18 ವರ್ಷಗಳ ಹಿಂದೆ ಪತಿ ಬರೆದಿದ್ದ ಲವ್‌ಲೆಟರ್‌ ಶೇರ್‌ ಮಾಡಿದ ಮಹಿಳೆ, ವಾರೆವ್ಹಾ ಎಂದ ನೆಟ್ಟಿಗರು

By Vinutha Perla  |  First Published Apr 6, 2023, 2:34 PM IST

ಪ್ರೀತಿ ಅನ್ನೋದು ಒಂದು ಸುಂದರ ಭಾವನೆ. ಪ್ರೇಮ ಪತ್ರವೆಂದರೆ ಇನ್ನೂ ಸ್ಪೆಷಲ್. ಆದ್ರೆ ಟೆಕ್ನಾಲಜಿ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗುತ್ತಿರುವ ಈ ದಿನಗಳಲ್ಲಿ ಪ್ರೇಮಪತ್ರ ನೋಡೋಕೆ ಸಿಗೋದೆ ಕಷ್ಟ. ಹೀಗಿರುವಾಗ ಇಲ್ಲೊಬ್ಬ ಮಹಿಳೆ 18 ವರ್ಷಗಳ ಹಿಂದೆ ತನ್ನ ಪತಿ ಬರೆದಿದ್ದ ಪ್ರೇಮ ಪತ್ರಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.


ಪ್ರಪಂಚದಲ್ಲಿ ಅತ್ಯಂತ ಸುಮಧುರವಾದ ಭಾವನೆ ಯಾವುದಾದರೂ ಇದ್ದರೆ ಅದು ಪ್ರೀತಿ. ಲವ್‌, ಪ್ಯಾರ್‌, ಪ್ರೇಮ ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳೋ ಪ್ರೀತಿ ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ. ಅದರಲ್ಲೂ ಪ್ರೇಮ ಪತ್ರ ಇನ್ನಷ್ಟು ಸುಂದರ. ಮನಸ್ಸಿನ ಮಾತುಗಳನ್ನು ಸುಂದರವಾಗಿ ಬರಹ ರೂಪಕ್ಕಿಳಿಸಿದರೆ ಯಾರಾದರೂ ಮನಸೋಲೋದು ಖಂಡಿತ. ಮೊಬೈಲ್ ಫೋನ್‌ಗಳು ಜನಪ್ರಿಯವಾಗುವ ಮೊದಲು, ಜನರು ತಮ್ಮ ಪ್ರೀತಿಯನ್ನು ಪ್ರತಿಪಾದಿಸಲು ಪ್ರೇಮಪತ್ರಗಳನ್ನು ಬರೆಯುತ್ತಿದ್ದರು. ಲವ್ ಲೆಟರ್ ಬರೆಯುವುದು ಅಂದರೇನೆ ಆಗ ದೊಡ್ಡ ವಿಷಯವಾಗಿತ್ತು. ಬೇರೆ ಬೇರೆ ಊರಿನಲ್ಲಿರುವ ಮಂದಿ ಈ ಪ್ರೇಮಪತ್ರದಿಂದ ಒಂದಾಗುತ್ತಿದ್ದರು. ಮನಸ್ಸಿನ ಭಾವನೆಗಳನ್ನು ತಿಳಿದು ಖುಷಿ ಪಡುತ್ತಿದ್ದರು. 

ಟೆಕ್ನಾಲಜಿಯ ಅಭಿವೃದ್ಧಿಯೊಂದಿಗೆ ಪ್ರೇಮಪತ್ರದ ಕಾಲಘಟ್ಟ ಹಿಂದೆ ಸರಿದಿದೆ. ಹೀಗಿರುವಾಗ ಇಲ್ಲೊಬ್ಬ ಮಹಿಳೆ (Women) ತನ್ನ ಪತಿ 18 ವರ್ಷಗಳ ಹಿಂದೆ ಪತಿ ತನಗೆ ಬರೆದ ಪ್ರೇಮ ಪತ್ರವನ್ನು (Love letter) ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ತನ್ನ ಗರ್ಲ್‌ಫ್ರೆಂಡ್‌ಗೆ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ವೇಳೆ ಈ ಪ್ರೇಮ ಪತ್ರಗಳನ್ನು ಬರೆದಿದ್ದಾರೆ. ಇದೀಗ, 18 ವರ್ಷಗಳ ಬಳಿಕ ಆತನ ಲೇಡಿ ಲವ್‌ಗೆ ಈ ಪ್ರೇಮ ಪತ್ರಗಳು ಸಿಕ್ಕಿದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Tap to resize

