ತಾಯಿ ಸಾವಿನ ಬೇಸರದಲ್ಲಿದ್ದ ಬಾಯ್‌ಫ್ರೆಂಡ್‌ ಕಷ್ಟ ನೋಡಲಾಗದೆ ಆತನ ತಂದೆ ಜೊತೆ ಮದುವೆ

By Suvarna News  |  First Published Oct 11, 2021, 11:18 AM IST
  • ಎಂಥಾ ಪ್ರೀತಿ ನೋಡಿ, ಬಾಯ್‌ಫ್ರೆಂಡ್ ಸ್ವಲ್ಪ ಬೇಸರವಾದರೂ ಸಹಿಸಲ್ಲ
  • ತಾಯಿಯನ್ನು ಕಳೆದುಕೊಂಡು ಬೇಸರದಲ್ಲಿದ್ದ ಬಾಯ್‌ಫ್ರೆಂಡ್
  • ಪ್ರಿಯತಮನ ಕಷ್ಟ ನೋಡಲಾಗದೆ ಆತನ ತಂದೆಯನ್ನೇ ವರಿಸಿದಳು

ಸಂಬಂಧಗಳನ್ನು ಜಡ್ಜ್ ಮಾಡುವುದು ಕಷ್ಟ. ಅದರ ಸ್ವಭಾವ, ಆಳ, ಆತ್ಮೀಯತೆಯಗೆ ಹಲವು ಅರ್ಥಗಳಿರುತ್ತವೆ. ಹಲವು ವ್ಯಾಪ್ತಿಯೂ ಇರುತ್ತದೆ. ಪ್ರೀತಿ ಕೆಲವೊಮ್ಮೆ ತುಂಬಾ ಸ್ವಾರ್ಥ, ಕೆಲವೊಮ್ಮೆ ನಿಸ್ವಾರ್ಥ, ಇನ್ನೂ ಕೆಲವೊಮ್ಮೆ ಅರ್ಥವಾಗದಷ್ಟು ವಿಚಿತ್ರ. ಇಂಥದ್ದೇ ಒಂದು ಪ್ರೀತಿಯ ಕಥೆ(Love Story) ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ.

ಪ್ರಿಯತಮ ತಾಯಿಯನ್ನು ಕಳೆದುಕೊಂಡು ಅಳುತ್ತಿದ್ದ. ಪ್ರೀತಿಯ ಅಮ್ಮನ ಕಳೆದುಕೊಂಡ ನೋವಿನಿಂದ ಹೊರಗೆ ಬರಲು ಸಾಧ್ಯವೇ ಆಗಲಿಲ್ಲ. ಆತನನ್ನು ತುಂಬಾ ಪ್ರೀತಿಸುತ್ತಿದ್ದ ಗೆಳತಿ ಈ ಕಷ್ಟದ ಸಮಯದಲ್ಲಿ ಆತನಿಗೆ ಬೆಂಬಲ ನೀಡಲು ಏನು ಬೇಕಾದರೂ ಮಾಡುವುದಾಗಿ ಹೇಳುತ್ತಾಳೆ. ನಂತರ ನಡೆದಿದ್ದು ವಿಚಿತ್ರ.

Tap to resize

Latest Videos

ನಯನತಾರಾ To ಕಮಲ್ ಹಾಸನ್: ಲಿವ್‌ ಇನ್ ಆಯ್ಕೆ ಮಾಡ್ಕೊಂಡ ಸೌತ್ ಸ್ಟಾರ್ಸ್

ಟಿಕ್‌ಟಾಕ್ ಯೂಸರ್  @ys.amri ಹೇಳಿದಂತೆ ಆಕೆಯ ಬಾಯ್‌ಫ್ರೆಂಡ್ ಅಮ್ಮ ತೀರಿಕೊಂಡ ನಂತರ ಆತ ಅಳುತ್ತಲೇ ಇದ್ದ. ಅದೇ ನೋವಿನಲ್ಲಿದ್ದ. ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಆಕೆ ಆತನ ಬಾಯ್‌ಫ್ರೆಂಡ್ ಅಪ್ಪನನ್ನು ಮದುವೆಯಾಗಿದ್ದಾಳೆ. ಈ ಮೂಲಕ ಆತನಿಗೆ ಅಮ್ಮನಿಲ್ಲದ ನೋವು ನೀಗಿಸಿದ್ದಾಳೆ. ಇದು ನಿಸ್ವಾರ್ಥ ಪ್ರೀತಿಯೋ, ವಿಚಿತ್ರವೋ ಹೇಳುವುದೇ ಕಷ್ಟ.

