ಸಮಾಜದಲ್ಲಿ ಹಿಂದಿನಿಂದಲೂ ಗಂಡು-ಹೆಣ್ಣು ಮದುವೆಯಾಗೋದು ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಜನ್ರು ರೋಬೋಟ್, ಕನಸಿನಲ್ಲಿ ಬರುವ ಹುಡುಗಿ, ವಿಮಾನದ ಜೊತೆ ಹೀಗೆ ಚಿತ್ರ-ವಿಚಿತ್ರವಾಗಿ ಮದ್ವೆಯಾಗ್ತಾರೆ. ವರ್ಷದ ಹಿಂದೆ ಯುವತಿಯೊಬ್ಬಳು ತನ್ನನ್ನು ತಾನೇ ಮದ್ವೆಯಾಗಿದ್ದು ಸಹ ಸುದ್ದಿಯಾಗಿತ್ತು. ಹಾಗೆಯೇ ಉತ್ತರಪ್ರದೇಶದಲ್ಲೊಬ್ಬ ಯುವತಿ ಶಿವಲಿಂಗವನ್ನೇ ವರಿಸಿದ್ದಾಳೆ.
ಕಾಲ ಬದಲಾಗುತ್ತಿದೆ. ಜೊತೆಗೆ ಸಂಬಂಧದ ಕುರಿತಾಗಿರುವ ಜನರ ಮನೋಭಾವ ಸಹ ವಿಚಿತ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೆಲ್ಲಾ ಒಬ್ಬ ಗಂಡು, ಒಬ್ಬ ಹೆಣ್ಣು ಮದುವೆಯಾಗುತ್ತಿದ್ದರು. ಪುರುಷ ಹಾಗೂ ಮಹಿಳೆ ಪರಸ್ಪರ ಮದುವೆಯಾಗಿ ಲೈಂಗಿಕ ಕ್ರಿಯೆ ಯಲ್ಲಿ ತೊಡಗಿಕೊಂಡು ಮಕ್ಕಳನ್ನು ಪಡೆದು ಕುಟುಂಬವನ್ನು ಬೆಳೆಸಬಹುದಾಗಿದೆ. ಇದು ಸಮಾಜದಿಂದಲೇ ಅಂಗೀಕೃತಗೊಂಡಿರುವ ಸಂಬಂಧ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಮಾತ್ರವಲ್ಲ ಇದು ಜನಸಾಮಾನ್ಯರ ನಡುವೆಯೀಗ ಅಚ್ಚರಿಯ ವಿಷಯವಾಗಿಯೂ ಉಳಿದಿಲ್ಲ.
ಇದೆಲ್ಲವನ್ನೂ ಬಿಟ್ಟು ರೋಬೋಟ್, ಕಂಪ್ಯೂಟರೈಸ್ಡ್ ವರ್ಷನ್ ವ್ಯಕ್ತಿ, ಹೋಲೋಗ್ರಾಮ್ (ವ್ಯಕ್ತಿಯ ಕಾಲ್ಪನಿಕ ರೂಪ)ನ್ನೂ ಮದುವೆಯಾದವರೂ ಇದ್ದಾರೆ. ವರ್ಷಗಳ ಹಿಂದೆ ಗುಜರಾತ್‌ನ ಕ್ಷಮಾಬಿಂದು ಸೋಲೋಗಮಿ ಮ್ಯಾರೇಜ್, ಅಂದರೆ ತನ್ನನ್ನೇ ತಾನು ಮದುವೆಯಾಗುವ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಳು. ಹಾಗೆಯೇ ಇಲ್ಲೊಬ್ಬಳು ಶಿವಲಿಂಗವನ್ನೇ ಮದ್ವೆಯಾಗಿದ್ದಾಳೆ. ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಹುಡುಗಿಯರ ಸಹವಾಸಾನೇ ಬೇಡ, ಗೊಂಬೆಯನ್ನೇ ಮದ್ವೆಯಾಗ್ತಾನಂತೆ!
ಉತ್ತರಪ್ರದೇಶದ ಝಾನ್ಸಿಯ ಯುವತಿಯೊಬ್ಬಳು ಶಿವನ ಭಕ್ತೆಯಾಗಿದ್ದು, ಈಕೆ ಇಚ್ಛಾಧಾರಿ ಶಿವನನ್ನೇ ಪತಿಯನ್ನಾಗಿ ಸ್ವೀಕರಿಸಿದ್ದಾಳೆ. ಬಿಕಾಂ ವರೆಗೆ ಓದಿದ ಹುಡುಗಿ ಈ ನಿರ್ಧಾರವನ್ನು ಮಾಡಿದಳು. ಗೋಲ್ಡಿ ಹೆಸರಿನ ಯುವತಿ ಶಿವನನ್ನೇ ತನ್ನ ಪತಿಯೆಂದು ಸ್ವೀಕರಿಸಿದ್ದಾಳೆ.