Latest Videos

ಸ್ನೇಹಿತನನ್ನೇ ಲವ್ ಮಾಡ್ತಿದೀರಾ? ಹಾಗಿದ್ರೆ ಈ ರೀತಿ ಪ್ರಪೋಸ್ ಮಾಡಿ

ಮನೆ ಕ್ಲೀನ್ ಮಾಡುವಾಗ ಸಿಕ್ಕಿತು 18 ವರ್ಷಗಳ ಹಳೆಯ ಪ್ರೇಮಪತ್ರ
ಮಹಿಳೆಯೊಬ್ಬರು 18 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾಗ ಅವರು ಬರೆದ ಪತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಸಾಯಿಸ್ವರೂಪ ಅವರು ತಮ್ಮ ಪತಿಯಿಂದ ಸ್ವೀಕರಿಸಿದ ಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರನ್ನು ಶ್ರೀ ಅಯ್ಯರ್ ಎಂದು ಉಲ್ಲೇಖಿಸಿದ್ದಾರೆ. ಆ

'ಮನೆಯಲ್ಲಿದ್ದ ಹಳೆಯ ವಸ್ತುಗಳನ್ನು ಸ್ವಚ್ಛ (Clean)ಗೊಳಿಸುತ್ತಿದ್ದ ವೇಳೆ ನನಗೆ ಅಯ್ಯರ್‌ 18 ವರ್ಷಗಳ ಹಿಂದೆ ಬರೆದ ಈ ಕೈಬರಹದ ಪ್ರೇಮ ಪತ್ರಗಳು ಸಿಕ್ಕಿವೆ. ಆದರೆ ತಮ್ಮ ಗರ್ಲ್‌ಫ್ರೆಂಡ್‌ಗೆ ಲ್ಯಾಬ್‌ ಪ್ರಯೋಗಗಳನ್ನು ಯಾರು ಕಳುಹಿಸುತ್ತಾರೆ. ಆದರೆ ನಾನು ಖುಷಿಗೊಂಡು ಆ ವ್ಯಕ್ತಿಗೆ ಯೆಸ್ ಎಂದಿದ್ದೆ' ಎಂದು  ಟ್ವಿಟರ್‌ ಬಳಕೆದಾರರಾದ ಸಾಯಿಸ್ವರೂಪಾ ಮೈಕ್ರೋ ಬ್ಲಾಗಿಂಗ್ ತಾಣದಲ್ಲಿ ಹೇಳಿಕೊಂಡಿದ್ದಾರೆ. ಆನ್ಲೈನ್‌ನಲ್ಲಿ ಶೇರ್‌ ಮಾಡಿದ ಬಳಿಕ ಈ ಪೋಸ್ಟ್‌ಗೆ ಮೂರು ಲಕ್ಷ ವೀಕ್ಷಣೆಗಳು (Views) ಸಿಕ್ಕಿವೆ.

‘ಚಳಿಗಾಲ ರಜೇಲಿ ನಿನ್ನ ಮಿಸ್‌ ಮಾಡಿಕೊಳ್ತೇನೆ’ ಎಂದು 8ನೇ ತರಗತಿ ವಿದ್ಯಾರ್ಥಿನಿಗೆ ಲವ್‌ ಲೆಟರ್‌ ಬರೆದ ಶಿಕ್ಷಕ..!