undefined

ನನ್ನ ಬಾಯ್‌ಫ್ರೆಂಡ್‌ನ ಅಮ್ಮ ತೀರಿಕೊಂಡರು. ನನಗೆ ಅವನು ಬೇಸರದಲ್ಲಿರುವುದು ಬೇಡವಾಗಿತ್ತು. ನೋಡುವುದಕ್ಕೆ ಅಗುತ್ತಿರಲಿಲ್ಲ. ಹಾಗಾಗಿ ಅವನ ತಂದೆಯನ್ನು ಮದುವೆಯಾಗಲು ನಿರ್ಧರಿಸಿದೆ, ಈ ಮೂಲಕ ಅವನಿಗೆ ಮತ್ತೊಮ್ಮೆ ಅಮ್ಮ ಸಿಗುತ್ತಾಳೆ ಎಂದಿದ್ದಾರೆ ಆ ಯುವತಿ. ಬಹಳಷ್ಟು ಜನರು ಆಕೆಯ ತ್ಯಾಗವನ್ನು ಮೆಚ್ಚಿ ಹೊಗಳಿದರೆ ಇನ್ನೊಂದಷ್ಟು ಜನ ಇದಕ್ಕೆ ಏನೆಂದು ಪ್ರತಿಕ್ರಿಯಿಸುವುದು ಎಂದು ತಿಳಿಯದೆ ಸುಮ್ಮನಾಗಿದ್ದಾರೆ.

ಫೆಬ್ರವರಿಯಲ್ಲಿ 44 ವರ್ಷದ ಮಹಿಳೆ ತನ್ನ ಗರ್ಭಿಣಿ ಮಗಳ ಗೆಳೆಯನೊಂದಿಗೆ ಓಡಿಹೋಗಿ ತನ್ನ ಇಡೀ ಕುಟುಂಬಕ್ಕೆ ಶಾಕ್ ಕೊಟ್ಟಿದ್ದರು. ಗರ್ಭಿಣಿ ಜೆಸ್ ಅಲ್ಡ್ರಿಡ್ಜ್, 24, ಮತ್ತು ಆಕೆಯ ಗೆಳೆಯ ರಯಾನ್ ಶೆಲ್ಟನ್ ಜಾರ್ಜಿನಾ ಮತ್ತು ಆಕೆಯ ಪತಿ ಎರಿಕ್‌ನೊಂದಿಗೆ ಗ್ಲೌಸೆಸ್ಟರ್‌ಶೈರ್‌ನಲ್ಲಿರುವ ಸ್ಟೋ-ಆನ್-ದಿ-ವೊಲ್ಡ್‌ನಲ್ಲಿರುವ ಅವರ ಮನೆಯಲ್ಲಿ ಈ ಸಂಬಂಧ ಪ್ರಾರಂಭವಾಯಿತು. ಈ ಮೂಲಕ ಮಗಳ ಗೆಳೆಯನೊಂದಿಗೇ ಪ್ರೀತಿ ಹುಟ್ಟಿಕೊಂಡಿತ್ತು.

ಜೆಸ್ ತನ್ನ ಮಗುವಿಗೆ ಜನ್ಮ ನೀಡಿದ ನಂತರ ಮನೆಗೆ ಮರಳಿದಾಗ, ಆಕೆಯ ತಾಯಿ ಮತ್ತು ಆಕೆಯ ಗೆಳೆಯ ಪರಾರಿಯಾಗಿದ್ದರು. ಜೆಸ್‌ನ ತಾಯಿ ಅವಳಿಗೆ ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರೊಂದಿಗೆ ಪ್ರೀತಿಯಾದ ನಂತರ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಜೆಸ್ ಹೇಳಿದರು, ಅವರು ಒಟ್ಟಿಗೆ ಓಡಿಹೋಗಬಹುದು. ಇಬ್ಬರು ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ನನ್ನನ್ನು ಒಂಟಿಯಾಗಿ ಬಿಟ್ಟು ಬಿಡಬಹುದು ಎಂದು ಅವರು ಭಾವಿಸುತ್ತಾರೆಂದರೆ ನಂಬಲಾಗುತ್ತಿಲ್ಲ. ಅಮ್ಮ ಇಷ್ಟು ಮಾಡಿಯೂ ಕ್ಷಮೆ ಕೇಳಿಲ್ಲ ಎಂದಿದ್ದಾರೆ.

ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಜೆಸ್ ಸಂಶಯಿಸಿದ್ದರು. ಒಮ್ಮೆ ಅವರನ್ನು ಅದೇ ವಿಚಾರವಾಗಿ ಎದುರಿಸಿದ್ದರು. ಆದರೂ ಆ ಸಂದರ್ಭ ತಾಯಿ ಹಾಗು ಗೆಳೆಯ ಅವರು ಏನೂ ಇಲ್ಲ ಎಂದು ಹೇಳಿ ಎಂದು ತಪ್ಪಿಸಿಕೊಂಡಿದ್ದರು.

click me!