ಈ ಶಿವ- ಗೋಲ್ಡಿ ವಿವಾಹೋತ್ಸವ ಜುಲೈ 23ರಂದು ನಡೆದಿದೆ. ಹೆತ್ತವರು, ಬಂಧು ಬಾಂಧವರ ಸಮ್ಮುಖದಲ್ಲಿ ಎಲ್ಲ ವಿವಾಹಗಳಂತೆಯೇ ಅದ್ಧೂರಿಯಾಗಿ ನಡೆದಿದೆ. ಶಿವಲಿಂಗ ಮತ್ತು ಯುವತಿಯನ್ನು ರಥದ ಮೇಲೆ ಬೀದಿ ಉದ್ದಕ್ಕೂ ಮೆರವಣಿಗೆ ಮಾಡಲಾಯಿತು. ಜನರು ಅಕ್ಷತೆ ಹಾಕಿ ಆಶೀರ್ವದಿಸಿದರು.
ಆಧ್ಯಾತ್ಮಿಕ ಸಂಘಟನೆಯಾದ ಬ್ರಹ್ಮಕುಮಾರಿ ಜೊತೆಗೆ ಒಡನಾಟ ಹೊಂದಿದ್ದ ಗೋಲ್ಡಿ ಶಿವನ ಮೇಲೆ ಅಪಾರ ಭಕ್ತಿ, ಪ್ರೇಮಿ ಬೆಳೆಸಿಕೊಂಡಿದ್ದಳು. ಚಿಕ್ಕಂದಿನಿಂದಲೂ ಶಿವನ ಆರಾಧಕಳಾಗಿದ್ದ ಈಕೆ, ಶಿವನಂತಹಾ ಪತಿಯೇ ಬೇಕೆಂಬ ಆಸೆಯನ್ನು ಬೆಳೆಸಿಕೊಂಡಿದ್ದಳು. ಇತ್ತೀಚಿಗೆ ಪೋಷಕರು ಈಕೆಯನ್ನು ವಿವಾಹವಾಗಲು ಹೇಳಿದಾಗ ಶಿವನನ್ನು ವರಿಸುವುದಾಗಿ ಹೇಳಿದ್ದಾಗಿ ತಿಳಿದುಬಂದಿದೆ. ಪೋಷಕರು ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಅಂದಿದ್ದಾರೆ. ಕುಟುಂಬ ಸದಸ್ಯರು ತಿಂಗಳಿನಿಂದ ಮದುವೆಯ ಎಲ್ಲ ಸಿದ್ಧತೆಗಳನ್ನು ನಡೆಸಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆ, ಕಲ್ಯಾಣ ಮಂಟಪ, ಸಭಾಮಂಟಪವನ್ನು ಬುಕ್ ಮಾಡಿದ್ದಾರೆ. ಅದರಂತೆ ಜುಲೈ 23 ಭಾನುವಾರ ಸಂಜೆ 5 ಗಂಟೆ ಮುಹೂರ್ತದಲ್ಲಿ, ಗೋಲ್ಡಿ ಹಾಗೂ ಶಿವನ ಮದುವೆ ನಡೆದಿದೆ.
ಇಲ್ಲಿ ಮಹಿಳೆಗೆ ಮಹಿಳೆಯೊಂದಿಗೇ ಮದುವೆ, ಆದರೆ, ಸೆಕ್ಸ್ ಮಾತ್ರ ಬೇರೆಯವರೊಂದಿಗೆ!
ಗೋಲ್ಡಿ ಶಿವಲಿಂಗಕ್ಕೆ ಮಾಲೆ ಹಾಕಿ ಏಳು ಸುತ್ತು ಹಾಕಿದಳು. ಮೆರವಣಿಗೆಯಲ್ಲಿ ಸುತ್ತಮುತ್ತಲಿನ ಅನೇಕರು ಪಾಲ್ಗೊಂಡಿದ್ದರು. ಭಗವಾನ್ ಶಿವನನ್ನು ಮದುವೆಯಾದ ನಂತರ, ಈಗ ತನ್ನ ಇಡೀ ಜೀವನವನ್ನು ಶಿವನಿಗೆ ಅರ್ಪಿಸುವುದಾಗಿ ಹೇಳಿದಳು.
ವಿವಾಹದ ಬಳಿಕ ಈ ಬಗ್ಗೆ ಮಾತನಾಡಿದ ವಧು ಗೋಲ್ಡಿ, ತಾನು ಬಾಲ್ಯದಿಂದಲೂ ಶಿವನನ್ನು ಗಂಡನನ್ನಾಗಿ ಸ್ವೀಕರಿಸುವ ಆಸೆ ಇತ್ತು. ಆ ಆಸೆ ಇಂದು ಈಡೇರಿದೆ. ತನ್ನ ಜೀವನದುದ್ದಕ್ಕೂ ಅವಿವಾಹಿತಳಾಗಿಯೇ ಉಳಿಯುತ್ತೇನೆ. ಶಿವಲಿಂಗದ ಸೇವೆಯಲ್ಲಿ ತನ್ನ ಇಡೀ ಜೀವನ ಕಳೆಯುತ್ತೇನೆ ಎಂದು ಹೇಳಿದಳು. ಕೆಲವು ತಿಂಗಳ ಹಿಂದೆ ರಾಜಸ್ಥಾನದ ಜೈಪುರದಲ್ಲೂ ಇಂತಹ ಪ್ರಕರಣ ಬೆಳಕಿಗೆ ಬಂದಿತ್ತು. ಇಲ್ಲಿ ಪೂಜಾ ಸಿಂಗ್ ಎಂಬ ಹುಡುಗಿ ಭಗವಾನ್ ಕೃಷ್ಣನನ್ನು ಮದುವೆಯಾಗಿದ್ದಳು.