ಹಳೆಯ ಲವ್‌ಲೆಟರ್‌ಗೆ ಜನರ ಮೆಚ್ಚುಗೆ, ನಾನಾ ರೀತಿಯ ಕಾಮೆಂಟ್
ಪತ್ರದಲ್ಲಿ, ಅವರು ದಣಿದಿದ್ದರೂ ಮತ್ತು ಬೆನ್ನು ಉಳುಕಿದ್ದರೂ ಸಹ ತನ್ನ ಸಂಗಾತಿ (Partner)ಯೊಂದಿಗೆ ಪ್ರಯೋಗಾಲಯಕ್ಕೆ ಹೇಗೆ ಹೋಗಬೇಕೆಂದು ಬರೆದಿದ್ದಾರೆ. 25 ಕೆಜಿ ತೂಕದ ಟ್ರಕ್ ಬ್ಯಾಟರಿಯನ್ನು ಎತ್ತುವ ಸಂದರ್ಭದಲ್ಲಿ ತನ್ನ ಬೆನ್ನು ಉಳುಕಾಯಿತು ಎಂದು ಅವರು ಹೇಳಿದರು. ನಂತರ ಅವನು ಅವಳಿಗೆ ಪ್ರಯೋಗವನ್ನು ವಿವರಿಸಲು ಕಷ್ಟಪಟ್ಟು ರೇಖಾಚಿತ್ರವನ್ನು ರಚಿಸಿದರು. ಈ ವಿಶಿಷ್ಟ ಪ್ರೇಮಪತ್ರಕ್ಕೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

'ಪ್ರೇಮ ಪತ್ರವು ಸುಂದರವಾಗಿದೆ (Beautiful), ಆದರೆ ಪತ್ರವ್ಯವಹಾರವು ಇಂಗ್ಲಿಷ್‌ನಲ್ಲಿದೆ ಮತ್ತು ನಿಮ್ಮ ಸ್ಥಳೀಯ ಭಾಷೆಯಲ್ಲ ಎಂಬುದು ಆಶ್ಚರ್ಯಕರವಾಗಿದೆ' ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಸಾಯಿಸ್ವರೂಪ ಬಳಕೆದಾರರಿಗೆ ಉತ್ತರಿಸುತ್ತಾ, 'ನಾನು ತೆಲುಗು ಮತ್ತು ಅವನು ತಮಿಳು ಭಾಷೆಯವನು. ಹೀಗಾಗಿ ಲವ್ ಲೆಟರ್ ಇಂಗ್ಲಿಷ್‌ನಲ್ಲಿದೆ' ಎಂದಿದ್ದಾರೆ. ಇನ್ನೊಬ್ಬರು ಇನ್ಕ್ರೆಡಿಬಲ್, ಅದ್ಭುತ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೊಬ್ಬ ವ್ಯಕ್ತಿ 'ಅತ್ಯುತ್ತಮ ಪ್ರೇಮ ಪತ್ರ' ಎಂದರು. ಮತ್ತೊಬ್ಬರು ಆ ಸಮಯದಲ್ಲಿ ನೀವಿಬ್ಬರೂ ಏನು ಮಾಡುತ್ತಿದ್ದೀರಿ,ಓದುತ್ತಿದ್ದಿರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಾಯಿ ಸ್ವರೂಪ 'ಅವನು IISc ನಲ್ಲಿ ME ಮಾಡುತ್ತಿದ್ದ. ನಾನು ಹೆಚ್ಚು ಕಡಿಮೆ ಲೀಗ್ ಕಾಲೇಜಿನಲ್ಲಿ ನನ್ನ BEಯಲ್ಲಿದ್ದೆ' ಎಂದಿದ್ದಾರೆ. 

Was cleaning up some old stuff yday when I rediscovered some old hand written letters that Mr Iyer had written to me some 18.5 years ago.

But who writes about lab experiments along with detailed diagrams in letters to their girl friend?
(Yeah I said yes to this guy 😍) pic.twitter.com/OSzWejrB4p

— Saiswaroopa (@Sai_swaroopa)
click me!