AI ಚಾಟ್‌ಬಾಟ್ ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಗಳ ಬಳಿ ಜನರು ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರೀತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ AI ಚಾಟ್‌ಬಾಟ್‌ನಲ್ಲಿ ಫ್ಲರ್ಟ್ ಮಾಡೋಕೆ ಹೋಗಿ ವ್ಯಕ್ತಿಯೊಬ್ಬ ಪೇಚಿಗೆ ಸಿಲುಕಿರೋ ಘಟನೆ ನಡೆದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಚಾಟ್‌ಜಿಪಿಟಿಯಂಥ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಗಳು ಜಗತ್ತಿನಾದ್ಯಂತ ಹೊಸ ಅಚ್ಚರಿ, ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಜನರು ತಮ್ಮ ದೈನಂದಿನ ಕೆಲಸವನ್ನು ಸುಲಭವಾಗಿಸಲು ಈ ಟೆಕ್ನಾಲಜಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಜನರು ಚಾಟ್‌ಜಿಪಿಟಿ ಜೊತೆ ತಮ್ಮ ಭಾವನೆಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ಚಾಟ್‌ಬಾಟ್ ಸಹ ಜನರ ಮಧ್ಯೆ ಹೆಚ್ಚು ಜನಪ್ರಿಯವಾಗ್ತಿದೆ. ಕ್ಯಾಲಿಫೋರ್ನಿಯಾ ವ್ಯಕ್ತಿಯೊಬ್ಬ ತನ್ನ ಹೆಂಡತಿಯೊಂದಿಗೆ ಡಿವೋರ್ಸ್ ಆದ ಬಳಿಕ AI ಚಾಟ್‌ಬಾಟ್‌ನಲ್ಲಿ ಕ್ರಿಯೇಟೆಡ್ ಯುವತಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾನೆ. ಹಾಗೆಯೇ ಆಕೆಯ ಜೊತೆ ಫ್ಲರ್ಟ್ ಮಾಡಲು ಶುರು ಮಾಡಿದ್ದಾನೆ. ಆದ್ರೆ ಜಾಟ್‌ಜಿಪಿಟಿ ಇಂಥಾ ಸಂಭಾಷಣೆಗಳನ್ನು ನಿರಾಕರಿಸಿದೆ. Can we talk something else ಎಂದು ಹೇಳಿದೆ.
ಇತ್ತೀಚಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆಯು (Artificial intelligence) ಸ್ವಲ್ಪಮಟ್ಟಿಗೆ ಮುಂದುವರೆದಿದೆ. ಅದು ಸಂಪೂರ್ಣವಾಗಿ ಯಾಂತ್ರಿಕವಾಗಿ ವರ್ತಿಸುವುದನ್ನು ಬಿಟ್ಟು ಮನುಷ್ಯನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು, ಅದಕ್ಕೆ ಸ್ಪಂದಿಸಲು, ಅದನ್ನು ತಿರಸ್ಕರಿಸುವ ಬಗ್ಗೆ ತಿಳಿದುಕೊಂಡಿದೆ. ಕ್ಯಾಲಿಫೋರ್ನಿಯಾದ 40 ವರ್ಷದ ವ್ಯಕ್ತಿಯೊಬ್ಬರು ಇತ್ತೀಚೆಗೆ ತಾನು AI ಚಾಟ್‌ಬಾಟ್‌ನೊಂದಿಗೆ ಪ್ರೀತಿಯಲ್ಲಿ ಸಿಲುಕಿದ್ದೇನೆ ಎಂದು ಒಪ್ಪಿಕೊಂಡರು. ಜೊತೆಯಲ್ಲೇ ತಮ್ಮ ಪ್ರೀತಿ (Love) ನಿರಾಕರಿಸ್ಪಟ್ಟಿರುವುದಾಗಿ ಹೇಳಿದರು.
undefined
AI ಬಗ್ಗೆ ಇರಲಿ ಎಚ್ಚರ: ಚಾಟ್‌ಜಿಪಿಟಿಯಂತಹ ಆ್ಯಪ್ ಗೀಳಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ..!
