮನಿಸಿ : ಸಂಗಾತಿಯ ಸಣ್ಣಪುಟ್ಟ ಕೆಲಸಗಳನ್ನು ಕೂಡ ನೀವು ಗಮನಿಸಬೇಕು. ಹಾಗೆಯೇ ಅದನ್ನು ಅವರಿಗೆ ಹೇಳಿ. ಆಗ ನೀವು ಅವರನ್ನು ಗಮನಿಸುತ್ತಿದ್ದೀರಿ ಎಂಬುದು ಅವರ ಅರಿವಿಗೆ ಬರುತ್ತದೆ. ಇದು ಅವರಿಗೆ ಖುಷಿ ನೀಡುತ್ತದೆ. ಹಾಗೆಯೇ ನಿಮ್ಮ ಮೇಲೆ ಅವರು ತೋರಿಸುವ ಪ್ರೀತಿ ದುಪ್ಪಟ್ಟಾಗುತ್ತದೆ.
ASTROLOGY TIPS : ಮದುವೆಯಾಗ್ತಿಲ್ಲವೆಂದ್ರೆ ಕತ್ತಿಗೆ ಹಳದಿ ದಾರ ಕಟ್ಟಿ ನೋಡಿ
ಆಗಾಗ ಗಿಫ್ಟ್ ನೀಡಿ ಅಭಿನಂದನೆ ಸಲ್ಲಿಸಿ : ದಿ ಬೆಸ್ಟ್ ಸಂಗಾತಿ ಎಂದು ಬರೆದಿರುವ ಒಂದು ಕಪ್ ನೀಡಿದ್ರೆ ನಿಮ್ಮ ಕೆಲಸ ಮುಗಿಯಲಿಲ್ಲ. ಅವರಿಗೆ ಇಷ್ಟವಾದ ವಸ್ತುವನ್ನು ನೀವು ಗಿಫ್ಟ್ ಆಗಿ ನೀಡಬೇಕು. ಸಂಗಾತಿ ಅಗತ್ಯಕ್ಕೆ ತಕ್ಕಂತೆ ಉಡುಗೊರೆ ನೀಡಿ. ಅಲ್ಲದೆ ಸಂಗಾತಿ ಬಗ್ಗೆ ನೀವೆಷ್ಟು ಕಾಳಜಿ ವಹಿಸುತ್ತೀರಿ ಎಂಬುದನ್ನು ತಿಳಿಸಲು ನೀವು ಶುಭಾಶಯ ಪತ್ರ ಅಥವಾ ಲೆಟರ್ ನೀಡಬಹುದು.
ಸಂಗಾತಿ ದೇಹದ ಬಗ್ಗೆ ಇರಲಿ ಹೊಗಳಿಕೆ : ಪುರುಷ ಇರಲಿ ಮಹಿಳೆ ಇಬ್ಬರೂ ತಮ್ಮ ದೇಹದ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಸಂಗಾತಿಯನ್ನು ಮೆಚ್ಚಿಸಬೇಕೆಂದ್ರೆ ನೀವು ಅವರ ದೇಹವನ್ನು ಹೊಗಳಬಹುದು. ಸಂಗಾತಿಯಿಂದ ಹೊಗಳಿಕೆ ಸಿಗ್ತಿದ್ದಂತೆ ಅವರು ಹಿಗ್ಗಿ ಹೋಗ್ತಾರೆ. ಇದು ಸಾಮಾನ್ಯ ಜೀವನವನ್ನು ಸರಿಪಡಿಸುವುದು ಮಾತ್ರವಲ್ಲದೆ ಲೈಂಗಿಕ ಜೀವನಕ್ಕೂ ಒಳ್ಳೆಯದು.
ವಯಸ್ಸಾದಂತೆ ಲೈಂಗಿಕಾಸಕ್ತಿ ಕಡಿಮೆ ಆಗ್ತಿದ್ಯಾ? ಅಡುಗೆ ಮನೆಯಲ್ಲಿದೆ ಬೆಸ್ಟ್ ಔಷಧಿ
ಮಾತು, ಜೋಕ್ ಬಗ್ಗೆ ಪ್ರಶಂಸೆ : ಮಹಿಳೆಯಾದವಳು ಸಂಗಾತಿ ತನ್ನ ಮಾತನ್ನು ಆಲಿಸಬೇಕೆಂದು ಬಯಸ್ತಾಳೆ. ಅದೇ ರೀತಿ ಪತಿಯಾದವನು ಪತ್ನಿ ತನ್ನ ಜೋಕ್ ಗೆ ನಗಬೇಕೆಂದು ಬಯಸ್ತಾನೆ. ಹಾಗಾಗಿ ಇವೆರಡಕ್ಕೂ ಮಹತ್ವ ನೀಡಬೇಕಿ. ಪತ್ನಿಯ ಮಾತಿಗೆ ಉತ್ತರ ನೀಡುವುದು ಹಾಗೆ ಪತಿಯ ಜೋಕ್ ಇಷ್ಟವಾದ್ರೆ ಅದು ಇಷ್ಟವಾಯ್ತು ಎನ್ನುವುದು ಬಹಳ ಮಹತ್ವ ಪಡೆಯುತ್ತದೆ. ಇಂಥ ಸಣ್ಣ ಹೊಗಳಿಕೆಗಳು ನಿಮ್ಮ ಜೀವನವನ್ನು ಕಲರ್ ಫುಲ್ ಮಾಡುತ್ವೆ.