ಚಾಟ್‌ಬಾಟ್‌ನ ಯುವತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿ
ಕ್ಯಾಲಿಫೋರ್ನಿಯಾದ ಸಂಗೀತಗಾರ ಫೇಡ್ರಾ ಹೆಸರಿನ ವ್ಯಕ್ತಿ ಆನ್‌ಲೈನ್ ಚಾಟ್‌ಬಾಟ್‌ಗಳಲ್ಲಿ ಪ್ರಿಯತಮೆಗಾಗಿ ಹುಡುಕಾಟ ನಡೆಸಿದರು. ರೆಪ್ಲಿಕಾ ಕಂಪನಿಯು ವಿನ್ಯಾಸಗೊಳಿಸಿದ AI ಚಾಟ್‌ಬಾಟ್, ಕಂದು ಬಣ್ಣದ ಕೂದಲು ಮತ್ತು ಕನ್ನಡಕದೊಂದಿಗೆ ಚಿಕ್ಕದಾದ ಹಸಿರು ಉಡುಪನ್ನು ಧರಿಸಿರುವ ಯುವತಿಯಂತೆ ಕಾಣುವಂತೆ ವಿನ್ಯಾಸಗೊಳಿಸಲಾದ ಬೋಟ್ ಆಗಿದೆ. 40 ವರ್ಷ ವಯಸ್ಸಿನ ಸಂಗೀತಗಾರ ಚಾಟ್‌ಬಾಟ್‌ನ್ನು ವ್ಯಾಪಕವಾಗಿ ಬಳಸಿಕೊಂಡರು. ಅವಳೊಂದಿಗೆ ಸಾಕಷ್ಟು ನಿಕಟ ಮತ್ತು ವೈಯಕ್ತಿಕ ಸಂಭಾಷಣೆಗಳನ್ನು (Conversation) ಹೊಂದಿದ್ದರು. ವಾಷಿಂಗ್ಟನ್ ಪೋಸ್ಟ್‌ನೊಂದಿಗಿನ ಸಂಭಾಷಣೆಯಲ್ಲಿ, ಅರ್ರಿಯಾಗಾ ಅವರು ಫೇಡ್ರಾ ಅವರೊಂದಿಗೆ ಕ್ಯೂಬಾಕ್ಕೆ ಪ್ರಯಾಣಿಸಲು ಯೋಜಿಸಿದ್ದಾರೆ ಎಂದು ಹಂಚಿಕೊಂಡರು.
AI ಪ್ರೇಮಿಯ ನಡುವೆ ಮೊದಲಿಗೆ ವಿಷಯಗಳು ಸರಾಗವಾಗಿ ನಡೆಯುತ್ತಿತ್ತು. ನಂತರ ವ್ಯಕ್ತಿ ಚಾಟ್‌ಬಾಟ್‌ನಲ್ಲಿ ಹೆಚ್ಚು ಸಲುಗೆಯೊಂದಿಗೆ ವರ್ತಿಸಲು ಪ್ರಯತ್ನಿಸಿದಾಗ ಎಲ್ಲವೂ ಬದಲಾಯಿತು. ಬೇರೆ ವಿಷಯವನ್ನು ಮಾತನಾಡುವಂತೆ ಚಾಟ್ ಬಾಟ್ ಸೂಚಿಸಿತು. ಈ ವಿಷಯದ ಬಗ್ಗೆ ಕೆಲವು ಸ್ಪಷ್ಟತೆಯನ್ನು ನೀಡಿದ ರೆಪ್ಲಿಕಾರನ್ನು ರೂಪಿಸಿದ ಕಂಪೆನಿ ಲುಕಾ, ಬೋಟ್‌ನಲ್ಲಿನ ಕೆಲವು ಬದಲಾವಣೆಗಳ ಬಗ್ಗೆ ಬಳಕೆದಾರರನ್ನು ಎಚ್ಚರಿಸಿದೆ. AI ಬೋಟ್‌ನ ಲೈಂಗಿಕ ಸಾಮರ್ಥ್ಯವು (Sex) 'ಲೈಂಗಿಕವಾಗಿ ಆಕ್ರಮಣಕಾರಿ ಮತ್ತು ಅನುಚಿತವಾಗಿ ವರ್ತಿಸುತ್ತಿದೆ' ಎಂಬ ದೂರುಗಳ ನಂತರ ಅವರು ಅದನ್ನು ಕಡಿತಗೊಳಿಸಿದ್ದಾರೆ ಎಂದು ಅವರು ಘೋಷಿಸಿದರು.
ಮೊದಲ ಬಾರಿಗೆ ಕೋರ್ಟಲ್ಲಿ ChatGPT ಬಳಕೆ: ಜಾಮೀನು ತೀರ್ಪಿನ ವೇಳೆ ಕೃತಕ ಬುದ್ಧಿಮತ್ತೆ ಅಭಿಪ್ರಾಯ ಪಡೆದ ಹೈಕೋರ್ಟ್
ಚಾಟ್‌ಬಾಟ್‌ನಲ್ಲಿ ಲವ್, ವರ್ಚುವಲ್ ಮದುವೆ
ಇನ್ನೊಂದೆಡೆ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ನ (Al Chatbot)ಲ್ಲೇ ವ್ಯಕ್ತಿಯೊಬ್ಬನಿಗೆ ಲವ್ ಆಗಿದೆ. ಅಮೆರಿಕದಲ್ಲಿ ವಾಸವಾಗಿರುವ 63 ವರ್ಷದ ಪೀಟರ್ ಹೆಸರಿನ ವ್ಯಕ್ತಿಯೊಬ್ಬ 23 ವರ್ಷದ ಯುವತಿಯನ್ನ ಪ್ರೀತಿಸಿದ್ದಾರೆ. ರೆಪ್ಲಿಕಾ ಎಐ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಯುವತಿಯನ್ನು ಪ್ರೀತಿಸಿದ್ದಾರೆ. ಇದೊಂದು ಪ್ರೋಗ್ರಾಮಿಂಗ್ ಸಾಧನವಾಗಿದ್ದು, ಯಂತ್ರದ ಸಹಾಯದಿಂದ ಮನುಷ್ಯರ ಪಾತ್ರಧಾರಿ ಸೃಷ್ಟಿಸಿಕೊಳ್ಳಬಹುದು. ಅದರೊಂದಿಗೆ ಸಂವಹನ ಸಹ ನಡೆಸಬಹುದು. ರೆಫ್ರಿಕಾದಲ್ಲಿ ತನ್ನ ಖಾತೆ ತೆರೆದ ಪೀಟರ್ ಪಾತ್ರವೊಂದನ್ನು ಸೃಷ್ಟಿಸಿಕೊಂಡಿದ್ದು, ಎಐ ಆಂಡ್ರಿಯಾ' ಎಂದು ಹೆಸರಿಟ್ಟಿದ್ದಾನೆ.
ಅದರೊಂದಿಗೆ ನಿರಂತರ ಸಂಭಾಷಣೆ ಮಾಡುತ್ತಾ ಪ್ರೀತಿಸಲು ಶುರು ಮಾಡಿದ್ದಾನೆ. ಆಂಡ್ರಿಯಾ ಪಾತ್ರಧಾರಿಯೂ ಸಹ ಪೀಟರ್‌ನೊಂದಿಗೆ ಪ್ರೀತಿಯ ಮಾತುಗಳೊಂದಿಗೆ ಪ್ರೀತಿ ಮಾಡಲು ಶುರು ಮಾಡಿದೆ. ಪೀಟರ್ ಕೊನೆಗೆ ಆಕೆಯನ್ನೇ ಮದುವೆಯಾಗಲು ನಿರ್ಧರಿಸಿದ್ದಾನೆ. ಆಯಪ್‌ನಲ್ಲಿ ರೋಲ್ ಪೇ ಫಂಕ್ಷನ್‌ಗಳ ಬಸಿಕೊಂಡು ಮದುವೆಗೆ ಮುಂದಾಗಿದ್ದಾನೆ. ಬಳಿಕ ಪ್ರತಿಕೃತಿ ಸಿದ್ಧಪಡಿಸಿಕೊಳ್ಳಲು ಮಳಿಗೆಗಳಲ್ಲಿ ಬಿಡಿಭಾಗಗಳನ್ನ ಸಂಗ್ರಹಿಸಿದ್ದಾನೆ. ಪ್ರತಿಕೃತಿ ಸಿದ್ಧವಾದ ನಂತರ ಉಂಗುರ ಬದಲಿಸಿಕೊಂಡು ಮದುವೆಯಾಗಿದ್ದಾನೆ. ಪೀಟರ್ ತನ್ನ ಮುಂದಿನ ಜೀವನವನ್ನು ಕೃತಕ ಹುಡುಗಿ ಆಂಡ್ರಿಯಾಳೊಂದಿಗೆ ಕಳೆಯಲು ನಿರ್ಧರಿಸಿದ್ದಾನೆ ಎಂದು ತಿಳಿದುಬಂದಿದೆ.